Black Widow Teaser: ರೋಮಾಂಚಕ ಆ್ಯಕ್ಷನ್​ನೊಂದಿಗೆ ಬಿಡುಗಡೆಯಾಗಿದೆ ಮಾರ್ವೆಲ್​ ಸ್ಟುಡಿಯೋಸ್​ನ ಬ್ಲ್ಯಾಕ್​ ವಿಡೊ ಟೀಸರ್​..!

Black Widow: ಅವೆಂಜರ್ಸ್​: ಎಂಡ್​ಗೇಮ್​ ಸಿನಿಮಾದಲ್ಲಿ ನತಾಶಾ ಪಾತ್ರಕ್ಕೆ ಅರ್ಥಪೂರ್ಣವಾದ ಮುಕ್ತಾಯ ನೀಡಿದ ನಂತರ ಈಗ ಮಾರ್ವೆಲ್​ ಸ್ಟುಡಿಯೋಸ್​ ಈಗ ನಾತಾಶಾ ಪಾತ್ರವನ್ನು ಮತ್ತೆ ಪ್ರೇಕ್ಷಕರ ಮುಂದೆ ತರುತ್ತಿದೆ. ಅದೇ ಬ್ಲ್ಯಾಕ್​ ವಿಡೊ. ಈ ಬಹು ನಿರೀಕ್ಷಿತ ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ.

Anitha E | news18-kannada
Updated:December 3, 2019, 3:47 PM IST
Black Widow Teaser: ರೋಮಾಂಚಕ ಆ್ಯಕ್ಷನ್​ನೊಂದಿಗೆ ಬಿಡುಗಡೆಯಾಗಿದೆ ಮಾರ್ವೆಲ್​ ಸ್ಟುಡಿಯೋಸ್​ನ ಬ್ಲ್ಯಾಕ್​ ವಿಡೊ ಟೀಸರ್​..!
ಬ್ಲ್ಯಾಕ್​ ವಿಡೊ ಸಿನಿಮಾಲ್ಲಿ ಸ್ಕಾರ್ಲೆಟ್​ ಜೋಹಾನ್ಸನ್​
  • Share this:
ಮಾರ್ವೆಲ್​ ಸ್ಟುಡಿಯೋಸ್​ನ 'ಅವೆಂಜರ್ಸ್'​ ಸರಣಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ಕಾರ್ಲೆಟ್​ ಜೋಹಾನ್ಸನ್ ಸಿನಿ ಪ್ರಿಯರ ಹಾಟ್​ ಫೇವರಿಟ್​. ನತಾಶಾ ರೊಮನಾಫ್​ ಪಾತ್ರದಲ್ಲಿ ಸಾಹಸ ದೃಶ್ಯಗಳಲ್ಲಿ ಆ್ಯಕ್ಷನ್​ ಕ್ವೀನ್ ಆಗಿ ಹೊರ ಹೊಮ್ಮಿದ್ದ ರೊಮನಾಫ್​ ಪಾತ್ರಕ್ಕೆ​' ಅವೆಂಜರ್ಸ್​: ಎಂಡ್​ ಗೇಮ್' ಚಿತ್ರದಲ್ಲಿ​ ಅಂತ್ಯ ಕಾಣಿಸಲಾಗುತ್ತದೆ.

'ಅವೆಂಜರ್ಸ್​: ಎಂಡ್​ಗೇಮ್​' ಸಿನಿಮಾದಲ್ಲಿ ನತಾಶಾ ಪಾತ್ರಕ್ಕೆ ಅರ್ಥಪೂರ್ಣವಾದ ಮುಕ್ತಾಯ ನೀಡಿದ ನಂತರ ಈಗ ಮಾರ್ವೆಲ್​ ಸ್ಟುಡಿಯೋಸ್​ ಈಗ ನಾತಾಶಾ ಪಾತ್ರವನ್ನು ಮತ್ತೆ ಪ್ರೇಕ್ಷಕರ ಮುಂದೆ ತರುತ್ತಿದೆ. ಅದೇ 'ಬ್ಲ್ಯಾಕ್​ ವಿಡೊ'. ಈ ಬಹು ನಿರೀಕ್ಷಿತ ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ.



ಅವೆಂಜರ್ಸ್​ನಲ್ಲಿ ನತಾಶಾ ತನ್ನ ಕುಟುಂಬದಿಂದ ದೂರಾಗಿ ಯಾರೂ ಇಲ್ಲದೆ ಅವೆಂಜರ್ಸ್​ ಕುಟುಂಬವನ್ನೇ ತನ್ನ ಬಂಧು ಬಾಂಧವರು ಎಂದು ತಿಳಿದು ಜೀವಿಸುತ್ತಿರುತ್ತಾಳೆ. ಆದರೆ ನತಾಶಾ ಕುಟುಂಬದ ಬಗ್ಗೆ ಎಲ್ಲಿಯೂ ಯಾವ ಮಾಹಿತಿಯೂ ಇರುವುದಿಲ್ಲ.

 



ಈ ಟೀಸರ್​ ನೋಡಿದರೆ, ಇದು 'ಅವೆಂಜರ್ಸ್​: ಎಂಡ್​ ಗೇಮ್​'ಗೂ ಮೊದಲ ಕತೆ ಇರುವ ಸಿನಿಮಾ ಎಂದು ತಿಳಿಯುತ್ತದೆ. ಆದರೆ ಈ ಕತೆಯ ಟೈಮ್​ಲೈನ್​ ಮಾತ್ರ ಇನ್ನೂ ತಿಳಿಯುತ್ತಿಲ್ಲ. ಇದು ಅವೆಂಜರ್ಸ್​ ಸರಣಿಯಲ್ಲಿ ಯಾವ ಸಿನಿಮಾದ ನಂತರ ಅಥವಾ ಮೊದಲು ಬರುತ್ತದೆ ಎಂದು ನಿಖರವಾಗಿ ಹೇಳಲಾಗುತ್ತಿಲ್ಲ.

ಇದನ್ನೂ ಓದಿ: Nitya Menen: ಮತ್ತೊಮ್ಮೆ ಕನ್ನಡದ ಹಾಡು ಹಾಡಿದ ನಟಿ ನಿತ್ಯಾ ಮೆನನ್: ಹಾಡಿನ ವಿಡಿಯೋ ವೈರಲ್​​..!

ಒಟ್ಟಾರೆ ಆ್ಯಕ್ಷನ್​ ಕ್ವೀನ್​ ನತಾಶಾ ತಮ್ಮ ಸಹೋದರಿ, ಅಪ್ಪ ಹಾಗೂ ಅಮ್ಮಮನನ್ನು ಸೇರುವ ಸಿನಿಮಾವೇ ಈ 'ಬ್ಲ್ಯಾಕ್​ ವಿಡೊ'. ಇದರಲ್ಲೂ ರೋಮಾಂಚನಕಾರಿಯಾದ ಆ್ಯಕ್ಷನ್​ ಸೀಕ್ವೆನ್ಸ್​ಗಳಿದ್ದು, ಆ್ಯಕ್ಷನ್​ ಸಿನಿಮಾ ಪ್ರಿಯರಿಗೆ ರಸದೌಣತಣ ಬಡಿಸಲಿದೆ ಅನ್ನೋದು ತಿಳಿಯುತ್ತದೆ.

ಮಾರ್ವೆಲ್​ ಸ್ಟುಡಿಯೋ ಮಾಡುವ ಸಿನಿಮಾಗಳ ಕಟ್ಟಾ ಅಭಿಮಾನಿಗಳಿಗೆ ಈ ಸಿನಿಮಾದ ಬಿಡುಗಡೆ ನಿಜಕ್ಕೂ ಹಬ್ಬವಾಗಲಿದೆ. ಕೇಟ್ ಶಾರ್ಟ್​ಲ್ಯಾಂಡ್​ ನಿರ್ದೇಶನದ 'ಬ್ಲ್ಯಾಕ್​ ವಿಡೊ' ಮುಂದಿನ ವರ್ಷ ಅಂದರೆ 2020ರ ಮೇ 1ಕ್ಕೆ  ಚಿತ್ರಮಂದಿರಕ್ಕೆ ಲಗ್ಗೆ ಇಡಲಿದ್ದಾಳೆ.

Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!

First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...