• Home
 • »
 • News
 • »
 • entertainment
 • »
 • Matte Mayamruga: ಮಾಳವಿಕಾ ಮಗಳು ಪೂರ್ವಿಗೆ ಮದುವೆ ಜಿಗುಪ್ಸೆ, ಮೊದಲ ವಾರ ಮಾಯಾಮೃಗಕ್ಕೆ ಮೆಚ್ಚುಗೆ

Matte Mayamruga: ಮಾಳವಿಕಾ ಮಗಳು ಪೂರ್ವಿಗೆ ಮದುವೆ ಜಿಗುಪ್ಸೆ, ಮೊದಲ ವಾರ ಮಾಯಾಮೃಗಕ್ಕೆ ಮೆಚ್ಚುಗೆ

ಮೊದಲ ವಾರ ಮಾಯಾಮೃಗಕ್ಕೆ ಮೆಚ್ಚುಗೆ

ಮೊದಲ ವಾರ ಮಾಯಾಮೃಗಕ್ಕೆ ಮೆಚ್ಚುಗೆ

ನಾವು ನಿರೀಕ್ಷಿಸಿದ್ದು ಕೇವಲ ಒಂದು ಉತ್ತಮ ಧಾರಾವಾಹಿಯನ್ನು ಅಷ್ಟೇ. ಆದರೆ ಈ ಕಥಾನಕ ನಮ್ಮೊಳಗೇಕೆ ಇಷ್ಟು ಆಳವಾಗಿ ಇಳಿಯುತ್ತಿದೆ, ನಮ್ಮನ್ನೇಕೆ ಇಷ್ಟು ಕಾಡುತ್ತಿದೆ? ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕನ್ನಡ ಕಿರುತೆರೆಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಧಾರಾವಾಹಿ (Serial) ಮಾಯಾಮೃಗ. ಮಾಯಾಮೃಗ ಅತ್ಯದ್ಭುತ ಸೀರಿಯಲ್ ಎಂಬ ಹೆಗ್ಗಳಿಕೆ ಈಗಲೂ ಇದೆ. 23 ವರ್ಷದ ಹಿಂದೆ ಅಂದ್ರೆ 1998 ರ ಹಿಂದೆ ಈ ಸೀರಿಯಲ್ ಪ್ರಸಾರ ಆಗುತ್ತಿತ್ತು. ಸಂಜೆ 4.30ಕ್ಕೆ ಪ್ರಸಾರ ಆಗುತ್ತಿತ್ತು. ಈ ಸೀರಿಯಲ್ ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಿದ್ರು. ಈಗಲೂ ಧಾರಾವಾಹಿ ಅಂದ್ರೆ ಈ ರೀತಿ ಇರಬೇಕು ಎನ್ನುವ ಸಾಲಿನಲ್ಲಿ ಮಾಯಾಮೃಗ ಮೊದಲು ನಿಲ್ಲುತ್ತೆ. ಆ ಮಾಯಾಮೃಗ ಜನರನ್ನು ಸೆಳೆದಿತ್ತು. ಟಿ.ಎನ್ ಸೀತಾರಾಂ (T.N. Seetha ram) ಅವರ ನಿರ್ದೇಶನ ಅಂದ್ರೆ ಅಲ್ಲಿ ಹೊಸತನ ಇರುತ್ತೆ ಅನ್ನೋದು ಜನರ ನಂಬಿಕೆ. ಅದರ ಮುಂದುವರೆದ ಭಾಗ ಮತ್ತೆ ಮಾಯಾಮೃಗ (Matte Mayamruga) ಧಾರಾವಾಹಿ, ಸಿರಿಕನ್ನಡ (Siri Kannada) ವಾಹಿನಿಯಲ್ಲಿ ರಾತ್ರಿ 9ಕ್ಕೆ ಪ್ರಸಾರವಾಗುತ್ತಿದೆ.


  ಬದುಕು ಬದಲಾಗಬಹುದು, ಭಾವನೆ ಬದಲಾಗಲ್ಲ
  ಕಾಲ ಬದಲಾಗುತ್ತೆ. ಕಾಲ ಬದಲಾದ ಹಾಗೇ ಬದುಕು ಬದಲಾಗುತ್ತೆ. 25 ವರ್ಷಗಳ ಮಾಳವಿಕಾಳ ಹೋರಾಟದ ಬದುಕು ಈಗ ಏನಾಗಿದೆ. ಆಗ ದುರಂತವೇ ಇತ್ತು. ಈಗ ಏನಾಗಿದೆ. ವಿದ್ಯಾಳ ಬಾಳಲ್ಲಿ ಹೊಸ ಭರವಸೆ ಮೂಡುತ್ತಾ?


  ಏಳು, ಬೀಳುಗಳ ನಡುವೆ ಬೃಂದ ತನ್ನ ಮಗಳಿಗೆ ಹೊಸ ಬದುಕು ಕಟ್ಟಿಕೊಡುತ್ತಿದ್ದಾಳೆ. ಬದುಕಿನಲ್ಲಿ ಬದಲಾವಣೆ ಅನಿವಾರ್ಯ. ಶಾಸ್ತ್ರಿಗಳ ಕುಟುಂಬ ಬದಲಾವಣೆಗೆ ಹೊಂದಿಕೊಳ್ಳುತ್ತಾ? ಎಲ್ಲವನ್ನೂ ತೋರಿಸಿಕೊಡ್ತಿದೆ ಮತ್ತೆ ಮಾಯಾಮೃಗ.


  ಮೊದಲ ವಾರವೇ ಧಾರಾವಾಹಿಗೆ ಮೆಚ್ಚುಗೆ
  ವೀಕ್ಷಕರು ಮೊದಲ ವಾರ ಧಾರಾವಾಹಿಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಮತ್ತೆ ಮಾಯಾಮೃಗ, ಕ್ರಿಕೆಟ್‍ನಲ್ಲಿ ಓಪನಿಂಗ್ ಬ್ಯಾಟರ್ ಒಳ್ಳೆಯ ತಳಪಾಯ ಹಾಕಿದ್ರೆ, ಗೆಲ್ಲೋದು ಖಚಿತ. ಹಾಗೆಯೇ ಪ್ರಾರಂಭದ 5 ಸಂಚಿಕೆಗಳೇ ಸಾಕು ಮತ್ತೆ ಮಾಯಾಮೃಗದ ಮೋಡಿ ತಿಳಿಯಲು ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧಾರಾವಾಹಿಯನ್ನು ಮಿಸ್ ಮಾಡ್ದೇ ನೋಡ್ತಾ ಇದ್ದಾರೆ.


  matte mayamruga, fans like last week episode, matte mayamruga director, mayamruga serial all episodes, mayamruga new version serial, siri kannada channel, ಮತ್ತೆ ಮಾಯಾಮೃಗ ಧಾರಾವಾಹಿ, ಮದುವೆ ಬಗ್ಗೆ ಮಾಳವಿಕಾ ಮಗಳು ಪೂರ್ವಿಗೆ ಜಿಗುಪ್ಸೆ, ಮೊದಲ ವಾರ ಮಾಯಾಮೃಗಕ್ಕೆ ಮೆಚ್ಚುಗೆ, ಮೋಡಿ ಮಾಡಿದ ಮತ್ತೆ ಮಾಯಾಮೃಗ, kannada news, karnataka news,
  ಮಾಳವಿಕಾ


  ಇದನ್ನೂ ಓದಿ: Bhagya Lakshmi: ಭಾಗ್ಯಳನ್ನು ಮನೆಯಿಂದ ಹೊರ ಹಾಕಿದ ತಾಂಡವ್, ಆಸ್ಪತ್ರೆಗೆ ಹೋಗಿದ್ದೇ ತಪ್ಪಾಯ್ತಾ?


  ಪೂರ್ವಿಗೆ ಮದುವೆ ಬೇಡ್ವಂತೆ!
  ಮಾಳವಿಕಾ ಮಗಳು ಪೂರ್ವಿ, ಇಂಜಿನಿಯರ್ ಮುಗಿಸಿ ಕೆಲಸ ಮಾಡುತ್ತಿದ್ದಾಳೆ. ಅಮ್ಮ ಮಾಳವಿಕಾ ಮಗಳಿಗೆ ಮದುವೆ ಮಾಡಲು ತುಂಬಾ ಪ್ರಯತ್ನ ಪಡ್ತಾ ಇದ್ದಾಳೆ. ಆದ್ರೆ ಪೂರ್ವಿ ಮದುವೆ ಬೇಡ ಎನ್ನುತ್ತಿದ್ದಾಳೆ. ಮದುವೆ ಬಗ್ಗೆ ಜಿಗುಪ್ಸೆ ಬಂದಿದೆ. ಇಂತಹ ಮನಸ್ಥಿತಿಯಲ್ಲಿ, ನನ್ನ ಮನಸ್ಸಿನಲ್ಲಿ ಇನ್ನೊಬ್ಬರಿಗೆ ಜಾಗ ಕೊಡಲು ಸಾಧ್ಯವಿಲ್ಲ ಎಂದು ಪೂರ್ವಿ ಹೇಳಿದ್ದಾಳೆ.


  matte mayamruga, fans like last week episode, matte mayamruga director, mayamruga serial all episodes, mayamruga new version serial, siri kannada channel, ಮತ್ತೆ ಮಾಯಾಮೃಗ ಧಾರಾವಾಹಿ, ಮದುವೆ ಬಗ್ಗೆ ಮಾಳವಿಕಾ ಮಗಳು ಪೂರ್ವಿಗೆ ಜಿಗುಪ್ಸೆ, ಮೊದಲ ವಾರ ಮಾಯಾಮೃಗಕ್ಕೆ ಮೆಚ್ಚುಗೆ, ಮೋಡಿ ಮಾಡಿದ ಮತ್ತೆ ಮಾಯಾಮೃಗ, kannada news, karnataka news,
  ಪೂರ್ವಿ


  ಧಾರಾವಾಹಿ ಲೋಕದಲ್ಲೊಂದು ಹೊಸ ಯುಗ
  - ಶಾಸ್ತ್ರಿಗಳು ಕಣ್ಮರೆಯಾದರೆ ಇಲ್ಲೇಕೆ ನಮ್ಮೆದೆ ಬಡಿದುಕೊಳ್ಳುವುದೋ?
  - ಮಾಳವಿಕಳ ಮಗಳು ಪೂರ್ವಿಯೊಳಗಿನ ಆಕ್ರೋಶ ನಮ್ಮೊಳಗೂ ಏಕೆ ಭುಸುಗುಡುವುದೋ ?
  - ಶ್ಯಾಮನ ಹೆಂಡತಿ ತಮಗೆ ಮಕ್ಕಳಾಗಲಿಲ್ಲವೆಂದು ಕುಸಿದಾಗ, ನಮ್ಮೊಡಲೇ ಬರಿದಾದಂತೆ ಏಕನಿಸುವುದೋ ?
  - ಶಂಕರ್ ಅಶ್ವತ್ ಅವರಲ್ಲಿ ಕೆ.ಎಸ್.ಅಶ್ವತ್ ಅವರೇ ಆವಾಹನೆಯಾದಂತೆ ನಟಿಸುವ ಹಾಗೆ ನಿರ್ದೇಶಿಸಲು ಹೇಗೆ ಸಾಧ್ಯವಾಯಿತೋ ?
  - ಬೃಂದಾ ತನ್ನ ಕುಟುಂಬ ಎಲ್ಲೆಲ್ಲೋ ಹರಿದು ಹಂಚಿ ಹೋಗಿದೆ ಎನ್ನುವಾಗ, ನಮ್ಮ ಕಣ್ಣುಗಳು ಸೂರಪ್ಪನವರನ್ನು ಏಕೆ ತಡಕಾಡುವುದೋ ?
  - ಸಿ.ಎಸ್.ಪಿ. ಅವರು ಮಾಳವಿಕಾಗೆ ಸಾಂತ್ವನದ ಮಾತುಗಳನ್ನಾಡುತ್ತಿದ್ದರೆ, ನಮ್ಮ ಮನವೇಕೆ ಹಗುರಾಗುವುದೋ ?


  ಇದನ್ನೂ ಓದಿ: Anushka Shetty birthday: ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಸ್ವೀಟಿಯ ಗೊತ್ತಿರದ ಗುಟ್ಟುಗಳು ಇವು! 


  ಇನ್ನೂ ಎಷ್ಟು ಬರೆಯುವುದು, ನಾವು ನಿರೀಕ್ಷಿಸಿದ್ದು ಕೇವಲ ಒಂದು ಉತ್ತಮ ಧಾರಾವಾಹಿಯನ್ನು ಅಷ್ಟೇ. ಆದರೆ ಈ ಕಥಾನಕ ನಮ್ಮೊಳಗೇಕೆ ಇಷ್ಟು ಆಳವಾಗಿ ಇಳಿಯುತ್ತಿದೆ, ನಮ್ಮನ್ನೇಕೆ ಇಷ್ಟು ಕಾಡುತ್ತಿದೆ? ಇದು ಖಂಡಿತ ಕೇವಲ ಮಾಯಾಮೃಗವಲ್ಲ. ಧಾರಾವಾಹಿ ಲೋಕದಲ್ಲೊಂದು ಹೊಸ ಯುಗ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ.

  Published by:Savitha Savitha
  First published: