ಬಾಲಿವುಡ್ (Bollywood) ನಟಿ ಸೋನಾಲಿ ಕುಲಕರ್ಣಿ (Sonali Kulkarni) ಅವರು ಇತ್ತೀಚೆಗೆ ಕೊಟ್ಟಿರುವ ಹೇಳಿಕೆ ಎಲ್ಲಾ ಕಡೆಗಳಲ್ಲಿ ವೈರಲ್ (Viral) ಆಗಿದೆ. ಕಾರ್ಯಕ್ರಮವೊಂದರಲ್ಲಿ (Event) ನಟಿ (Actress) ಭಾರತೀಯ ಮಹಿಳೆಯರು (Indian Women) ಲೇಝಿಯಾಗಿದ್ದಾರೆ (Lazy). ಅವರಿಗೆ ಹೆಚ್ಚು ಸಂಬಳದ ಗಂಡ (Husband) ಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇತ್ತೀಚೆಗೆ ಇವೆಂಟ್ ಒಂದರಲ್ಲಿ ಭೂಪೇಂದ್ರ ಸಿಂಗ್ ರಾಥೋರ್ ಅವರ ಜೊತೆ ಸಂದರ್ಶನ (Interview) ವೇಳೆ ನಟಿ ಈ ಹೇಳಿಕೆ ಕೊಟ್ಟಿದ್ದಾರೆ. ಆಧುನಿಕ (Modern) ಭಾರತೀಯ ಮಹಿಳೆಯರು ಹಾಗೂ ಚೆನ್ನಾಗಿ ಸಂಬಳ (Salary) ಬರುವ ಯುವಕರನ್ನು ಮದುವೆಯಾಗುವ (Marriage) ಅವರ ಮಾನದಂಡಗಳ ಕುರಿತು ಮಾತನಾಡಿದ್ದಾರೆ.
ನಟಿ ಈ ಹೇಳಿಕೆ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ವಿರೋಧ ಕಟ್ಟಿಕೊಂಡಿದ್ದಾರೆ. ನಟಿಯ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಆಧುನಿಕ ಭಾರತದ ಮಹಿಳೆಯರಿಗೆ ಶ್ರೀಮಂತ ಗಂಡ ಬೇಕು. ಆದರೆ ಅವರು ಮನೆಯ ಖರ್ಚಿಗೆ ಹಣ ಕೊಡಲು, ಗಂಡನಿಗೆ ನೆರವಾಗಲು ರೆಡಿ ಇಲ್ಲ ಎಂದಿದ್ದಾರೆ.
ಚೆನ್ನಾಗಿ ದುಡಿಯೋ ಗಂಡ ಬೇಕು
ಭಾರತದಲ್ಲಿ ಬಹಳಷ್ಟು ಯುವತಿಯರು ಹೇಗಿದ್ದಾರೆಂದರೆ ಅವರಿಗೆ ಚೆನ್ನಾಗಿ ಸಂಪಾದನೆ ಮಾಡುವ ಬಾಯ್ಫ್ರೆಂಡ್ ಅಥವಾ ಗಂಡ ಬೇಕು, ಸ್ವಂತ ಮನೆ ಇರಬೇಕು, ನಿಯಮಿತವಾಗಿ ವೇತನ ಹೆಚ್ಚಾಗುತ್ತಿರಬೇಕು. ಇವೆಲ್ಲದರ ಮಧ್ಯೆ ಯುವತಿಯರು ತಮ್ಮ ಕಾಲ ಮೇಲೆ ತಾವು ನಿಲ್ಲುವುದನ್ನು ಮರೆಯುತ್ತಾರೆ ಎಂದಿದ್ದಾರೆ.
ಮಹಿಳೆಯರು ದುಡಿಯಲಿ
ಮಹಿಳೆಯರು ಏನು ಮಾಡಲು ಸಾಧ್ಯವಿದೆ ಎನ್ನುವುದರ ಬಗ್ಗೆ ಅವರಿಗೇ ಅರಿವಿಲ್ಲ. ನಿಮ್ಮ ಮನೆಯಲ್ಲಿರುವ ಮಹಿಳೆಯರನ್ನು ಹೊರ ಕರೆತನ್ನಿ. ಅವರಿಗಾಗಿ ಅವರು ದುಡಿಯಲಿ. ನಮ್ಮನೆಯಲ್ಲಿ ಒಂದು ಹೊಸ ಫ್ರಿಡ್ಜ್ ಬೇಕು. ನೀವು ಅರ್ಧ ದುಡ್ಡು ಕೊಡಿ, ನಾನು ಅರ್ಧ ದುಡ್ಡು ಕೊಡುತ್ತೇನೆ ಎಂದಿದ್ದಾರೆ.
I don't know who she is but hats off to her courage to speak the unspoken unpalatable truth! 👏#Equality pic.twitter.com/vB2zwZerul
— Amit Srivastava 🕉️ (@AmiSri) March 15, 2023
ನಂತರ ನಟಿ ಪುರುಷರನ್ನು ಸಪೋರ್ಟ್ ಮಾಡಿ ಮಾತನಾಡಿದ್ದಾರೆ. ಬಹಳ ಚಿಕ್ಕವಯಸ್ಸಿನಲ್ಲಿ ಹುಡುಗರು ದುಡಿಯಲು ಪ್ರಾರಂಭಿಸುತ್ತಾರೆ. ತಮ್ಮ ಖರ್ಚುಗಳನ್ನು ನಿಭಾಯಿಸಿ ಮನೆಯ ಖರ್ಚುಗಳನ್ನೂ ನೋಡಿಕೊಳ್ಳುತ್ತಾರೆ.
ಹುಡುಗರು 18 ವರ್ಷ ಆದಾಗ ನಿಮ್ಮ ಕಲಿಕೆ ಹಾಗೂ ಆಟದ ಸಮಯ ಮುಗಿಯಿತು, ಇನ್ನು ದುಡಿಯಿರಿ ಎನ್ನುವ ಒತ್ತಡ ಬೀಳುತ್ತದೆ. ನನ್ನ ತಮ್ಮಂದಿರು ಹಾಗೂ ನನ್ನ ಗಂಡನ ನೋಡಿದಾಗ ನನಗೆ ಅಳಬೇಕೆನಿಸುತ್ತದೆ. ನನ್ನ ಗಂಡ 20 ವರ್ಷವಿದ್ದಾಗ ಕಾಲೇಜ್ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಆಯ್ಕೆಯಾಗಿ ಅಂದಿನಿಂದಲೇ ದುಡಿಯಲು ಆರಂಭಿಸಿದರು ಎಂದಿದ್ದಾರೆ.
ಇದನ್ನೂ ಓದಿ: Rishab Shetty: ವಿಶ್ವಸಂಸ್ಥೆಯಲ್ಲಿ ರಿಷಬ್ ಭಾಷಣಕ್ಕೆ ತಡೆ! ಕಾಂತಾರ ಹೀರೋ ಮಾತಾಡಿದ್ದು ಬರೀ 12 ಸೆಕೆಂಡ್ಸ್
ನಟಿ ಕೊಟ್ಟ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುರುಷರು ಮುಕ್ತವಾಗಿ ಮಾತನಾಡಿದ್ದಕ್ಕೆ ನಟಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ. ಆದರೆ ಮಹಿಳೆಯರು ನಟಿಯ ಹೇಳಿಕೆಯನ್ನು ವಿರೋಧಿಸಿದ್ದಾರೆ.
ಇನ್ನು ಕೆಲವರು ಮಹಿಳೆಯರೂ ಕೂಡಾ ತಮ್ಮ ಜೀವನಕ್ಕಾಗಿ ಹೇಗೆ ಹಗಲಿರುಳು ದುಡಿಯುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ. ಭಾರತದಲ್ಲಿ ಪ್ರತಿ ಮಹಿಳೆ ದುಡಿಯುತ್ತಾರೆ. ಮನೆಯಲ್ಲಿ ದುಡಿಯುತ್ತಾರೆ, ಅಥವಾ ಹೊರಗಡೆ ದುಡಿಯುತ್ತಾರೆ. ಕೆಲವೊಮ್ಮೆ ಎರಡೂ ಕಡೆ ಕೆಲಸ ಮಾಡುತ್ತಾರೆ ಎಂದಿದ್ದಾರೆ. ಸಮಾನತೆ ಬಗ್ಗೆ ನನಗೆ ಅರ್ಥವಾಗುತ್ತದೆ. ಈಗಿನ ದಿನಗಳಲ್ಲಿ ಕೆಲವು ಯುವತಿಯರಿಗೆ ಎಲ್ಲವೂ ರೆಡಿಮೇಡ್ ಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ