Mayabazar 2016 Teaser: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪುನೀತ್​: ಮಾಯಾಬಜಾರ್​ 2016 ಟೀಸರ್​ ಔಟ್​..!

Mayabazar 2016 Teaser: ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜೇಶ್​ ಬಿ. ಶೆಟ್ಟಿ, ವಸಿಷ್ಠ ಸಿಂಹ, ಸುಧಾರಾಣಿ, ಸಾಧು ಕೋಕಿಲ ಹಾಗೂ ಅಚ್ಚ್ಯುತ್​ ಕುಮಾರ್​ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಟೀಸರ್​ ಪ್ರಧಾನಿ ಮೋದಿ ಅವರ ನೋಟ್​ ಬ್ಯಾನ್​ ಭಾಷಣದಿಂದ ಆರಂಭವಾಗುತ್ತದೆ.

Anitha E | news18-kannada
Updated:November 16, 2019, 8:42 AM IST
Mayabazar 2016 Teaser: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪುನೀತ್​: ಮಾಯಾಬಜಾರ್​ 2016 ಟೀಸರ್​ ಔಟ್​..!
ನಟ ಪುನೀತ್​ ರಾಜ್​ ಕುಮಾರ್​
  • Share this:
ಪುನೀತ್​ ರಾಜ್​ಕುಮಾರ್​ ಸಿನಿಮಾಗಳಲ್ಲಿ ಅಭಿನಯಿಸುವುದರ ಜತೆಗೆ ಚಿತ್ರ ನಿರ್ಮಾಣ ಮಾಡುತ್ತಿರುವ ವಿಷಯವೂ ಗೊತ್ತೇ ಇದೆ. ಅವರ ಪಿ.ಆರ್​.ಕೆ. ಪ್ರೊಡಕ್ಷನ್ಸ್​ ನಿರ್ಮಿಸುತ್ತಿರುವ 'ಮಾಯಾಬಜಾರ್​2106' ಸಿನಿಮಾದ ಟೀಸರ್​ ಈಗ ಬಿಡುಗಡೆಯಾಗಿದೆ.

ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜೇಶ್​ ಬಿ. ಶೆಟ್ಟಿ, ವಸಿಷ್ಠ ಸಿಂಹ, ಸುಧಾರಾಣಿ, ಸಾಧು ಕೋಕಿಲ ಹಾಗೂ ಅಚ್ಚ್ಯುತ್​ ಕುಮಾರ್​ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಟೀಸರ್​ ಪ್ರಧಾನಿ ಮೋದಿ ಅವರ ನೋಟ್​ ಬ್ಯಾನ್​ ಭಾಷಣದಿಂದ ಆರಂಭವಾಗುತ್ತದೆ.



ಅಶ್ವಿನಿ ಪುನೀತ್​ ರಾಜ್​ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ರಾಧಾಕೃಷ್ಣ ರೆಡ್ಡಿ ಅವರ ನಿರ್ದೇಶನವಿದೆ. 56 ಸೆಕೆಂಡ್​ ಇರುವ ಈ ಟೀಸರ್​ ನೋಡಿದರೆ ಕತೆ ನೋಟ್​ ಬ್ಯಾನ್​ ಸುತ್ತಲೇ ನಡೆಯುತ್ತದೆ ಎಂದು ಅರ್ಥವಾಗುತ್ತದೆ.

ಇದನ್ನೂ ಓದಿ: Odeya Song: ನಂಜಿಗೆ ನಾಳೆ ಸಂಜಿ ಇಲ್ಲೇ ಸಿಗ್ತಾರಂತೆ ಒಡೆಯ ದರ್ಶನ್​..!

ಇದು ಪಿಆರ್​ಕೆ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ ಎರಡನೇ ಸಿನಿಮಾ. ಮೊದಲ ಸಿನಿಮಾ 'ಕವಲುದಾರಿ' ಸ್ಯಾಂಡಲ್​ವುಡ್​ನಲ್ಲಿ ಸೂಪರ್​ ಡೂಪರ್​ ಹಿಟ್​ ಆಗಿತ್ತು. ಕಡಿಮೆ ಬಜೆಟ್​ನಲ್ಲಿ ನಿರ್ಮಾಣಗೊಂಡಿದ್ದ ಆ ಸಿನಿಮಾ ಬಾಕ್ಸಾಫಿಸ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ರಿಷಿ ಹಾಗೂ ಅನಂತ್​ನಾಗ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿ ಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಸಸ್ಸು ಕಂಡಿತ್ತು.

ಈಗ ಈ 'ಮಾಯಾಬಜಾರ್​2016' ಪ್ರೇಕ್ಷಕರಿಗೆ ಮೋಡಿ ಮಾಡಿ ಚಿತ್ರಮಂದಿರದತ್ತ ಕರೆತರುವಲ್ಲಿ ಯಶಸ್ಸು ಕಾಣಲಿದೆಯಾ ಎಂದು ಕಾದು ನೋಡಬೇಕಿದೆಯಷ್ಟೆ.

Shruti Hassan: ಸಿನಿಮಾಗಳಿಗೆ ವಿದಾಯ ಹೇಳಲಿದ್ದಾರಂತೆ ಶ್ರುತಿ ಹಾಸನ್​..!


 

First published:November 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ