ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್ (Martin) ಟೀಸರ್ (Teaser) ನಿನ್ನೆ (ಫೆ.23) ಬಿಡುಗಡೆಯಾಗಿದೆ. ಮಾರ್ಟಿನ್ ಟೀಸರ್ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಟೀಸರ್ಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ನೋಡಿದ ಸಿನಿಮಾ ತಂಡ ಫುಲ್ ಖುಷ್ ಆಗಿದೆ. ಇದೇ ಮೊದಲ ಬಾರಿಗೆ ಟೀಸರ್ ಅನ್ನು ಥಿಯೇಟರ್ನಲ್ಲಿ (Theater) ಟಿಕೆಟ್ ಖರೀದಿಸಿ ನೋಡುವ ವ್ಯವಸ್ಥೆ ಮಾಡಿದ್ದ ಚಿತ್ರತಂಡ ಅದ್ರಿಂದ ಬಂದ ಹಣವನ್ನು ಒಳ್ಳೆಯ ರೀತಿಯಲ್ಲಿ ಬಳಸಲು ಮುಂದಾಗಿದೆ. ಟೀಸರ್ನಿಂದ ಬಂದ ಹಣವನ್ನು ಗೋಶಾಲೆಗೆ ನೀಡುವುದಾಗಿ ನಿರ್ದೇಶಕ ಎ.ಪಿ ಅರ್ಜುನ್ (Director A.P Arjun) ಹೇಳಿದ್ದಾರೆ. ಯೂಟ್ಯೂಬ್ನಲ್ಲಿ ಮಾರ್ಟಿನ್ ಸಿನಿಮಾ ಈವರೆಗೆ 35 ಮಿಲಿಯನ್ ವೀಕ್ಷಣೆ ಕಂಡಿದೆ.
ಬಾಲಿವುಡ್ನಲ್ಲಿ ಮಾರ್ಟಿನ್ ಘರ್ಜಿಸೋದು ಫಿಕ್ಸ್
ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ರೆಡಿಯಾಗಿದ್ದು, ಟೀಸರ್ ನೋಡಿದ ನೆಟ್ಟಿಗರು ಮತ್ತೊಂದು ಕೆಜಿಎಫ್ ಎಂದು ಕಮೆಂಟ್ ಮಾಡಿದ್ದಾರೆ. ಮಾರ್ಟಿನ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡೋದು ಪಕ್ಕಾ ಆಗಿದೆ. ಟೀಸರ್ ನೋಡಿದ ಬೇರೆ ಬೇರೆ ಭಾಷೆಗಳ ನಟರು ಸಿನಿಮಾ ವಿಶ್ ಮಾಡಿದ್ದು, ಕೆಜಿಎಫ್ ಹಾಗೂ ಕಾಂತಾರ ಸಿನಿಮಾದಂತೆ ಮಾರ್ಟಿನ್ ಕೂಡ ಬಾಲಿವುಡ್ನಲ್ಲಿ ಭರ್ಜರಿ ಸದ್ದು ಮಾಡೋದು ಗ್ಯಾರೆಂಟಿ ಎನ್ನಲಾಗ್ತಿದೆ.
ಟೀಸರ್ ಸೃಷ್ಟಿಸಿದೆ ಸಖತ್ ಕ್ರೇಜ್
ಮಾರ್ಟಿನ್ ಆ್ಯಕ್ಷನ್ ಮೂವಿ ಆಗಿದ್ದು, ಟೀಸರ್ ನಲ್ಲಿ ಧ್ರುವ ಸರ್ಜಾ ಲುಕ್ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ. ಆ ನಾಯಕನ ಸುತ್ತ ಹೆಣೆದಿರುವ ಕಥೆ ಮಾರ್ಟಿನ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಟೀಸರ್ ಇದೀಗ ಭಾರತ ಹಾಗೂ ಪಾಕಿಸ್ತಾನ ಸುತ್ತ ಕಥೆ ಮೂಡಿದೆ ಅನ್ನೋ ಸಣ್ಣ ಝಲಕ್ ತೋರಿಸಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಮಿಲಿಯನ್ ಗಟ್ಟಲೆ ವೀವ್ಸ್ ಪಡೆದ ಮಾರ್ಟಿನ್ ಟೀಸರ್
ತುಂಬಾನೇ ಥ್ರಿಲ್ಲಿಂಗ್ ಆಗಿರೋ ಮಾರ್ಟಿನ್ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮಾ ಮಾಡ್ತಾನೇ ಇದೆ. ಇದರ ಬೆನ್ನಲ್ಲಿಯೇ ರಿಲೀಸ್ ಆದ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನಲ್ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದೆ.
ರಿಲೀಸ್ ಒಂದು ದಿನದಲ್ಲಿ 35 ಮಿಲಿಯನ್ ವೀವ್ಸ್ ಕಂಡಿದೆ. 35 ಮಿಲಿಯನ್ ವೀವ್ಸ್ ಈ ಒಂದೇ ಒಂದು ಟೀಸರ್ಗೆ ಬಂದಿದೆ. ಅಲ್ಲಿಗೆ ಇಡೀ ಚಿತ್ರದ ಈ ಟೀಸರ್ ಮೋಡಿ ಎಷ್ಟಿದೆ ಅಂತಲೇ ಅಂದಾಜು ಮಾಡಬಹುದು.
View this post on Instagram
ಸಾಮಾನ್ಯವಾಗಿ ಧ್ರುವ ಸರ್ಜಾ ಫ್ಯಾನ್ ಫಾಲೋಯಿಂಗ್ ದೊಟ್ಟಮಟ್ಟದಲ್ಲಿಯೇ ಇದೆ. ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಷನ್ ಪ್ರಿನ್ಸ್ ಫ್ಯಾನ್ಸ್ ತುಂಬಾನೇ ಆ್ಯಕ್ಟಿವ್ ಆಗಿದ್ದಾರೆ. ಇವರು ಆಯಾ ಪೇಜ್ಗಳಲ್ಲೋ, ವಾಟ್ಸ್ ಅಪ್ ಗ್ರೂಪ್ಗಳಲ್ಲೋ ಶೇರ್ ಮಾಡಬಹುದು? ಇಲ್ಲವೇ ಟ್ವಿಟರ್ ಪೇಜ್ ಅಲ್ಲಿ ಶೇರ್ ಮಾಡಿ ಹಬ್ಬ ಮಾಡಬಹುದು ಅಂತಲೇ ತಿಳಿದುಕೊಳ್ಳಲಾಗಿತ್ತು.
ಇದನ್ನೂ ಓದಿ: Shruti Haasan: ಸಲಾರ್ಗೆ ಗುಡ್ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?
ಆದರೆ ಮಾರ್ಟಿನ್ ಚಿತ್ರದ ಟೀಸರ್ ವಿಷಯದಲ್ಲಿ ಅದರ ಅಗತ್ಯ ಬೀಳಲೇ ಇಲ್ಲ ನೋಡಿ, ಯಾಕೆಂದ್ರೆ ಮಾರ್ಟಿನ್ ಸಿನಿಮಾದ ಟೀಸರ್ ಎಲ್ಲರನ್ನೂ ಸೆಳೆದು ಬಿಡಬಲ್ಲ ಶಕ್ತಿಯನ್ನ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ