Manushi Chhillar: ರಾಮ್​ ಚರಣ್ ಮೇಲೆ ಮಾನುಷಿ ಚಿಲ್ಲರ್​ಗೆ ಸಿಕ್ಕಾಪಟ್ಟೆ ಲವ್ ಅಂತೆ, ಹೀಗಂದ್ರು ಮಾಜಿ ವಿಶ್ವಸುಂದರಿ!

Ram Charan: ಮಾನಷಿ ಚಿಲ್ಲರ್ ಇತ್ತೀಚಿಗೆ ಸೂಪರ್ ಹಿಟ್​ ಚಿತ್ರ  ಆರ್.ಆರ್.ಆರ್ ಸಿನಿಮಾ ನೋಡಿದಾಗ ರಾಮ್ ಚರಣ್ ಮೇಲೆ ಸಿಕ್ಕಾಪಟ್ಟೆ ಲವ್ ಆಗಿದಿಯಂತೆ. ಈ ಬಗ್ಗೆ ತಮ್ಮ ಮೊದಲ ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಮಾನುಷಿ ಚಿಲ್ಲರ್, ರಾಮ್​ ಚರಣ್

ಮಾನುಷಿ ಚಿಲ್ಲರ್, ರಾಮ್​ ಚರಣ್

  • Share this:
ಮಾಜಿ ವಿಶ್ವ ಸುಂದರಿ (Miss World) ಮಾನುಷಿ ಚಿಲ್ಲರ್ (Manushi Chhillar) ಯಾರಿಗೆ ತಾನೇ ಗೊತ್ತಿಲ್ಲ. ಭಾರತವನ್ನು ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸದ್ಯ ಅಕ್ಷಯ್ ಕುಮಾರ್ (Akshay Kumar)  ಅವರ ಜೊತೆ ಸಾಮ್ರಾಟ್​ ಪೃಥ್ವಿರಾಜ್​ ಚಿತ್ರದ ಮೂಲಕ ಬಾಲಿವುಡ್​ಗೆ (Bollywood) ಪಾದಾರ್ಪಣೆ ಮಾಡುತ್ತಿರುವ ಮಾನುಷಿ ಇದೀಗ ತಮ್ಮ ಒಂದು ಹೇಳಿಕೆ ಮೂಲಕ ಸುದ್ದಿಯಲ್ಲಿದ್ದಾರೆ. ಅದು ಕೂಡ ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಟಾಲಿವುಡ್​ನಲ್ಲಿ ಎನ್ನಬಹುದು. ಅರೇ ಮಾಜಿ ವಿಶ್ವ ಸುಂದರಿಗೂ ಟಾಲಿವುಡ್ಗೂ ಏನು ಸಂಬಂಧ ಅಂತೀರಾ? ಈ ಸ್ಟೋರಿ ಓದಿ.  

ಮಾನಷಿ ಚಿಲ್ಲರ್ ಇತ್ತೀಚಿಗೆ ಸೂಪರ್ ಹಿಟ್​ ಚಿತ್ರ  ಆರ್.ಆರ್.ಆರ್ ಸಿನಿಮಾ ನೋಡಿದಾಗ ರಾಮ್ ಚರಣ್ ಮೇಲೆ ಸಿಕ್ಕಾಪಟ್ಟೆ ಲವ್ ಆಗಿದಿಯಂತೆ. ಈ ಬಗ್ಗೆ ತಮ್ಮ ಮೊದಲ ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ರಾಮ್​ ಚರಣ್ ಎಂದರೆ ಬಹಳ ಇಷ್ಟ. ಅವರ ಸಿನಿಮಾ ನೋಡಿದ ಮೇಲೆ ಅವರ ಅಭಿಮಾನಿಯಾಗಿದ್ದೇನೆ. ಅವರ ಮೇಲೆ ಲವ್ ಆಗಿದೆ ಎಂದಿದ್ದಾರೆ.

ಅವರ ಜೊತೆ ಡೇಟ್​ ಮಾಡುತ್ತಿದೆ ಎಂದ ಮಾನುಷಿ

ಇಷ್ಟಕ್ಕೆ ಸುಮ್ಮನಾಗದೇ, ರಾಮ್​ಚರಣ್ ಅವರಿಗೆ ಮದುವೆ ಆಗದೇ ಇದ್ದರೆ, ನಾನು ಅವರನ್ನು ಡೇಟಿಗೆ ಕರೆಯುತ್ತಿದ್ದೆ ಎಂದು ಹೇಳಿದ್ದು, ಅಲ್ಲದೇ, ಅವರಿಗೆ ಮದುವೆಯಾದರೂ ಪರವಾಗಿಲ್ಲ. ಈಗಲೂ ಅವರು ಒಪ್ಪಿದರೆ ನಾನು ರೆಡಿ ಎಂದು ಹೇಳುವ ಮೂಲಕ ಸುದ್ದಿಯಲ್ಲಿದ್ದಾರೆ.  ಈ ಸುದ್ದಿ ಕೇಳಿದ ರಾಮ್​ಚರಣ್ ಅಭಿಮಾನಿಗಳು ಖುಷಿಯಾಗಿದ್ದು, ಮಾನುಷಿ ಚಿಲ್ಲರ್  ಅವರನ್ನು ಹಾಡಿ ಹೊಗಳಿದ್ದಾರೆ. ಅಲ್ಲದೇ ಅಭಿಮಾನಿಗಳು ರಾಮ್​ಚರಣ್ ಹೆಂಡತಿಗೆ ಇದು ತಲೆನೋವಿನ ವಿಚಾರ ಎಂದೆಲ್ಲ ತಮಾಷೆಯ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: ಚರಣದಾಸಿಯಿಂದ ನಮ್ಮನೆ ಯುವರಾಣಿವರೆಗೆ ಕಾವ್ಯಾ ಮಹದೇವ್ ಕಿರುತೆರೆ ಜರ್ನಿ ಇಲ್ಲಿದೆ

ಇನ್ನು ಸಾಮ್ರಾಟ್​ ಪೃಥ್ವಿರಾಜ್​ ಮಾನುಷಿ ಚಿಲ್ಲರ್ ಅವರ ಮೊದಲ ಚಿತ್ರವಾಗಿದ್ದು, ಬಾಲಿವುಡ್​ಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇನ್ನು ವಿದ್ಯಾಭ್ಯಾಸ ಮುಗಿಸಿ ಡಾಕ್ಟರ್ ಅಥವಾ ಲಾಯರ್ ಆಗಬೇಕು ಎನ್ನುವ ಆಲೋಚನೆಯಲ್ಲಿದ್ದೆ, ಆದರೆ ಮಿಸ್​ ವರ್ಲ್ಡ್​ ಪಟ್ಟ ಪಡೆದ ನಂತರ ಎಲ್ಲವೂ ಬದಲಾಗಿದೆ. ಸಿನಿಮಾ ಮಾಡುವ ಆಲೋಚನೆಯೆ ಇರಲಿಲ್ಲ ಎಂದು ಮಾನುಷಿ ಬಾಂಬೆ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೊದಲ ಚಿತ್ರದ ಖುಷಿಯಲ್ಲಿ ವಿಶ್ವಸುಂದರಿ

ಆದರೆ ಸಿನಿಮಾದಲ್ಲಿ ಮಾಡುತ್ತಿರುವುದು ಖುಷಿ ಇದೆ. ಒಂದೊಳ್ಳೆ ಅವಕಾಶ ನನಗೆ ಸಿಕ್ಕಿದೆ. ಸಾಮ್ರಾಟ್‌ ಪೃಥ್ವಿರಾಜ್‌ ರೀತಿಯ ಐತಿಹಾಸಿಕ ಸಿನಿಮಾ ಸಿಕ್ಕಿದ್ದು ನಿಜಕ್ಕೂ ಅದ್ಭುತ ಅವಕಾಶ. ಮುಂದೆ ಸಹ ಒಳ್ಳೆಯ ಅವಕಾಶಗಳಿಗೆ ಬಾಗಿಲು ತೆರೆದಂತೆ. ಸುಮಾರು ಎರಡು ತಿಂಗಳು ಸಿನಿಮಾಗೆ ತಯಾರಿ ಮಾಡಿಕೊಂಡಿದ್ದೇನೆ, ನಾನು ಹೊಸ ವಿಚಾರಗಳನ್ನು ಕಲಿಯುತ್ತಿದ್ದೇನೆ ಎಂದಿದ್ದಾರೆ.  ನನಗೆ ಈ ಸಿನಿಮಾದ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇರಲಿಲ್ಲ. ಎಲ್ಲವೂ ಹೊಸದಾಗಿ ಕಲಿಯಬೇಕು. ಹಾಗಾಗಿ ನಾನು ಬಹಳಷ್ಟು ಕಷ್ಟಪಟ್ಟು ಎಲ್ಲವನ್ನು ನಿಭಾಯಿಸಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ನೀಲಿ ಬಟ್ಟೆಯಲ್ಲಿ ಮಿಂಚಿದ ಅನನ್ಯಾ ಪಾಂಡೆ, ಗೆಹರಾಯಿಯಾ ಬೆಡಗಿ ನೋಡಿ ಅಭಿಮಾನಿಗಳು ಫಿದಾ

ಇನ್ನು ಸಂಯೋಗಿತಾ ಪಾತ್ರ ಮಾಡಲು ನಾನು 8 ರಿಂದ 9 ತಿಂಗಳು ಟ್ರೈನಿಂಗ್ ತೆಗೆದುಕೊಂಡಿದ್ದೇನೆ. ಸ್ಕ್ರಿಪ್ಟ್‌ನ ಯಾವ ರೀತಿ ಓದಬೇಕು ಎಲ್ಲಕ್ಕಿಂತ ಹೆಚ್ಚಾಗಿ ಕಥೆ ಹಿಂದಿರುವ ಹಿನ್ನಲೆಯನ್ನು ತಿಳಿದುಕೊಳ್ಳಬೇಕು. ಜನರಿಗೆ ಸಂಯೋಗಿತಾ ಬಗ್ಗೆ ಇರುವ ಕಲ್ಪನೆಗೆ ಸರಿಹೊಂದುವಂತೆ ತಲುಪಬೇಕು ಎಂಬುದು ಮುಖ್ಯ ಆಶಯವಾಗಿತ್ತು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.  ನನಗೆ ಈಗಾಗಲೇ ಹಲವಾರು ಆಫರ್​ಗಳು ಬಂದಿದೆ. ಈ ಚಿತ್ರಕ್ಕೆ ಜನರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.
Published by:Sandhya M
First published: