HOME » NEWS » Entertainment » MARI TIGER VINOD PRABHAKAR ACTING RAVI GOWDA DIRECTION SHADOW MOVIE REMAKE IN HINDI ASTV VB

Shadow Movie: ನನ್ನ ನೆರಳು ಕಳೆದು ಹೋಗಿದೆ, ಹುಡುಕಿಕೊಡಿ ಎಂದು ಬಾಲಿವುಡ್​ಗೆ ಹಾರಿದ ಪೂರಿ‌ ಜಗನ್ನಾಥ್ ಶಿಷ್ಯ

ವಿನೋದ್ ಪ್ರಭಾಕರ್ ಚಿತ್ರಗಳಿಗೆ ಹಿಂದಿಯಲ್ಲಿಯೂ ಒಳ್ಳೆಯ ಮಾರುಕಟ್ಟೆ ಇದೆ. ಮರಿ ಟೈಗರ್ ಚಿತ್ರಗಳು ಅಂದ್ರೆ ಪಕ್ಕಾ ಕಮರ್ಷಿಯಲ್ ಸಿನಿಮಾಗಳು. ಮಾಸ್ ಆಡಿಯೆನ್ಸ್​ಗೆ ಬೇಕಾದ ಎಲ್ಲಾ ಅಂಶಗಳು ಮಿಳಿತವಾಗಿರುತ್ತವೆ.

news18-kannada
Updated:January 3, 2021, 12:12 PM IST
Shadow Movie: ನನ್ನ ನೆರಳು ಕಳೆದು ಹೋಗಿದೆ, ಹುಡುಕಿಕೊಡಿ ಎಂದು ಬಾಲಿವುಡ್​ಗೆ ಹಾರಿದ ಪೂರಿ‌ ಜಗನ್ನಾಥ್ ಶಿಷ್ಯ
Shadow
  • Share this:
ಕನ್ನಡದ ಸಿನಿಮಾಗಳು ಈಗೀಗ ಹೊಸ ತನವನ್ನ ಹೊತ್ತು ಬರುತ್ತಿವೆ. ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗುತ್ತಿವೆ. ಅದತಂತೆ ಇದೇ ಸಾಲಿಗೆ ಸೇರಲು ನವನಾವಿನ್ಯತೆಯ ಹೂರಣ ಬಡಿಸೋಕೆ ಮತ್ತೊಂದು ಸಿನಿಮಾ ಬರುತ್ತಿದೆ. ಅದುವೇ ವಿನೋದ್ ಪ್ರಭಾಕರ್ ನಟನೆಯ ಶ್ಯಾಡೋ. ರವಿಗೌಡ ನಿರ್ದೇಶನದ ‘ಶ್ಯಾಡೋ’ ಸಿನಿಮಾ ಟ್ರೈಲರ್ ಮೂಲಕವೇ ಸೌಂಡ್ ಮಾಡುತ್ತಿದೆ‌. ನನ್ನ ನೆರಳು ಕಳೆದು ಹೋಗಿದೆ ಹುಡುಕಿಕೊಡಿ ಎಂಬ ವಿನೋದ್ ಡೈಲಾಗ್ ಕಂಡು ಸಿನಿರಸಿಕರು ಅಚ್ಚರಿಗೊಂಡಿದ್ದಾರೆ. ಅರೇ! ನೆರಳು ಕಳೆದೋಗೋದಾ? ಅದೆಂಗೆ ಕಳೆದೋಗುತ್ತೆ? ಅಷ್ಟಕ್ಕೂ ಏನ್ ಕಥೆ ಇದು? ಯಾವ ರೀತಿಯಾ ಸಿನಿಮಾ ಇದು ಅಂತ ಕುತೂಹಲಗೊಂಡಿದ್ದಾರೆ. ಆ ಮಟ್ಟಿಗೆ ಶ್ಯಾಡೋ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆಯನ್ನ ಹುಟ್ಟುಹಾಕಿದೆ.

ಅಂದಹಾಗೆ ರವಿ ಗೌಡ ಎಂಬುವವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರಿಗೆ ಮೊದಲ ಸಿನಿಮಾ. ಆದರೆ, ತೆಲುಗಿನ ಟಾಪ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೊತೆ ಕೆಲಸ ಮಾಡಿರುವ ಅನುಭವ ಬೆನ್ನಿಗಿದೆ. ನಿಜಕ್ಕೂ ಇವ ಪೂರಿ ಜಗನ್ನಾಥ್ ಶಿಷ್ಯ ಅನ್ನೋದನ್ನ ಟ್ರೈಲರ್ ಕೂಗಿ ಕೂಗಿ ಹೇಳುತ್ತಿದೆ.

Shadow
ರವಿ ಗೌಡ.


ಬ್ಲಾಕ್​ಬಸ್ಟರ್ ಚಂದ್ರ ಚಕೋರಿ ಚಿತ್ರಕ್ಕೆ ಹೀರೋ ಆಗಬೇಕಾಗಿದ್ದು ಶ್ರೀಮುರಳಿ ಅಲ್ವಂತೆ: ಮತ್ಯಾರು?

ವಿನೋದ್ ಪ್ರಭಾಕರ್ ಸಿನಿಮಾ ಅಂದ್ರೆ? ಪಕ್ಕಾ ಪೈಸಾ ವಸೂಲ್ ಅನ್ನೋದು ಈಗಾಗಲೇ ಬ್ರಾಂಡ್ ಆಗಿದೆ. ಹಾಗೆ ಅವರ ಸಿನಿಮಾಗಳು ಅಂದರೆ? ಸ್ಟಂಟ್ ಹೈಲೈಟ್ ಆಗಲೇಬೇಕು. ಶ್ಯಾಡೋ ಸಿನಿಮಾ ಭರಪೂರ ಮನರಂಜನೆಯ ಜೊತೆ‌ ಸಖತ್ ಆಕ್ಷನ್ ಸೀಕ್ವೆನ್ಸ್ ಗಳನ್ನ ಸಹ ಹೊಂದಿದೆ. ಚಕ್ರವತಿ ಎಂಬುವವರು ಈ ಚಿತ್ರದ ನಿರ್ಮಾಣ ಜವಾಬ್ದಾರಿ ಹೊತ್ತಿದ್ದು ಕಥೆಗೆ ಬೇಕಾದ ರಿಚ್ ನೆಸ್ ಚಿತ್ರದಲ್ಲಿರೋದು ಟ್ರೈಲರ್ ನಲ್ಲಿಯೇ ಕಾಣಿಸುತ್ತದೆ.



ವಿನೋದ್ ಪ್ರಭಾಕರ್ ಚಿತ್ರಗಳಿಗೆ ಹಿಂದಿಯಲ್ಲಿಯೂ ಒಳ್ಳೆಯ ಮಾರುಕಟ್ಟೆ ಇದೆ. ಮರಿ ಟೈಗರ್ ಚಿತ್ರಗಳು ಅಂದ್ರೆ ಪಕ್ಕಾ ಕಮರ್ಷಿಯಲ್ ಸಿನಿಮಾಗಳು. ಮಾಸ್ ಆಡಿಯೆನ್ಸ್​ಗೆ ಬೇಕಾದ ಎಲ್ಲಾ ಅಂಶಗಳು ಮಿಳಿತವಾಗಿರುತ್ತವೆ. ಹೀಗಾಗಿ ನಾರ್ತ್ ಬ್ಲಾಕ್ ನಲ್ಲಿ ಚೆನ್ನಾಗಿ ಕ್ಲಿಕ್ ಆಗುತ್ತವೆ. ವಿನೋದ್ ಪ್ರಭಾಕರ್ ನಟನೆಯ ಯಾವುದೇ ಸಿನಿಮಾ ಇರಲಿ, ರಿಲೀಸ್​ಗೆ ಮುನ್ನವೇ ಡಬ್ಬಿಂಗ್ ರೈಟ್ಸ್ ಬಿಸಿ ಬಿಸಿ ದೋಸೆಯಂತೆ ಸೇಲಾಗುತ್ತವೆ.ಆದರೆ, ಇದೇ ಮೊದಲ ಬಾರಿಗೆ ಡಬ್ಬಿಂಗ್ ಅಲ್ಲ, ನೇರವಾಗಿ ರಿಮೇಕ್ ರೈಟ್ಸೇ ಸೇಲಾಗಿದೆ. ಅದಕ್ಕೆ ಕಾರಣವೇ ಕಥೆಯಲ್ಲಿರುವ ಹೊಸತನ ಹಾಗೂ ಕಥೆ ಯಾವುದೇ ಭಾಷೆಗೆ ಬೇಕಾದರೂ ಹೊಂದಿಕೆಯಾಗುವಂತಹ ಯೂನಿವರ್ಸಲ್ ಕಂಟೆಂಟ್ ಒಳಗೊಂಡಿರುವುದು. ಹೀಗಾಗಿ ಶ್ಯಾಡೋ ಸಿನಿಮಾ ಈಗ ಬಾಲಿವುಡ್ ನತ್ತ ಮುಖ ಮಾಡಿದೆ. ಹಿಂದಿಗೆ ರಿಮೇಕ್ ಆಗುತ್ತಿದೆ.

ಆತ ನನಗೆ ಮೋಸ ಮಾಡಿದ!; ಬ್ರೇಕ್​ಅಪ್​ ವಿಚಾರ ಬಹಿರಂಗ ಪಡಿಸಿ ಬೇಸರ ಹೊರ ಹಾಕಿದ ನಟಿ

ಶ್ಯಾಡೋ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವಂತಹ ರವಿಗೌಡ ಅವರೇ ಹಿಂದಿ ರಿಮೇಕ್​ಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವುದು ಹೈಲೈಟ್. ಒಟ್ಟಾರೆ ಬಿಡುಗಡೆಗೂ ಮುನ್ನವೇ ಶ್ಯಾಡೋ ಸಿನಿಮಾ ಸುದ್ದಿಯಲ್ಲಿದ್ದು, ಶೀಘ್ರದಲ್ಲೇ ಥಿಯೇಟರ್​ಗೆ ಬರೋ ಈ ಸಿನಿಮಾ ಯಾವ ರೀತಿ ಸೌಂಡ್ ಮಾಡಲಿದೆ ಕಾದು ನೋಡಬೇಕು.
Published by: Vinay Bhat
First published: January 3, 2021, 12:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories