ಮೀರಾ ಜಾಸ್ಮಿನ್ ವೈವಾಹಿಕ ಜೀವನದಲ್ಲೇನಾಯಿತು?; ಮೌರ್ಯ ಸಿನಿಮಾದಲ್ಲಿ ನಟಿಸಿದ್ದ ನಟಿ ಈಗ ಎಲ್ಲಿದ್ದಾರೆ ಗೊತ್ತಾ?

Meera Jasmine: ಮೀರಾ ಜಾಸ್ಮಿನ್​ ಫೆ.15, 1982ರಲ್ಲಿ ಕೇರಳದ ತಿರುವಳ್ಳದಲ್ಲಿ ಜನಿಸಿದರು. ವೈದ್ಯೆ ವೃತ್ತಿಯನ್ನು ಮಾಡಬೇಕು ಎಂದುಕೊಂಡಿದ್ದ ಮೀರಾ ಅವರನ್ನು ಅಸಿಸ್ಟೆಂಟ್​ ಡೈರೆಕ್ಟರ್​ ಒಬ್ಬರು ಗುರುತಿಸಿ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೊಟ್ಟರು

ನಟಿ ಮೀರಾ ಜಾಸ್ಮಿನ್

ನಟಿ ಮೀರಾ ಜಾಸ್ಮಿನ್

 • Share this:
  ಸ್ಯಾಂಡಲ್​ವುಡ್​ಗೆ ಬೇರೆ ಭಾಷೆಯ ಹಲವಾರು ಕಲಾವಿದರು ಎಂಟ್ರಿ ಕೊಟ್ಟಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ, ವಿದೇಶಿ ಕಲಾವಿದರು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಖ್ಯಾತಿಯನ್ನು ಪಡೆದಿದ್ದಾರೆ. ಅದರಲ್ಲಿ ಮಾಲಿವುಡ್​ ಚಿತ್ರ ನಟಿ ಮೀರಾ ಜಾಸ್ಮಿನ್ ಕೂಡ ಒಬ್ಬರು. ಮೂಲತಃ ಕೇರಳದವರಾಗಿರುವ ಇವರು ಮಲಯಾಳಂನಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೆ ಕನ್ನಡ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.

  ಪುನೀತ್​ ರಾಜ್​ಕುಮಾರ್​ ನಟನೆಯ ‘ಮೌರ್ಯ’ ಸಿನಿಮಾಗೆ ನಾಯಕಿಯಾಗಿ ಮೀರಾ ಜಾಸ್ಮಿನ್​ ಅವರನ್ನು ಕೇರಳದಿಂದ ಕರೆಸಿಕೊಳ್ಳಲಾಗಿತ್ತು. ಈ ಸಿನಿಮಾ ಸ್ಯಾಂಡಲ್​ವುಡ್​ ಪ್ರೇಕ್ಷಕರಿಗೆ ವಿಭಿನ್ನ ಚಿತ್ರಕಥೆಯನ್ನು ಕಟ್ಟಿಕೊಟ್ಟಿತ್ತು. ಪುನೀತ್​ ಮತ್ತು ಮೀರಾ ಅವರ ನಟನೆ ಪ್ರೇಕ್ಷಕರನ್ನು ಮನರಂಜಿಸಿತ್ತು.  ‘ಮೌರ್ಯ’ ಮೀರಾ ಅವರು ಕನ್ನಡದಲ್ಲಿ ಬಣ್ಣ ಹಚ್ಚಿದ ಮೊದಲ ಸಿನಿಮಾವಾಗಿದೆ.

  ಆನಂತರ ಸಾಕಷ್ಟು ಕನ್ನಡ ಸಿನಿಮಾದಲ್ಲಿ ಮೀರಾ ನಟಿಸಿದ್ದಾರೆ, ಅರಸು, ದೇವರು ಕೊಟ್ಟ ತಂಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಕನ್ನಡ ಮತ್ತು ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸುತ್ತಾ ಬಂದಿರುವ ಮೀರಾ ಅವರು 2018ರಿಂದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ತುಂಬಾ ಅಪರೂಪವಾಗಿದೆ.

  ಮೀರಾ ಜಾಸ್ಮಿನ್​ ಫೆ.15, 1982ರಲ್ಲಿ ಕೇರಳದ ತಿರುವಳ್ಳದಲ್ಲಿ ಜನಿಸಿದರು. ವೈದ್ಯೆ ವೃತ್ತಿಯನ್ನು ಮಾಡಬೇಕು ಎಂದುಕೊಂಡಿದ್ದ ಮೀರಾ ಅವರನ್ನು ಅಸಿಸ್ಟೆಂಟ್​ ಡೈರೆಕ್ಟರ್​ ಒಬ್ಬರು ಗುರುತಿಸಿ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೊಟ್ಟರು. 2001ರಲ್ಲಿ ‘ಸೂತ್ರಧಾರನ್’​ ಸಿನಿಮಾದಲ್ಲಿ ನಟಿಸುವ ಮೂಲಕ ಮಾಲಿವುಡ್​ಗೆ ಎಂಟ್ರಿ ನೀಡಿದರು.

  Meera- Anil


  2004 ರಲ್ಲಿ ‘ಪಾಡಂ ಒನ್ನು: ಒರು ವಿಲಪಂ’ ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಅದೇ ವರ್ಷ ‘ಮೌರ್ಯ’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

  ನಂತರ 2014 ರಲ್ಲಿ ಅನಿಲ್ ಎಂಬುವರೊಡನೆ ಮೀರಾ ಅವರ ವಿವಾಹವಾಯಿತು. ಆದರೆ ಅನಿಲ್​ ಈ ಮೊದಲು ಒಂದು ವಿವಾಹವಾಗಿತ್ತು. ಮೀರಾ ಅವರ ಜೊತೆಗೆ ಎರಡನೇ ವಿವಾಹವಾದರು. ಇವರ ಮದುವೆಗೆ ಪೊಲೀಸ್​ ಬಂದೋಬಸ್ತ್​​ ಮಾಡಲಾಗಿತ್ತು. ಮೊದಲ ಪತ್ನಿಗೆ ವಿಚ್ಛೇಧನೆ ನೀಡದೆ ಅನಿಲ್​ ಮೀರಾರರನ್ನು ವಿವಾಹವಾಗಿದ್ದರು.

  ಮೀರಾ ಅವರ ಪತಿ ಅನಿಲ್​ ದುಬೈ ನಲ್ಲಿ ಕೆಲಸ ಮಾಡುತ್ತಿದ್ದರು. ವಿವಾಹವಾದ ನಂತರ ಮೀರಾ ಪತಿಯೊಡನೆ ದುಬೈನಲ್ಲಿ ನೆಲೆಸಿದರು. ಅದಾದ ಬಳಿಕ ಸಿನಿಮಾ ಅವಕಾಶಗಳು ಕಡಿಮೆಯಾಗತೊಡಗಿತು. ಅದರ ನಡುವೆ ಮೀರಾ ಅವರ ದಾಂಪತ್ಯ ಜೀವನಲ್ಲಿ ಬಿರುಕು ಕಾಣಿಸಿಕೊಂಡಿತು. ನಂತರ ಕಾನೂನು ಬಧ್ಧವಾಗಿ ವಿದ್ಧೇದನ ಪಡೆದುಕೊಂಡರು.

  ಹಳೆಯ ಸಿನಿಮಾಗಳಲ್ಲಿ ಸೊಂಟ ಬಳುಕಿಸಿದ್ದ ನಟಿ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ ಗೊತ್ತಾ?
  Published by:Harshith AS
  First published: