ಬಾಲಿವುಡ್​ ಅಂಗಳದಲ್ಲಿ ಸಾಲು ಸಾಲು ಕೊರೋನಾ ಪ್ರಕರಣ; ಆತಂಕದಲ್ಲಿ ಅಭಿಮಾನಿಗಳು

ಬಚ್ಚನ್​ ಕುಟುಂಬ ಕೊರೋನಾ ಸೋಂಕು ತಗುಲಿರುವ ವಿಚಾರ ತಿಳಿದು ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತಿದ್ದಾರೆ.

news18-kannada
Updated:July 12, 2020, 5:21 PM IST
ಬಾಲಿವುಡ್​ ಅಂಗಳದಲ್ಲಿ ಸಾಲು ಸಾಲು ಕೊರೋನಾ ಪ್ರಕರಣ; ಆತಂಕದಲ್ಲಿ ಅಭಿಮಾನಿಗಳು
ಬಾಲಿವುಡ್​ ಖ್ಯಾತ ನಟ-ನಟಿಯರು
  • Share this:
ಬಾಲಿವುಡ್​ ಖ್ಯಾತ ನಟ ಅಮಿತಾಭ್​ ಬಚ್ಚನ್​ ಅವರಿಗೆ ಕೊರೋನಾ ಸೋಂಕು ತಗುಲಿವುದು ದೃಢಪಟ್ಟಿದೆ. ಅಭಿಷೇಕ್ ಬಚ್ಚನ್​, ಪತ್ನಿ ಐಶ್ವರ್ಯಾ ರೈ, ಮಗಳು ಆರಾಧ್ಯಾಗೂ ಕೂಡ ಕೊರೋನಾ ಪಾಸಿಟಿವ್​ ಬಂದಿದೆ. ಸ್ಟಾರ್​ ನಟರಿಗೆ ಮಹಾಮಾರಿ ಕೊವೀಡ್​ ವೈರಾಣು ಸೋಂಕಿರುವುದು ಇದೀಗ ಅಭಿಮಾನಿಗಳ ಮನಸ್ಸಲ್ಲಿ ಆತಂಕ ಮನೆಮಾಡಿದೆ.

ಕೊರೋನಾ ಮಹಾಮಾರಿ ಸೋಂಕು ಇರುವುದಾಗಿ ಅಮಿತಾಭ್​ ಬಚ್ಚನ್​ ಟ್ವಿಟ್ಟರ್​​​ನಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ತನ್ನ ಸಂಪರ್ಕದಲ್ಲಿರುವವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.

ನಟ ಅಭಿಷೇಕ್​ ಬಚ್ಚನ್​ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದು, ಇಂದು ಬೆಳಗ್ಗೆ ನಾನು ನನ್ನ ತಂದೆ ಇಬ್ಬರಿಗೂ ಕೊರೋನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ರೋಗ ಲಕ್ಷಣಗಳಿರುವ ಕಾರಣ ಇಬ್ಬರೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದೇವೆ ಎಂದು ಬರೆದುಕೊಂಡಿದ್ದರು.

ಆದರೆ ಇಂದು ನಟಿ ಐಶ್ವರ್ಯಾ ರೈ ಮತ್ತು ಆರಾಧ್ಯಾ ಅವರ ಸ್ವಾಬ್​ ಟೆಸ್ಟ್​ ಬಂದಿದೆ. ಇಬ್ಬರಿಗೂ ಕೊರೋನಾ ಲಕ್ಷಣಗಳು ಕಂಡು ಬಂದಿದೆ. ಉಳಿದಂತೆ ಜಯಾ ಬಚ್ಚನ್, ಪುತ್ರಿ ಶ್ವೇತಾ ನಂದಾ, ಮೊಮ್ಮಕ್ಕಳಾದ ಅಗಸ್ತ್ಯ ಹಾಗೂ ನವ್ಯ ನವೇಲಿ ರಿಪೋರ್ಟ್ ನೆಗಟಿವ್ ಬಂದಿದೆ. ಬಚ್ಚನ್​ ಕುಟುಂಬ ಕೊರೋನಾ ಸೋಂಕು ತಗುಲಿರುವ ವಿಚಾರ ತಿಳಿದು ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತಿದ್ದಾರೆ.


ಬಾಲಿವುಡ್​ ಮತ್ತೊಬ್ಬ ಖ್ಯಾತ ನಟ ಅನುಪಮ್ ಖೇರ್​ ಕುಟುಂಬಕ್ಕೂ ಕೊರೋನಾ ಕಂಟಕವನ್ನು ತಂದೊಡ್ಡಿದೆ. ತಾಯಿ ದುಲಾರಿ, ಸಹೋದರ ರಾಜು, ಅತ್ತಿಗೆ ರಿಮಾ ಮತ್ತು ಸೋದರ ಸೊಸೆ ವೃಂದಾರಿಗೆ ಕೊರೋನಾ ಪಾಸಿಟಿವ್​ ಕಂಡುಬಂದಿದ್ದೆ. ಹೀಗಾಗಿ ಈ ವಿಚಾರವನ್ನು ಅನುಪಮ್​ ಖೇರ್ ತಮ್ಮ ಟ್ಟಿಟ್ವರ್​ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.​ ವಿಡಿಯೋ ಮಾಡುವ ಮೂಲಕ ಅನುಪಮಾ ಖೇರ್​ ನನ್ನ ಕೋವಿಡ್​ -19 ವರದಿ ನೆಗೆಟಿವ್​ ಬಂದಿದೆ ಎಂದಿದ್ದಾರೆ.

ತಾಯಿ ದುಲಾರಿ ಅವರು ಅನಾರೋಗ್ಯ ಮತ್ತು ಹಸಿವಿಲ್ಲದೆ ಬಳಲುತ್ತಿದ್ದರು. ಹಾಗಾಗಿ ಅವರನ್ನು ಕೋವಿಡ್​ ಟೆಸ್ಟ್​ಗೆ ಒಳಪಡಿಸಲಾಗಿತ್ತು. ವರದಿ ಬಂದ ನಂತರ ಕೊವೀಡ್​ ಇದೆ ಎಂಬುದು ಧೃಢಪಟ್ಟಿದೆ. ಹಾಗಾಗಿ ಅವರನ್ನು ಮುಂಬೈನ ಕೋಕಿಲಾಬ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಕುಟುಂಬದವರು ಮನೆಯಲ್ಲಿಯೇ ಕ್ವಾರೆಂಟೈನ್​ ಪಾಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.ಅಭಿಷೇಕ್​ ಬಚ್ಚನ್​ ನಟನೆಯ ಬ್ರೀತ್​​; ಇನ್​ಟು ದಿ ಶ್ಯಾಡೊ ವೆಬ್​ ಸಿರೀಸ್​​ನಲ್ಲಿ ನಟಿಸಿದ್ದ ಅಮಿತ್​​ ಸಾಧ್​​ ಕೊರೋನಾ ಟೆಸ್ಟ್​ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗೆ ಡಬ್ಬಿಂಗ್​ ಸಮಯದಲ್ಲಿ ಅಮಿತ್​ ಮತ್ತು ಅಭಿಷೇಕ್​ ಬಚ್ಚನ್​ ಒಟ್ಟಿಗೆ ಇದ್ದರು. ಇದೀಗ ಮುನ್ನೆಚ್ಚರಿಕೆಯ ಸಲುವಾಗಿ ಅಮಿತ್​ ಕೋವಿಡ್​ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೂಡ ನಟನ ಆರೋಗ್ಯ ಕ್ಷೇಮವನ್ನು ವಿಚಾರಿಸುತ್ತಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅಮಿತ್​​, ನಾನು ಆರೋಗ್ಯವಾಗಿದ್ದೇನೆ, ಮುನ್ನೆಚ್ಚರಿಕೆಯ ಸಲುವಾಗಿ ಕೋಡಿಡ್​-19 ಪರೀಕ್ಷೆ ಇಂದು ಮಾಡಿಸಿದ್ದೇನೆ. ಬಚ್ಚನ್​ ಕುಟುಂಬ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇನ್ನು ಬಾಲಿವುಡ್​ ಖ್ಯಾತ ನಟಿ ರೇಖಾ ಅವರ ಬಂಗಲೆಯನ್ನು ಸೀಲ್​ ಡೌನ್​ ಮಾಡಲಾಗಿದೆ. ರೇಖಾ ಅವರ ಬಂಗಲೆಯ ಕಾವಲು ಸಿಬ್ಬಂದಿಗೆ ಕೊರೋನಾ ವೈರಸ್​ ಪಾಸಿಟಿವ್​ ಬಂದ ಹಿನ್ನಲೆಯಲ್ಲಿ ಅಲ್ಲಿನ ಸ್ಥಳೀಯ ಆಡಳಿತ  ಕ್ರಮವನ್ನು ತೆಗೆದುಕೊಂಡಿದೆ.

ಬಾಲಿವುಡ್​ ತಾರೆಯರಾದ ಜಾಹ್ನವಿ ಕಪೂರ್​, ಅಮೀರ್​ ಖಾನ್​, ಕರಣ್​ ಜೋಹರ್​ ಅವರ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್​ ಕಂಡು ಬಂದಿತ್ತು. ಹಾಗಾಗಿ ಈ ಸೆಲೆಬ್ರಿಟಿಗಳ  ಮನೆಯನ್ನು 14 ದಿನಗಳವರೆಗೆ ಸೀಲ್​ ಡೌನ್​​ ಮಾಡಲಾಗಿದೆ.

ಬೆಂಗಾಲಿ ಮೂಲದ ನಟಿ ಕೊಯೆಲ್​ ಮಲ್ಲಿಕ್​ ಮತ್ತು ಪತಿ ಸಿಸ್ಪಾಲ್​​ ಸಿಂಗ್​, ತಂದೆ ರಂಜಿತ್,​ ತಾಯಿ ದೀಪಾ ಮಲ್ಲಿಕ್​​ಗೂ ಕೊರೋನಾ ಪಾಸಿಟಿವ್​​ ಇರುವುದು ಖಚಿತವಾಗಿದೆ. ಹಾಗಾಗಿ ಕುಟುಂಬ ಸೆಲ್ಫ್​ ಕ್ವಾರಂಟೈನ್​ನಲ್ಲಿದೆ.
Published by: Harshith AS
First published: July 12, 2020, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading