• Home
  • »
  • News
  • »
  • entertainment
  • »
  • Matte Mayamruga Serial: ಹೊಸ ಕಥೆ-ಹೊಸ ಅಧ್ಯಾಯ-ಹೊಸ ಸಂಚಿಕೆಯೊಂದಿಗೆ ಮತ್ತೆ ಮಾಯಾಮೃಗ- ಸೀರಿಯಲ್ ಲೋಕದಲ್ಲಿ ಹೊಸ ಪ್ರಯೋಗ

Matte Mayamruga Serial: ಹೊಸ ಕಥೆ-ಹೊಸ ಅಧ್ಯಾಯ-ಹೊಸ ಸಂಚಿಕೆಯೊಂದಿಗೆ ಮತ್ತೆ ಮಾಯಾಮೃಗ- ಸೀರಿಯಲ್ ಲೋಕದಲ್ಲಿ ಹೊಸ ಪ್ರಯೋಗ

ಸೀರಿಯಲ್ ಲೋಕದಲ್ಲಿ ಹೊಸ ಪ್ರಯೋಗ

ಸೀರಿಯಲ್ ಲೋಕದಲ್ಲಿ ಹೊಸ ಪ್ರಯೋಗ

ಮತ್ತೆ ಮಾಯಾಮೃಗ ಸೀರಿಯಲ್ ಇದೇ ತಿಂಗಳ 31 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ರಿಂದ 9.30ರ ವರೆಗೂ ಪ್ರಸಾರ ಆಗುತ್ತಿದೆ. ಹೊಸ ಕಥೆ, ಹೊಸ ಸಂಚಿಕೆ, ಹೊಸ ಅಧ್ಯಾಯದೊಂದಿಗೆ ಮತ್ತೆ ಮಾಯಾಮೃಗ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಿರುತೆರೆ ಲೋಕದಲ್ಲಿ (Mayamruga) ಮಾಯಾಮೃಗ ಸೃಷ್ಟಿಸಿದ ಸಂಚಲನ ದೊಡ್ಡಮಟ್ಟದಲ್ಲಿಯೇ ಇದೆ. ಸೀರಿಯಲ್​​ನ (Serial) ಆ ಟೈಟಲ್ ಸಾಂಗ್ ಈಗಲೂ ಕೆಲವರನ್ನ ಕಾಡುತ್ತದೆ. ಸೀರಿಯಲ್ ನೋಡ್ತಾನೆ ಬೆಳೆದು ಬದುಕಿನ ಸತ್ಯಗಳನ್ನ ಅರ್ಥೈಸಿಕೊಂಡ ಅನೇಕರು ಈ ಸೀರಿಯಲ್ ಮರೆತಿಲ್ಲ. ಸುಮಾರು 23-24 ವರ್ಷಗಳ ಹಿಂದೆ ಬಂದಿದ್ದ ಈ ಸೀರಿಯಲ್ ಮೊದಲು ಡಿಡಿ ಚಂದನದಲ್ಲಿ ಪ್ರಸಾರ ಆಗಿತ್ತು. ಆ ಬಳಿಕ ಜೀ ಕನ್ನಡದಲ್ಲೂ ಟೆಲಿಕಾಸ್ಟ್ ಆಗಿತ್ತು. ಅದಾದ ಬಳಿಕ ಈ ಸೀರಿಯಲ್ ಅನೇಕರ ನೆನಪಿನಂಗಳದಲ್ಲಿಯೇ ಉಳಿದು ಹೋಯಿತು. ಆದರೆ ಅದೇ ಸೀರಿಯಲ್​ ನ (Sequel) ಸೀಕ್ವೆಲ್ ಈಗ ಬರ್ತಿದೆ. ಆ ಸೀರಿಯಲ್​ಗೆ ಮತ್ತೆ ಮಾಯಾಮೃಗ (Matte Mayamruga) ಅಂತಲೆ ಈಶೀರ್ಷಿಕೆ ಇಡಲಾಗಿದೆ.


ಮಾಯಾಮೃಗದ ಶಾಸ್ತ್ರಿಗಳ ಫ್ಯಾಮಿಲಿಯ ಕಥೆ ಈಗಲೂ ನೆನಪಿನಲ್ಲಿದೆ. ದತ್ತಣ್ಣರಂತಹ ಕಲಾವಿದರು ಇಡೀ ಸೀರಿಯಲ್​​ನಲ್ಲಿ ತಮ್ಮದೇ ಗತ್ತಿನಲ್ಲಿಯೇ ಉಳಿದಿದ್ದರು. ಅವರ ಫ್ಯಾಮಿಲಿಯ ಕತೆ ಮಾಯಾಮೃಗದಲ್ಲಿ ಸಾಗುತ್ತಲೇ ಬಂತು. ಬದುಕಿನ ಹೊಸ ಸತ್ಯಗಳನ್ನೆ ಹೇಳ್ತಾ ಬಂದಿತ್ತು.


ಇಂದಿನ ದಿನಗಳಲ್ಲಿ ಈ ಶಾಸ್ತ್ರಿಗಳ ಕಥೆ ವರ್ಕೌಟ್ ಆಗುತ್ತದೆಯೆ?
ಈ ಪ್ರಶ್ನೆಗೆ ನಿರ್ದೇಶಕ ಟಿ.ಎನ್.ಸೀತಾರಾಮ್ ಉತ್ತರ ಹುಡುಕಿಕೊಂಡಿದ್ದಾರೆ. ಹಳೆ ಬೇರು ಹೊಸ ಚಿಗುರು ಅನ್ನೋ ಹಾಗೇನೆ ಹಳೆ ಮಾಯಾಮೃಗದ ಕಥೆಗೆ ಹೊಸ ಹೊಳಪನ್ನೆ ತಂದಿದ್ದಾರೆ.


Matte Mayamruga Serial Going To telecast this month on 31 at 9 pm Monday to Friday
ಹೊಸ ಕಥೆ-ಹೊಸ ಅಧ್ಯಾಯ-ಹೊಸ ಸಂಚಿಕೆಯೊಂದಿಗೆ ಮತ್ತೆ ಮಾಯಾಮೃಗ


ಶಾಸ್ತ್ರಿಗಳ ಮಕ್ಕಳ ಜೊತೆಗೆ ಮೊಮ್ಮಕ್ಕಳ ಕಥೆ ಆರಂಭಿಸಿದ್ದಾರೆ. ಈಗಾಗಲೇ ಸೀರಿಯಲ್ ಚಿತ್ರೀಕರಣ ಆರಂಭವಾಗಿದೆ. ಸೀರಿಯಲ್​ನ ಒಂದು Promo ಕೂಡ ಸಿರಿ ಕನ್ನಡ ಚಾನೆಲ್ ನಲ್ಲಿ ಪ್ರಸಾರ ಆಗುತ್ತಿದೆ.


ಈ ಒಂದು Promoದಲ್ಲಿಯೇ ಸೀರಿಯಲ್​ ಒಟ್ಟು ಕಂಟೆಂಟ್​ನ ಝಲಕ್ ಕೂಡ ಸಿಗುತ್ತಿದೆ. ಸೀರಿಯಲ್​ ನ ಮೂವರು ನಿರ್ದೇಶಕರಾದ ಟಿ.ಎನ್.ಸೀತಾರಾಮ್, ಪಿ.ಶೇಷಾದ್ರಿ, ನಾಗೇಂದ್ರ ಶಾ ಈ Promoದಲ್ಲಿ ಬಂದು ಹೋಗುತ್ತಾರೆ.


ಮತ್ತೆ ಮಾಯಾಮೃಗದಲ್ಲಿ ಅಂದಿನ ಕಲಾವಿದರು
ಮಾಯಾಮೃಗದ ಸೀಕ್ವೆಲ್​ನ ಬ್ಯೂಟಿನೇ ಇದು. ಮಾಯಾಮೃಗವನ್ನ ಮಿಸ್ ಮಾಡಿಕೊಂಡರು ಇಲ್ಲಿ ಮತ್ತೆ ಕನೆಕ್ಟ್ ಆಗುತ್ತಾರೆ. ಹೊಸದಾಗಿಯೇ ಮಾಯಾಮೃಗವನ್ನ ನೋಡಲು ಇಷ್ಟಪಡೋರು ಅಂದಿನ ಮತ್ತು ಇಂದಿನ ಎರಡೂ ಕಥೆಗಳನ್ನೂ ಇಲ್ಲಿ ನೋಡಬಹುದಾಗದೆ.


ಇದನ್ನೂ ಓದಿ: Kantara AP Arjun Review: ಕಾಂತಾರ ಕರುನಾಡಿನ ಚಿತ್ರ ಚರಿತ್ರೆ! ಡೈರೆಕ್ಟರ್ ಎ.ಪಿ. ಅರ್ಜುನ್ ಬಣ್ಣನೆ


ಮತ್ತೆ ಮಾಯಾಮೃಗದಲ್ಲಿ ಶಾಸ್ತ್ರಿಗಳ ಪಾತ್ರ ನಿರ್ವಹಿಸಿದ್ದ ದತ್ತಣ್ಣ ಇದ್ದಾರೆ. ಲಕ್ಷ್ಮೀ ಚಂದ್ರಶೇಖರ್, ಎಂ.ಡಿ.ಪಲ್ಲವಿ, ಮಾಳ್ವಿಕಾ, ವಿಕ್ರಂ ಸೂರಿ, ಜಯಶ್ರೀ, ರೇಖಾ ಹೀಗೆ ಧಾರವಾಹಿಯ ಪ್ರಮುಖ ಪಾತ್ರಗಳೆಲ್ಲ ಮತ್ತೆ ಮಾಯಾಮೃಗದಲ್ಲಿ ಬರುತ್ತಿವೆ.


ಇನ್ನು ಇಲ್ಲಿ ಹಳೆ ಕಥೆಯನ್ನ ಹೇಳ್ತಾನೇ, ಈ ಜನರೇಷನ್​ ಕಥೆಯನ್ನ ಹೆಣೆಯಲಾಗಿದೆ. ಇದಕ್ಕಾಗಿಯೇ ಒಂದಷ್ಟು ಹೊಸ ಪಾತ್ರಗಳು ಮತ್ತೆ ಮಾಯಾಮೃಗದಲ್ಲಿ ಸೇರ್ಪಡೆ ಆಗಿವೆ.


ಅಕ್ಟೋಬರ್​-31 ರಂದು ಮತ್ತೆ ಮಾಯಾಮೃಗ ಪ್ರಸಾರ
ಮತ್ತೆ ಮಾಯಾಮೃಗ ಸೀರಿಯಲ್ ಇದೇ ತಿಂಗಳ 31 ರಂದು ಪ್ರಸಾರ ಆಗುತ್ತಿದೆ. ಹೊಸ ಕಥೆ, ಹೊಸ ಸಂಚಿಕೆ, ಹೊಸ ಅಧ್ಯಾಯದೊಂದಿಗೆ ಮತ್ತೆ ಮಾಯಾಮೃಗ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.
ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರ
ಮತ್ತೆ ಮಾಯಾಮೃಗ ಸೀರಿಯಲ್ ಭಾನುವಾರ ಮತ್ತು ಶನಿವಾರ ಹೊರತಾಗಿ ಇತರ ದಿನಗಳೆಲ್ಲ ಪ್ರಸಾರ ಆಗುತ್ತಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೂ ಸೀರಿಯಲ್ ಪ್ರಸಾರ ಆಗುತ್ತಿದೆ.


ಸೋಮವಾರದಿಂದ ಶುಕ್ರವಾರ ಪ್ರತಿ ರಾತ್ರಿ 9 ಗಂಟೆಗೆ ಪ್ರಸಾರ
ಹೌದು, ಮತ್ತೆ ಮಾಯಾಮೃಗ ಸೀರಿಯಲ್ ರಾತ್ರಿ 9 ಗಂಟಗೆ ಪ್ರಸಾರ ಆಗುತ್ತಿದೆ. 9 ರಿಂದ 9.30 ರವರೆಗೂ ಈ ಧಾರವಾಹಿ ಪ್ರಸಾರ ಆಗುತ್ತದೆ.


ಇದನ್ನೂ ಓದಿ:  Kantara: ಇನ್ಮುಂದೆ ರಿಷಬ್​ ಶೆಟ್ರನ್ನು ಹೀಗ್ ಕರೀಬೇಕಂತೆ, ಇಂಥ ಬಿರುದು ಹಿಂದ್ಯಾರಿಗೂ ಕೊಟ್ಟಿಲ್ಲ-ಮುಂದ್ಯಾರಿಗೂ ಕೊಡಲ್ಲ!


ಮತ್ತೆ ಮಾಯಾಮೃಗ ಸೀರಿಯಲ್ ನಲ್ಲಿ ಹಲವು ವಿಶೇಷತೆಗಳೂ ಇವೆ. ಇಂದಿನ ಜನರೇಷನ್​​ನ ಆಸೆ -ಆಕಾಂಕ್ಷೆ ಜೀವನ ಶೈಲಿಯ ಚಿತ್ರಣವೂ ಇದೆ. ಅಂದಿನ ಜನರೇಷನ್ ಇಂದಿನ ಜನರೇಷನ್ಎರಡನ್ನೂ ಮತ್ತೆ ಮಾಯಾಮೃಗದಲ್ಲಿ ಸೀರಿಯಲ್ ಪ್ರಿಯರು ನೋಡಬಹುದಾಗಿದೆ.

First published: