ಮತ್ತೆ ಮಾಯಾಮೃಗ (Matte Mayamruga) ಧಾರಾವಾಹಿಯೂ (Serial) ಸಿರಿ ಕನ್ನಡ (Siri Kannada) ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಟಿ.ಎನ್ ಸೀತಾರಾಮ್ (T.N Seetha ram) ನಿರ್ದೇಶನ ಜನರಿಗೆ ಇಷ್ಟ ಆಗಿದೆ. ಮಾಯಾಮೃಗ ರೀತಿಯಲ್ಲೇ, ಮತ್ತೆ ಮಾಯಾಮೃಗವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಎಲ್ಲಾ ಪಾತ್ರಗಳು ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿವೆ. ಧಾರಾವಾಹಿಯಲ್ಲಿ ಮಂಜಪ್ಪನವರ ಸೊಸೆಯಾಗಿ ಸುಗಂಧಿ ಪಾತ್ರ ನಿರ್ವಹಿಸುತ್ತಿದ್ದಾರೆ. ಯುಎಸ್ಎ ರಿರ್ಟನ್ ಆಗಿರುವ ಇವರು, ಮಾವನ ಆಸ್ತಿಗಾಗಿ ಭಾರತಕ್ಕೆ ಬಂದಿದ್ದಾರೆ. ಈ ಪಾತ್ರ ಮಾಡುತ್ತಿರು ಸುಗಂಧಿ ಅವರ ನಿಜವಾರ ಹೆಸರ ಅನನ್ಯಾ ಸುರೇಶ್ (Ananya Suresh). ಇವರ ಕಿರು ಪರಿಚಯ ಇಲ್ಲಿದೆ. ಅನನ್ಯಾ ಹುಟ್ಟಿದ್ದು ಸಪ್ಟೆಂಬರ್ 22ರಂದು, ಶಿವಮೊಗ್ಗದಲ್ಲಿ. ಇವರ ತಂದೆ ಶ್ರೀ ಸುರೇಶ್, ಟಿವಿಎಸ್ ಮೋಟರ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶ್ರೀಮತಿ ವೈ.ಎಸ್.ಭಾರತಿ ಇವರು ಕೆ.ಪಿ.ಸಿ.ಎಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ನಟನೆ ಮೇಲೆ ಅನನ್ಯಾಗೆ ಆಸಕ್ತಿ
ಅನನ್ಯಾ ಅವರು ಎಂಬಿಎ ಓದಿದ್ದು, ಮ್ಯೂಚುವಲ್ ಫಂಡ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಇವರಿಗೆ ನಟನೆಯಲ್ಲಿ. ಅನನ್ಯಾ ಆರನೇ ವಯಸ್ಸಿಗೆ ಸಂಗೀತಾಭ್ಯಾಸ ಆರಂಭಿಸಿದರು. ಸುಧಾಮಣಿ ಅವರಲ್ಲಿ ಸುಮಾರು 18 ವರ್ಷಗಳ ಕಾಲ ಸಂಗೀತ ಕಲಿತಿದ್ದಾರೆ. ಸಂಗೀತದಲ್ಲಿ ಜೂನಿಯರ್, ಸೀನಿಯರ್ ಹಂತಗಳನ್ನು ಪೂರೈಸಿದ್ದಾರೆ.
ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಒಂದು ಆಕಸ್ಮಿಕ
ಇವರು ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಒಂದು ಆಕಸ್ಮಿಕ. ಬೇರೆ ಉದ್ಯೋಗದ ಹುಡುಕಾಟದಲ್ಲಿದ್ದ ಇವರಿಗೆ, ನಾಟಕಗಳಲ್ಲಿ ನಟಿಸುವಂತೆ ಸ್ನೇಹಿತರೊಬ್ಬರು ಸಲಹೆ ನೀಡುತ್ತಾರೆ. ಎಲ್ಲ ಬಗೆಯ ನಾಟಕಗಳಲ್ಲಿ ಅನುಭವ ಪಡೆಯುವ ಹಂಬಲ ಇತ್ತು. ಏಳು ನಾಟಕಗಳ ಜೊತೆ ಎರಡು ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ. 2020ರಲ್ಲಿ ಅಮಿತ್ ಬಿ.ಎನ್. ಅವರೊಂದಿಗೆ ಮದುವೆ ಆಗುತ್ತಾರೆ. ಪತಿ ಅಮಿತ್ ಕೂಡ ರಂಗಕರ್ಮಿ.
ಇದನ್ನೂ ಓದಿ: Actor Sharath Padmanabh: 'ಪಾರು' ಧಾರಾವಾಹಿ ನಟ ಆದಿ ನಿಶ್ಚಿತಾರ್ಥ, ಶರತ್ ಮದುವೆ ಆಗ್ತಿರೋ ಹುಡುಗಿ ಇವರೇ!
ಮತ್ತೆ ಮಾಯಾಮೃಗದ ಆಡಿಷನ್
ಮತ್ತೆ ಮಾಯಾಮೃಗದ ಆಡಿಷನ್ ಇದೆ ಎಂದು ಗೊತ್ತಾಗಿದ್ದೇ ತಡ, ಅನನ್ಯಾ ಸುರೇಶ್ ಆಡಿಷನ್ಗೆ ಹೋಗಿದ್ರಂತೆ. "ಸೀತಾರಾಮ್ ಸರ್ ಧಾರಾವಾಹಿಗೆ ಆಡಿಷನ್ ಇದೆ ಎಂದು ಗೊತ್ತಾದ ಕೂಡಲೆ ಹೋಗಬೇಕೆಂದು ನಿರ್ಧರಿಸಿದೆ ,ಯಾಕೆಂದರೆ, ಆಡಿಷನ್ ನಲ್ಲಿ ಆಯ್ಕೆ ಆದರೂ, ಆಗದಿದ್ದರೂ ಅಲ್ಲೊಂದು ಕಲಿಕೆ ಇರುತ್ತದೆ ಎಂಬ ಕಾರಣಕ್ಕಾಗಿ. ಸೀತಾರಾಮ್ ಸರ್ ಹಾಗು ನಾಗೇಂದ್ರ ಷಾ ಸರ್ ಮುಂದೆ ಆಡಿಷನ್ ಕೊಟ್ಟು ಬಂದಿದ್ದೆ. ಆಯ್ಕೆ ಆಗಿದ್ದೀರಿ ಅಂತ ಕರೆ ಬಂದಾಗ, ತುಂಬಾ ಖುಷಿಯಾಯಿತು" ಎಂದು ಅನನ್ಯಾ ಹೇಳಿದ್ದಾರೆ.
ಕಲಾ ಜೀವನದ ಮೈಲಿಗಲ್ಲು
ಕಲಾಜೀವನದ ವಿಶೇಷ ಸಾಧನೆ, ಮೈಲಿಗಲ್ಲು ಯಾವುದು ಅಂತ ಕೇಳಿದರೆ, ಅನನ್ಯಾ ಅವರು ಟಿ.ಎನ್.ಸೀತಾರಾಮ್ ಸರ್ ಧಾರಾವಾಹಿಯಲ್ಲಿ ಕೆಲಸಮಾಡುತ್ತಿರುವುದೇ ಒಂದು ಮೈಲಿಗಲ್ಲು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇನ್ನೂ ಸಾಧಿಸುವುದಕ್ಕೆ ತುಂಬಾ ಇದೆ, ಅವಕಾಶಗಳು ಸಿಕ್ಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂಬ ಹಂಬಲ ಇದೆ ಎನ್ನುತ್ತಾರೆ.
ಮಾಯಾಮೃಗ ದೊಡ್ಡ ಆಲದ ಮರ
ಮಾಯಾಮೃಗ ಒಂದು ಇತಿಹಾಸವನ್ನು ಸೃಷ್ಟಿಸಿದಂಥ ಧಾರಾವಾಹಿ, ಅದು ದೊಡ್ಡ ಆಲದ ಮರ ಇದ್ದ ಹಾಗೆ, ನಾನು ಇನ್ನೂ ಅದರ ಕೆಳಗೆ ಬೆಳೆಯುತ್ತಿರುವ ಸಣ್ಣ ಗಿಡ. ಬಹಳ ಖುಷಿಯಾಗುತ್ತದೆ ಪ್ರತಿ ದಿನ ಶೂಟಿಂಗ್ ಗೆ ಹೊರಡುವಾಗ ಕೃತಜ್ಞತಾ ಭಾವದಿಂದ ಹೊರಡುತ್ತೇನೆ. ಈ ಬಾರಿಯೂ ಮತ್ತೆ_ಮಾಯಾಮೃಗ ಎಲ್ಲರ ಮನ ಸೆಳೆಯುತ್ತದೆ ಎಂಬ ನಂಬಿಕೆ, ಆಸೆ ಇದೆ ಎಂಬ ಅಭಿಪ್ರಾಯ ಅನನ್ಯಾ ಅವರದ್ದು.
ಸೀತಾರಾಮ್ ಸರ್ ಸೀರಿಯಲ್ ಅಲ್ಲಿ ನಟಿಸುವುದು ಎಂದರೆ ಪ್ರತಿ ದಿನ ನಟನೆಯನ್ನು ಕಲಿತ ಹಾಗೆ. ಕ್ಯಾಮೆರಾ ಆಕ್ಟಿಂಗ್ ಏನು ಅಂತ ಕಲಿಸುವ ಒಂದು ಧಾರಾವಾಹಿ ಇದು. ನಾಗೇಂದ್ರ ಸರ್ ತುಂಬಾ ಸಹನೆಯಿಂದ ಸಣ್ಣ ಸಣ್ಣ ಸೂಕ್ಷ್ಮತೆಗಳನ್ನ ಹೇಳಿಕೊಡ್ತಾರೆ.
ಇದನ್ನೂ ಓದಿ: Vasishta Simha-Haripriaya: ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಿದ್ಧರಾಗ್ತಿದ್ದೀರಾ ಹರಿಪ್ರಿಯಾ?
ಶಂಕರ್ ಅಶ್ವಥ್ ಸರ್, ಮಂಜು ಭಾಷಿಣಿ, ಮಧುಮತಿ, ನಿಕಿತಾ , ಮಾರುತೇಶ್, ನಾಗೇಂದ್ರ ಸರ್, ಇವರುಗಳ ಜೊತೆ ಬೆರೆತು ಅಭಿನಯಿಸುವ ಅವಕಾಶ ಎಲ್ಲ ಸಮಯದಲ್ಲೂ ಸಿಗುವಂಥದ್ದಲ್ಲ. ಬಹುತೇಕ ಎಲ್ಲರೂ ಹಿರಿಯ, ಅನುಭವಿ ಕಲಾವಿದರು, ನಾನು ಮೊದಲ ಹೆಜ್ಜೆಯಲ್ಲಿದ್ದರೂ ಎಲ್ಲರೂ ಆತ್ಮೀಯತೆಯಿಂದ ಇರುತ್ತಾರೆ. ಇದೊಂದು ವಿಶೇಷ ಅನುಭವ. ನಾನು ಅದೃಷ್ಟವಂತೆ ಎಂಬ ಭಾವನೆ ಇದೆ ಎಂದು ಅನನ್ಯಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ