• Home
 • »
 • News
 • »
 • entertainment
 • »
 • Matte Mayamruga: 2 ವರ್ಷದಿಂದ ಮಾಳವಿಕಾ ಪತಿ ಕೃಷ್ಣ ಪ್ರಸಾದ್ ಎಲ್ಲಿ ಹೋದ್ರು? ಎಲ್ಲಿ ನೋಡಿದ್ರೂ ಮಾಯಾಮೃಗದ್ದೇ ಚರ್ಚೆ!

Matte Mayamruga: 2 ವರ್ಷದಿಂದ ಮಾಳವಿಕಾ ಪತಿ ಕೃಷ್ಣ ಪ್ರಸಾದ್ ಎಲ್ಲಿ ಹೋದ್ರು? ಎಲ್ಲಿ ನೋಡಿದ್ರೂ ಮಾಯಾಮೃಗದ್ದೇ ಚರ್ಚೆ!

ಮತ್ತೆ ಮಾಯಾಮೃಗ

ಮತ್ತೆ ಮಾಯಾಮೃಗ

ಮತ್ತೆ ಮಾಯಾಮೃಗ ಜನರಿಗೆ ಇಷ್ಟ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನ ಮಾಯಾಮೃಗದ ಚರ್ಚೆ ಮಾಡ್ತಾ ಇದ್ದಾರೆ. ಸದ್ಯ ಒಂದೊಳ್ಳೆ ಧಾರಾವಾಹಿ ಬಂತು. ಮತ್ತೆ ನಮ್ಮನ್ನು ಹಳೇ ಲೋಕಕ್ಕೆ ಕರೆದುಕೊಂಡು ಹೋದ್ರು ಎಂದು ಖುಷಿ ಪಡ್ತಾ ಇದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕನ್ನಡ ಕಿರುತೆರೆಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಧಾರಾವಾಹಿ (Serial) ಮಾಯಾಮೃಗ. ಮಾಯಾಮೃಗ ಅತ್ಯದ್ಭುತ ಸೀರಿಯಲ್ ಎಂಬ ಹೆಗ್ಗಳಿಕೆ ಈಗಲೂ ಇದೆ. 23 ವರ್ಷದ ಹಿಂದೆ ಅಂದ್ರೆ 1998 ರ ಹಿಂದೆ ಈ ಸೀರಿಯಲ್ ಪ್ರಸಾರ ಆಗುತ್ತಿತ್ತು. ಸಂಜೆ 4.30ಕ್ಕೆ ಪ್ರಸಾರ ಆಗುತ್ತಿತ್ತು. ಈ ಸೀರಿಯಲ್ ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಿದ್ರು. ಈಗಲೂ ಧಾರಾವಾಹಿ ಅಂದ್ರೆ ಈ ರೀತಿ ಇರಬೇಕು ಎನ್ನುವ ಸಾಲಿನಲ್ಲಿ ಮಾಯಾಮೃಗ ಮೊದಲು ನಿಲ್ಲುತ್ತೆ ಎಂದ್ರೆ ತಪ್ಪಾಗಲ್ಲ. ಆ ಮಾಯಾಮೃಗ ಜನರನ್ನು ಸೆಳೆದಿತ್ತು. ಟಿ.ಎನ್ ಸೀತಾರಾಂ (T.N Seetharam) ಅವರ ನಿರ್ದೇಶನ (Direction) ಅಂದ್ರೆ ಅಲ್ಲಿ ಹೊಸತನ ಇರುತ್ತೆ ಅನ್ನೋದು ಜನರ ನಂಬಿಕೆ. ಅದರ ಮುಂದುವರೆದ ಭಾಗ ಮತ್ತೆ ಮಾಯಾಮೃಗ (Matte Mayamruga) ಧಾರಾವಾಹಿ ಪ್ರಸಾರವಾಗುತ್ತಿದೆ. ಸಿರಿಕನ್ನಡ (Siri Kannada) ವಾಹಿನಿಯಲ್ಲಿ ರಾತ್ರಿ 9ಕ್ಕೆ ಬರುತ್ತಿದೆ.


  ಜನ ಮೆಚ್ಚಿದ ಮಾಯಾಮೃಗ
  ಮಾಯಾಮೃಗ ಧಾರಾವಾಹಿ ಅಂದಿನ ಕಾಲದಲ್ಲಿ ಹೆಚ್ಚು ಪ್ರಸಾರವಾಗಿದ್ದ ಧಾರಾವಾಹಿ. ಜನ ಧಾರಾವಾಹಿಯಲ್ಲೇ ತಮ್ಮ ಪಾತ್ರವನ್ನು ಕಂಡು, ತಮ್ಮ ಜೀವನಕ್ಕೆ ಅದನ್ನು ಬದಲಿಸಿಕೊಂಡು ನೋಡುತ್ತಿದ್ದರು. ಈಗ ಅದರ ಮುಂದುವರೆದ ಭಾಗ ಮತ್ತೆ ಮಾಯಾಮೃಗ ಬರುತ್ತಿದೆ. ಅದನ್ನು ಜನ ಮೆಚ್ಚಿ ನೋಡುತ್ತಿದ್ದಾರೆ.


  ಕೃಷ್ಣ ಪ್ರಸಾದ್ ಎಲ್ಲಿ ಹೋದ್ರು?
  ಧಾರಾವಾಹಿಯಲ್ಲಿ ಮಾಳವಿಕಾ ಅವರ ಪತಿ ಕೃಷ್ಣ ಪ್ರಸಾದ್. ಅವಿನಾಶ್ ಅವರು ಕೃಷ್ಣ ಪ್ರಸಾದ್ ಪಾತ್ರ ನಿರ್ವಹಿಸುತ್ತಿದ್ದಾರೆ. ಮಾಳವಿಕಾ ಅವರು ಸೀತಾರಾಂ ಭೇಟಿಯಾಗುಲು ಹೋಗಿದ್ದಾರೆ. ಅವರು ಎಲ್ಲಿ ಕೃಷ್ಣ ಪ್ರಸಾದ್ ಎಂದು ಮಾಳವಿಕಾ ಅವರನ್ನು ಕೇಳಿದ್ದಾರೆ. ಅದಕ್ಕೆ ನಾನು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ 2 ವರ್ಷ ಆಯ್ತು ಎಂದು ಹೇಳ್ತಾಳೆ.


  ಇದನ್ನೂ ಓದಿ: Kannadathi: ಭುವಿ ಮನೆಯಲ್ಲಿ ವಿಲ್​ಗಾಗಿ ವರು ಹುಡುಕಾಟ! ಅಮ್ಮಮ್ಮನ ಸ್ಥಿತಿ ಗಂಭೀರ 


  ಕೊಲೆ ಮಾಡಲು ಪಿತೂರಿ ಮಾಡಿದ್ದ ಕೃಷ್ಣ ಪ್ರಸಾದ್
  ಕೃಷ್ಣ ಪ್ರಸಾದ್ ಅವರು ಮಾಳವಿಕಾ ಅವರನ್ನು ಬಿಟ್ಟು ಹೋಗಿದ್ದಾರೆ. ಒಂದು ಕೊಲೆ ಮಾಡಲು ಪಿತೂರಿ ಮಾಡಿದವರು, ಅದರ ಪರಿಣಾಮವನ್ನು ಅನುಭವಿಸಬೇಕು ಎಂದು, ಟಿ.ಎನ್. ಸೀತಾರಾಂ ಅವರು ಮಾಳವಿಕಾ ಬಳಿ ಹೇಳಿದ್ದಾರೆ. ಅದಕ್ಕೆ ಮಾಳವಿಕಾ ಕೃಷ್ಣ ಪ್ರಸಾದ್ ತಂದೆ ಎಲ್ಲಿ ನನ್ನ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ತಾರೋ ಎಂದು ಭಯ ಎಂದು ಮಾಳವಿಕಾ ಅವರು ಹೇಳಿದ್ದಾರೆ.


  mayamruga director, matte mayamruga, mayamruga serial all episodes, mayamruga new version serial, director t.n seetha ram share the photo, ಮತ್ತೆ ಮಾಯಾಮೃಗ ಧಾರಾವಾಹಿ, 2 ವರ್ಷದಿಂದ ಮಾಳವಿಕಾ ಪತಿ ಕೃಷ್ಣ ಪ್ರಸಾದ್ ಎಲ್ಲಿ ಹೋದ್ರು? ಎಲ್ಲಿ ನೋಡಿದ್ರೂ ಮಾಯಾಮೃಗದ್ದೇ ಚರ್ಚೆ, ಮಾಯಾಮೃಗ ಧಾರಾವಾಹಿ, ಮೋಡಿ ಮಾಡಿದ ಮತ್ತೆ ಮಾಯಾಮೃಗ, kannada news, karnataka news,
  ಕೃಷ್ಣ ಪ್ರಸಾದ್


  ಬದುಕು ಬದಲಾಗಬಹುದ, ಭಾವನೆ ಬದಲಾಗಲ್ಲ
  ಕಾಲ ಬದಲಾಗುತ್ತೆ. ಕಾಲ ಬದಲಾದ ಹಾಗೇ ಬದುಕು ಬದಲಾಗುತ್ತೆ. 25 ವರ್ಷಗ ಮಾಳವಿಕಾಳ ಹೋರಾಟದ ಬದುಕು ಈಗ ಏನಾಗಿದೆ. ಆಗ ದುರಂತವೇ ಇತ್ತು. ಈಗ ಏನಾಗಿದೆ. ವಿದ್ಯಾಳ ಬಾಳಲ್ಲಿ ಹೊಸ ಭರವಸೆ ಮೂಡುತ್ತಾ?


  ಇದನ್ನೂ ಓದಿ: Bhagya Lakshmi: ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ? ಒಂದೇ ಹೋಟೆಲ್‍ನಲ್ಲಿ ಇಬ್ಬರು!


  ಏಳು, ಬೀಳುಗಳ ನಡುವೆ ಬೃಂದ ತನ್ನ ಮಗಳಿಗೆ ಹೊಸ ಬದುಕು ಕಟ್ಟಿಕೊಡುತ್ತಿದ್ದಾಳೆ. ಬದುಕಿನಲ್ಲಿ ಬದಲಾವಣೆ ಅನಿವಾರ್ಯ. ಶಾಸ್ತ್ರಿಗಳ ಕುಟುಂಬ ಬದಲಾವಣೆಗೆ ಹೊಂದಿಕೊಳ್ಳುತ್ತಾ? ಎಲ್ಲವನ್ನೂ ತೋರಿಸಿಕೊಡ್ತಿದೆ ಮತ್ತೆ ಮಾಯಾಮೃಗ.


  mayamruga director, matte mayamruga, mayamruga serial all episodes, mayamruga new version serial, director t.n seetha ram share the photo, ಮತ್ತೆ ಮಾಯಾಮೃಗ ಧಾರಾವಾಹಿ, 2 ವರ್ಷದಿಂದ ಮಾಳವಿಕಾ ಪತಿ ಕೃಷ್ಣ ಪ್ರಸಾದ್ ಎಲ್ಲಿ ಹೋದ್ರು? ಎಲ್ಲಿ ನೋಡಿದ್ರೂ ಮಾಯಾಮೃಗದ್ದೇ ಚರ್ಚೆ, ಮಾಯಾಮೃಗ ಧಾರಾವಾಹಿ, ಮೋಡಿ ಮಾಡಿದ ಮತ್ತೆ ಮಾಯಾಮೃಗ, kannada news, karnataka news,
  ಮಾಳವಿಕಾ


  ಎಲ್ಲೆಡೆ ಮತ್ತೆ ಮಾಯಾಮೃಗ ಚರ್ಚೆ
  ಮಾಯಾಮೃಗದ ಮುಂದುವರೆದ ಭಾಗ ಮತ್ತೆ ಮಾಯಾಮೃಗ ಜನರಿಗೆ ಇಷ್ಟ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನ ಮಾಯಾಮೃಗದ ಚರ್ಚೆ ಮಾಡ್ತಾ ಇದ್ದಾರೆ. ಸದ್ಯ ಒಂದೊಳ್ಳೆ ಧಾರಾವಾಹಿ ಬಂತು. ಮತ್ತೆ ನಮ್ಮನ್ನು ಹಳೇ ಲೋಕಕ್ಕೆ ಕರೆದುಕೊಂಡು ಹೋದ್ರು ಎಂದು ಖುಷಿ ಪಡ್ತಾ ಇದ್ದಾರೆ. ಮಾಯಾಮೃಗ ಟೈಟಲ್ ತುಂಬಾ ಚೆನ್ನಾಗಿದೆ. ನಾವು ತಪ್ಪದೇ ಮಾಯಾಮೃಗ ನೋಡ್ತಾ ಇದ್ದೇವೆ ಎಂದು ಚರ್ಚೆ ಮಾಡ್ತಾ ಇದ್ದಾರೆ.

  Published by:Savitha Savitha
  First published: