ಚಂದನವನದಲ್ಲಿ ಯಶೋ ಮಾರ್ಗ: ಗಡಿ ದಾಟಲಿರುವ ದಚ್ಚು-ಕಿಚ್ಚ, ಶಿವಣ್ಣನ ಸಿನಿಮಾಗಳು..!

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆ.ಜಿ.ಎಫ್​ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡದ ದಿಗ್ಗಜ ನಟರಾದ ದರ್ಶನ್​, ಸುದೀಪ್​, ಶಿವರಾಜ್​ಕುಮಾರ್​, ಪುನೀತ್​ ಃಆಘೂ ರಕ್ಷಿತ್​ ಸಿನಿಮಾಗಳು ಈಗ ಬೇರೆ ಭಾಷೆಗಳಲ್ಲಿ ತೆರೆಕಾಣಲಿವೆಯಂತೆ. ಈ ಕುರಿತ ಮಾಹಿತಿ ಇಲ್ಲಿದೆ.

Anitha E | news18
Updated:November 12, 2018, 1:32 PM IST
ಚಂದನವನದಲ್ಲಿ ಯಶೋ ಮಾರ್ಗ: ಗಡಿ ದಾಟಲಿರುವ ದಚ್ಚು-ಕಿಚ್ಚ, ಶಿವಣ್ಣನ ಸಿನಿಮಾಗಳು..!
ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆ.ಜಿ.ಎಫ್​ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡದ ದಿಗ್ಗಜ ನಟರಾದ ದರ್ಶನ್​, ಸುದೀಪ್​, ಶಿವರಾಜ್​ಕುಮಾರ್​, ಪುನೀತ್​ ಃಆಘೂ ರಕ್ಷಿತ್​ ಸಿನಿಮಾಗಳು ಈಗ ಬೇರೆ ಭಾಷೆಗಳಲ್ಲಿ ತೆರೆಕಾಣಲಿವೆಯಂತೆ. ಈ ಕುರಿತ ಮಾಹಿತಿ ಇಲ್ಲಿದೆ.
  • News18
  • Last Updated: November 12, 2018, 1:32 PM IST
  • Share this:
ನ್ಯೂಸ್​ 18 ಕನ್ನಡ 

ಒಂದು ಕಾಲವಿತ್ತು, ಕನ್ನಡ ಸಿನಿಮಾಗಳು ಅಂದರೆ ರಾಜ್ಯದ ಒಳಗೆ ಮಾತ್ರ ಬಿಡುಗಡೆಯಾಗುತ್ತವೆ. ಪಕ್ಕದ ತಮಿಳುನಾಡು-ಆಂಧ್ರ ಸೇರಿದಂತೆ ಬೇರೆಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಇಲ್ಲ ಅನ್ನೋ ಮಾತಿತ್ತು. ಆದರೆ ಈಗ ಕಾಲ ಬದಲಾಗುತ್ತಿದೆ. ಕನ್ನಡ ಚಿತ್ರಗಳು ಸಾಲು ಸಾಲಾಗಿ ಗಡಿ ದಾಟಿ ಅಬ್ಬರಿಸಲು ಸಜ್ಜಾಗುತ್ತಿವೆ. ಇದಕ್ಕೆಲ್ಲ ನಾಂದಿ ಹಾಡಿದ ಕೀರ್ತಿ ಸದ್ಯ 'ಕೆ.ಜಿ.ಎಫ್' ಸಿನಿಮಾದ್ದು. ಈ ಕುರಿತ ಒಂದು ವರದಿ ಇಲ್ಲಿದೆ ಓದಿ...

ಕನ್ನಡ ಚಿತ್ರಗಳು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಆಗುವುದೇ ಅಪರೂಪವಾಗಿತ್ತು. ಒಂದುವೇಳೆ ರಿಲೀಸ್ ಆದರೂ ಸಹ ಪರಭಾಷೆ ನೆಲದಲ್ಲಿ ಅಲ್ಲೊಂದು ಇಲ್ಲೊಂದು ಪರದೆ ಸಿಕ್ಕರೆ, ಅದೇ ಹೆಚ್ಚು. ಆದರೆ ಈಗ ಎಲ್ಲವೂ ಬದಲಾಗಿದೆ. ಕನ್ನಡ ಚಿತ್ರಗಳ ಸೀಮೋಲ್ಲಂಘನ ಆಗುತ್ತಿದೆ. ಪಕ್ಕದ ತಮಿಳುನಾಡು-ಆಂಧ್ರ ಪ್ರದೇಶಗಳಲ್ಲೂ 300-400 ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರವೊಂದು ಬಿಡುಗಡೆಯಾಗಲಿದೆ.

ಹೌದು  'ಕೆ.ಜಿ.ಎಫ್' ಮೂಲಕ ಚಂದನವನದ ಪಥವೇ ಬದಲಾಗುತ್ತಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಸಾವಿರಾರು ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. 5 ಭಾಷೆಗಳಲ್ಲಿ ರಾರಾಜಿಸಲಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ 'ಕೆ.ಜಿ.ಎಫ್' ಟ್ರೈಲರ್ ಬೆಂಕಿ ಬಿರುಗಾಳಿ ಎಬ್ಬಿಸುತ್ತಿದೆ. ಕನ್ನಡ ಚಿತ್ರದ ಟ್ರೈಲರ್​ಗಿಂತ ತೆಲುಗು ಚಿತ್ರದ ಟ್ರೈಲರ್ ಟ್ರೆಂಡಿಂಗ್‍ನಲ್ಲಿದೆ. ಯೂಟ್ಯೂಬ್‍ನಲ್ಲಿ ಮೊದಲ ಸ್ಥಾನದಲ್ಲಿದೆ. ಈ ಮೂಲಕ ಕನ್ನಡದ 'ಕೆ.ಜಿ.ಎಫ್' ಯಾವ ಮಟ್ಟದಲ್ಲಿ ಕಮಾಲ್ ಮಾಡಲಿದೆ.? ಬಾಕ್ಸಾಫಿಸ್‍ನಲ್ಲಿ ಹೇಗೆ ಗಳಿಕೆ ಮಾಡಲಿದೆ ಎಂಬುದಕ್ಕೆ ಮುನ್ಸೂಚನೆ ಸಿಕ್ಕಾಗಿದೆ ಎನ್ನಬಹುದು.

ಇದನ್ನೂ ಓದಿ: ದೀಪಿಕಾ ಪಡುಕೋಣೆ-ರಣವೀರ್​ ಆರತಕ್ಷತೆ ಎಲ್ಲಿ ನಡೆಯುತ್ತಿದೆ ಹಾಗೂ ಅದರ ಚಿತ್ರಗಳಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ

ಕನ್ನಡ ಚಿತ್ರರಂಗದ ಮಟ್ಟಿಗೆ ರಾಕಿಂಗ್‍ಸ್ಟಾರ್ ಹೊಸ ಮಾರ್ಗವನ್ನೇ ತೋರಿಸಿಕೊಟ್ಟಿದ್ದಾರೆ. ನಮ್ಮದು ಚಿಕ್ಕ ಮಾರುಕಟ್ಟೆ ಅಂತ ಕೊರಗುತ್ತಾ ಕೂರೋದಲ್ಲ. ನಮ್ಮ ಚಿತ್ರಗಳನ್ನ ಬೇರೆ ಭಾಷೆಯವರಿಗೂ ತಲುಪಿಸಬಹುದು ಅನ್ನೋದನ್ನ ಸಾಬೀತು ಮಾಡಿದ್ದಾರೆ. ಯಶ್ ಅವರ ಈ ನಡೆ ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ಹುಮ್ಮಸ್ಸು ನೀಡಿದೆ. ಇದರ ಪರಿಣಾಮ ಇನ್ನು ಮುಂದೆ ದೊಡ್ಡ ಸ್ಟಾರ್​ಗಳ ಸಿನಿಮಾಗಳೆಲ್ಲ ಎರಡು-ಮೂರು ಭಾಷೆಗಳಲ್ಲಿ ಬಿಡುಗಡೆ ಆಗೋಕೆ ಸಜ್ಜಾಗುತ್ತಿವೆ.

ಐದು ಭಾಷೆಗಳಲ್ಲಿ ರಕ್ಷಿತ್​ ಶೆಟ್ಟಿಯ 'ಅವನೇ ಶ್ರೀಮನ್ನಾರಾಯಣ'ರಾಕಿಂಗ್‍ಸ್ಟಾರ್ ಯಶ್ ಹಾದಿಯಲ್ಲಿಯೇ ರಕ್ಷಿತ್ ಶೆಟ್ಟಿ ಕೂಡ ಸಾಗುತ್ತಿದ್ದಾರೆ. ಅದರಂತೆ ರಕ್ಷಿತ್ ನಟನೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ 'ಶ್ರೀಮನ್ನಾರಾಯಣ' ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾವನ್ನ ತುಂಬಾ ದೊಡ್ಡ ಮಟ್ಟದಲ್ಲಿ ತಲುಪಿಸಲು ಪಣ ತೊಟ್ಟಿದ್ದಾರೆ ರಕ್ಷಿತ್. ಅದಕ್ಕಾಗಿ ಸಾಕಷ್ಟು ಸಮಯವನ್ನ ತೆಗೆದುಕೊಳ್ಳುತ್ತಿದ್ದು, ಮುಂದಿನ ಮಾರ್ಚ್‍ನಲ್ಲಿ ವಿಶ್ವದಾದ್ಯಂತ ಅಬ್ಬರಿಸಲಿದ್ದಾನೆ 'ಶ್ರೀಮನ್ನಾರಾಯಣ'.

ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಶಿವಣ್ಣನ 'ರುಸ್ತುಂ'

ಇನ್ನು ಶಿವರಾಜ್‍ಕುಮಾರ್ ನಟನೆಯ 'ರುಸ್ತುಂ' ಸಹ ಸ್ಯಾಂಡಲ್‍ವುಡ್‍ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಶಿವರಾಜ್‍ಕುಮಾರ್ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಸಾಹಸ ನಿರ್ದೇಶಕ ರವಿವರ್ಮಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅದರಂತೆ ಈ ಸಿನಿಮಾ ಕನ್ನಡ ಅಲ್ಲದೆ, ತಮಿಳು-ತೆಲುಗು-ಹಿಂದಿಯಲ್ಲೂ ಸಹ ಬಿಡುಗಡೆಯಾಗಲಿದೆಯಂತೆ.

ಮೂರು-ನಾಲ್ಕು ಭಾಷೆಗಳಲ್ಲಿ ಬಿಡುಡೆಯಾಗಬಹುದು ಕಿಚ್ಚನ 'ಪೈಲ್ವಾನ್​'

ಕಿಚ್ಚ ಸುದೀಪ್ ನಟನೆಯಲ್ಲಿ 'ಪೈಲ್ವಾನ್' ಚಿತ್ರ ಬರುತ್ತಿರೋದು ಗೊತ್ತಿರುವ ವಿಷಯ. ಚಿತ್ರೀಕರಣದ ಹಂತದಲ್ಲಿಯೇ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಸುದೀಪ್ ಲುಕ್ಕು-ಗೆಟಪ್ಪು ಸಖತ್ ಟ್ರೆಂಡ್ ಆಗಿದೆ. ಭಾರೀ ವೆಚ್ಚದಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಯಾವ ತೆಲುಗು-ತಮಿಳಿಗೂ ಕಮ್ಮಿ ಇಲ್ಲದಂತೆ ಮೂಡಿ ಬರಲಿದೆಯಂತೆ. ಹೀಗಾಗಿ 'ಪೈಲ್ವಾನ್' ಚಿತ್ರವನ್ನ ಸಹ ಮೂರು-ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಹಾಗೆ ಸುದೀಪ್ ನಟನೆಯಲ್ಲಿ ರೆಡಿಯಾಗುತ್ತಿರುವ 'ಕೋಟಿಗೊಬ್ಬ-3' ಚಿತ್ರ ಸಹ ದೊಡ್ಡಮಟ್ಟದಲ್ಲೇ ಬಿಡುಗಡೆಯಾಗಲಿದೆ.

ಇದಿಷ್ಟೇ ಅಲ್ಲದೆ ಪುನೀತ್ ಅಭಿನಯದ 'ಸಾರ್ವಭೌಮ', ಇನ್ನಷ್ಟೇ ಚಿತ್ರೀಕರಣ ಶುರು ಮಾಡಬೇಕಿರೋ 'ಯುವರತ್ನ', ದರ್ಶನ್ ಅವರ 'ಯಜಮಾನ' ಚಿತ್ರಗಳು ಸಹ ಪರಭಾಷೆ ಚಿತ್ರಗಳಿಗೆ ಸ್ಪರ್ಧೆ ಕೊಡುವ ಮೂಲಕ ಪರಭಾಷೆ ನೆಲದಲ್ಲಿ ಅಬ್ಬರಿಸೋದು ಪಕ್ಕಾ ಆಗಿದೆ. . ಅಲ್ಲಿಗೆ ಯಶ್ ಆರಂಭಿಸಿರುವ ಟ್ರೆಂಡ್ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದೆ ಎನ್ನಬಹುದು. ಕನ್ನಡ ಚಿತ್ರಗಳು ಈಗ 50 ನೂರು ಕೋಟಿ ಲೆಕ್ಕದಲ್ಲಿ ವ್ಯವಹಾರ ಮಾಡುವ ಕಾಲ ಆರಂಭವಾದಂತಿದೆ.

  

 

 

 

 

 
First published:November 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading