ಬಾಲಿವುಡ್ ನಲ್ಲಿ (Bollywood) ತುಂಬಾನೇ ಜನಪ್ರಿಯ ನಟ (Actor) ಮತ್ತು ನಟಿಯರಿದ್ದು (Actresses), ಕೆಲವರು ತಮ್ಮ ಹೊಡಿ ಬಡಿ ಆಕ್ಷನ್ ಚಿತ್ರಗಳಿಂದ ಹೆಸರು ಮಾಡಿದರೆ, ಇನ್ನೂ ಕೆಲವು ನಟರು ತಮ್ಮ ಸರಳವಾದ ಮತ್ತು ನೈಜವಾದ ನಟನೆಯಿಂದ (Acting) ಜನಪ್ರಿಯವಾದವರು ಅಂತ ಹೇಳಬಹುದು. ಹೀಗೆ ತುಂಬಾನೇ ಸರಳವಾಗಿ, ನ್ಯಾಚುರಲ್ ಆಗಿ ನಟಿಸುವವರ ಪೈಕಿ 'ಗ್ಯಾಂಗ್ಸ್ ಆಫ್ ವಸೇಪುರ್', 'ಸತ್ಯ', 'ಅಲಿಗಢ್', 'ದಿ ಫ್ಯಾಮಿಲಿ ಮ್ಯಾನ್' ನಂತಹ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮನೋಜ್ ಬಾಜಪೇಯಿ (Manoj Bajpayee) ಅವರು ಮೊದಲ ಸಾಲಿನಲ್ಲಿ ಬರುತ್ತಾರೆ ಎಂದರೆ ತಪ್ಪಾಗುವುದಿಲ್ಲ.
ನಟ ಮನೋಜ್ ಅವರು ಅಭಿನಯಿಸಿದ ಚಿತ್ರಗಳನ್ನು ನೀವು ನೋಡಿದರೆ ನಿಮಗೆ ಅರ್ಥವಾಗುವುದು ಏನೆಂದರೆ ಈ ನಟ ತುಂಬಾನೇ ನ್ಯಾಚುರಲ್ ಆಗಿ ನಟಿಸುತ್ತಾರೆ ಮತ್ತು ರಂಗಭೂಮಿಯಿಂದ ಬಂದವರು ಅಂತ.
ಮನೋಜ್ ಗೆ ನಟನೆ ಮತ್ತು ಹಾಡು ಹಾಡುವುದರ ಜೊತೆಗೆ ಡ್ಯಾನ್ಸ್ ಸಹ ತುಂಬಾನೇ ಇಷ್ಟವಿತ್ತಂತೆ
ಹೌದು. ಈ ರಂಗಭೂಮಿಯಿಂದ ಬಂದ ಕಲಾವಿದರಿಗೆ ಈ ಹಾಡು ಹಾಡುವುದು ಮತ್ತು ನಟನೆ ತುಂಬಾನೇ ಲೀಲಾಜಾಲವಾಗಿ ಬಂದು ಬಿಟ್ಟಿರುತ್ತದೆ ಅಂತ ಹೇಳಿದರೆ ಸುಳ್ಳಾಗುವುದಿಲ್ಲ.
ಹಾಗೆಯೇ ನಟ ಮನೋಜ್ ಗೆ ಸಹ ಹಾಡು ಹೇಳುವುದು ಮತ್ತು ನಟನೆ ಎಂದರೆ ತುಂಬಾನೇ ಇಷ್ಟವಿತ್ತು. ಇವೆರಡರ ಜೊತೆಗೆ ಮನೋಜ್ ಅವರಿಗೆ ಡ್ಯಾನ್ಸ್ ಮಾಡುವುದು ಅಂತ ಹೇಳಿದರೆ ತುಂಬಾನೇ ಇಷ್ಟವಿತ್ತಂತೆ. ಆದರೆ ಅವರು ಡ್ಯಾನ್ಸ್ ಮಾಡುವ ಕನಸನ್ನು ಇನ್ನೊಬ್ಬ ಬಾಲಿವುಡ್ ನಟನಿಂದಾಗಿ ಬಿಡಬೇಕಾಯಿತಂತೆ ನೋಡಿ.
ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಡ್ಯಾನ್ಸ್ ಅನ್ನು ನೋಡುವವರೆಗೂ ಮನೋಜ್ ಗೆ ತಮ್ಮಲ್ಲಿರುವ ಡ್ಯಾನ್ಸ್ ಕೌಶಲ್ಯಗಳನ್ನು ತೆರೆಯ ಮೇಲೆ ಪ್ರದರ್ಶಿಸಬೇಕು ಎನ್ನುವ ಆಸೆ ಇತ್ತಂತೆ.
ಡ್ಯಾನ್ಸ್ ಮಾಡುವ ಕನಸನ್ನು ಬಿಡೋದಕ್ಕೆ ನಟ ಹೃತಿಕ್ ಕಾರಣ
ಶರ್ಮಿಳಾ ಟ್ಯಾಗೋರ್ ಅವರೊಂದಿಗೆ ಮುಂಬರುವ ಸ್ಟ್ರೀಮಿಂಗ್ ಚಿತ್ರ 'ಗುಲ್ಮೋಹರ್' ನಲ್ಲಿ ಕಾಣಿಸಿಕೊಳ್ಳಲಿರುವ ನಟ ಇತ್ತೀಚೆಗೆ ಚಾಟ್ ಶೋ 'ದಿ ಬಾಂಬೆ ಜರ್ನಿ ಎಕ್ಸ್ ಸಂಡೇ ಬ್ರಂಚ್' ನಲ್ಲಿ ಕಾಣಿಸಿಕೊಂಡರು.
ತಮ್ಮ ಗಾಯನದ ಬಗ್ಗೆ ಮಾತನಾಡಿದ ಅವರು "ನಾನು ರಂಗಭೂಮಿಯಿಂದ ಬಂದಿರುವುದರಿಂದ, ಕಲಾವಿದನು ಹೇಗೆ ಹಾಡಬೇಕು ಎಂದು ನಾನು ತಿಳಿದುಕೊಂಡಿದ್ದೆ. ನಾನು ಚೆನ್ನಾಗಿ ಡ್ಯಾನ್ಸ್ ಸಹ ಮಾಡುತ್ತಿದ್ದೆ” ಎಂದು ಹೇಳಿದರು.
ಇದನ್ನೂ ಓದಿ: Mrunal Thakur: ಮೃಣಾಲ್ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್
ಮನೋಜ್ ಅವರು ತಾವೊಬ್ಬ ತರಬೇತಿ ಪಡೆದ ಡ್ಯಾನ್ಸರ್ ಎಂದು ಬಹಿರಂಗಪಡಿಸಿದರು. "ನಾನು ಚಾವು ಡ್ಯಾನ್ಸ್ ನಲ್ಲಿ ತರಬೇತಿ ಪಡೆದಿದ್ದೇನೆ. ಆದರೆ ಹೃತಿಕ್ ಅವರ ಡ್ಯಾನ್ಸ್ ಪ್ರದರ್ಶನವನ್ನು ನೋಡಿದಾಗ, ಡ್ಯಾನ್ಸ್ ಮಾಡುವ ನನ್ನ ಕನಸು ಭಗ್ನವಾಯಿತು. ನಾನು ಈಗ ಹೃತಿಕ್ ರೀತಿಯಲ್ಲಿ ಡ್ಯಾನ್ಸ್ ಮಾಡುವುದನ್ನು ಕಲಿಯಲು ಸಾಧ್ಯವಿಲ್ಲ” ಅಂತ ಹೇಳಿದ್ರು ಮನೋಜ್.
ಗುಲ್ಮೋಹರ್ ಚಿತ್ರ ಮಾರ್ಚ್ 3 ರಂದು ಬಿಡುಗಡೆ
ನಟ ಸೂರಜ್ ಶರ್ಮಾ ಕೂಡ ನಟಿಸಿರುವ 'ಗುಲ್ಮೋಹರ್' ಮೂಲಕ ಶರ್ಮಿಳಾ ಟ್ಯಾಗೋರ್ ಒಂದು ದಶಕದ ನಂತರ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಈ ಚಿತ್ರವು ಮಾರ್ಚ್ 3 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಪ್ರಸಾರವಾಗಲಿದೆ.
ಮನೋಜ್ ಅವರ ಇತ್ತೀಚಿನ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ಒಂದು ಸ್ಪೈ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಇದನ್ನು ಅಮೆಜಾನ್ ಪ್ರೈಮ್ ವೀಡಿಯೋಗಾಗಿ ರಾಜ್ ನಿಡಿಮೊರು ಮತ್ತು ಕೃಷ್ಣ ಡಿಕೆ ರಚಿಸಿದ್ದಾರೆ.
ಮನೋಜ್ ಬಾಜಪೇಯಿ ಜೊತೆಯಲ್ಲಿ ನಟಿ ಪ್ರಿಯಾಮಣಿ, ನಟ ಶರದ್ ಕೇಲ್ಕರ್, ನೀರಜ್ ಮಾಧವ್, ಶರೀಬ್ ಹಶ್ಮಿ, ದಲೀಪ್ ತಾಹಿಲ್, ಸನ್ನಿ ಹಿಂದೂಜಾ ಮತ್ತು ಶ್ರೇಯಾ ಧನ್ವಂತರಿ ಕೂಡ ಇದರಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ