news18-kannada Updated:July 15, 2020, 7:59 PM IST
ಮೀರಾ ಮಿಥುನ್
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಟ ದಳಪತಿ ವಿಜಯ್ ದೇಶದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಸಿನಿಮಾ ಬಿಡುಗಡೆಯೆಂದರೆ ಅಭಿಮಾನಿಗಳಿಗೆ ಹಬ್ಬದ ರಸದೌತಣ ಇದ್ದಹಾಗೆ. ಇದೀಗ ನಟ ರಜನಿಕಾಂತ್ ಮತ್ತು ವಿಜಯ್ ಮೇಲೆ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
‘8 ತೊಟ್ಟಕ್ಕಲ್‘ ಸಿನಿಮಾದ ಮೂಲಕ ಕಾಲಿವುಡ್ ಪ್ರವೇಶ ಪಡೆದ ನಟಿ ಮೀರಾ ಮಿಥುನ್ ಅವರು ನಟ ರಜನಿಕಾಂತ್ ಮತ್ತು ನಟ ವಿಜಯ್ ಮಾನಹಾನಿ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇವರ ಈ ಆರೋಪ ಟಾಲಿವುಡ್ ಚಿತ್ರರಂಗಕ್ಕೆ ಅಚ್ಚರಿಯನ್ನುಂಟು ಮಾಡಿದೆ.
ಮೀರಾ ಮಿಥುನ್ ಟ್ವೀಟ್ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ‘ತಮಿಳು ನಾಡು ಜನರು ನನ್ನನ್ನು ಬಾಯ್ಕಾಟ್ ಮಾಡಿದ್ದಕ್ಕೆ ಇಂದು ನಾನು ಸೂಪರ್ ಮಾಡೆಲ್ ಆಗದಿರುವುದು. ಕಾಲಿವುಡ್ ನನ್ನನ್ನು ಧಿಕ್ಕರಿಸಿದ್ದಕ್ಕೆ ನಾನು ಬಾಲಿವುಡ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವುದು. ಇಷ್ಟೆಲ್ಲಾ ಆದರು ತಮಿಳು ನಾಡು ಜನರು ನನ್ನ ಹಿಂದೆ ಬಿದ್ದು ಗಾಳಿ ಸುದ್ದಿ ಮಾಡುವುದನ್ನು ಬಿಟ್ಟಿಲ್ಲ. ಕಿರುಕುಳ ನೀಡುವುದೇ ನಿಮ್ಮ ಕೆಲಸವೇ?’ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ನಟಿ ಮೀರಾ ಮಿಥುನ್, ‘ತಮಿಳು ನಾಡು ಸಾಯುತ್ತಿದೆ. ನಾನು ತುಂಬಾ ದುಬಾರಿ ಮತ್ತು ಸೇಫ್ ಜಾಗದಲ್ಲಿ ಉತ್ತಮ ಜೀವನ ನಡೆಸುತ್ತಿದ್ದೇನೆ. ರಜನಿಕಾಂತ್ (ಕನ್ನಡ) ಮತ್ತು ವಿಜಯ್ ದಳಪತಿ (ಕ್ರಿಸ್ಚಿಯನ್) ಇವರು ನನ್ನ ಮಾನಹಾನಿ ಮಾಡಲು ತುಂಬಾನೇ ಪ್ರಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
'ತಮಿಳುನಾಡು ತಮಿಳಿಗರಿಂದ ಕೂಡಿದೆ. ಅಂದರೆ ಹಿಂದುಗಳು ಇದ್ದಾರೆ. ಆದರೆ ಇಲ್ಲಿ ಮಲಯಾಳಿ ಮತ್ತು ಕ್ರಿಶ್ಚಿಯನ್ಗಳ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಇತರರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಮಿಳು ಮಹಿಳೆಗೆ ಅನ್ಯಾಯ ಮಾಡುತ್ತಿದ್ದಾರೆ. ಆದರೂ ನನ್ನ ಹಿಂದೆಯೇ ಬಿದ್ದಿದ್ದಾರೆ. ಮೊದಲು ಇದನ್ನು ಮಟ್ಟಹಾಕಬೇಕು' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
ನಟಿಯ ಟ್ವೀಟ್ ಗಮನಿಸಿದ ರಜನಿಕಾಂತ್ ಮತ್ತು ವಿಜಯ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಮೀರಾ ಮಿಥುನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಟ್ವೀಟ್ನಲ್ಲಿ ಹೆಚ್ಚಾಗಿ Ass ಪದ ಬಳಸಿರುವ ಮೀರಾಮಿಥುನ್ ಅವರಿಗೆ ನೀವೆಷ್ಟು ಸಾಚಾ ಎಂಬುದು ಕಾಣಿಸುತ್ತದೆ ಮೊದಲು ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ಅನೇಕರು ಕಮೆಂಟ್ ಬರೆದಿದ್ದಾರೆ.
Published by:
Harshith AS
First published:
July 15, 2020, 7:56 PM IST