ಹೊಸ ಸಿನಿಮಾದಲ್ಲಿ ಮಯೂರಿ: ರಿಲೀಸ್​ ಆಗಲಿದೆ ಫಸ್ಟ್​ಲುಕ್ ಪೋಸ್ಟರ್​

ಮಯೂರಿ

ಮಯೂರಿ

ಮಯೂರಿ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದು, ಆದ್ಯಂತ ಎಂಬ ಮಹಿಳಾ ಕೇಂದ್ರಿತ ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಥ್ರಿಲ್ಲರ್​ ಚಿತ್ರವಾಗಿದ್ದು, ಇದರ ಚಿತ್ರೀಕರಣ ಪೂರ್ಣಗೊಂಡಿದೆ. ಈ ಸಿನಿಮಾದ ಫಸ್ಟ್​ಲುಕ್ ಪೋಸ್ಟರ್​ ಬಿಡುಗಡೆಯಾಗಲಿದೆ

  • Share this:

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ಮಯೂರಿ 'ಕೃಷ್ಣಲೀಲಾ' ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯವಾದವರು. ಇತ್ತೀಚೆಗಷ್ಟೆ ಬಹುಕಾಲದ ಗೆಳೆಯನ ಕೈ ಹಿಡಿದು ನವ ದಾಂಪತ್ಯಕ್ಕೆ ಕಾಲಿಟ್ಟ ಮಯೂರಿ ,ಈಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.


ಮಯೂರಿ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದು, 'ಆದ್ಯಂತ' ಎಂಬ ಮಹಿಳಾ ಕೇಂದ್ರಿತ ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಥ್ರಿಲ್ಲರ್​ ಚಿತ್ರವಾಗಿದ್ದು, ಇದರ ಚಿತ್ರೀಕರಣ ಪೂರ್ಣಗೊಂಡಿದೆ. ಈ ಸಿನಿಮಾದ ಫಸ್ಟ್​ಲುಕ್ ಪೋಸ್ಟರ್​ ಬಿಡುಗಡೆಯಾಗಲಿದೆ

View this post on Instagram

Coming soon🙏


A post shared by mayuri (@mayurikyatari) on

ರಮೇಶ್​ ಬಾಬು ಅವರು ನಿರ್ಮಿಸಿರುವ 'ಆದ್ಯಂತ' ಚಿತ್ರವನ್ನು ಪುನೀತ್​ ಶರ್ಮನ್ ನಿರ್ದೇಶಿಸಿದ್ದಾರೆ. ಇನ್ನು ಮೂರು ದಿನಗಳಲ್ಲಿಈ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್ ಬಿಡುಗಡೆಯಾಗಲಿದೆ. ಈ ವಿಷಯವನ್ನು ಮಯೂರಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಏಪ್ರಿಲ್​ ಅಂತ್ಯಕ್ಕೆ ಈ ಚಿತ್ರದ ಡಬ್ಬಿಂಗ್  ಕೆಲಸ ಮಾತ್ರ ಬಾಕಿ ಇತ್ತು. ​


ಇದನ್ನೂ ಓದಿ: ವಿಜಯ್​ ದೇವರಕೊಂಡ ಕುಟುಂಬಕ್ಕೆ ಎಂಟ್ರಿ ಕೊಟ್ಟ ಹೊಸ ಅತಿಥಿ..!


ಇತ್ತೀಚೆಗಷ್ಟೆ ವಿವಾಹವಾದ ಮಯೂರಿ ಅತ್ತೆ ಮನೆಯಲ್ಲಿ ಅವರ ಆರಂಭದ ದಿನಗಳು ಹೇಗಿವೆ ಎಂದು ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋಗಳು ಇಲ್ಲಿವೆ.
View this post on Instagram

Mr and Mrs ❤️ We know each other since a decade, but!! This feels beautiful ❤️ #mrandmrs


A post shared by mayuri (@mayurikyatari) on

ಇದನ್ನೂಓದಿ: Yogi: 10 ನಿಮಿಷ ಕತೆ ಕೇಳಿ ಸಿನಿಮಾಗೆ ಓಕೆ ಎಂದ ಲೂಸ್​ ಮಾದ ಯೋಗಿ: ರಿಲೀಸ್​ ಆಯ್ತು ಟೈಟಲ್​ ಪೋಸ್ಟರ್​..!

top videos
    First published: