ಸದ್ದು ಮಾಡುತ್ತಿದ್ದೆ ಮನೋರಂಜನ್ ರವಿಚಂದ್ರನ್ ಅಭಿನಯದ ಪ್ರಾರಂಭ ಟ್ರೈಲರ್!

Prarambha Movie Trailer: 'ಪ್ರಾರಂಭ’ ಚಿತ್ರ ಈ ಸಮಾಜಕ್ಕೆ ಪ್ರತ್ಯೇಕವಾಗಿ ಯುವಕ-ಯುವತಿಯರಿಗೆ ಒಂದು ಒಳ್ಳೆಯ ಸಂದೇಶ ಸಾರುವ ಸಿನಿಮಾವಂತೆ. ನಾಯಕ ಮನೋರಂಜನ್ ರವಿಚಂದ್ರನ್ ಮೂರು ವಿಭಿನ್ನ ಶೈಲಿಯಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 ಪ್ರಾರಂಭ

ಪ್ರಾರಂಭ

  • Share this:
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ 'ಪ್ರಾರಂಭ` ಚಿತ್ರದ ಟ್ರೇಲರ್ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಗೊಂಡು,  ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಕ ಮನೋರಂಜನ್ ಹುಟ್ಟುಹಬ್ಬದ ಪ್ರಯುಕ್ತ ಪ್ರಾರಂಭ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಟ್ರೈಲರ್ ಗೆ ಧ್ವನಿ ನೀಡಿದ್ದಾರೆ.
ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಮುಂತಾದ ಕಡೆ ಚಿತ್ರೀಕರಣ  ನಡೆದಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ 'ಪ್ರಾರಂಭ' ರಾರಾಜಿಸಲಿದೆ. ಮನು ಕಲ್ಯಾಡಿ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಜಗದೀಶ್ ಕಲ್ಯಾಡಿ ಅವರು ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿದ್ದಾರೆ.

'ಪ್ರಾರಂಭ’ ಚಿತ್ರ ಈ ಸಮಾಜಕ್ಕೆ ಪ್ರತ್ಯೇಕವಾಗಿ ಯುವಕ-ಯುವತಿಯರಿಗೆ ಒಂದು ಒಳ್ಳೆಯ ಸಂದೇಶ ಸಾರುವ ಸಿನಿಮಾವಂತೆ. ನಾಯಕ ಮನೋರಂಜನ್ ರವಿಚಂದ್ರನ್ ಮೂರು ವಿಭಿನ್ನ ಶೈಲಿಯಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

5 ಹಾಡುಗಳಿರುವ ಈ ಚಿತ್ರಕ್ಕೆ ಪ್ರಜ್ವಲ್ ಪೈ ಸಂಗೀತ ಸಂಯೋಜಿಸಿದರೆ. 2 ಸಾಹಸ ಸನ್ನಿವೇಶಗಳಿದ್ದು , ಥ್ರಿಲ್ಲರ್ ಮಂಜು ಹಾಗೂ ವಿಕ್ರಂ ಮೋರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಸುರೇಶ್‍ ಬಾಬು ಛಾಯಾಗ್ರಹಣ, ವಿಜಯ್.ಎನ್.ಕುಮಾರ್ ಸಂಕಲನ, ಸಂತು, ಗೀತಾ ನೃತ್ಯ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.ಈ ಚಿತ್ರದಲ್ಲಿ ಮನೋರಂಜನ್ ಗೆ ನಾಯಕಿಯಾಗಿ ಕೀರ್ತಿ ಅಭಿನಯಿಸಿದ್ದಾರೆ. ಉಳಿದಂತೆ ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ ರಾಘು ಶ್ರೀವಾಸ್ತವ್, ಶಾಂಭವಿ, ಸೂರಜ್(ಕಾಮಿಡಿ ಕಿಲಾಡಿಗಳು) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Published by:Harshith AS
First published: