Mayamruga: ಮತ್ತೆ ಬರುತ್ತಿದೆ ಮಾಯಾಮೃಗ ಧಾರಾವಾಹಿ, ಕಾಲಕ್ಕೆ ತಕ್ಕಂತೆ ಕಥೆ ಬದಲಿಸಲಿದ್ದಾರಾ ಟಿ.ಎನ್ ಸೀತಾರಾಂ?

ಮತ್ತೊಮ್ಮೆ ಮಾಯಾಮೃಗ ಧಾರಾವಾಹಿಯನ್ನು ನಿರ್ದೇಶಿಸಲು ಟಿ.ಎನ್ ಸೀತಾರಾಂ ಅವರು ಯೋಚನೆ ಮಾಡಿದ್ದಾರೆ. ಇದು ಇಂದಿನ ಮಾಯಾಮೃಗ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಹಾಗಾದ್ರೆ ಮತ್ತೊಮ್ಮೆ ಮಾಯಾಮೃಗ ಧಾರಾವಾಹಿ ಬರಲಿದೆ. ಜನ ಅದಕ್ಕಾಗಿ ಕಾಯ್ತಾ ಇದ್ದಾರೆ.

ಮಾಯಾಮೃಗ ಧಾರಾವಾಹಿ

ಮಾಯಾಮೃಗ ಧಾರಾವಾಹಿ

 • Share this:
  ಮಾಯಾಮೃಗ (Mayamrugaಧಾರಾವಾಹಿ (Serial). ಹೆಸರೇ ಸೂಚಿಸುವಂತೆ ವೀಕ್ಷಕರನ್ನು ತನ್ನ ಮಾಯೆಯಲ್ಲಿ ಸಿಲುಕಿಸಿಕೊಂಡಿದ್ದ ಧಾರಾವಾಹಿ. ಜನ ತಪ್ಪದೇ ನೋಡ್ತಿದ್ದ ಸೀರಿಯಲ್. ಟಿ.ಎನ್ ಸೀತಾರಾಂ (T N Seetha ram) ಅವರ ನಿರ್ದೇಶನ (Direction) ಅಂದ್ರೆ ಅಲ್ಲಿ ಹೊಸತನ ಇರುತ್ತೆ ಅನ್ನೋದು ಜನರ ನಂಬಿಕೆ. ಅವರು ಬೇರೆ ಧಾರಾವಾಹಿಗಳಂತೆ ಎಳೆಯುವುದಿಲ್ಲ. ಬೇಗ ಬೇಗ ಜನರಿಗೆ ಅರ್ಥವಾಗುವಂತೆ, ಬೋರ್ ಆಗದಂತೆ ನಿರ್ದೇಶನ ಮಾಡ್ತಾರೆ ಅನ್ನೋದು ಜನರ ಅಭಿಪ್ರಾಯ. ಮಾಯಾಮೃಗ ಧಾರಾವಾಹಿ ಅಂದಿನ ಕಾಲದಲ್ಲಿ ಹೆಚ್ಚು ಓಡಿದ್ದ ಧಾರಾವಾಹಿ. ಜನ ಧಾರಾವಾಹಿಯಲ್ಲೇ ತಮ್ಮ ಪಾತ್ರವನ್ನು ಕಂಡ, ತಮ್ಮ ಜೀವನಕ್ಕೆ ಅದನ್ನು ಬದಲಿಸಿಕೊಂಡು ನೋಡುತ್ತಿದ್ದರು. ಇನ್ನೊಮ್ಮೆ (Again) ಮಾಯಾಮೃಗ ಬರುತ್ತೆ ಅಂದ್ರೆ ನೋಡದೇ ಇರುತ್ತಾರಾ? ಹೌದು ಈ ರೀತಿ ಖುಷಿಯ ವಿಚಾರವನ್ನು ನಿರ್ದೇಶಕ (Director) ಟಿ.ಎನ್ ಸೀತಾರಾಂ ಅವರು ಹಂಚಿಕೊಂಡಿದ್ದಾರೆ.

  ಮಾಯಾಮೃಗದ ಹಳೆ ಕಥೆ
  ಮಾಯಾಮೃಗ ಧಾರಾವಾಹಿಯನ್ನು ಟಿ. ಎನ್. ಸೀತಾರಾಮ್ ಅವರು, ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ಜತೆ ಜಂಟಿಯಾಗಿ ನಿರ್ದೇಶಿಸಿದ್ದರು. ಇದನ್ನು ಮೊದಲ ಬಾರಿಗೆ ಡಿಡಿ ಚಂದನ ಟಿವಿ ವಾಹಿನಿಯಲ್ಲಿ 1998 ರಲ್ಲಿ ಪ್ರಸಾರ ಮಾಡಲಾಯಿತು. ಮತ್ತು ಇದು ಮಾರ್ಚ್ 10, 2014 ರಂದು ಝೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಮತ್ತೆ ಪ್ರಸಾರವಾಗಿತ್ತು.

  ಮಾಯಾಮೃಗದ ಕಥಾವಸ್ತು ಏನಾಗಿತ್ತು?
  ಈ ಕಥೆಯು ತಮ್ಮ ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಸಮಾಜವನ್ನು ಉತ್ತಮಗೊಳಿಸಲು ಪ್ರಯತ್ನಿಸುವ ಇಬ್ಬರು ಮಧ್ಯಮ ವರ್ಗದ ಹುಡುಗಿಯರ ಕುರಿತಾಗಿದೆ. ಮಾಳವಿಕಾ ಮಧ್ಯಮ ವರ್ಗದಲ್ಲಿ ಜನಿಸಿದ ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿದ್ದು, ಸಮಾನತೆ ಮತ್ತು ವಿಮೋಚನೆ ಹೊಂದಿದ ಮಹಿಳೆಯರು ಇರುವಂತಹ ಒಂದು ಆದರ್ಶ ಸಮಾಜದ ಕನಸು ಕಾಣುತ್ತಾಳೆ.

  ಇದನ್ನೂ ಓದಿ: Nammamma Super Star: ಬರ್ತಿದೆ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2, ನಿಮ್ಮೂರಲ್ಲೂ ನಡೆಯುತ್ತೆ ಆಡಿಷನ್​

  ತನ್ನ ಶಿಕ್ಷಕ ಕೃಷ್ಣ ಪ್ರಸಾದನಲ್ಲಿ ಅವಳು ಒಬ್ಬ ಆದರ್ಶ ವ್ಯಕ್ತಿಯನ್ನು ಕಂಡುಕೊಂಡಾಗ, ಅವಳು ತನ್ನ ಹೆತ್ತವರನ್ನು ವಿರೋಧಿಸಿ ಅವನನ್ನು ಮದುವೆಯಾಗುತ್ತಾಳೆ. ಅವಳು ತನ್ನ ಮಾವನ ವ್ಯವಹಾರ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಾಗ. ಅವಳ ಮಾವ ಅವಳನ್ನು ತನ್ನ ಮಗನಿಂದ ಬೇರ್ಪಡಿಸಲು ಪ್ರಯತ್ನಿಸುತ್ತಾನೆ.

  ವಿಭಿನ್ನ ಕಥೆ ಇತ್ತು
  ಮತ್ತೊಂದು ಕುಟುಂಬದಲ್ಲಿ, ಶ್ರೀಲಕ್ಷ್ಮಿ ತನ್ನ ಒಡಹುಟ್ಟಿದವರಾದ ಶ್ಯಾಮಾ ಮತ್ತು ಶಾರದಾ ಮತ್ತು ತಂದೆ ಎಲ್.ಎನ್.ಶಾಸ್ತ್ರಿ ಮತ್ತು ತಾಯಿ ಕಮಲಮ್ಮ ಅವರೊಂದಿಗೆ ವಾಸಿಸುತ್ತಿದ್ದಾರೆ. ಶ್ರೀಲಕ್ಷ್ಮಿಗೆ ಮಾಡೆಲಿಂಗ್ ಗೆ ಅವಕಾಶ ಸಿಕ್ಕಾಗ, ಆಕೆಯ ಸಾಂಪ್ರದಾಯಿಕ ತಂದೆ ಶಾಸ್ತ್ರಿ ಅವಳನ್ನು ಅದಕ್ಕೆ ಬಿಡುವುದಿಲ್ಲ. ಒಂದು ದಿನ, ಶಾಸ್ತ್ರಿಯ ಶಿಷ್ಯರಲ್ಲಿ ಒಬ್ಬರಾದ ರಘುವು ಶ್ರೀಲಕ್ಷ್ಮಿಯನ್ನು ಮದುವೆಯಾಗುವ ಪ್ರಸ್ತಾಪದೊಂದಿಗೆ ಶಾಸ್ತ್ರಿಗಳಲ್ಲಿಗೆ ಬರುತ್ತಾನೆ.

  Mayamruga director, mayamruga serial all episodes, mayamruga new version serial, T. N. Seetha ram share the photo, ಮತ್ತೆ ಬರುತ್ತಿದೆ ಮಾಯಾಮೃಗ ಧಾರಾವಾಹಿ, ಮಾಯಾಮೃಗ ಧಾರಾವಾಹಿ, Kannada news, Karnataka news,
  ಮತ್ತೊಮ್ಮೆ ಮಾಯಾಮೃಗ ಧಾರಾವಾಹಿಯನ್ನು ನಿರ್ದೇಶಿಸಲು ಟಿ.ಎನ್ ಸೀತಾರಾಂ ಅವರು ಯೋಚನೆ ಮಾಡಿದ್ದಾರೆ.


  ಆದರೆ ನಿಶ್ಚಿತಾರ್ಥದ ದಿನದಂದು ಸನ್ಯಾಸಿಯಾಗುತ್ತಾನೆ. ಶಾಸ್ತ್ರಿಗಳ ದೃಢ ನಿಶ್ಚಯದ ಸ್ವಭಾವದಿಂದಾಗಿ, ಅವನ ಮಕ್ಕಳು ಎಲ್ಲರೂ ತಮ್ಮ ಹಣೆಬರಹಗಳನ್ನು ಹುಡುಕಿಕೊಂಡು ಮನೆಯಿಂದ ಹೊರಟು ಹೋಗುತ್ತಾರೆ ಮತ್ತು ಶಾಸ್ತ್ರಿಗಳು ಕೂಡ ತನ್ನ ಸಹೋದರನೊಂದಿಗೆ ಜಗಳ ಎದುರಾದಾಗ ಪತ್ನಿ ಕಮಲಮ್ಮಳೊಂದಿಗೆ ಮನೆಯಿಂದ ಹೊರಟು ಹೋಗುತ್ತಾರೆ

  ಯಾವ ಕಲಾವಿದರು ಅಭಿನಯಿಸಿದ್ದರು?
  ಶಾಸ್ತ್ರಿಗಳ ಪಾತ್ರದಲ್ಲಿ ಎಚ್. ಜಿ. ದತ್ತಾತ್ರೇಯ, ಕೃಷ್ಣಪ್ರಸಾದ್ ಪಾತ್ರದಲ್ಲಿ ಅವಿನಾಶ್, ಶಾರದೆಯಾಗಿ ಜಯಶ್ರೀ, ಶ್ರೀಲಕ್ಷ್ಮಿಯಾಗಿ ರೇಖಾ, ರಾಜೇಶ್ ಪಾತ್ರದಲ್ಲಿ ನಟ ರಾಜೇಶ್, ಬೃಂದಾ ಪಾತ್ರದಲ್ಲಿ ಮಂಜು ಭಾಷಿಣಿ, ಮಾಳವಿಕಾ ಪಾತ್ರದಲ್ಲಿ ಮಾಳವಿಕ ಅವಿನಾಶ್, ನಾರಾಯಣಮೂರ್ತಿ ಪಾತ್ರದಲ್ಲಿ ಎಸ್. ಎನ್. ಸೇತುರಾಂ, ಮೋಹನಮೂರ್ತಿ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ವಿದ್ಯಾ ಆಗಿ ಎಂ. ಡಿ. ಪಲ್ಲವಿ ಅಭಿನಯಿಸಿದ್ದರು.

  ಇದನ್ನೂ ಓದಿ: Apthamitra: 18 ವರ್ಷದ 'ಆಪ್ತ'ಮಿತ್ರನನ್ನು ನೆನೆದ ರಮೇಶ್ ಅರವಿಂದ್, ಫೋಟೋ ನೋಡಿ ನೆಟ್ಟಿಗರು ಭಾವುಕ

  ಇದು ಇಂದಿನ ಮಾಯಾಮೃಗ
  ಮತ್ತೊಮ್ಮೆ ಮಾಯಾಮೃಗ ಧಾರಾವಾಹಿಯನ್ನು ನಿರ್ದೇಶಿಸಲು ಟಿ.ಎನ್ ಸೀತಾರಾಂ ಅವರು ಯೋಚನೆ ಮಾಡಿದ್ದಾರೆ. ಇದು ಇಂದಿನ ಮಾಯಾಮೃಗ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಹಾಗಾದ್ರೆ ಮತ್ತೊಮ್ಮೆ ಮಾಯಾಮೃಗ ಧಾರಾವಾಹಿ ಬರಲಿದೆ ಎಂದು ಜನ ಅದಕ್ಕಾಗಿ ಕಾಯ್ತಾ ಇದ್ದಾರೆ.
  Published by:Savitha Savitha
  First published: