ಯಾವುದೇ ಚಿತ್ರೋದ್ಯಮವನ್ನು (Film Industry) ನೋಡಿದರೂ ಅಲ್ಲಿ ಕೆಲವು ನಟರು ಯಾರ ಬೆಂಬಲವಿಲ್ಲದೆ, ತಮಗೆ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು, ತಾವಾಯ್ತು ಮತ್ತು ತಮ್ಮ ಕೆಲಸವಾಯ್ತು ಅಂತ ನೋಡಿಕೊಂಡು ಇರುತ್ತಾರೆ. ಇಂತಹ ನಟರ ಸಾಲಿನಲ್ಲಿ ಬಾಲಿವುಡ್ ನ ನಟ ಮನೋಜ್ ಬಾಜಪೇಯಿ (Manoj Bajpayee) ಅವರು ಸಹ ಒಬ್ಬರು ಅಂತ ಹೇಳಿದರೆ ಬಹುಶಃ ಅತಿಶಯೋಕ್ತಿ ಅಗಲಿಕ್ಕಿಲ್ಲ. ಹೌದು. ಹಿಂದಿ ಚಿತ್ರೋದ್ಯಮದಲ್ಲಿ ನಟ ಮನೋಜ್ ಬಾಜಪೇಯಿ ನಡೆದುಕೊಂಡು ಬಂದ ದಾರಿ ಸಹ ತುಂಬಾನೇ ವಿಭಿನ್ನವಾದದ್ದು ಅಂತ ಹೇಳಬಹುದು.
ಅವರಿಗೆ ಸಿಕ್ಕ ಪಾತ್ರಗಳ ಉದ್ದಳತೆಗಳನ್ನು ನೋಡದೆ, ಅದು ನ್ಯಾಯಯುತವಾಗಿದ್ದರೆ ಸಾಕು ಅಂತ ಅಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸಂಪೂರ್ಣವಾಗಿ ನ್ಯಾಯ ಒದಗಿಸುವುದರಲ್ಲಿ ಮನೋಜ್ ತುಂಬಾನೇ ನಿಸ್ಸೀಮರು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಹಿಂದಿ ಚಿತ್ರೋದ್ಯಮ ಕಂಡ ಅದ್ಬುತ ನಟರಲ್ಲಿ ಮನೋಜ್ ಕೂಡ ಒಬ್ಬರು
ನಿಸ್ಸಂದೇಹವಾಗಿ ಹಿಂದಿ ಚಲನಚಿತ್ರೋದ್ಯಮ ಪಡೆದ ಅತ್ಯುತ್ತಮ ನಟರಲ್ಲಿ ಇವರು ಒಬ್ಬರು ಅಂತ ಹೇಳಬಹುದು. ಚಿಕ್ಕ ಪುಟ್ಟ ಪಾತ್ರಗಳಿಂದ ಹಿಡಿದು ಅತ್ಯಂತ ಸೂಕ್ಷ್ಮವಾದ ಪಾತ್ರಗಳವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ ಸೈ ಎನಿಸಿಕೊಂಡ ನಟ ಮನೋಜ್ ಅಂತ ಹೇಳಬಹುದು.
ತುಂಬಾನೇ ಸುದ್ದಿ ಮಾಡದೆ ಮತ್ತು ಸದ್ದು ಮಾಡದೆ ತನ್ನ ಪರಿಶ್ರಮದಿಂದ ಹಂತ ಹಂತವಾಗಿ ನಟನೆಯಲ್ಲಿ ಬೆಳೆದ ಮನೋಜ್ ಅನೇಕ ವರ್ಷಗಳಿಂದ ತಮ್ಮ ಅಭಿಮಾನಿಗಳನ್ನು ತಮ್ಮ ನಟನೆಯಿಂದ ಮನ ರಂಜಿಸುತ್ತಿದ್ದಾರೆ.
ಪತ್ನಿಯೇ ನಂಬಲ್ಲ ಎಂದ ನಟ
ಇತ್ತೀಚೆಗೆ, ಸಂದರ್ಶನವೊಂದರಲ್ಲಿ ಈ ಬಾಲಿವುಡ್ ನಟ ತಮ್ಮ ಪತ್ನಿ ಶಬಾನಾ ರಾಜಾ ಅವರು ತಾನು ಚಿತ್ರೋದ್ಯಮದಲ್ಲಿ ಇನ್ನೂ ಇರುವುದನ್ನು ನೋಡಿ ಒಂದು ರೀತಿ ಶಾಕ್ ನಲ್ಲಿದ್ದಾರೆ ಎಂಬ ಮಾತನ್ನು ಬಿಚ್ಚಿಟ್ಟರು.
ಮನೋಜ್ ಅವರಿಗೆ ಸಿಕ್ಕ ಅನೇಕ ಅವಕಾಶಗಳನ್ನು ನಿರಾಕರಿಸಿದ್ದಾರಂತೆ
ಮನೋಜ್ ಯಾವಾಗಲೂ ಅವರು ಮಾಡುವ ಪಾತ್ರಗಳ ಬಗ್ಗೆ ತುಂಬಾನೇ ವಿಚಾರ ಮಾಡಿ ಆಯ್ಕೆ ಮಾಡುತ್ತಾರೆ. ಅದೇ ಕಾರಣಕ್ಕಾಗಿ, ಅವರನ್ನು ಹುಡುಕಿಕೊಂಡು ಬಂದ ಎಷ್ಟೋ ಅವಕಾಶಗಳಿಗೆ ಅವರು ಆಗೋದಿಲ್ಲ ಅಂತ ನೇರವಾಗಿ ಹೇಳುವ ಮೂಲಕ ಹಲವಾರು ಉದ್ಯಮದ ಜನರನ್ನು ನೋಯಿಸಿದ್ದಾರೆ.
ಹೀಗೆ ಅನೇಕರನ್ನು ನೋಯಿಸಿದರೂ ತನ್ನ ಪತಿ ಇಷ್ಟು ದೀರ್ಘಕಾಲ ಇಂಡಸ್ಟ್ರಿಯಲ್ಲಿ ಇನ್ನೂ ಇರುವುದು ಅವರ ಹೆಂಡತಿಗೆ ಆಶ್ಚರ್ಯದ ಸಂಗತಿಯೇ ಅಂತ ಹೇಳಬಹುದು.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಟ ಮನೋಜ್ ಅವರು ತಮ್ಮ ಪತ್ನಿ ಶಬಾನಾ ಚಲನಚಿತ್ರೋದ್ಯಮದಲ್ಲಿ ತಮ್ಮ ಉಳಿವಿನ ಬಗ್ಗೆ ಹೇಗೆ ಅಪನಂಬಿಕೆ ಹೊಂದಿದ್ದಾರೆ ಎಂಬುದನ್ನು ನೆನಪಿಸಿಕೊಂಡರು.
"ನೀವು ಇನ್ನೂ ಉದ್ಯಮದಲ್ಲಿ ಇರುವುದು ಪವಾಡ ಅಂತಾನೆ ಹೇಳಬಹುದು ಎಂದು ಆಕೆ ಹೇಳಿದಳು. ನೀನು ಯಾಕೆ ಹಾಗೆ ಹೇಳುತ್ತಿದ್ದೀಯಾ ಅಂತ ನಾನು ಆಕೆಯನ್ನು ಕೇಳಿದರೆ, ಅದಕ್ಕೆ ಆಕೆ ನೀವು ಇದುವರೆಗೂ ಚಿತ್ರೋದ್ಯಮದ ಎಷ್ಟೊಂದು ಜನರನ್ನು ನೋಯಿಸಿದ್ದೀರಿ, ಅದನ್ನೆಲ್ಲಾ ನೋಡುತ್ತಿದ್ದರೆ ನಿಮ್ಮ ಸಿನಿ ಕರಿಯರ್ ಬಹಳ ಹಿಂದೆಯೇ ಕೊನೆಗೊಳ್ಳಬೇಕಿತ್ತು ಅಂತ ಹೇಳಿದರಂತೆ. ಜನರಿಗೆ ಇಲ್ಲ ಅಂತ ಕೇಳುವ ಅಭ್ಯಾಸವಿರುವುದಿಲ್ಲ, ಆದರೆ ನಾನು ಅನೇಕ ಬಾರಿ ಇಲ್ಲ ಅಂತ ಅನೇಕರಿಗೆ ಹೇಳಿದ್ದೇನೆ" ಎಂದು ನಟ ಹೇಳಿದರು.
ಇದನ್ನೂ ಓದಿ: NMACC-Rekha: ಅಮಿತಾಭ್ ಬಚ್ಚನ್ ಸೊಸೆ, ಮೊಮ್ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡ ರೇಖಾ! ಹಳೆ ಪ್ರೀತಿ ಮಧುರ ಎಂದ ನೆಟ್ಟಿಗರು
ತಮಗೆ ಸಿಕ್ಕ ಅವಕಾಶಗಳ ಬಗ್ಗೆ ಹೇಳಿದ್ದೇನು ಮನೋಜ್?
ಇದರ ಬಗ್ಗೆ ಮಾತಾಡಿದ ನಟ ಮನೋಜ್ ಬಾಜಪೇಯಿ ಅವರು "ನಾನು ಇಲ್ಲಿ ನ್ಯಾಯಯುತ ಅವಕಾಶಕ್ಕಾಗಿ ತುಂಬಾ ಹೋರಾಡಿದ್ದೇನೆ ಮತ್ತು ನಾನು ಸ್ವಭಾವದಿಂದ ತುಂಬಾನೇ ಆಕ್ರಮಣಕಾರಿಯಾಗಿದ್ದೇನೆ ಎಂದು ನಾನು ಒಪ್ಪಿಕೊಳ್ಳಬೇಕು.
ಆದರೆ ನನಗೆ ಬೇರೆ ಯಾವುದೇ ಮಾರ್ಗವನ್ನು ನೋಡಲು ಸಾಧ್ಯವಾಗಲಿಲ್ಲ. ನಿಮ್ಮ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ನೀವು ಹಣವನ್ನು ಪಡೆಯುತ್ತೀರಿ ಎಂದು ನಿರ್ಮಾಪಕರು ಹೇಳಿದಾಗ, ನಾನು ಅನೇಕ ವರ್ಷಗಳಿಂದ ಚಿತ್ರೋದ್ಯಮದಲ್ಲಿದ್ದೇನೆ, ವಿಶ್ವಾಸಾರ್ಹ ಕೆಲಸವನ್ನು ಮಾಡಿದ್ದೇನೆ ಆದ್ದರಿಂದ ನಾನು ಇದಕ್ಕಿಂತ ಹೆಚ್ಚಿನದಕ್ಕೆ ಅರ್ಹನಾಗಿದ್ದೇನೆ ಎಂದು ನಾನು ಹೇಳುತ್ತೇನೆ” ಅಂತ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ