ಮಾಯೆ ಸೃಷ್ಟಿಸುತ್ತಿದೆ ಮಾಯಾಬಜಾರ್; ಪುನೀತ್ ನಿರ್ಮಾಣದ ಸಿನಿಮಾಗೆ ಭಾರೀ ಮೆಚ್ಚುಗೆ

ಬಹುತೇಕ ಚಿತ್ರಗಳಲ್ಲಿ ಸಾಧು ಕೋಕಿಲ ಕಾಮಿಡಿಯನ್​ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಅವರು ಒಂದು ಭಿನ್ನ ಅವತಾರ ತಾಳಿದ್ದು, ಅದನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ತೆರಳಬೇಕು.

Rajesh Duggumane | news18-kannada
Updated:March 2, 2020, 11:36 AM IST
ಮಾಯೆ ಸೃಷ್ಟಿಸುತ್ತಿದೆ ಮಾಯಾಬಜಾರ್; ಪುನೀತ್ ನಿರ್ಮಾಣದ ಸಿನಿಮಾಗೆ ಭಾರೀ ಮೆಚ್ಚುಗೆ
ಮಾಯಾಬಜಾರ್​ ಪೋಸ್ಟರ್​
  • Share this:
ಸದ್ಯ ಗಾಂಧಿನಗರದ ಅಂಗಳದಲ್ಲಿ ‘ಮಾಯಾಬಜಾರ್ 2016’​ ಹವಾ ಜೋರಾಗಿದೆ. ಅರ್ಥಾತ್​, ಪುನೀತ್​ ರಾಜ್​ಕುಮಾರ್​ ಒಡೆತನದ ಪಿಆರ್​ಕೆ ಬ್ಯಾನರ್​ನಲ್ಲಿ ಮೂಡಿಬಂದಿರುವ ‘ಮಾಯಾಬಜಾರ್’ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂದಷ್ಟು ಹಾಸ್ಯ, ಒಂದಷ್ಟು ಒಳ್ಳೆಯ ಸಂದೇಶ ಹೊತ್ತು ಬಂದ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ವಸಿಷ್ಠ ಸಿಂಹ, ರಾಜ್​ ಬಿ. ಶೆಟ್ಟಿ, ಅಚ್ಯುತ್​ ಕುಮಾರ್, ಚೈತ್ರಾ ರಾವ್​ ಹಾಗೂ ಸುಧಾರಾಣಿ ​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಕಥೆ ಸಾಗುವುದು 2016ರಲ್ಲಿ. ಆ ವರ್ಷದ ನವೆಂಬರ್​ 8ರಂದು ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1,000 ರೂ. ಮುಖಬೆಲೆಯ ನೋಟನ್ನು ರದ್ದು ಮಾಡಿದ್ದರು. ಈ ಘಟನೆ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಅಚ್ಯುತ್​ ಕುಮಾರ್ ಓರ್ವ ನಿಷ್ಠಾವಂತ ಪೊಲೀಸ್​ ಅಧಿಕಾರಿ. ವಸಿಷ್ಠ ಸಿಂಹ ಕಾರ್ಪೆಂಟರ್​.  ರಾಜ್​ ಬಿ. ಶೆಟ್ಟಿಗೆ ಕಳ್ಳತನವೇ ಕುಲಕಸುಬು. ಈ ಮೂವರಿಗೆ ತುರ್ತಾಗಿ ಹಣದ ಅವಶ್ಯಕತೆ ಇರುತ್ತದೆ. ಇದಕ್ಕೆ ಅವರು ತುಳಿಯುವ ಮಾರ್ಗ ನ್ಯಾಯದ್ದಲ್ಲ. ನಂತರ ಏನೆಲ್ಲ ಆಗುತ್ತದೆ ಎನ್ನುವುದು ಸಿನಿಮಾದ ಕತೆ. ಒಂದು ಗಂಭೀರ ಕಥೆಗೆ ಒಂದಷ್ಟು ಹಾಸ್ಯವನ್ನು ಬೆರೆಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ರಾಧಾಕೃಷ್ಣ ರೆಡ್ಡಿ.

ಇದನ್ನೂ ಓದಿ: ಆ್ಯಕ್ಷನ್ ಕಿಂಗ್ ಜಾಕಿಜಾನ್​ಗೆ ಕೊರೊನಾ ವೈರಸ್ ತಗುಲಿರುವುದು ನಿಜವಾ? ಇಲ್ಲಿದೆ ಮಾಹಿತಿ

ಬಹುತೇಕ ಚಿತ್ರಗಳಲ್ಲಿ ಸಾಧು ಕೋಕಿಲ ಕಾಮಿಡಿಯನ್​ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಅವರು ಒಂದು ಭಿನ್ನ ಅವತಾರ ತಾಳಿದ್ದು, ಅದನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ತೆರಳಬೇಕು. ಪ್ರಕಾಶ್​ ರಾಜ್​ ಕೂಡ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

ವೀಕೆಂಡ್​ನಲ್ಲಿ ಈ ಸಿನಿಮಾ ಬಹುತೇಕ ಚಿತ್ರಮಂದಿರದಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಇದು, ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಇನ್ನು, ಸಿನಿಮಾ ನೋಡಿದ ಅನೇಕ ಸ್ಟಾರ್​ ನಟರು ಮಾಯಾಬಜಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಈ ವಾರ ಚಿತ್ರಮಂದಿರಗಳ ಸಂಖ್ಯೆ ಕೂಡ ಹೆಚ್ಚುವ ಸಾಧ್ಯತೆ ಇದೆ.

First published: March 2, 2020, 11:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading