T N Seetharam: ಎರಡೆರಡು ಸೀರಿಯಲ್ ಒಟ್ಟಿಗೆ ಮಾಡ್ತಿದ್ದಾರೆ ಟಿ ಎನ್ ಸೀತಾರಾಂ, ಅಭಿಮಾನಿಗಳಿಗೆ ಡಬಲ್ ಖುಷಿ!

24 ವರ್ಷಗಳ ಹಿಂದೆ ತರೆಕಂಡಿದ್ದ ಕನ್ನಡದ ಸೂಪರ್ ಹಿಟ್​ ಸೀರಿಯಲ್ ಮಾಯಾಮೃಗದ ಕುರಿತಾದ ಹೊಸ ಸುದ್ದಿಯೊಂದು ಬಂದಿದೆ. ಅಲ್ಲದೇ ಈ ಬಾರಿ ಟಿ.ಎನ್. ಸೀತಾರಾಮ್ ಅವರು ಕಿರಿತೆರೆ ಅಭಿಮಾನಿಗಳಿಗೆ ಡಬಲ್ ಸಂತಸದ ಸುದ್ದಿಯನ್ನು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕನ್ನಡದ ಮಾಯಾಮೃಗ’ (Mayamruga) ಧಾರಾವಾಹಿ (Serial) ಹೆಸರು ಕೇಳದ ಜನರೇ ಇಲ್ಲ ಅನಿಸುತ್ತೆ. ಅಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದಿದ್ದಂತಹ ಸೀರಿಯಲ್ ಇದು. ಇದಕ್ಕೂ ಮೊದಲು ಟಿವಿ ಚಾನೆಲ್‌ (TV Channel) ಭಾರತಕ್ಕೆ ಬಂದಾಗ ‘ರಾಮಾಯಣ’ (Ramayana) ಹಾಗೂ ‘ಮಹಾಭಾರತ’ (Maha Bharatha) ಸೀರಿಯಲ್ ವೇಳೆ ಇಡೀ ದೇಶ ಸ್ತಬ್ಧವಾಗ್ತಿತ್ತಂತೆ. ಅದೇ ರೀತಿ ಕನ್ನಡದ ಮಟ್ಟಿಗೆ ಇದೇ ಸಾಧನೆ ಮಾಡಿದ ಧಾರಾವಾಹಿ ಅಂದರೆ ಮಾಯಾಮೃಗ. ಕಿರುತೆರೆ ಹಾಗೂ ಹಿರಿತೆರೆಯ ಖ್ಯಾತ ನಿರ್ದೇಶಕ (Director) ಟಿ.ಎನ್ ಸೀತಾರಾಮ್ (T.N. Seetharam) ಅವರ ನಿರ್ದೇಶನದಲ್ಲಿ ಮೂಡಿಬಂದ ಮಾಯಾಮೃಗ ಧಾರಾವಾಹಿ, 1998ರಲ್ಲಿ ಪ್ರಸಾರವಾಗುತ್ತಿತ್ತು. ಆದರೆ ಇದೀಗ ಮತ್ತೆ ಮಾಯಾಮೃಗದ ಕುರಿತಾದ ಹೊಸ ಸುದ್ದಿಯೊಂದು ಬಂದಿದೆ. ಅಲ್ಲದೇ ಈ ಬಾರಿ ಟಿ.ಎನ್ ಸೀತಾರಾಮ್ ಅವರು ಕಿರಿತೆರೆ ಅಭಿಮಾನಿಗಳಿಗೆ ಡಬಲ್ ಸಂತಸದ ಸುದ್ದಿಯನ್ನು ನೀಡಿದ್ದಾರೆ.

ಬರ್ತಿದೆ ‘ಮತ್ತೆ ಮಾಯಾಮೃಗ':

ಹೌದು, ಟಿ.ಎನ್ ಸೀತಾರಾಮ್​ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಮಾಯಾಮೃಗ‘ ಸೀರಿಯಲ್ ಅಂದಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು. ಈ ಧಾರಾವಾಹಿಯನ್ನು ನೋಡದವರೇ ಇಲ್ಲ ಎಂದರೂ ಸುಳ್ಳಾಗದು. ಅಷ್ಟರ ಮಟ್ಟಿಗೆ ಎಲ್ಲರ ಮನೆಮನವನ್ನು ಮಾಯಾಮೃಗ ಧಾರಾವಾಹಿ ಹೊಕ್ಕಿತ್ತು. ಇದೀಗ ಮತ್ತೆ ಇದೇ ಸೀರಿಯಲ್​ನ ಮುಂದುವರೆದ ಭಾಗ ಬರಲಿದೆ ಎಂದು ಸ್ವತಃ ನಿರ್ದೇಶಕ ಟಿ.ಎನ್​. ಸೀತಾರಾಮ್ ಅವರು ತಿಳಿಸಿದ್ದಾರೆ.ಈ ಕುರಿತು ಫೇಸ್​ಬುಕ್​ ನಲ್ಲಿ ಬರೆದುಕೊಂಡಿರುವ ಅವರು, ‘ಮತ್ತೆ ಮಾಯಾಮೃಗ... ಮಾಯಾಮೃಗದ ಮುಂದಿನ ಇಂದಿನ ಭಾಗ ಅಕ್ಟೋಬರ್ ನಲ್ಲಿ ನಿಮ್ಮ ಮುಂದೆ‘ ಎಂದು ತಿಳಿಸಿದ್ದಾರೆ. ಹೌದು, ‘ಮತ್ತೆ ಮಾಯಾಮೃಗ‘ ಹೆಸರಿನಲ್ಲಿ ಧಾರವಾಹಿಯು ಪ್ರಸಾರವಾಗಲಿದ್ದು, ಹಿಂದಿನಿ ಸೀರಿಯಲ್​ನ ಮುಂದುವರೆದ ಭಾಗ ಇದಾಗಿರಲಿದೆ. ಇದೇ ಬರುವ ಅಕ್ಟೋಬರ್ ತಿಂಗಳಿನಿಂದ ಈ ಸೀರಿಯಲ್ ಪ್ರಸಾರವಾಗಲಿದೆ.

ಇದನ್ನೂ ಓದಿ: Bigg Boss Kannada: ಬಿಗ್​ಬಾಸ್​ ಸೀಸನ್​ 9ರ ರಿಲೀಸ್​ ಡೇಟ್​ ಫಿಕ್ಸ್? ಲೀಕ್​ ಆಯ್ತು ಕಿಚ್ಚನ ಹೊಸ ಲುಕ್​

24 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಧಾರಾವಾಹಿ

24 ವರ್ಷಗಳ ಹಿಂದೆ ಅಂದರೆ 1998ರಲ್ಲಿ ಮಾಯಾಮೃಗ ಧಾರಾವಾಹಿ ಮೊದಲ ಬಾರಿಗೆ ಪ್ರಸಾರವಾಗಿತ್ತು. ದತ್ತಣ್ಣ, ಮಾಳವಿಕಾ ಅವಿನಾಶ್, ಅವಿನಾಶ್, ರಾಜೇಶ್ ನಟರಂಗ, ಮಂಜುಭಾಷಿಣಿ, ಎಂ.ಡಿ ಪಲ್ಲವಿ, ಸುಂದರ್ ರಾಜ್, ಮುಖ್ಯಮಂತ್ರಿ ಚಂದ್ರು, ಸೇತುರಾಂ, ವೈಶಾಲಿ ಕಾಸರವಳ್ಳಿ, ಲಕ್ಷ್ಮೀ ಚಂದ್ರಶೇಖರ್ ಮುಂತಾದ ಘಟಾನುಘಟಿ ಕಲಾವಿದರ ದಂಡೇ ಧಾರಾವಾಹಿಯಲ್ಲಿತ್ತು.

ಇದನ್ನೂ ಓದಿ: Pavitra Lokesh: ಈ ಸಿನಿಮಾದಿಂದ ನರೇಶ್-ಪವಿತ್ರಾ ಲೋಕೇಶ್ ಸಂಬಂಧ ಶುರುವಾಯ್ತಾ? ವೈರಲ್ ಆಗ್ತಿದೆ ಚಿತ್ರದ ದೃಶ್ಯಗಳು

ಮತ್ತೆ ‘ಜಾನಕಿ‘ ಕಥೆ ಹೇಳ ಹೊರಟ ಟಿ.ಎನ್ ಸೀತಾರಾಮ್:

ಇನ್ನು, ಅಕ್ಟೋಬರ್ ತಿಂಗಳಿನಿಂದ ‘ಮತ್ತೆ ಮಾಯಾಮೃಗ‘ ಸೀರಿಯಲ್ ಪ್ರಸಾರವಾಗಲಿದೆ ಎಂದು ಸ್ವತಃ ಟಿ.ಎನ್. ಸೀತಾರಾಮ್ ಅವರೇ ತಿಳಸಿದ್ದಾರೆ. ಇದರ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿಯನ್ನು ಹೇಳಿದ್ದಾರೆ. ಹೌದು, ಸೀತಾರಾಮ್ ಅವರ ಮತ್ತೊಂದು ಸೂಪರ್ ಹಿಟ್ ಧಾರಾವಾಹಿ ಆದಂತಹ ‘ಮಗಳು ಜಾನಕಿ‘ ಕೊರೋನಾ ಹಾಗೂ ಲಾಕ್‌ಡೌನ್‌ ಕಾರಣದಿಂದ  ಪ್ರಸಾರ ಸ್ಥಗಿತಗೊಂಡಿತ್ತು.ಹೀಗಾಗಿ ಸೀತಾರಾಮ್ ಅವರಿಗೆ ಅನೇಕರು ಮತ್ತೆ ಸೀರಿಯಲ್​ ಅನ್ನು ಆರಂಭಿಸಲು ಕೇಳಿಕೊಂಡಿದ್ದರು. ಇದೀಗ ಅವರ ಎಲ್ಲರ ಕನಸು ನನಸಾಗುತ್ತಿದೆ. ಮತ್ತೆ ‘ಮಗಳು ಜಾನಕಿ‘ ಸೀರಿಯಲ್​ ಆರಂಭವಾಗಲಿದೆ. ಈ ಕುರಿತು ಫೇಸ್​ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಜಾನಕಿ ಮುಂದಿನ ಕಥೆಯ ಧಾರಾವಾಹಿ ಯೂ ಆಗಸ್ಟ್ ನಲ್ಲಿ ಶೂಟಿಂಗ್...ನಿಮ್ಮ ಹಾರೈಕೆಯೇ , ನಮ್ಮ ಶಕ್ತಿ‘ ಎಂದು ಬರೆದುಕೊಂಡಿದ್ದಾರೆ.
Published by:shrikrishna bhat
First published: