• Home
 • »
 • News
 • »
 • entertainment
 • »
 • Matte Mayamruga: ಅಮ್ಮನಿಗೆ ತೊಂದ್ರೆ ಕೊಟ್ಟವರಿಗೆ ತಕ್ಕ ಶಿಕ್ಷೆ ಕೊಡ್ತಾಳಂತೆ ವಾಸಂತಿ, ವಿದ್ಯಾಗೆ ಹೆಚ್ಚಾದ ಆತಂಕ!

Matte Mayamruga: ಅಮ್ಮನಿಗೆ ತೊಂದ್ರೆ ಕೊಟ್ಟವರಿಗೆ ತಕ್ಕ ಶಿಕ್ಷೆ ಕೊಡ್ತಾಳಂತೆ ವಾಸಂತಿ, ವಿದ್ಯಾಗೆ ಹೆಚ್ಚಾದ ಆತಂಕ!

ಅಮ್ಮನಿಗೆ ತೊಂದ್ರೆ ಕೊಟ್ಟವರಿಗೆ ತಕ್ಕ ಶಿಕ್ಷೆ ಕೊಡ್ತಾಳಂತೆ ವಾಸಂತಿ?

ಅಮ್ಮನಿಗೆ ತೊಂದ್ರೆ ಕೊಟ್ಟವರಿಗೆ ತಕ್ಕ ಶಿಕ್ಷೆ ಕೊಡ್ತಾಳಂತೆ ವಾಸಂತಿ?

ನಿಮ್ಮ ಬಗ್ಗೆ ಪೇಪರ್​ನಲ್ಲಿ ಕೆಟ್ಟದಾಗಿ ಬರೆದವರು, ನಿಮ್ಮನ್ನು ಕಿಡ್ನ್ಯಾಪ್ ಮಾಡಿ, ಬಾಂಬೆಗೆ ಕರೆದುಕೊಂಡು ಹೋದವರು, ಅವರ ಹೆಸರೆಲ್ಲಾ ನನ್ನ ಹೃದಯಲ್ಲಿ ನಿಂತು ಬಿಟ್ಟಿವೆ ಅಮ್ಮ ಎಂದು ವಾಸಂತಿ, ವಿದ್ಯಾಳ ಬಳಿ ಹೇಳ್ತಾಳೆ.

 • News18 Kannada
 • Last Updated :
 • Karnataka, India
 • Share this:

  ಕನ್ನಡ ಕಿರುತೆರೆಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಧಾರಾವಾಹಿ (Serial) ಮಾಯಾಮೃಗ. ಮಾಯಾಮೃಗ ಅತ್ಯದ್ಭುತ ಸೀರಿಯಲ್ ಎಂಬ ಹೆಗ್ಗಳಿಕೆ ಈಗಲೂ ಇದೆ. 23 ವರ್ಷದ ಹಿಂದೆ ಅಂದ್ರೆ 1998 ರ ಹಿಂದೆ ಈ ಸೀರಿಯಲ್ ಪ್ರಸಾರ ಆಗುತ್ತಿತ್ತು. ಸಂಜೆ 4.30ಕ್ಕೆ ಪ್ರಸಾರ ಆಗುತ್ತಿತ್ತು. ಈ ಸೀರಿಯಲ್ ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಿದ್ರು. ಈಗಲೂ ಧಾರಾವಾಹಿ ಅಂದ್ರೆ ಈ ರೀತಿ ಇರಬೇಕು ಎನ್ನುವ ಸಾಲಿನಲ್ಲಿ ಮಾಯಾಮೃಗ ಮೊದಲು ನಿಲ್ಲುತ್ತೆ ಎಂದ್ರೆ ತಪ್ಪಾಗಲ್ಲ. ಟಿ.ಎನ್ ಸೀತಾರಾಂ (TN Seetharam) ಅವರ ನಿರ್ದೇಶನ ಅಂದ್ರೆ ಅಲ್ಲಿ ಹೊಸತನ ಇರುತ್ತೆ ಅನ್ನೋದು ಜನರ ನಂಬಿಕೆ. ಅದರ ಮುಂದುವರೆದ ಭಾಗ ಮತ್ತೆ ಮಾಯಾಮೃಗ (Matte Mayamruga) ಧಾರಾವಾಹಿ ಸಿರಿಕನ್ನಡ (Siri Kannada) ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ.


  ಜನ ಮೆಚ್ಚಿದ ಮಾಯಾಮೃಗ
  ಮಾಯಾಮೃಗ ಧಾರಾವಾಹಿ ಅಂದಿನ ಕಾಲದಲ್ಲಿ ಹೆಚ್ಚು ಪ್ರಸಾರವಾಗಿದ್ದ ಧಾರಾವಾಹಿ. ಜನ ಧಾರಾವಾಹಿಯಲ್ಲೇ ತಮ್ಮ ಪಾತ್ರವನ್ನು ಕಂಡು, ತಮ್ಮ ಜೀವನಕ್ಕೆ ಅದನ್ನು ಬದಲಿಸಿಕೊಂಡು ನೋಡುತ್ತಿದ್ದರು. ಈಗ ಅದರ ಮುಂದುವರೆದ ಭಾಗ ಮತ್ತೆ ಮಾಯಾಮೃಗ ಬರುತ್ತಿದೆ. ಅದನ್ನು ಜನ ಮೆಚ್ಚಿ ನೋಡುತ್ತಿದ್ದಾರೆ. ಟಿ.ಎನ್ ಸೀತಾರಾಂ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.


  ವಿದ್ಯಾ ಬಾಳಲ್ಲಿ ಹೊಸ ಬೆಳಕು
  ನೋವಿನಿಂದ ಕೂಡಿದ್ದ ವಿದ್ಯಾ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಜೀವನ ಎಲ್ಲ ಕಷ್ಟಗಳು ದೂರ ಆಗುವ ಸಮಯ ಬಂದಿದೆ. ವಿದ್ಯಾ ಮಗಳು ವಾಸಂತಿ ಪೊಲೀಸ್ ಆಗಿ ಮನೆಗೆ ಬಂದಿದ್ದಾಳೆ. ತಮ್ಮ ಅಮ್ಮನ ಕನಸು ನನಸು ಮಾಡಿದ್ದಾಳೆ. ಇದರಿಂದ ವಿದ್ಯಾ ತುಂಬಾ ಖುಷಿಯಾಗಿದ್ದಾಳೆ.


  ಇದನ್ನೂ ಓದಿ: Bigg Boss Kannada: 'ಫೇಕ್' ಹಚ್ಚಿಸಿದ ಬೆಂಕಿಗೆ ಬಿಗ್ ಬಾಸ್ ಮಂದಿ ತತ್ತರ, ರಾಜಣ್ಣ ಧಗಧಗ! 


  ಅಪ್ಪನ ಸಾವಿನ ನೋವು
  ಪೊಲೀಸ್ ಆಗಿ ಮನೆಗೆ ವಾಪಸ್ ಬಂದ ವಾಸಂತಿಗೆ ಅಪ್ಪನ ನೆನಪು ಕಾಡಿದೆ. ಎಷ್ಟು ಒಳ್ಳೆಯವರಮ್ಮ ಅಪ್ಪ. ಸಾಯುವಾಗ್ಲೂ ಇದೇ ರೀತಿ ಇದ್ರು. ನಿಮ್ಮ ಅಪ್ಪನನ್ನು ಕೊಂದಿರಬಹುದು ಎಂದು ಪೊಲೀಸರಿಗೆ ಅನುಮಾನ ಇತ್ತು ಎಂದು ವಿದ್ಯಾ ಮಗಳು ವಾಸಂತಿ ಬಳಿ ಹೇಳಿದ್ದಾಳೆ. ಈಗ ಆಕೆಗೂ ಅನುಮಾನ ಶುರುವಾಗಿದೆ.


  matte mayamruga, mayamruga director, mayamruga serial all episodes, mayamruga new version serial, vasanthi comes as a police, ಮತ್ತೆ ಮಾಯಾಮೃಗ ಧಾರಾವಾಹಿ, ಮಾಯಾಮೃಗ ಧಾರಾವಾಹಿ, ಮೋಡಿ ಮಾಡಿದ ಮತ್ತೆ ಮಾಯಾಮೃಗ, ಅಮ್ಮನಿಗೆ ತೊಂದ್ರೆ ಕೊಟ್ಟವರಿಗೆ ತಕ್ಕ ಶಿಕ್ಷೆ ಕೊಡ್ತಾಳಂತೆ ವಾಸಂತಿ? ವಿದ್ಯಾಗೆ ಹೆಚ್ಚಾದ ಆತಂಕ, kannada news, karnataka news,
  ವಿದ್ಯಾ


  ಅಮ್ಮನಿಗೆ ನೋವು ಕೊಟ್ಟವರಿಗೆ ಶಿಕ್ಷೆನಾ?


  ನಿಮ್ಮ ಬಗ್ಗೆ ಪೇಪರ್​ನಲ್ಲಿ ಕೆಟ್ಟದಾಗಿ ಬರೆದವರು, ನಿಮ್ಮನ್ನು ಕಿಡ್ನ್ಯಾಪ್ ಮಾಡಿ, ಬಾಂಬೆಗೆ ಕರೆದುಕೊಂಡು ಹೋದವರು, ಅವರ ಹೆಸರೆಲ್ಲಾ ನನ್ನ ಹೃದಯಲ್ಲಿ ನಿಂತು ಬಿಟ್ಟಿವೆ ಅಮ್ಮ ಎಂದು ವಾಸಂತಿ ಅಮ್ಮ ವಿದ್ಯಾಳ ಬಳಿ ಹೇಳ್ತಾಳೆ. ಅವರಿಗೆ ಕಾನೂನು ರೀತಿ ಶಿಕ್ಷೆ ಕೊಡಿಸೋ ಪ್ಲ್ಯಾನ್ ಮಾಡ್ತಾ ನೋಡಬೇಕು.


  matte mayamruga, mayamruga director, mayamruga serial all episodes, mayamruga new version serial, vasanthi comes as a police, ಮತ್ತೆ ಮಾಯಾಮೃಗ ಧಾರಾವಾಹಿ, ಮಾಯಾಮೃಗ ಧಾರಾವಾಹಿ, ಮೋಡಿ ಮಾಡಿದ ಮತ್ತೆ ಮಾಯಾಮೃಗ, ಅಮ್ಮನಿಗೆ ತೊಂದ್ರೆ ಕೊಟ್ಟವರಿಗೆ ತಕ್ಕ ಶಿಕ್ಷೆ ಕೊಡ್ತಾಳಂತೆ ವಾಸಂತಿ? ವಿದ್ಯಾಗೆ ಹೆಚ್ಚಾದ ಆತಂಕ, kannada news, karnataka news,
  ಮಾಯಾಮೃಗ


  ಮಾಯಾಮೃಗದ ಮುಂದುವರೆದ ಭಾಗ ಮತ್ತೆ ಮಾಯಾಮೃಗ ಜನರಿಗೆ ಇಷ್ಟ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನ ಮಾಯಾಮೃಗದ ಚರ್ಚೆ ಮಾಡ್ತಾ ಇದ್ದಾರೆ. ಸದ್ಯ ಒಂದೊಳ್ಳೆ ಧಾರಾವಾಹಿ ಬಂತು. ಮತ್ತೆ ನಮ್ಮನ್ನು ಹಳೇ ಲೋಕಕ್ಕೆ ಕರೆದುಕೊಂಡು ಹೋದ್ರು ಎಂದು ಖುಷಿ ಪಡ್ತಾ ಇದ್ದಾರೆ. ಮಾಯಾಮೃಗ ಟೈಟಲ್ ತುಂಬಾ ಚೆನ್ನಾಗಿದೆ. ನಾವು ತಪ್ಪದೇ ಮಾಯಾಮೃಗ ನೋಡ್ತಾ ಇದ್ದೇವೆ ಎಂದು ಹೇಳ್ತಾ ಇದ್ದಾರೆ.


  ಇದನ್ನೂ ಓದಿ: Lakshana: ಟೀಯಲ್ಲಿ ಉಪ್ಪು ಹಾಕಿದ್ಯಾರು? ಲಕ್ಷಣದ ಶಕುಂತಲಾ ದೇವಿ ಮುಂದೆ ಹೈಡ್ರಾಮಾ! 


  ಬದುಕಿನಲ್ಲಿ ಬದಲಾವಣೆ ಅನಿವಾರ್ಯ. ಶಾಸ್ತ್ರಿಗಳ ಕುಟುಂಬ ಬದಲಾವಣೆಗೆ ಹೊಂದಿಕೊಳ್ಳುತ್ತಾ? ಎಲ್ಲವನ್ನೂ ತೋರಿಸಿಕೊಡ್ತಿದೆ ಮತ್ತೆ ಮಾಯಾಮೃಗ.

  Published by:Savitha Savitha
  First published: