HOME » NEWS » Entertainment » MASTER CHINNI PRAKASH RELEASED PAARIVALA SINGLE SHOT MUSIC VIDEO HTV AE

ಪಂಚಭಾಷೆಗಳಲ್ಲಿ ಪಾರಿವಾಳ ಹಾಡು: ಸದ್ದು ಮಾಡುತ್ತಿದೆ ಸಿಂಗಲ್ ಟೇಕ್ ಸಾಂಗ್! 

ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಹೀಗೆ 5 ಭಾಷೆಗಳಲ್ಲಿ ಈ ಪಾರಿವಾಳ ಹಾಡು ಬಿಡುಗಡೆಯಾಗಲಿದ್ದು, ಸದ್ಯ ಕನ್ನಡ ವರ್ಷನ್ ಮಾತ್ರ ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯ ಹಾಡನ್ನು ರಿಲೀಸ್ ಮಾಡುವ ಯೋಜನೆಯನ್ನು ಪಾರಿವಾಳ ತಂಡ ಪ್ಲ್ಯಾನ್ ಮಾಡಿಕೊಂಡಿದೆ.

news18-kannada
Updated:March 4, 2021, 4:14 PM IST
ಪಂಚಭಾಷೆಗಳಲ್ಲಿ ಪಾರಿವಾಳ ಹಾಡು: ಸದ್ದು ಮಾಡುತ್ತಿದೆ ಸಿಂಗಲ್ ಟೇಕ್ ಸಾಂಗ್! 
ಪಾರಿವಾಳ ಮ್ಯೂಸಿಕ್​ ಆಲ್ಬಂ ತಂಡ
  • Share this:
 ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗಕ್ಕೆ ಬರುವವರಿಗೆ ಆಲ್ಬಂ, ಶಾರ್ಟ್ ಫಿಲಂ ಮೇಕಿಂಗ್ ಒಂದು ಪ್ಲಾಟ್‍ಫಾರಂ ಆಗುತ್ತಿದೆ. ಇದರಲ್ಲಿ ತಮ್ಮ ಪ್ರತಿಭೆ ತೋರಿಸಿದರೆ ಅಂಥವರಿಗೆ ಮುಂದೆ ಸಿನಿಮಾ ರಂಗದಲ್ಲಿ ಖಂಡಿತ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆ ಹಲವರದು. ಇತ್ತೀಚೆಗಷ್ಟೇ ಪಬ್ಲಿಕ್ ಟಾಯ್ಲೆಟ್ ಎನ್ನುವ ಕಿರುಚಿತ್ರ ನಿರ್ಮಿಸಿದ ಭಾನವಿ ಕ್ಯಾಪ್ಚರ್ ಸಂಸ್ಥೆ ಇದೀಗ ಪಾರಿವಾಳ ಎಂಬ ಆಲ್ಬಂ ವೀಡಿಯೋ ಸಾಂಗ್‍ಅನ್ನು ಮಾಡಿದೆ. ಚಿನ್ನಿಪ್ರಕಾಶ್ ಅವರ ಶಿಷ್ಯ, ಮೂಲತ: ನೃತ್ಯ ಸಂಯೋಜಕರಾದ ರಾಮ್ ಕಿರಣ್ ಈ ಹಾಡಿನಲ್ಲಿ ಅಭಿನಯಿಸುವುದರ ಜೊತೆಗೆ ತಾವೇ ಕೊರಿಯೋಗ್ರಾಫ್ ಕೂಡ ಮಾಡಿದ್ದಾರೆ. ವಿಶೇಷವಾಗಿ ಈ ಹಾಡನ್ನು ಸಿಂಗಲ್ ಟೇಕ್‍ನಲ್ಲಿ ಛಾಯಾಗ್ರಾಹಕ ಅಭಿಷೇಕ್ ಜಿ.ಕಾಸರಗೋಡು ಸೆರೆ ಹಿಡಿದಿದ್ದು, ಅಗಸ್ತ್ಯ ಸಂತೋಷ್ ಇದರ ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿದ್ದಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಹೀಗೆ 5 ಭಾಷೆಗಳಲ್ಲಿ ಈ ಪಾರಿವಾಳ ಹಾಡು ಬಿಡುಗಡೆಯಾಗಲಿದ್ದು, ಸದ್ಯ ಕನ್ನಡ ವರ್ಷನ್ ಮಾತ್ರ ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯ ಹಾಡನ್ನು ರಿಲೀಸ್ ಮಾಡುವ ಯೋಜನೆಯನ್ನು ಪಾರಿವಾಳ ತಂಡ ಪ್ಲ್ಯಾನ್ ಮಾಡಿಕೊಂಡಿದೆ.ಇನ್ನು, ಎಲ್ಲ ಭಾಷೆಗಳಲ್ಲೂ ಗಾಯಕ ಶಶಾಂಕ್ ಶೇಷಗಿರಿ ಅವರೇ ಹಾಡಿದ್ದಾರೆ. ನಾಯಕ ರಾಮ್‍ ಕಿರಣ್ ಹಾಗೂ ನಾಯಕಿ ತೇಜಸ್ವಿನಿ ಶರ್ಮ ಅವರ ಅಭಿನಯವಿರುವ ಈ ಹಾಡಿನ ಸಾಹಿತ್ಯದಲ್ಲಿ ಭಗ್ನ ಪ್ರೇಮಿಯೊಬ್ಬನ ಮನದ ವಿರಹ ವೇದನೆಯನ್ನು ಹೇಳಲು ಊ ಸನ್ನಿವೇಶ ಚಿತ್ರಿಸಲಾಗಿದೆ. ಅರುಣ್ ಬಸವರಾಜ್ ಜೊತೆಗೆ ರೋಹಿತ್ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ಇದನ್ನೂ ಓದಿ: ಬೆಳಗೆದ್ದು ಮೇಕಪ್​ ಮಾಡಿಕೊಂಡು ಸ್ನಾನಕ್ಕೆ ಹೋದ ಧನುಶ್ರೀ: ಟ್ರೋಲ್​ ಆಗುತ್ತಿದ್ದಾರೆ ಟಿಕ್​ಟಾಕ್ ಸ್ಟಾರ್​

ಕನ್ನಡ, ಹಿಂದಿ, ತಮಿಳು, ತೆಲುಗು ಹೀಗೆ ಹಲವಾರು ಭಾಷೆಗಳಲ್ಲಿ ನೂರಾರು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಹಿರಿಯ ನೃತ್ಯನಿರ್ದೇಶಕ ಚಿನ್ನಿಪ್ರಕಾಶ್  ಪಾರಿವಾಳ ವಿಡಿಯೋ ಆಲ್ಬಂ ಹಾಡನ್ನು  ಬಿಡುಗಡೆ ಮಾಡಿ ಶಿಷ್ಯನಿಗೆ ಶುಭ ಹಾರೈಸಿದರು. ಇನ್ನು ಹಾಡಿನ ಬಗ್ಗೆ ಮಾತನಾಡಿದ ಗಾಯಕ ಶಶಾಂಕ್ ಶೇಷಗಿರಿ, ಗಾಯಕ ವಿನು ಮನಸು ಅವರ ಮೂಲಕ ನನಗೆ ಈ ಹಾಡು ಸಿಕ್ಕಿದ್ದು, ಮೊದಲು ಕನ್ನಡದಲ್ಲಿ ಹಾಡಿದೆ, ನಂತರ ಐದೂ ಭಾಷೆಗಳಲ್ಲಿ ಹಾಡಬೇಕೆಂದರು, ಮಲಯಾಳಂನಲ್ಲಿ ಹಾಡೋದು ಸ್ವಲ್ಪ ಕಷ್ಟವಾಯಿತು. ಈ ಹಾಡಿಗೆ ಮೇನ್ ಹೀರೋ ಎಂದರೆ ಅಭಿಷೇಕ್, ಸ್ವಲ್ಪವೂ ಗ್ಯಾಪ್ ಕೊಡದೆ ಹಾಡನ್ನು ಅವರು ಸೆರೆಹಿಡಿಯಬೇಕಿತ್ತು ಎಂದು ಹೇಳಿದರು.

paarivala one shot video, Kannada, Kannada Album song, Master Chinni Prakash ಪಾರಿವಾಳ ಕನ್ನಡ ಮ್ಯೂಸಿಕ್​ ಆಲ್ಬಂ, ಚಿನ್ನಿ ಪ್ರಕಾಶ್​, ಪಾರಿವಾರ ಸಿಂಗಲ್​ ಶಾಟ್​ ವಿಡಿಯೋ ಹಾಡು
ಪಾರಿವಾಳ ಮ್ಯೂಸಿಕ್​ ಆಲ್ಬಂ ತಂಡ
ನಾಯಕ, ನಿರ್ದೇಶಕ, ಕೊರಿಯೋಗ್ರಫರ್  ರಾಮ್‍ಕಿರಣ್ ಮಾತನಾಡಿ ನಾವೆಲ್ಲ ಸೇರಿ ಏನಾದರೂ ಡಿಫರೆಂಟಾಗಿ ಟ್ರೈ ಮಾಡಬೇಕು ಎಂದು ಹೊರಟಾಗ ಈ ಕಾನ್ಸೆಪ್ಟ್ ಹೊಳೆಯಿತು, ಆಗಲೇ 6 ಚಿತ್ರಗಳಿಗೆ ಕ್ಯಾಮೆರಾ ವರ್ಕ್ ಮಾಡಿದ್ದ ಅಭಿಷೇಕ್, ವಿಭಿನ್ನ ಪ್ರಯತ್ನವಾಗಿ ಒನ್‍ ಟೇಕ್‍ನಲ್ಲಿ ಈ ಸಾಂಗನ್ನು ಸೆರೆಹಿಡಿದಿದ್ದಾರೆ. ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಒಂದೇ ರಾತ್ರಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ಹೇಳಿಕೊಂಡರು.

ಇದನ್ನೂ ಓದಿ: Bigg Boss 8: ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಮಹಿಳೆಯರ ಜಂಗೀ ಕುಸ್ತಿ; ರಕ್ತ ಸುರಿಸಿದ್ರಾ ದಿವ್ಯಾ ಸುರೇಶ್

ಕೊನೆಯಲ್ಲಿ ಮಾತನಾಡಿದ ಚಿನ್ನಿಪ್ರಕಾಶ್, ಯುವರತ್ನ ಸಾಂಗ್ ಮಾಡುವಾಗ ರಾಮ್ ಕಿರಣ್ ಈ ಹಾಡನ್ನು ಕೇಳಿಸಿದ, ಸಖತ್ತಾಗಿತ್ತು, ನಾನೇ ಕೊರಿಯೋಗ್ರಾಫ್ ಮಾಡಬೇಕು ಅನ್ನಿಸುವಷ್ಟು ಆಕರ್ಷಕವಾಗಿತ್ತು,  ನಾನಾಗಿದ್ರೆ ಈ ಹಾಡನ್ನು 4-5 ದಿನ ಮಾಡ್ತಿದ್ದೆ, ಆದರೆ ಈತನ ಆಲೋಚನೆ ಕಂಡು ಆಶ್ಚರ್ಯವಾಯ್ತು. ಅಲ್ಲಿ ನಾನೇ ಇದ್ರೂ ಇಷ್ಟು ಚೆನ್ನಾಗಿ ಮಾಡಲು ಆಗ್ತಿರಲಿಲ್ಲ, ನಾನೆಲ್ಲೇ ಹೋದರೂ ರಾಮ್‍ಕಿರಣ್ ನನ್ನ ಶಿಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು  ರಾಮ್ ಕಿರಣ್ ಗೆ ಹಾಗೂ ಪಾರಿವಾಳ ತಂಡಕ್ಕೆ ಶುಭ ಹಾರೈಸಿದರು.
Published by: Anitha E
First published: March 4, 2021, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories