KGF Chapter 2 ಎಡಿಟರ್​ ವಯಸ್ಸು ಜಸ್ಟ್​ 19, ಟ್ಯಾಲೆಂಟ್​ ಮಾತ್ರ ನೆಕ್ಸ್ಟ್​​ ಲೆವೆಲ್​ ಬಾಸ್​!

ಸೂಪರ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 ಎಡಿಟಿಂಗ್ ಮಾಡಲು 19 ವರ್ಷದ ಹುಡುಗನನ್ನು ಆಯ್ಕೆ ಮಾಡಿದ್ದಾರೆ. ಆತನ ಮೇಲೆ ನಂಬಿಕೆ ಇಟ್ಟು ಇಷ್ಟು ದೊಡ್ಡ ಜವಾಬ್ದಾರಿಯನ್ನು ನೀಡಿದ್ದರು. ಅದನ್ನು ಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಉಜ್ವಲ್​, ಪ್ರಶಾಂತ್​ ನೀಲ್​, ಯಶ್​

ಉಜ್ವಲ್​, ಪ್ರಶಾಂತ್​ ನೀಲ್​, ಯಶ್​

  • Share this:
KGF ಕನ್ನಡದ ರಾಕಿಂಗ್​ ಸ್ಟಾರ್​ ಯಶ್(Rocking Star Yash) ಅಭಿನಯದ ಕೆಜಿಎಫ್ 2(KGF 2) ಸುದೀರ್ಘ ಕಾಯುವಿಕೆಯ ನಂತರ ಥಿಯೇಟರ್‌(Theater)ಗಳನ್ನು ತಲುಪಿ ಆರ್ಭಟಿಸುತ್ತಿದೆ . ಚಿತ್ರವನ್ನು ವೀಕ್ಷಿಸಿದ ದಿಗ್ಗಜರು ಚಿತ್ರತಂಡದ ಪರಿಶ್ರಮಕ್ಕೆ, ದೊಡ್ಡ ಚಿತ್ರವೊಂದನ್ನು ಕಟ್ಟಿಕೊಟ್ಟ ಬಗೆಗೆ ಮನಸೋತಿದ್ದಾರೆ. ಎಲ್ಲಾ ಭಾಷೆಯ ಘಟಾನುಘಟಿ ಕಲಾವಿದರು ಕೆಜಿಎಫ್​ 2 ಗೆ ಮನಸೋತಿದ್ದಾರೆ. ಸೋಷಿಯಲ್​ ಮೀಡಿಯಾ(Social Media)ದಲ್ಲಿ ಕೆಜಿಎಫ್​ 2 ಸಿನಿಮಾ ಹಾಗೂ ರಾಕಿಂಗ್​ ಸ್ಟಾರ್(Rocking Star)​ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.ಎರಡು ದಿನಗಳಲ್ಲಿ ಚಿತ್ರ ಭಾರತದಲ್ಲಿ ಬರೋಬ್ಬರಿ 240 ಕೋಟಿ(240 Crore) ರೂಪಾಯಿ ಕಲೆಕ್ಷನ್(Collection) ಮಾಡಿದೆ. ಈ ವಿಚಾರ ತಿಳಿದು ರಾಕಿಂಗ್​ ಸ್ಟಾರ್ ಯಶ್​ ಅವರ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಬಾಲಿವುಡ್‌(Bollywood)ನಲ್ಲಂತೂ ‘ಕೆಜಿಎಫ್: ಚಾಪರ್‌ 2’ ಸಿನಿಮಾ ಅಕ್ಷರಶಃ ಸುನಾಮಿಯೇ ಸೃಷ್ಟಿಸಿದೆ. ಈ ಸಿನಿಮಾ ಇಷ್ಟು ಸೌಂಡ್​ ಮಾಡುತ್ತಿದೆ ಅಂದರೆ, ಅದರ ಪಾಲು ಈ ವ್ಯಕ್ತಿಗೂ ಸೇರಲೇ ಬೇಕು. ಯಾರು ಅಂತೀರಾ? ಮುಂದೆ ನೋಡಿ

ಕೆಜಿಎಫ್​ 2 ಎಡಿಟರ್​ಗೆ ಜಸ್ಟ್​ 19 ವರ್ಷ!

ಈಗ ಈ ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಷಯವೂ ಪ್ರೇಕ್ಷಕರಲ್ಲಿ ಚರ್ಚೆಯ ವಿಷಯವಾಗಿದೆ. ಇದೀಗ ಈ ಸಿನಿಮಾದ ಬಗ್ಗೆ ವಿಶೇಷ ಮಾಹಿತಿ ತಿಳಿದುಬಂದೊದೆ ಇದನ್ನು ತಿಳಿದ ಸೂಪರ್‌ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ. ಸೂಪರ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 ಎಡಿಟಿಂಗ್ ಮಾಡಲು 19 ವರ್ಷದ ಹುಡುಗನನ್ನು ಆಯ್ಕೆ ಮಾಡಿದ್ದಾರೆ. ಆತನ ಮೇಲೆ ನಂಬಿಕೆ ಇಟ್ಟು ಇಷ್ಟು ದೊಡ್ಡ ಜವಾಬ್ದಾರಿಯನ್ನು ನೀಡಿದ್ದರು. ಅದನ್ನು ಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಪ್ರತಿಯೊಂದು ದೃಶ್ಯದಲ್ಲೂ ಎದ್ದು ಕಾಣುತ್ತೆ ಇವರ ಕೆಲಸ!

ಸಿನಿಮಾದ ಎಡಿಟಿಂಗ್​ಗೆ ಬಹಳ ತಾಳ್ಮೆ ಮತ್ತು ಅನುಭವ ಬೇಕು. ‘ಕೆಜಿಎಫ್ 2’ನಂತಹ ಭಿನ್ನ ಮಾದರಿಯ, ನಾನ್ ಲೀನಿಯರ್ ಕತೆಯುಳ್ಳ ಸಿನಿಮಾವನ್ನು ಎಡಿಟ್ ಮಾಡುವುದಂತೂ ಸಿಕ್ಕಾಪಟ್ಟೆ ಕಷ್ಟ .ಆದರೆ ಆ ಕೆಲಸ 'ಕೆಜಿಎಫ್ 2' ನಲ್ಲಿ ಅದ್ಭುತವಾಗಿ ಆದೆ.ಸಿನಿಮಾದವನ್ನು ಅದ್ಭುತವಾಗಿ ಎಡಿಟ್ ಮಾಡಿರುವ ಉಜ್ವಲ್ ಕುಲಕರ್ಣಿಗೆ ಇನ್ನೂ 20 ವರ್ಷವೂ ಆಗಿಲ್ಲ. ಆಗಲೇ ತನ್ನ ಕೆಲಸದಿಂದ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದಾನೆ.

ಇದನ್ನೂ ಓದಿ: ಕನ್ನಡದಲ್ಲೇ ಕೆಜಿಎಫ್​ 2 ನೋಡಿದ `ತಲೈವಾ’! ರಾಕಿ ಆರ್ಭಟ ಕಂಡು ಹಿಂಗಂದ್ರು ರಜನಿಕಾಂತ್​

ಟೀಸರ್​ ಕಟ್​ ನೋಡಿ ದಂಗಾಗಿ ಹೋಗಿದ್ದ ಪ್ರಶಾಂತ್​ ನೀಲ್​!

ಉಜ್ವಲ್​ ಈ ಹಿಂದೆ ಫ್ಯಾನ್ ವಿಡಿಯೋಗಳನ್ನು ಎಡಿಟ್ ಮಾಡುತ್ತಿದ್ದರು. ಬಳಿಕ ಯೂಟ್ಯೂಬ್ ವೀಡಿಯೋಗಳನ್ನು ಎಡಿಟ್ ಮಾಡಿಕೊಡುತ್ತಿದ್ದರು. ಹೀಗೆ ಒಮ್ಮೆ ‘ಕೆಜಿಎಫ್’ ಸಿನಿಮಾದ ವಿಡಿಯೋ ಎಡಿಟ್ ಮಾಡಿದ್ದರು, ಅದು ಪ್ರಶಾಂತ್ ನೀಲ್ ಕಣ್ಣಿಗೆ ಬಿದ್ದಿತ್ತು. ಕೆಜಿಎಫ್​ 2 ಸಿನಿಮಾದ ಟೀಸರ್​ ಕಟ್​ ಮಾಡುವ ಅವಕಾಶ ನೀಡಿದ್ದರು. ಕೆಜಿಎಫ್​ ಟೀಸರ್​ ಬಗ್ಗೆ ಹೇಳಬೇಕಿಲ್ಲ. ಯಾವ ಮಟ್ಟಕ್ಕೆ ಹಿಟ್ ಆಗಿತ್ತು ಅಂತ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಸಿನಿಮಾ ಎಡಿಟ್​ ಮಾಡುವ ಅವಕಾಶವನ್ನು ಉಜ್ವಲ್​ಗೆ ಪ್ರಶಾಂತ್​ ನೀಲ್​ ನೀಡಿದ್ದರು.

ಇದನ್ನೂ ಓದಿ: KGF Chpater ಒಂದರಲ್ಲಿದ್ದ ಈ 4 ಪಾತ್ರಗಳು ಪಾರ್ಟ್​ 2ನಲ್ಲಿ ಮಾಯ! ಅನಂತ್ ನಾಗ್​ ಮಾತ್ರ ಮಿಸ್ಸಿಂಗ್​ ಅಲ್ಲ

ಸಲಾರ್​ ಸಿನಿಮಾಗೂ ಇವ್ರೇ ಎಡಿಟರ್​?

ಕೆಜಿಎಫ್​ 2 ಸಿನಿಮಾದ ಯಶಸ್ಸಿನಿಂದ ಉಜ್ವಲ್​ಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇದರ ನಡುವೆ ಪ್ರಶಾಂತ್​ ನೀಲ್ ನಿರ್ದೇಶನದ, ಪ್ರಭಾಸ್​ ನಟಿಸಿರುವ ‘ಸಲಾರ್​’ ಸಿನಿಮಾಗೂ ಇವರೇ ಎಡಿಟರ್​ ಆಗಲಿದ್ದಾರೆ ಎಂಬ ಟಾಕ್​ ಕೂಡ ಇದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ರೀತಿಯ ಯುವಕರಿಗೆ ಅವಕಾಶ ನೀಡಿದ್ದು, ಪ್ರಶಾಂತ್ ಹಾಗೂ ಯಶ್​ ಅವರ ದೊಡ್ಡ ಗುಣ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
Published by:Vasudeva M
First published: