ಈ ವಾರ ತೆರೆಗೆ ಬರಲಿದ್ದಾನೆ ಚಂದನವನದ 'ಮೇಸ್ತ್ರಿ'

news18
Updated:August 30, 2018, 12:26 PM IST
ಈ ವಾರ ತೆರೆಗೆ ಬರಲಿದ್ದಾನೆ ಚಂದನವನದ 'ಮೇಸ್ತ್ರಿ'
news18
Updated: August 30, 2018, 12:26 PM IST
ನ್ಯೂಸ್​ 18 ಕನ್ನಡ 

ಲೇಟ್ ಆದರೂ ಲೇಟೆಸ್ಟ್ ಆಗಿ ಬರುತ್ತಿದ್ದಾನೆ ಕನ್ನಡದ `ಮೇಸ್ತ್ರಿ'. ನಟ ಹಾಗೂ ನಿರ್ಮಾಪಕ  ಬಾಲು ನಾಯಕನಾಗಿ ಅಭಿನಯಿಸಿರುವ ಸಿನಿಮಾ 'ಮೇಸ್ತ್ರಿ'. 1993 ರಲ್ಲಿ ನಡೆದ ಒಂದು ಸತ್ಯ ಘಟನೆಯ ಆಧಾರದ ಮೇಲೆ ಈ ಚಿತ್ರ ನಿರ್ಮಿಸಲಾಗಿದೆ.

ಸನ್ ಲೈಟ್ ಪಿಕ್ಚರ್ಸ್ ಅಡಿಯಲ್ಲಿ ಎಚ್. ಜೆ. ಬಾಲಕೃಷ್ಣ ಅವರು ನಿರ್ಮಿಸಿರುವ ಈ ಸಿನಿಮಾದಲ್ಲಿ ರಾಣಿ ಹಾಗೂ ಸಂಗೀತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.ರಾಮು ಹಾಗೂ ಕಂಬಿ ರಾಜು ಹಾಡುಗಳ ನೃತ್ಯ ನಿರ್ದೇಶನ ಮಾಡಿದ್ದು, 'ಅನು' ಚಿತ್ರದ ಬಳಿಕ ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ ಬಾಲು.

'ನಂದಾ ಲವ್ಸ ನಂದಿತಾ' ಚಿತ್ರಕ್ಕೆ ಜಿಂಕೆಮರಿ ಹಾಡನ್ನು ಬರೆದ ರಾಜಕಿರಣ್ ಈ ಚಿತ್ರದ ನಿರ್ದೇಶಕರು. ಇಂದಿನ ಸಮಾಜದಲ್ಲಿ ಮಾನವೀಯತೆ ಮರೆಯಾಗುತ್ತಿರುವುದನ್ನು ಈ ಸಿನಿಮಾದ ಮೂಲಕ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಿ.ಆರ್. ಶಂಕರ್ ಸಂಗೀತ ನೀಡಿದ್ದು, ಹರೀಶ್ ಶೃಂಗ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ನಿರಂಜನ್​ ಬಾಬು ಚಿತ್ರದ ಛಾಯಾಗ್ರಾಹಕರಾಗಿದ್ದು, ಮಲೆಯಾಳಂ ಚಿತ್ರದ ಖಳ ನಟ ಚಂಬನ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ.

 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ