ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja Movie) ಅಭಿನಯದ ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಸಂಭ್ರಮ ಹೇಗಿತ್ತು? ಅಂದು ಅದಕ್ಕೆ ಸಾಕ್ಷಿಯಾದವರು ಹೇಗಿತ್ತು ಅಂತ ಹೇಳಬಹುದು. ಆದರೆ ಥಿಯೇಟರ್ಗೆ ಹೋಗದೇ ಇರೋರಿಗೆ (Martin Movie Teaser) ಮಾರ್ಟಿನ್ ಟೀಸರ್ ರಿಲೀಸ್ ಹೇಗಿತ್ತು ಅಂತ ತಿಳಿಸೋಕೆ ಮಾರ್ಟಿನ್ ಡೈರೆಕ್ಟರ್ ಎ. ಪಿ. ಅರ್ಜುನ್ ಒಂದು ವಿಡಿಯೋ (Martin Teaser Released) ಮಾಡಿದ್ದಾರೆ. ಈ ವಿಡಿಯೋದಲ್ಲಿ ಇಡೀ ಸಂಭ್ರಮದ ಚಿತ್ರಣ ಇದೆ. ಫೆಬ್ರವರಿ-23 ರಂದು ಬೆಂಗಳೂರು ವೀರೇಶ್ ಥಿಯೇಟರ್ನಲ್ಲಿ ದೊಡ್ಡ (Martin Teaser Release Celebration) ಸಡಗರವೇ ಮನೆ ಮಾಡಿತ್ತು. ಅದರ ಝಲಕ್ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.
ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಸಂಭ್ರಮ ಭರ್ಜರಿಯಾಗಿಯೆ ಇತ್ತು. ಈ ದಿನ ಥಿಯೇಟರ್ ಸುತ್ತ-ಮುತ್ತ ಮಾರ್ಟಿನ್ ವಿಐಪಿಗಳದ್ದೇ ಕಾರುಬಾರು ಇತ್ತು. ಇಡೀ ದಿನ ಸಿನಿಮಾ ಥಿಯೇಟರ್ ಆಸು-ಪಾಸು ಮಾರ್ಟಿನ್ ಟೀಸರ್ ಸಡಗರ ಮನೆ ಮಾಡಿತ್ತು.
ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಸಂಭ್ರಮದ ಚಿತ್ರಣ
ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿ ಫೆಬ್ರವರಿ-23 ರಂದು ಎರಡು ಶೋ ಟೀಸರ್ ಪ್ರದರ್ಶನ ಇತ್ತು. ಮಧ್ಯಾಹ್ನ 1 ಗಂಟೆ ಮತ್ತು 2 ಗಂಟೆ ಶೋ ಹೀಗೆ ಎರಡೂ ಶೋದ ಟಿಕೆಟ್ಸ್ ಸೋಲ್ಡ್ ಜೌಟ್ ಆಗಿದ್ದವು.
ಸುಮಾರು 927 ಸೀಟ್ಗಳ ವೀರೇಶ್ ಥಿಯೆಟರ್ನ ಎರಡು ಶೋಗಳು ಫುಲ್ ಆಗಿದ್ದವು. ಅಷ್ಟೊಂದು ಅಭಿಮಾನಿಗಳು, ಸಿನಿ ಪ್ರೇಮಿಗಳು ಅಂದು ಅಲ್ಲಿ ಸೇರಿದ್ದರು.
ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ನ್ನ ಅಷ್ಟೇ ಎಂಜಾಯ್ ಮಾಡಿದ್ದರು. ವಿಶೇಷವಾಗಿಯೇ ಬೆಳಗ್ಗೆಯಿಂದಲೇ ಟೀಸರ್ ರಿಲೀಸ್ಗೆ ಸಾಕಷ್ಟು ಅಭಿಮಾನಿಗಳು ತಯಾರಾಗಿದ್ದರು.
ಮಾರ್ಟಿನ್ ಮೆರವಣಿಗೆಯ ಅದ್ಭುತ ಕ್ಷಣದ ಚಿತ್ರಣ
ವೀರೇಶ್ ಥಿಯೇಟರ್ವರೆಗೂ ಮೆರವಣಿಗೆ ಕೂಡ ಇತ್ತು. ಚಿತ್ರದ ನಾಯಕ ನಟ ಧ್ರುವ ಸರ್ಜಾ ಮತ್ತು ಚಿತ್ರದ ನಾಯಕಿಯರಾದ ವೈಭವಿ ಶ್ಯಾಂಡಿಲ್ಯ-ಅನ್ವೇಷಿ ಜೈನ್ ಕೂಡ ಇದ್ದರು.
ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಆಗೋ ಮುನ್ನ ನಡೆದ ಬೃಹತ್ ಮೆರವಣಿಗೆಯಲ್ಲಿ ಎಲ್ಲವೂ ಜೋರಾಗಿಯೇ ಇತ್ತು. ಆಂಜನೇಯನ ವೇಷಧಾರಿಗಳು ಇಲ್ಲಿಗೆ ಬಂದು ಇಡೀ ಸಂಭ್ರಮಕ್ಕೆ ಮೆರಗು ತಂದಿದ್ದರು.
ಮಾರ್ಟಿನ್ ಸಂಭ್ರಮದಲ್ಲಿ ಏನೆಲ್ಲ ಇತ್ತು ಗೊತ್ತೇ?
ಮಾರ್ಟಿನ್ ಟೀಸರ್ ಸಂಭ್ರಮದಲ್ಲಿ ಇನ್ನೂ ಒಂದು ವಿಶೇಷ ಇತ್ತು. ಆ ವಿಶೇಷವೇನಂದ್ರೆ ಆಂಜನೇಯ ಇರೋ ಧ್ವಜ ಕೂಡ ಇಲ್ಲಿ ಮೆರವಣಿಗೆ ಉದ್ದಕ್ಕೂ ಹಾರಾಡಿತ್ತು.
ಇಷ್ಟು ಸಂಭ್ರಮದಲ್ಲಿಯೇ ಟೀಸರ್ ರಿಲೀಸ್ ಆಗಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಇದಕ್ಕೂ ಹೆಚ್ಚಾಗಿ ಚಿತ್ರದ ಟೀಸರ್ಗೆ 74 ಮಿಲಿಯನ್ ವೀವ್ಸ್ ಕೂಡ ಬಂದಿದೆ.
ಮಿಲಿಯನ್ ಗಟ್ಟಲೆ ವೀವರ್ಸ್ ಪಡೆದ ಮಾರ್ಟಿನ್
ಮಿಲಿಯನ್ ಗಟ್ಟಲೆ ವೀವ್ಸ್ ಪಡೆದ ಮಾರ್ಟಿನ್ ರಿಲೀಸ್ ಡೇಟ್ ಇನ್ನು ಅನೌನ್ಸ್ ಆಗಿಲ್ಲ. ವಿಶೇಷವಾಗಿ ಈಗ ಹಿಂದಿ ಟೀಸರ್ ಒಂದೇ ರಿಲೀಸ್ ಆಗಿದೆ. ಬಹು ಭಾಷೆಯಲ್ಲಿ ಮಾರ್ಟಿನ್ ಚಿತ್ರದ ರಿಲೀಸ್ ಆಗುತ್ತಿದೆ.
ಸದ್ಯಕ್ಕೆ ಮಾರ್ಟಿನ್ ಹಿಂದಿ ಟೀಸರ್ ಹೊರ ಬಿದ್ದು ಹಂಗಾಮ ಮಾಡುತ್ತಿದೆ ಅಂತಲೇ ಹೇಳಬಹುದು. ಈ ಮೂಲಕ ಮಾರ್ಟಿನ್ ಚಿತ್ರ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಇನ್ನು ಚಿತ್ರದ ಟ್ರೈಲರ್ ಬಗ್ಗೆ ಕೂಡ ಭಾರಿ ಕುತೂಹಲ ಇದೆ.
ಕೇವಲ ಒಂದು ಟೀಸರ್ ಇಷ್ಟೊಂದು ಧಮಾಕಾ ಮಾಡುತ್ತಿದೆ. ಇನ್ನು ಟ್ರೈಲರ್ ಹೊರ ಬಿದ್ದರೆ ಏನೆಲ್ಲ ಕ್ರೇಜ್ ಹುಟ್ಟಿಕೊಳ್ಳಬಹುದು ಅನ್ನೋದು ಕೂಡ ವಿಐಪಿಗಳ ಕುತೂಹಲ ಆಗಿದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ