Vanshika Film: ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ಮಾಸ್ಟರ್ ಆನಂದ್ ಪುತ್ರಿ, ವನ್ಷಿಕಾಗೆ ಆಫರ್ ಮೇಲೆ ಆಫರ್!

ನಟನೆ, ಡೈಲಾಗ್, ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿರುವ ಪಟ್ ಪಟ್ ಪಟಾಕಿ ಈಕೆ. ಈಗ ಸಿನಿಮಾ ಎಂಬ ಲೋಕದಲ್ಲಿ ಮಿಂಚಲು ಸಿದ್ಧವಾಗಿದ್ದಾಳೆ. ಇವಳ ನಟನೆ ನೋಡಿ ಮೆಚ್ಚಿಕೊಂಡಿದ್ದಾರೆ. ವಂಶಿಗೆ ಈಗ ಸಿನಿಮಾಗೆ ಆಫರ್ ಮೇಲೆ ಆಫರ್ ಬರುತ್ತಿವೆಯಂತೆ. ವಸಿಷ್ಠ ಹೀರೋ ಆಗಿ ನಟಿಸ್ತಿರುವ ಲವ್ ಲಿ ಚಿತ್ರದಲ್ಲಿ ವಂಶಿಕಾ ಅಭಿನಯ ಮಾಡಲಿದ್ದಾಳೆ.

'ಲವ್ ಲಿ' ಸಿನಿಮಾದಲ್ಲಿ ವಂಶಿಕಾ ನಟನೆ

'ಲವ್ ಲಿ' ಸಿನಿಮಾದಲ್ಲಿ ವಂಶಿಕಾ ನಟನೆ

 • Share this:
  ವನ್ಷಿಕಾ (Vanshika) ಈ ಹೆಸರು ಕಳೆದ ಒಂದು ವರ್ಷದಿಂದ ಕನ್ನಡಿಗರ ಮನದಲ್ಲಿ ಉಳಿದು, ನೆಲೆಸಿರುವ ಹೆಸರು. ಈಕೆ ಮಾಸ್ಟರ್ ಆನಂದ್ (Master Anand), ಯಶಸ್ವಿನಿ ಅವರ ಮಗಳು. ಈಗ 5 ವರ್ಷ (5 years). ಆದ್ರೆ ಆದ್ರೆ ಇವಳ ಮಾತು, ನಟನೆ ನೋಡಿದ್ರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂಥಾ ಅದ್ಭುತ ಪ್ರತಿಭೆ ಎನ್ನಿಸುತ್ತೆ. ಗಿಚ್ಚಿ ಗಿಲಿಗಿಲಿ ಶೋನಲ್ಲಿ ಅದ್ಭುತವಾದ ನಟನೆ, ಡೈಲಾಗ್, ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿರುವ ಪಟ್ ಪಟ್ ಪಟಾಕಿ ಈಕೆ. ಈಗ ಸಿನಿಮಾ ಎಂಬ ಲೋಕದಲ್ಲಿ ಮಿಂಚಲು ಸಿದ್ಧವಾಗಿದ್ದಾಳೆ. ಇವಳ ನಟನೆ ನೋಡಿ ಮೆಚ್ಚಿಕೊಂಡಿದ್ದಾರೆ. ವಂಶಿಗೆ ಈಗ ಸಿನಿಮಾಗೆ (Film) ಆಫರ್ (Offer) ಮೇಲೆ ಆಫರ್ ಬರುತ್ತಿವೆಯಂತೆ. ವಸಿಷ್ಠ ಹೀರೋ ಆಗಿ ನಟಿಸ್ತಿರುವ ಲವ್ ಲಿ (Love li) ಚಿತ್ರದಲ್ಲಿ ವಂಶಿಕಾ ಅಭಿನಯ ಮಾಡಲಿದ್ದಾಳೆ. ಮಗಳ ಇಷ್ಟವೇ ನಮ್ಮ ಇಷ್ಟ ಎಂದಿದ್ದಾರೆ ಮಾಸ್ಟರ್ ಆನಂದ್.

  ನಮ್ಮಮ್ಮ ಸೂಪರ್ ಸ್ಟಾರ್ ಟೈಟಲ್ ವಿನ್ನರ್
  ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಮೊದಲ ದಿನವೇ ಇವಳು ಕನ್ನಡಿಗರ ಮನಸ್ಸು ಕದ್ದಿದ್ದಳು. ತನ್ನ ಮಾತಿನಿಂದ ಮೋಡಿ ಮಾಡಿದ್ದಳು. ಅಂದಿನಿಂದ ವಂಶಿಗಾಗಿಯೇ ಎಷ್ಟೊಂದು ಜನ ನಮ್ಮಮ್ಮ ಸೂಪರ್ ಸ್ಟಾರ್ ನೋಡ್ತಾ ಇದ್ರು. ಅಂತೆಯೇ ಅವಳೇ ವಿನ್ ಆಗಿ ನಮ್ಮಮ್ಮ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದ್ದಳು.

  ಗಿಚ್ಚಿ ಗಿಲಿಗಿಲಿಯಲ್ಲಿ ಸೂಪರ್ ನಟನೆ
  ಈ ವರ್ಷ ಗಿಚ್ಚಿ ಗಿಲಿಗಿಲಿ ಅನ್ನೂ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದು, ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದೆ. ಮಜಾ ಭಾರತದ ಕಲಾವಿದರ ಜೊತೆ ಬೇರೆ ಬೇರೆ ಕಲಾವಿದರು ಸೇರಿ ಮನರಂಜನೆ ನೀಡುತ್ತಿದ್ದಾರೆ. ಮಜಾಭಾರತದ ಶಿವುಗೆ ನಮ್ಮಮ್ಮ ಸೂಪರ್ ಸ್ಟಾರ್ ವಿನ್ನರ್ ವನ್ಷಿಕಾ ಅಂಜನಿ ಕಶ್ಯಪ್ ಜೋಡಿಯಾಗಿ ಕರುನಾಡ ಜನರ ಮನ ಗೆದ್ದಿದ್ದಾಳೆ. ವಂಶಿಯ ಅಮೋಘ ನಟನೆಗೆ ಬೆರಗಾಗದವರೇ ಇಲ್ಲ.

  ಇದನ್ನೂ ಓದಿ: Ramachari: ಅಮ್ಮ-ಮಗಳ ಅನ್ಯಾಯದ ಆಟಕ್ಕೆ ಬ್ರೇಕ್ ಹಾಕಲು ರಾಮಾಚಾರಿ ಪ್ಲ್ಯಾನ್, ಡ್ರಗ್ಸ್ ಸುಳಿಯಿಂದ ಆಚೆ ಬರ್ತಾನಾ?

  'Love ಲಿ' ಸಿನಿಮಾದಲ್ಲಿ ವಂಶಿಕಾ ನಟನೆ
  ಇತ್ತೀಚೆಗೆ ಶಾಲೆಗೆ ಹೋಗಲು ಶುರುಮಾಡಿರುವ ವಂಶಿಕಾ ಅವರು ರಿಯಾಲಿಟಿ ಶೋ ಬಳಿಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾಳೆ. ವಸಿಷ್ಠ ಸಿಂಹ ನಟನೆಯ 'ಲವ್ ಲಿ' ಸಿನಿಮಾದಲ್ಲಿ. ವಂಶಿಕಾ ನಟಿಸುತ್ತಿದ್ದಾರಂತೆ. ಇದನ್ನು ಸ್ವತಃ ವಸಿಷ್ಠ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಲವ್ ಲಿ ಸಿನಿಮಾಗೆ ಸ್ವಾಗತ ವಂಶಿಕಾ ಎಂದು ಬರೆದುಕೊಂಡಿದ್ದಾರೆ.
  View this post on Instagram


  A post shared by Vasishta N Simha (@imsimhaa)
  ವಂಶಿಗೆ ಸಿನಿಮಾ ಆಫರ್ ಮೇಲೆ ಆಫರ್
  'ನನ್ನಮ್ಮ ಸೂಪರ್ ಸ್ಟಾರ್' ಶೋನಲ್ಲಿ ವಂಶಿಕಾ ಅವರ ಮೊದಲ ಪೆÇ್ರೀಮೋ ರಿಲೀಸ್ ಆಗುತ್ತಿದ್ದಂತೆ ಎಲ್ಲರೂ ಇಷ್ಟಪಟ್ಟರು. ವಂಶಿಕಾ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದಂತೂ ಸುಳ್ಳಲ್ಲ. ಅದಾದ ನಂತರ ಸಿನಿಮಾ, ವೆಬ್ ಸಿರೀಸ್‍ನಲ್ಲಿ ನಟಿಸುವ ಆಫರ್ ಹುಡುಕಿಕೊಂಡು ಬಂದಿದೆ ಎಂದು ಸ್ವತಃ ಮಾಸ್ಟರ್ ಆನಂದ್ ಹೇಳಿಕೊಂಡಿದ್ದರು.

  ಮಗಳ ಇಷ್ಟವೇ ನನ್ನ ಇಷ್ಟ ಎಂದ ಮಾಸ್ಟರ್ ಆನಂದ್
  "ನನ್ನ ಮಗಳು ಈಗ ತಾನೇ ಶಾಲೆಗೆ ಹೋಗಲು ಶುರು ಮಾಡಿದ್ದಾಳೆ. ಅವಳಿಗೆ ಇಷ್ಟ ಆದರೆ ಅವಳು ನಟಿಸಲಿ. ಮುಂದೆ ಅವಳು ನಟನೆಯಲ್ಲಿ ಮುಂದುವರೆಯಬಹುದು, ಬೇರೆ ರಂಗ ಆಯ್ಕೆ ಮಾಡಿಕೊಳ್ಳಬಹುದು, ಅದು ಅವಳ ಇಷ್ಟ. ನಾನು ಯಾವುದೇ ಕಾರಣಕ್ಕೂ ಒತ್ತಾಯ ಹೇರೋದಿಲ್ಲ" ಎಂದು ಹೇಳಿದ್ದಾರೆ.

  ಇದನ್ನೂ ಓದಿ: Comedy Khiladigalu-4: ನಗಿಸಲು ಮತ್ತೆ ಬರ್ತಿದ್ದಾರೆ ಕಾಮಿಡಿ ಕಿಲಾಡಿಗಳು, ಸದ್ಯದಲ್ಲೇ ಶುರುವಾಗಲಿದೆ ಸೀಸನ್ 4

  ವಸಿಷ್ಠ ಹೀರೋ ಆಗಿ ನಟಿಸ್ತಿರುವ ಲವ್ ಲಿ ಸಿನಿಮಾದಲ್ಲಿ ಬೈಕ್ ಮೇಲೆ ಕುಳಿತು, ಧಮ್ ಹೊಡೆಯುತ್ತಾ, ಸಖತ್ ಸ್ಟೈಲೀಶ್ ಲುಕ್‍ನಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿರುವ ಪೆÇೀಸ್ಟರ್ ರಿಲೀಸ್ ಆಗಿತ್ತು. ಇದು ಕಮರ್ಷಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ರೊಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಲವ್ ಲಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
  Published by:Savitha Savitha
  First published: