ಪ್ರಭಾಸ್​ ಅಭಿಮಾನಿಗಳಿಗೆ ಮತ್ತೆ ಕಹಿಸುದ್ದಿ; ಸಾಹೋ ತಂಡದಿಂದ ಹೊಸ ಬಿಡುಗಡೆ ದಿನಾಂಕ!

ಈ ಮೊದಲು ಆ.15ರಂದು ಸಿನಿಮಾ ತೆರೆಗೆ ತರುವುದಾಗಿ ಪ್ರಭಾಸ್​ ಘೋಷಣೆ ಮಾಡಿದ್ದರು. ಆದರೆ, ಇನ್ನೂ ಸಾಕಷ್ಟು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬಾಕಿ ಉಳಿದಿವೆ. ಹಾಗಾಗಿ ವಿಳಂಬವಾಗಲಿದೆ ಎನ್ನಲಾಗಿದೆ.

Rajesh Duggumane | news18
Updated:May 25, 2019, 1:57 PM IST
ಪ್ರಭಾಸ್​ ಅಭಿಮಾನಿಗಳಿಗೆ ಮತ್ತೆ ಕಹಿಸುದ್ದಿ; ಸಾಹೋ ತಂಡದಿಂದ ಹೊಸ ಬಿಡುಗಡೆ ದಿನಾಂಕ!
ಸಾಹೋ ಪೋಸ್ಟರ್​
Rajesh Duggumane | news18
Updated: May 25, 2019, 1:57 PM IST
‘ಬಾಹುಬಲಿ 2’ ತೆರೆಕಂಡಾಗಲೇ ಪ್ರಭಾಸ್​ ಅಭಿನಯದ ‘ಸಾಹೋ’ ಟೀಸರ್​ ರಿಲೀಸ್​ ಆಗಿತ್ತು. ಇದಾಗಿ ಎರಡು ವರ್ಷಗಳ ಮೇಲಾಗಿದೆ. ಆದರೆ, ‘ಸಾಹೋ’ ಸಿನಿಮಾ ಮಾತ್ರ ತೆರೆಕಂಡಿಲ್ಲ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಚಿತ್ರ ಆಗಸ್ಟ್​ 15 ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ, ಈಗ ಚಿತ್ರತಂಡ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಮುಂದಾಗಿದೆಯಂತೆ!

‘ಸಾಹೋ’ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳಿರಲಿವೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ದುಬೈ ಸೇರಿ ಅನೇಕ ಕಡೆಗಳಲ್ಲಿ ಸಿನಿಮಾದ ಶೂಟಿಂಗ್​ ಮಾಡಲಾಗಿದೆ. ಸಿನಿಮಾದಲ್ಲಿ ವಿಎಫ್​ಎಕ್ಸ್​​ ತಂತ್ರಜ್ಞಾನದ ಬಳಕೆ ಹೆಚ್ಚಿದ್ದು, ಇದರಿಂದ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ.

ಈ ಮೊದಲು ಆ.15ರಂದು ಸಿನಿಮಾ ತೆರೆಗೆ ತರುವುದಾಗಿ ಪ್ರಭಾಸ್​ ಘೋಷಣೆ ಮಾಡಿದ್ದರು. ಆದರೆ, ಇನ್ನೂ ಸಾಕಷ್ಟು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬಾಕಿ ಉಳಿದಿವೆ. ಅಂದುಕೊಂಡ ದಿನಾಂಕಕ್ಕೆ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸುವುದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ:  'ಸಾಹೋ' ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಿದ ಟಾಲಿವುಡ್​ ರೆಬೆಲ್​ ಸ್ಟಾರ್​ ಪ್ರಭಾಸ್​

ಹಾಗಾದರೆ ಹೊಸ ಬಿಡುಗಡೆ ದಿನಾಂಕ ಯಾವಾಗಾ? ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹಾಗಾಗಿ, ವಿಶೇಷ ದಿನದಂದೇ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ ನವರಾತ್ರಿಯಲ್ಲಿ ‘ಸಾಹೋ’ ಬಿಡುಗಡೆ ಆಗಲಿದೆ. ಚಿತ್ರತಂಡ ಈ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪ್ರಭಾಸ್​ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಾಹೋ’ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ತೆರೆಗೆ ಬರುತ್ತಿದೆ. ಶ್ರದ್ಧಾ ಕಪೂರ್​, ಜಾಕಿ ಶ್ರಾಫ್​ ಮೊದಲಾದವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದು ಭಾರತದ ಪಾಲಿಗೆ ಹೊಸ ಪ್ರಯತ್ನವಾಗಲಿದೆ.
Loading...

ಇದನ್ನೂ ಓದಿ: 'ಸಾಹೋ' ಸಿನಿಮಾದಲ್ಲಿ ಕೇವಲ ಸಾಹಸ ದೃಶ್ಯಗಳಿಗೆಂದೇ 90 ಕೋಟಿ ಖರ್ಚು

'ಸಾಹೋ' ಹೈ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಸಾಹಸ ದೃಶ್ಯಗಳಿಗೆಂದೇ  ಬರೋಬ್ಬರಿ 90 ಕೋಟಿ ಖರ್ಚು ಮಾಡಲಾಗಿದೆಯಂತೆ. ದೃಶ್ಯದಲ್ಲಿ ನೈಜತೆಗಾಗಿ ಹೊಸ ಐಷಾರಾಮಿ ಕಾರುಗಳನ್ನು ಬಳಸಲಾಗಿದೆ. ಅಷ್ಟೆಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸ್ಟಂಟ್​ ಮಾಸ್ಟರ್​​ ಕೇನಿ ಬೆಟ್ಸಾ ಅವರನ್ನು ಈ ಸಿನಿಮಾಗಾಗಿ ಕರೆಸಲಾಗಿದೆ.

First published:May 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...