• Home
  • »
  • News
  • »
  • entertainment
  • »
  • Matte Mayamruga: ಮತ್ತೆ ಮಾಯಾಮೃಗದ ಮೊದಲ ಸಂಚಿಕೆಯಲ್ಲಿ ಏನಿತ್ತು ಗೊತ್ತೇ?

Matte Mayamruga: ಮತ್ತೆ ಮಾಯಾಮೃಗದ ಮೊದಲ ಸಂಚಿಕೆಯಲ್ಲಿ ಏನಿತ್ತು ಗೊತ್ತೇ?

ಮತ್ತೆ ಮಾಯಾಮೃಗದ ಮೊದಲ ಸಂಚಿಕೆ ಹೇಗಿತ್ತು?

ಮತ್ತೆ ಮಾಯಾಮೃಗದ ಮೊದಲ ಸಂಚಿಕೆ ಹೇಗಿತ್ತು?

ಶಾಸ್ತ್ರಿಗಳ ಪುತ್ರ ಶಾಮ್ ಪತ್ನಿ ಜೊತೆಗೆ ಮನೆಗೆ ಮತ್ತೆ ಬಂದಿದ್ದಾನೆ. ಶಾಸ್ತ್ರಿಗಳ ವಿರೋಧದ ಮಧ್ಯೆ ಮದುವೆಯಾದ ಶಾಮ್​ನಿಗೆ ಮಕ್ಕಳೇ ಆಗಿಲ್ಲ. ಅಪ್ಪನ 80 ವರ್ಷದ ಕಾರ್ಯಕ್ರಮವನ್ನ ಮಾಡಲಿಕ್ಕೆ ಶಾಮ್ ಮನೆಗೆ ಬಂದಿದ್ದಾನೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಿರುತೆರೆಯಲ್ಲಿ (Matte Mayamruga) ಮಾಯಾಮೃಗ ಅತ್ಯದ್ಭುತ ಸೀರಿಯಲ್ ಎಂಬ ಹೆಗ್ಗಳಿಕೆ ಈಗಲೂ ಇದೆ. ಕಳೆದ 23 ವರ್ಷದ ಹಿಂದೆ 1998 ರ ಹಿಂದೆ ಈ (Serial) ಸೀರಿಯಲ್ ಪ್ರಸಾರ ಆಗುತ್ತಿತ್ತು. ಸಂಜೆ 4.30ಕ್ಕೆ ಪ್ರಸಾರ ಆಗುತ್ತಿತ್ತು. ಆಫೀಸ್ (Office Work) ಕೆಲಸ ಮುಗಿಸಿ ಬಂದ ಗಂಡು ಮಕ್ಕಳು ಕೂಡ ಈ ಸೀರಿಯಲ್ ನೋಡುತ್ತಿದ್ದರು. ಆ ವೈಭವ ಮುಗಿದು ಎರಡು ದಶಕಗಳ ಮೇಲೆ ಆಗಿದೆ. ಇದೇ ಸೀರಿಯಲ್​ ಮುಂದುವರೆದ ಭಾಗವೇ ಆಗಿರೋ ಮತ್ತೆ ಮಾಯಾಮೃಗ ಈಗಾಗಲೇ ಅಕ್ಟೋಬರ್-31 ರಿಂದ ತನ್ನ ಪ್ರಸಾರ ಆರಂಭಿಸಿದೆ. ದಿನವೂ ಅರ್ಧ ಗಂಟೆ ಪ್ರಸಾರ ಆಗುವ ಈ ಸೀರಿಯಲ್​ನ ಮೊದಲ (Episode) ಸಂಚಿಕೆ ಹೇಗಿತ್ತು? ಈ ಒಂದು ಪ್ರಶ್ನೆಗೆ ಉತ್ತರ ರೂಪದ ಸ್ಟೋರಿ ಇದಾಗಿದೆ. ಮುಂದೆ ಡಿಟೈಲ್ಸ್ ಇದೆ ಓದಿ.


ಮತ್ತೆ ಮಾಯಾಮೃಗದ ಶೀರ್ಷಿಕೆ ಗೀತೆಯ ಸೆಳೆತ
ಮಾಯಾಮೃಗದ ಮೊದಲ ಸೆಳೆತವೇ ಸೀರಿಯಲ್​ನ ಮಾಯಾಮೃಗ ಅಂತಲೇ ಶುರು ಆಗೋ ಶೀರ್ಷಿಕೆ ಗೀತೆನೇ ಆಗಿದೆ. ಇದನ್ನ ಅಂದು ಸಿ.ಅಶ್ವತ್ಥ್ ಅವರು ಸಂಗೀತ ಸಂಯೋಜಿಸಿದ್ದರು.


ಮತ್ತೆ ಮಾಯಾಮೃಗದ ಸೀರಿಯಲ್​ನಲ್ಲಿ ಆ ಶೀರ್ಷಿಕೆ ಗೀತೆಯನ್ನ ಬಳಸಿಕೊಳ್ಳಲಾಗಿದೆ. ಆದರೆ ಪ್ರವೀಣ್ ಡಿ.ರಾವ್ ಇದೇ ಗೀತೆಗೆ ಒಂದಷ್ಟು ಸದ್ಯದ ಸ್ಪರ್ಶವನ್ನೂ ಕೊಟ್ಟಂತಿದೆ. ಮೂಲ ಶೀರ್ಷಿಕೆ ಹೋಲಿಕೆ ಮಾಡಿದ್ರೆ, ಇದು ಒಂದಷ್ಟು ಬೇರೆ ಫೀಕ್ ಕೊಡುತ್ತದೆ.


ಮತ್ತೆ ಮಾಯಾಮೃಗದ ಮೊದಲ ಸಂಚಿಕೆ ಹೇಗಿತ್ತು?
ಮತ್ತೆ ಮಾಯಾಮೃಗದಲ್ಲಿ ಈ ಮೊದಲೇ ನಿರ್ದೇಶಕ ಪಿ.ಶೇಷಾದ್ರಿ ಹೇಳಿದಂತೆ, ಯಾವುದೇ ಅಬ್ಬರವೇ ಇಲ್ಲ. ಬದುಕು ಬದಲಾಗುತ್ತದೆ. ಭಾವ ಬದಲಾಗುವುದಿಲ್ಲ ಎಂಬ ವಾಕ್ಯದೊಂದಿಗೆ ಇಡೀ ಸೀರಿಯಲ್ ಬಂದಿದೆ ಅಂತಲೇ ಹೇಳಬಹುದು.


Matte Mayamrug Serial First Episode telecasted
ಮತ್ತೆ ಮಾಯಾಮೃಗದ ಶೀರ್ಷಿಕೆ ಗೀತೆಯ ಸೆಳೆತ


ಮಾಯಾಮೃಗ ಸೀರಿಯಲ್ ನೋಡಿದ ವೀಕ್ಷಕರಿಗೆ ಸಣ್ಣದೊಂದು ಕುತೂಹಲವನ್ನೂ ಈ ಸೀರಿಯಲ್ ಮೂಡಿಸಿದೆ. ಮೊದಲ ಎಪಿಸೋಡ್​ ನಲ್ಲಿ ಏನಿತ್ತು ಅನ್ನೋರಿಗೆ ಇಲ್ಲಿ ಒಂದಷ್ಟು ವಿವರಣೆ ಕೊಡ್ತಾ ಹೋಗ್ತೀವಿ ಓದಿ.


ಮೊದಲ ಸಂಚಿಕೆಯಲ್ಲಿ ಹಳೆ-ಹೊಸ ಪಾತ್ರಗಳ ಪರಿಚಯ
ಮತ್ತೆ ಮಾಯಾಮೃಗದ ಸೀರಿಯಲ್​ನ ಮೊದಲ ಸಂಚಿಕೆಯಲ್ಲಿ ಪಾತ್ರಗಳ ಪರಿಚಯ ಆಗಿದೆ. ಮಾಳವಿಕಾ ಪಾತ್ರದ ಪರಿಚಯ ಮತ್ತು ಮಾಳವಿಕಾ ಮಗಳ ಪಾತ್ರದ ಪರಿಚಯ ಇಲ್ಲಿ ಆಗಿದೆ. ಮಂಜು ಭಾಷಿಣಿ ರೋಲ್ ಹಾಗೂ ಅವರ ಮಗಳ ರೋಲ್ ಇಲ್ಲಿ ಈಗ ಪರಿಚಯ ಆಗಿದೆ.


ಇದನ್ನೂ ಓದಿ: Bollywood: ಡ್ರಗ್ಸ್‌ ತೆಗೆದುಕೊಂಡು ಮಲಗಿದ್ದವನಿಗೆ ಎಚ್ಚರವಾಗಿದ್ದು 2 ದಿನಗಳ ನಂತರ: ಸಂಜಯ್‌ ದತ್‌


ಶಾಸ್ತ್ರಿಗಳ ಪುತ್ರ ಶಾಮ್ ಪತ್ನಿ ನಿರ್ಮಲಾ ಜೊತೆಗೆ ಮನೆಗೆ ಮತ್ತೆ ಬಂದಿದ್ದಾನೆ. ಶಾಸ್ತ್ರಿಗಳ ವಿರೋಧದ ಮಧ್ಯೆ ಮದುವೆಯಾದ ಶಾಮ್​ನಿಗೆ ಮಕ್ಕಳೇ ಆಗಿಲ್ಲ. ಅಪ್ಪನ 80 ವರ್ಷ ಕಾರ್ಯಕ್ರಮವನ್ನ ಮಾಡಲಿಕ್ಕೆ ಶಾಮ್ ಮನೆಗೆ ಬಂದಿದ್ದಾನೆ.


ಮೊದಲ ಎಪಿಸೋಡ್​ನಲ್ಲಿ ಶಾಸ್ತ್ರಿಗಳೇ ಕಾಣಲಿಲ್ಲ
ಮತ್ತೆ ಮಾಯಾಮೃಗದಲ್ಲಿ ಮೊದಲ ಸಂಚಿಕೆಯಲ್ಲಿ ಶಾಸ್ತ್ರಿಗಳು ಕಾಣಿಸುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಇಡೀ ಸೀರಿಯಲ್ ಅವರ ಮೇಲೆನೇ ಹೋಗಿತ್ತು ಅಲ್ವೇ. ಆದರೆ ಮತ್ತೆ ಮಾಯಾಮೃಗ ಸೀರಿಯಲ್​ನ ಮೊದಲ ಎಪಿಸೋಡ್​ ನಲ್ಲಿ ಶಾಸ್ತ್ರಿಗಳ ಬಗ್ಗೆ ಮಾತುಗಳು ಇವೆ. ಆದರೆ ಅವರ ಆಗಮನ ಇಲ್ಲಿ ಕಾಣಲೇ ಇಲ್ಲ.


Matte Mayamrug Serial First Episode telecasted
ಮೊದಲ ಎಪಿಸೋಡ್​ನಲ್ಲಿ ಶಾಸ್ತ್ರಿಗಳೇ ಕಾಣಲಿಲ್ಲ


ಮತ್ತೆ ಮಾಯಾಮೃಗದ ಸೀರಿಯಲ್​ ನಲ್ಲಿ ಒಂದು ಆಕರ್ಷಣೆ ಇದ್ದೇ ಇದೆ. ನಿರ್ದೇಶಕರಾದ ಟಿ.ಎನ್.ಸೀತಾರಾಮ್, ನಾಗೇಂದ್ರ ಶಾ, ಪಿ.ಶೇಷಾದ್ರಿ ಅವ್ರು ತಮ್ಮ ಎಂದಿನ ಶೈಲಿಯಲ್ಲಿಯೇ ಈ ಸೀರಿಯಲ್ ಡೈರೆಕ್ಟ್ ಮಾಡಿದ್ದಾರೆ.


ಮತ್ತೆ ಮಾಯಾ ಮೃಗದಲ್ಲಿ ಮಕ್ಕಳ ಮನಸ್ಸಿನ ಅನಾವರಣ
ಮತ್ತೆ ಮಾಯಾಮೃಗ ಸೀರಿಯಲ್​ನಲ್ಲಿ ಈ ಕಾಲದ ಮಕ್ಕಳ ಕಥೆ ಇದೆ. ಮಾಳವಿಕಾ ಮಗಳು ಮದುವೆ ಆಗೋಲ್ಲ ಅಂತಾಳೆ, ಮಂಜು ಭಾಷಿಣಿ ಮಗಳು ಎಂಬಿಬಿಎಸ್ ಮಾಡಿ ಹಳ್ಳಿಯಲ್ಲಿ ಪ್ರ್ಯಾಕ್ಟೀಸ್ ಮಾಡಲು ಅಮ್ಮನನ್ನೇ ಕರೆದುಕೊಂಡು ಹಳ್ಳಿಗೆ ಹೋಗಿದ್ದಾಳೆ.


ಇದನ್ನೂ ಓದಿ: Ileana D'Cruz Birthday: ಸೌಂದರ್ಯ ಸಮರ-ಇಲಿಯಾನಾ ಚೆಲುವಿಗೆ ಸೋತವನೇ ಅಮರ-ಇಂದು ಈ ಬ್ಯೂಟಿಯ ಜನ್ಮ ದಿನ


ಶಾಸ್ತ್ರಿಗಳ ಮಗ ಶಾಮ್ ನಿಗೆ ಬಹು ವರ್ಷಗಳ ಬಳಿಕ ಅಪ್ಪನನ್ನ ಭೇಟಿಯಾಗಲು ಬಂದಿದ್ದಾನೆ. ದೇವಸ್ಥಾನದಲ್ಲಿರೋ ಅಪ್ಪನನ್ನ ಭೇಟಿಯಾಗಲು ಈಗ ಹೋಗಿದ್ದಾನೆ.
ಮತ್ತೆ ಮಾಯಾಮೃಗ ಸೀರಿಯಲ್ ಯಾವುದೇ ಅಬ್ಬರ ಇಲ್ಲದೇ ಶುರು ಆಗಿದೆ.


ಇನ್ನುಳಿದಂತೆ ಈ ವಾರದಲ್ಲಿ ಈ ಸೀರಿಯಲ್ ಓಟ-ವೀವರ್ಸ್ ಲೆಕ್ಕ ಏನೂ ಅನ್ನೋದು ಈಗೀನ ಕುತೂಹಲವೇ ಆಗಿದೆ.

First published: