ತಮಿಳು ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳಿಂದಲೇ ಪ್ರೇಕ್ಷಕರ ಮನಸು ಗೆದ್ದಿರುವ ತಮಿಳು ನಟ ಮಯಿಲ್ ಸಾಮಿ (Mayilsamy) ನಿಧನರಾಗಿದ್ದಾರೆ (Death). ಫೆಬ್ರವರಿ 19 ರಂದು ಭಾನುವಾರ ಬೆಳಿಗ್ಗೆ ನಟ ನಿಧನರಾದರು. ನಟನಿಗೆ (Actor) 57 ವರ್ಷ ವಯಸ್ಸಾಗಿತ್ತು. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವಿಟ್ಟರ್ನಲ್ಲಿ (Twitter) ಈ ಮಾಹಿತಿಯನ್ನು (Information) ಶೇರ್ ಮಾಡಿದ್ದಾರೆ. ಮಯಿಲ್ ಸಾಮಿ ಅವರ ಸಾವಿನ ಸುದ್ದಿಯನ್ನು ಅವರು ಟ್ವೀಟ್ (Tweet) ಮೂಲಕ ದೃಢಪಡಿಸಿದ್ದಾರೆ. ಅವರು ನಟನ ಅನಾರೋಗ್ಯದ (Illness) ಬಗ್ಗೆ ತಿಳಿಸಿದ್ದಾರೆ. ನಟನ ಕುಟುಂಬದವರು ಅವರನ್ನು ಚೆನ್ನೈನ (Chennai) ಪೋರೂರ್ ಪ್ರದೇಶದ ಆಸ್ಪತ್ರೆಗೆ ಸಾಗಿಸಿದ್ದಾಗಿ ಹೇಳಿದ್ದಾರೆ. ಅಲ್ಲಿಯೇ ನಟ ಕೊನೆಯುಸಿರೆಳೆದಿದ್ದಾರೆ.
ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಅವರ ಮನೆಯವರು ಅವರನ್ನು ಪೋರೂರು ರಾಮಚಂದ್ರ ಆಸ್ಪತ್ರೆಗೆ ಕರೆದೊಯ್ದರು. ಅವರು ದಾರಿಯಲ್ಲಿಯೇ ನಿಧನರಾದರು. ನಂತರ, ವೈದ್ಯರು ಅವರ ಸಾವನ್ನು ದೃಢಪಡಿಸಿದರು. ಅವರು ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು ಎಂದಿದ್ದಾರೆ.
ಡಬ್ಬಿಂಗ್ ವಿಡಿಯೋ ವೈರಲ್
ಅವರ ಸಾವಿನ ನಂತರ, ಡಬ್ಬಿಂಗ್ ಸ್ಟುಡಿಯೊದಲ್ಲಿದ್ದ ಅವರ ಕೊನೆಯ ವೀಡಿಯೊ ಈಗ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಮಯಿಲ್ ಸಾಮಿ ಮುಂಬರುವ ಚಿತ್ರ ಗ್ಲಾಸ್‌ಮೇಟ್‌ನಲ್ಲಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿರುವುದು ಕಂಡುಬಂದಿದೆ.
Versatile Actor #Mayilsamy ( @mayilsamyR ) Finish his Dubbing for #Glassmate Movie
RELEASING SOON🌊 @angaiyarkannan1@Rajsethupathy1 @actressbrana @santhoshchoreo @dnextoff @teamaimpr pic.twitter.com/WgSvAN5bm3
— D Next (@dnextoff) February 18, 2023
ಕಮಲ್ ಹಾಸನ್ ಸಂತಾಪ
நகைச்சுவை நடிப்பில் தனக்கென்று ஒரு பாணியை முன்னிறுத்தி வெற்றி கண்டவர் நண்பர் மயில்சாமி. உதவும் சிந்தையால் பலராலும் நினைக்கப்படுவார். அன்பு நண்பருக்கென் அஞ்சலி #Mayilsamy
— Kamal Haasan (@ikamalhaasan) February 19, 2023
ಇದನ್ನೂ ಓದಿ: SS Rajamouli: ಧರ್ಮ ಅಂದ್ರೆ ಶೋಷಣೆ, ದಬ್ಬಾಳಿಕೆ! ರಾಜಮೌಳಿ ಹೀಗ್ಯಾಕಂದ್ರು?
ನನ್ನ ಉತ್ತಮ ಸ್ನೇಹಿತ, ಮಹಾನ್ ವ್ಯಕ್ತಿ ಮಾಯಿಲ್ ಸಾಮಿ ಅವರ ಅಕಾಲಿಕ ನಿಧನವನ್ನು ಕೇಳಿ ಆಘಾತವಾಯಿತು. ತೀವ್ರ ದುಃಖವಾಯಿತು. ಅವರ ಕುಟುಂಬ, ಸಂಬಂಧಿಕರು, ಸ್ನೇಹಿತರು ಮತ್ತು ಚಿತ್ರರಂಗದ ಸಹೋದ್ಯೋಗಿಗಳಿಗೆ ನನ್ನ ಸಂತಾಪಗಳು ಎಂದು ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ವೆಂಕಟ್ ಪ್ರಭು ಟ್ವೀಟ್ ಮಾಡಿ, ನಿಜವಾಗಿಯೂ ಶಾಕಿಂಗ್! ಅವರು ಮತ್ತು ಲಕ್ಷ್ಮಣ್ ಸಾರ್ #SiripoSiripu ಹೆಸರಿನ ಆಡಿಯೋ ಕಾಮಿಡಿ ವೈವಿಧ್ಯ ಕಾರ್ಯಕ್ರಮವನ್ನು ಮಾಡಿದಾಗಿನಿಂದ ನಾನು ಅವರ ಅಭಿಮಾನಿಯಾಗಿದ್ದೇನೆ. #RIPmayilsamy ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ