ಮಾರ್ವೆಲ್​ನ Shang Chi ಸಿನಿಮಾ ಭಾರತದಲ್ಲಿ ಎರಡು ದಿನಕ್ಕೆ ಗಳಿಸಿದ್ದು ಎಷ್ಟು ಗೊತ್ತೇ..?

ಭಾರತದಲ್ಲಿ ಹಾಲಿವುಡ್ ಸಿನಿಮಾಗಳಿಗೆ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ಈ ಕಾರಣದಿಂದಾಗಿಯೇ ಇಂಗ್ಲಿಷ್​ ಸಿನಿಮಾಗಳಿಗೆ ಇರುವ ಮಾರುಕಟ್ಟೆಯಲ್ಲಿ ಭಾರತವೂ ಒಂದಾಗಿದೆ. ಶುಕ್ರವಾರ ತೆರೆ ಕಂಡ ಶಾಂಗ್ ಚಿ ಸಿನಿಮಾದ ಕಲೆಕ್ಷನ್​ನಲ್ಲಿ​​  ಶನಿವಾರ ಕೊಂಚ ಏರಿಕೆ ಕಂಡಿರುವುದು ಗಮನಿಸಬೇಕಾದ ಅಂಶವಾಗಿದೆ.

ಮಾರ್ವೆಲ್​ನ ಶಾಂಗ್ ಚಿ ಸಿನಿಮಾದ ಪೋಸ್ಟರ್​

ಮಾರ್ವೆಲ್​ನ ಶಾಂಗ್ ಚಿ ಸಿನಿಮಾದ ಪೋಸ್ಟರ್​

  • Share this:
ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯಿಂದ ಭಾರತದ ಚಿತ್ರಮಂದಿರಗಳಿಗೆ ತುಂಬಾ ದಿನಗಳವರೆಗೆ ಬೀಗ ಹಾಕಲಾಗಿತ್ತು. ಸಾಕಷ್ಟು ಚಿತ್ರತಂಡಗಳು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಕಾದು ಕುಳಿತಿದ್ದು ಎಲ್ಲರಿಗೂ ತಿಳಿದ ವಿಷಯ. ಕೋವಿಡ್-19 ವೈರಸ್ ಹಾವಳಿ ಈಗ ತಕ್ಕ ಮಟ್ಟಿಗೆ ನಿಯಂತ್ರಣದಲ್ಲಿದ್ದು, ವೈರಸ್‌ಗೆ ಸಂಬಂಧಿಸಿದಂತೆ ಮುಂಜಾಗ್ರತೆ ಕ್ರಮಗಳೊಂದಿಗೆ ಮತ್ತು ಕೆಲವು ನಿರ್ಬಂಧಗಳೊಂದಿಗೆ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನು ತೆರೆಯಲಾಗಿದೆ. ಕೊರೋನಾ ಎರಡನೇ ಅಲೆ ನಂತರ  ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಹಾಲಿವುಡ್ ಮಾರ್ವಲ್ ಚಿತ್ರ ಎಂದರೆ ಅದು ‘ಶಾಂಗ್-ಚಿ  ಆ್ಯಂಡ್​ ದ ಲೆಜೆಂಡ್ ಆಫ್ ದ ಟೆನ್ ರಿಂಗ್ಸ್’.

ಅವೆಂಜರ್ಸ್​: ಎಂಡ್​ ಗೇಮ್​ ನಂತರ ಮಾರ್ವೆಲ್​ ನಿರ್ಮಾಣದ ಬ್ಲ್ಯಾಕ್​ ವಿಡೋ ಭಾರತದಲ್ಲಿ ಸಿನಿಮಾ ಮಂದಿರಗಳಲ್ಲಿ ತೆರೆ ಕಾಣಲಿಲ್ಲ. ಕಾರಣ ಕೊರೋನಾ 2ನೇ ಅಲೆಯಿಂದಾಗಿ ಇದು ವಿಶ್ವದ ಕೆಲವೇ ಭಾಗಗಳಲ್ಲಿ ಮಾತ್ರ ರಿಲೀಸ್ ಆಗಿತ್ತು. ಈಗಾಗಲೇ ಈ ಸಿನಿಮಾ ಒಟಿಟಿ ಮೂಲಕ ಭಾರತದಲ್ಲಿ ನೋಡಲು ಲಭ್ಯವಿದೆ. ಹೀಗಿರುವಾಗಲೇ ಮಾರ್ವೆಲ್​ ಅಭಿಮಾನಿಗಳಿಗೆ ಕಳೆದ ಶುಕ್ರವಾರ ಶಾಂಗ್​ ಚಿ  ಆ್ಯಂಡ್​ ದ ಲೆಜೆಂಡ್ ಆಫ್ ದ ಟೆನ್ ರಿಂಗ್ಸ್ ತೆರೆ ಕಂಡಿತು.

Shang-Chi and the Legend of the Ten Rings, Shang-Chi film, Hollywood film, Indian theatres, Box office collection, ಶಾಂಗ್-ಚಿ, ಶಾಂಗ್-ಚಿ ಮತ್ತು ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್, ಹಾಲಿವುಡ್ ಚಿತ್ರ, ಗಲ್ಲಾಪೆಟ್ಟಿಗೆ, ಸಿನೆಮಾ ಗಳಿಕೆ, ಚಿತ್ರಮಂದಿರ ಗಳಿಕೆ, Marvels Shang-Chi and the Legend of the Ten Rings day 2 box office collection ae
ಮಾರ್ವೆಲ್​ನ ಶಾಂಗ್ ಚಿ ಸಿನಿಮಾ


ಭಾರತದಲ್ಲಿ ಹಾಲಿವುಡ್ ಸಿನಿಮಾಗಳಿಗೆ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ಈ ಕಾರಣದಿಂದಾಗಿಯೇ ಇಂಗ್ಲಿಷ್​ ಸಿನಿಮಾಗಳಿಗೆ ಇರುವ ಮಾರುಕಟ್ಟೆಯಲ್ಲಿ ಭಾರತವೂ ಒಂದಾಗಿದೆ. ಶುಕ್ರವಾರ ತೆರೆ ಕಂಡ ಶಾಂಗ್ ಚಿ ಸಿನಿಮಾದ ಕಲೆಕ್ಷನ್​ನಲ್ಲಿ​​  ಶನಿವಾರ ಕೊಂಚ ಏರಿಕೆ ಕಂಡಿರುವುದು ಗಮನಿಸಬೇಕಾದ ಅಂಶವಾಗಿದೆ.

ಖ್ಯಾತ ಸಿನಿಮಾ ವ್ಯವಹಾರಗಳ ವಿಶ್ಲೇಷಕ ತರನ್​ ಆದರ್ಶ್ ಅವರು ಶಾಂಗ್ ಚಿ ಚಿತ್ರ  ಬಿಡುಗಡೆಯಾದ ಎರಡನೆಯ ದಿನವಾದ ಶನಿವಾರದಂದು ಬರೋಬ್ಬರಿ 3.33 ಕೋಟಿ ರೂಪಾಯಿ ಗಳಿಸಿದೆ ಎಂದು ತಮ್ಮ ಟ್ವಿಟರ್ ಖಾತೆಯ ಪುಟದಲ್ಲಿ ಪೋಸ್ಟ್​ ಮಾಡಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ಇನ್ನೂ ತನ್ನ ಗಳಿಕೆಯಲ್ಲಿ ಆ ವೇಗ ಪಡೆಯಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಗಳನ್ನು ನೆಟ್ಟಿಗರಿಗೆ ಪರಿಚಯಿಸಿದ ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ

“ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಈ ಚಿತ್ರ ತನ್ನ ಪ್ರಾಬಲ್ಯ ಮುಂದುವರೆಸಿದೆ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ಈ ಚಿತ್ರ ಇನ್ನೂ ತನ್ನ ಗಳಿಕೆಯ ವೇಗವನ್ನು ಹೆಚ್ಚಿಸಿಕೊಳ್ಳಬೇಕಿದೆ. ಶುಕ್ರವಾರದಂದು ಸುಮಾರು 2.97 ಕೋಟಿ ಮತ್ತು ಶನಿವಾರದಂದು ಬರೋಬ್ಬರಿ 3.33 ಕೋಟಿ ಕಲೆಕ್ಷನ್​ ಮಾಡಿ, ಒಟ್ಟು 6.30 ಕೋಟಿ ರೂಪಾಯಿಗಳನ್ನು ಗಳಿಸಿದೆ" ಎಂದು ತರನ್ ಆದರ್ಶ್ ಅವರು ಟ್ವೀಟ್ ಮಾಡಿದ್ದಾರೆ.

ಬೆಲ್​ ಬಾಟಮ್​ ನಂತರ ಭಾರತದಲ್ಲಿ ತೆರೆಕಂಡ ದೊಡ್ಡ ಸಿನಿಮಾ 

ಈ ಚಿತ್ರದಲ್ಲಿ ಸಿಮು ಲಿಯು, ಅಕ್ವಾಫಿನಾ, ಟೋನಿ ಲಿಯುಂಗ್, ಮಿಚ್ಚೆಲ್ ಯೋಹ್, ಫಲಾ ಚೆನ್, ಮೆಂಗೀರ್ ಜಾಂಗ್, ಫ್ಲೋರಿಯನ್ ಮತ್ತು ರೋನಿ ಚಿಯೆಂಗ್ ನಟಿಸಿದ್ದಾರೆ. ಈ ಚಿತ್ರವನ್ನು 'ಬ್ಲ್ಯಾಕ್ ಪ್ಯಾಂಥರ್’ ನಂತರ ಮಾರ್ವೆಲ್  ಅತ್ಯುತ್ತಮ ಚಿತ್ರ ಎಂದು ಸುದ್ದಿ ಮಾಧ್ಯಮವೊಂದು ತನ್ನ ಚಿತ್ರ ವಿಮರ್ಶೆಯಲ್ಲಿ ಹೇಳಿದೆ.

‘ಶಾಂಗ್-ಚಿ ಆ್ಯಂಡ್​ ದ ಲೆಜೆಂಡ್ ಆಫ್ ದ ಟೆನ್ ರಿಂಗ್ಸ್’ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡನೇ ದೊಡ್ಡ ಚಿತ್ರವಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಬೆಲ್ ಬಾಟಮ್’ ಹಿಂದಿ ಚಲನಚಿತ್ರವು ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ದೊಡ್ಡ ಚಿತ್ರವಾಗಿತ್ತು.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲಿದ್ದಾರೆ ಬಾಲಿವುಡ್​ ನಟ ಗೋವಿಂದ

ಗಲ್ಲಾಪೆಟ್ಟಿಗೆ ಸಂಗ್ರಹದಲ್ಲಿ ಹೆಚ್ಚಳ ಕಂಡಿದ್ದು ಭಾರತೀಯ ಚಲನಚಿತ್ರೋದ್ಯಮಕ್ಕೆ ಸಕಾರಾತ್ಮಕ ಸಂಕೇತವಾಗಿದೆ. ಭಾರತದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು. ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಕೆಲವು ಚಿತ್ರಮಂದಿರಗಳು ತೆರೆಯಲ್ಪಟ್ಟರೂ, ಎರಡನೇ ಅಲೆ ದೇಶಕ್ಕೆ ಅಪ್ಪಳಿಸಿದ ನಂತರ ಮತ್ತೆ ಚಿತ್ರಮಂದಿರಗಳಿಗೆ ಬೀಗ ಹಾಕಲಾಗಿತ್ತು.

ಪ್ರಸ್ತುತ, ದೆಹಲಿ, ಎನ್ ಸಿಆರ್ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಕೆಲವು ನಿರ್ಬಂಧಗಳೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿವೆ. ಮಹಾರಾಷ್ಟ್ರ ಇನ್ನೂ ಚಿತ್ರಮಂದಿರಗಳನ್ನು ಪುನಾರಂಭಿಸುವ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.
Published by:Anitha E
First published: