ಮುಂದಿನ ನಿಲ್ದಾಣದಲ್ಲಿ ಮನಸೇ ಮಾಯ; ಸದ್ದು ಮಾಡುತ್ತಿದೆ ಹೊಸ ಹಾಡು

ಪೋಸ್ಟರ್ ನಷ್ಟೇ ಕಾವ್ಯಾತ್ಮಕವಾಗಿ ಮುಂದಿನ ನಿಲ್ದಾಣದ ಹಾಡು ಹಾಗೂ ಟೀಸರ್ ಇದೆ. ಈ ಚಿತ್ರವನ್ನು ವಿನಯ್‌ ಭಾರಧ್ವಾಜ್‌ ನಿರ್ದೇಶನ ಮಾಡುತ್ತಿದ್ದು, ಪ್ರೀತಿಯ ಕಥೆಯನ್ನು ಹೊಂದಿರುವ ಯುವಮನಸ್ಸುಗಳ ಸುತ್ತ ಹೆಣೆದಿರುವ ಕಥೆ ಇದಾಗಿದೆ.

Vinay Bhat | news18-kannada
Updated:September 5, 2019, 12:42 PM IST
ಮುಂದಿನ ನಿಲ್ದಾಣದಲ್ಲಿ ಮನಸೇ ಮಾಯ; ಸದ್ದು ಮಾಡುತ್ತಿದೆ ಹೊಸ ಹಾಡು
ಮುಂದಿನ ನಿಲ್ದಾಣ ಕನ್ನಡ ಸಿನಿಮಾದ ಹಾಡಿನ ಫೋಟೋ
  • Share this:
ಬೆಂಗಳೂರು (ಸೆ. 05): ರಂಗಿತರಂಗ ಖ್ಯಾತಿಯ ರಾಧಿಕ ನಾರಾಯಣ್, ಅನನ್ಯಾ ಕಶ್ಯಪ್ ಹಾಗೂ ಪ್ರವೀಣ್ ತೇಜ್ ಮುಖ್ಯ ಭೂಮಿಕೆಯಲ್ಲಿರುವ 'ಮುಂದಿನ ನಿಲ್ದಾಣ' ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ನಿರೀಕ್ಷೆ ಹುಟ್ಟಿಸಿದೆ. ಇತ್ತೀಚೆಗಷ್ಟೆ ಟೀಸರ್ ರಿಲೀಸ್ ಮಾಡಿ ಭಾರೀ ಸದ್ದು ಮಾಡಿದ್ದ ಚಿತ್ರತಂಡ, ಈಗ ಹಾಡೊಂದನ್ನು ಬಿಡುಗಡೆ ಮಾಡಿದ್ದು ಇದು ಕೂಡ ಸಖತ್ ಸೌಂಡ್ ಮಾಡುತ್ತಿದೆ.

'ಮನಸೇ ಮಾಯ' ಎಂಬ ಹಾಡನ್ನು ಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್ ಮಸಾಲ ಕಾಫಿ ಕಂಪೂಸ್ ಮಾಡಿದ್ದು, ಸೂರಜ್ ಸಂತೋಶ್ ಹಾಗೂ ವರುಣ್ ಸುನೀಲ್ ಧ್ವನಿಗೂಡಿಸಿದ್ದಾರೆ. ಕಿರಣ್ ಕಾವೇರಪ್ಪ ಸಾಹಿತ್ಯ ರಚಿಸಿದ್ದಾರೆ. ಕೇಳಲು ಇಂಪಾಗಿರುವ ಈ ಹಾಡು ಸದ್ಯ ಬೇಜಾನ್ ಸದ್ದು ಮಾಡುತ್ತಿದೆ. ಈ ಮೂಲಕ ಮಸಾಲ ಕಾಫಿ ತಂಡ ಸ್ಯಾಂಡಲ್​ವುಡ್​ಗೆ ಭರ್ಜರಿ ಆಗಿ ಎಂಟ್ರಿ ಕೊಟ್ಟಿದ್ದಾರೆ.Rashmi Gautham: ಕಣ್ಣೋಟದಿಂದಲೇ ಪಡ್ಡೆಗಳ ನಿದ್ದೆ ಕದ್ದಿರುವ ರಶ್ಮಿ ಗೌತಮ್​..!

ಪೋಸ್ಟರ್ ನಷ್ಟೇ ಕಾವ್ಯಾತ್ಮಕವಾಗಿ 'ಮುಂದಿನ ನಿಲ್ದಾಣ'ದ ಹಾಡು ಹಾಗೂ ಟೀಸರ್ ಇದೆ. ಈ ಚಿತ್ರವನ್ನು ವಿನಯ್‌ ಭಾರಧ್ವಾಜ್‌ ನಿರ್ದೇಶನ ಮಾಡುತ್ತಿದ್ದು, ಪ್ರೀತಿಯ ಕಥೆಯನ್ನು ಹೊಂದಿರುವ ಯುವಮನಸ್ಸುಗಳ ಸುತ್ತ ಹೆಣೆದಿರುವ ಕಥೆ ಇದಾಗಿದೆ.

ವಿನಯ್ ಭಾರದ್ವಾಜ್ ಈಗಾಗಲೇ ಕಿರುಚಿತ್ರ ಮತ್ತು ಸಾಕ್ಷ್ಯ ಚಿತ್ರಗಳ ನಿರ್ಮಾಣದಿಂದಾಗಿ ಕನ್ನಡಿಗರಿಗೆ ಚಿರಪರಿಚಿತರು. ಇದೆ ಮೊದಲ ಬಾರಿಗೆ ಅವರು ಕನ್ನಡದಲ್ಲಿ ಪೂರ್ಣ ಪ್ರಮಾಣ ಚಿತ್ರವೊಂದು ನಿರ್ದೇಶನ ಮಾಡಿದ್ದಾರೆ.

ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ಮತ್ತು ದತ್ತಣ್ಣ ಪ್ರಮುಖವಾಗಿ 'ಮುಂದಿನ ನಿಲ್ದಾಣ' ಚಿತ್ರದ ತಾರಾಗಣದಲ್ಲಿದ್ದಾರೆ. ಅಕ್ಟೋಬರ್​ನಲ್ಲಿ ಚಿತ್ರ ಬಿಡಗಡೆಯಾಗುವ ಅಂದಾಜಿದೆ.
First published:September 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ