ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಇಂದು ಬೆಳಿಗ್ಗೆ ಇಹ ಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆ ರಂಗಭೂಮಿ ಹಾಗೂ ಸಿನಿ ರಂಗಕ್ಕೆ ತುಂಬಲಾರದ ನಷ್ಟ. ಅವರ ಗರಡಿಯಲ್ಲೇ ಅಭಿನಯ ಕಲಿತು ಬೆಳ್ಳಿ ಪರದೆ ಮೇಲೆ ರಾಜಾಜಿಸಿದವರು ಹಲವರಿದ್ದಾರೆ.
ಇದನ್ನೂ ಓದಿ: Master Hirannaiah: ರಂಗಭೂಮಿಯ ನಿಧಿ ಮಾಸ್ಟರ್ ಹಿರಣ್ಣಯ್ಯ ಇಸ್ಪೀಟ್ ಆಡುವುದರಲ್ಲೂ ನಿಸ್ಸೀಮರು
ರಂಗವೇದಿಕೆ ಮೇಲೆ ನಿಂತರೆ ಸಾಕು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುಯತ್ತಿದ್ದ ರಂಗಭೂಮಿಯ ನಟ ಸಾರ್ವಭೌಮ ಮಾಸ್ಟರ್ ಹಿರಣ್ಣಯ್ಯ. ಅವರು ಸಿನಿ ಜೀವನಕ್ಕೆ ಕಾಲಿಟ್ಟ ನಂತರ ಸಾಕಷ್ಟು ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹೀಗೆ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಜಗ್ಗೇಶ್ ಹಾಗೂ ನಟ ದರ್ಶನ್ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಜಗ್ಗೇಶ್ ಅವರು ಬಾಲ್ಯದಲ್ಲಿ ತಮ್ಮ ಅಪ್ಪ-ಅಮ್ಮೊನೊಂದಿಗೆ ಹಿರಣ್ಣಯ್ಯ ಅವರ ನಾಟಕ ನೋಡಲು ಹೋಗುತ್ತಿದ್ದರಂತೆ. 'ಆಗ ನಾಟಕಗಳು ನಡೆಯುತ್ತಿದ್ದದ್ದು ಈಗಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೆ. ಹಿರಣ್ಣಯ್ಯ ಮಿತ್ರಮಂಡಲಿ ಆಗ ಮೆಜೆಸ್ಟಿಕ್ನಲ್ಲೇ ಬಿಡಾರ ಬಿಟ್ಟಿರುತ್ತಿದ್ದರು. ಅಲ್ಲದೆ ನಾನು 9ನೇ ತರಗತಿಯಲ್ಲಿದ್ದಾಗ ಇವರ 'ದೇವದಾಸಿ' ಸಿನಿಮಾದ ಹಾಡು ಹಾಡಿ ಶಾಲೆಯಲ್ಲಿ ಬಹುಮಾನ ಪಡೆದಿದ್ದೆ' ಎಂದು ನವರಸ ನಾಯಕ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇಂದಿನ ಮೆಜಸ್ಟಿಕ್ ಬಸ್ನಿಲ್ದಾಣ ಅಂದು "ಹಿರಣಯ್ಯ ಮಿತ್ರಮಂಡಲಿ"ಬಿಡಾರ!ನನ್ನ 1976ರಲ್ಲಿ ಇವರ ನಾಟಕ ನೋಡಲು ಅಪ್ಪಅಮ್ಮನ ಜೊತೆ ಹೋಗುತ್ತಿದ್ದೆ!ನಮ್ಮ ಸೋದರಮಾವ ರಂಗನಟ Tmಭಧ್ರಾಚಲ ನಾಟಕದ ಟಿಕೆಟ್ ಕೊಡುತ್ತಿದ್ದರು!ಹಳ್ಳಿಯಂತಿದ್ದ ಆದಿನಗಳ
ಬಾಲ್ಯ ನೆನಪಾಯಿತು!
ಇವರ ದೇವದಾಸಿ ಚಿತ್ರದ ಹಾಡು ಹಾಡಿ 9ನೆ ತರಗತಿಯಲ್ಲಿ ಪಾರಿತೋಷಕಪಡೆದಿದ್ದೆ
ಓಂಶಾಂತಿ. pic.twitter.com/HiC6dcsoMm
— Chowkidar🙏ನವರಸನಾಯಕ ಜಗ್ಗೇಶ್ (@Jaggesh2) May 2, 2019
ಕನ್ನಡ ರಂಗಭೂಮಿಯ ಹಿರಿಯ, ಪ್ರಸಿದ್ಧ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ರವರು ಇಂದು ವಿಧಿವಶರಾಗಿದ್ದಾರೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರೊಡನೆ ‘ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿರುತ್ತದೆ pic.twitter.com/KDKsd2oN6E
— Darshan Thoogudeepa (@dasadarshan) May 2, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ