• Home
 • »
 • News
 • »
 • entertainment
 • »
 • Manoj Bajpayee: ಫ್ಯಾಮಿಲಿ ಮ್ಯಾನ್ ನಟನಿಗೆ ಮಾತೃವಿಯೋಗ

Manoj Bajpayee: ಫ್ಯಾಮಿಲಿ ಮ್ಯಾನ್ ನಟನಿಗೆ ಮಾತೃವಿಯೋಗ

ಮನೋಜ್ ಬಾಯಪೇಯಿ - ತಾಯಿ ಗೀತಾ

ಮನೋಜ್ ಬಾಯಪೇಯಿ - ತಾಯಿ ಗೀತಾ

ದಿ ಫ್ಯಾಮಿಲಿ ಮ್ಯಾನ್ ನಟ ಮನೋಜ್ ಬಾಜಪೇಯಿ ಅವರ ತಾಯಿ ನಿಧನರಾಗಿದ್ದಾರೆ. ಹಿಟ್ ವೆಬ್ ಸಿರೀಸ್ ಮೂಲಕ ಮಿಂಚಿದ್ದ ನಟ ಮಾತೃವಿಯೋಗದ ನೋವಿನಲ್ಲಿದ್ದಾರೆ.

 • News18 Kannada
 • 4-MIN READ
 • Last Updated :
 • Bangalore, India
 • Share this:

ದಿ ಫ್ಯಾಮಿಲಿ ಮ್ಯಾನ್ (The Family Man) ವೆಬ್ ಸಿರೀಸ್ ನಟ ಮನೋಜ್ ಬಾಜಪೇಯಿ (Manoj Bajpayee) ಅವರ ತಾಯಿ ಗೀತಾ ದೇವಿ (Geetha Devi) ಗುರುವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯಕ್ಕಾಗಿ ದೆಹಲಿಯ (Delhi) ಮ್ಯಾಕ್ಸ್ ಪುಷ್ಪಾಂಜಲಿ ಆಸ್ಪತ್ರೆಗೆ ಅವರನ್ನು ದಾಖಲಾಗಿತ್ತು. ಮನೋಜ್ ಅವರ ವಕ್ತಾರರು ಗೀತಾ ಅವರ ನಿಧನ (Death) ಸುದ್ದಿಯನ್ನು ದೃಢಪಡಿಸಿದ್ದಾರೆ. ಅವರ ತಾಯಿ ದೆಹಲಿಯ ಆಸ್ಪತ್ರೆಯಲ್ಲಿ ಒಂದು ವಾರದವರೆಗೆ ದಾಖಲಾಗಿದ್ದರು. ಅವರು ಇಂದು ಬೆಳಿಗ್ಗೆ ನಿಧನರಾದರು ಎಂದು ಹೇಳಿದ್ದಾರೆ.


ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಅವರ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೂ ಬುಧವಾರ ರಾತ್ರಿ ಅವರ ಸ್ಥಿತಿ ಹದಗೆಟ್ಟಿದ್ದು, ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ನಟ ಮನೋಜ್ ಅವರು ತಾಯಿಯ ಕೊನೆಯ ಕ್ಷಣಗಳಲ್ಲಿ ಅವರೊಂದಿಗೆ ಇದ್ದನು. ಮನೋಜ್ ಬಾಜಪೇಯಿ ಯಾವಾಗಲೂ ತನ್ನ ತಾಯಿ ತನ್ನ ಶಕ್ತಿಯ ಆಧಾರ ಸ್ತಂಭ ಎಂದು ಹೇಳುತ್ತಲೇ ಇರುತ್ತಾರೆ.


ಗೀತಾದೇವಿ ಅವರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ನಟನ ತಂದೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಧನರಾದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು