ವಿಕಾಸ್ ದುಬೆ ಹೆಸರಿನಲ್ಲಿ ಬರಲಿದೆಯಾ ಸಿನಿಮಾ?; ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ವಿಕಾಸ್​ ದುವೆ ಕುರಿತಾಗಿ ಸಿನಿಮಾ ಬರಲಿದೆ ಎಂದು ಹರಿದಾಡಿತ್ತು. ಎಂಟು ಪೊಲೀಸರನ್ನು ಅಮಾನುಷವಾಗಿ ಕೊಂಡ ಪಾತಕಿ ವಿಕಾಸ್​​​​​ ದುಬೆ ಕುರಿತಾಗಿ ಸಂದೀಪ್​ ಕುಮಾರ್​ ಎಂಬವರು ಈ ಸಿನಿಮಾವನ್ನು ಮಾಡುತ್ತಿದ್ದಾರೆ. ಜೊತೆಗೆ ಮನೋಜ್​​ ಬಾಜ್ಪೇಯಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸಂದೀಪ್​ ಅವರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ವೈರಲ್​ ಆಗಿತ್ತು.

ವಿಕಾಸ್ ದುಬೆ-ಮನೋಜ್​​ ಬಾಜ್ಪೇಯಿ

ವಿಕಾಸ್ ದುಬೆ-ಮನೋಜ್​​ ಬಾಜ್ಪೇಯಿ

 • Share this:
  ಕುಖ್ಯಾತ ಪಾತಕಿ ವಿಕಾಸ್​ ದುಬೆಯನ್ನು ಉತ್ತರ ಪ್ರದೇಶದ ಪೊಲೀಸರು ಶುಕ್ರವಾರ ಬೆಳಿಗ್ಗೆ ಎನ್​​ಕೌಂಟರ್​ ಮಾಡಿದ್ದಾರೆ. ಈ ಎನ್​ಕೌಂಟರ್​ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್​ ನ್ಯಾಯಾಧೀಶರಿಂದ ವಿಕಾಸ್​ ದುಬೆ ಎನ್​ಕೌಂಟರ್​ ಪ್ರಕರಣ ತನಿಖೆಯಾಗಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಇವೆಲ್ಲದರ ನಡುವೆ ಬಾಲಿವುಡ್​ನಲ್ಲಿ ವಿಕಾಸ್​ ದುಬೆ ಕುರಿತಾಗಿ ಸಿನಿಮಾವೊಂದು ಮೂಡಿ ಬರುತ್ತಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ.

  ಸಾಮಾಜಿಕ ಜಾಲತಾಣದಲ್ಲಿ ವಿಕಾಸ್​ ದುವೆ ಕುರಿತಾಗಿ ಸಿನಿಮಾ ಬರಲಿದೆ ಎಂದು ಹರಿದಾಡಿತ್ತು. ಎಂಟು ಪೊಲೀಸರನ್ನು ಅಮಾನುಷವಾಗಿ ಕೊಂಡ ಪಾತಕಿ ವಿಕಾಸ್​​​​​ ದುಬೆ ಕುರಿತಾಗಿ ಸಂದೀಪ್​ ಕುಮಾರ್​ ಎಂಬವರು ಈ ಸಿನಿಮಾವನ್ನು ಮಾಡುತ್ತಿದ್ದಾರೆ. ಜೊತೆಗೆ ಮನೋಜ್​​ ಬಾಜ್ಪೇಯಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸಂದೀಪ್​ ಅವರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ವೈರಲ್​ ಆಗಿತ್ತು.

  ಅಷ್ಟು ಮಾತ್ರವಲ್ಲದೆ ಸಂದೀಪ್​ ಅವರು ಮನೋಜ್​ ಜೊತೆಗೆ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಅಗ್ರಿಮೆಂಟ್​ ಕೂಡ ಆಗಲಿದೆ ಎಂದು ಹೇಳಿದ್ದಾರೆ. ಸಿನಿಮಾ ಬಗ್ಗೆ ಮನೋಜ್​​ ಬಳಿ ಚಿತ್ರಕತೆ ಬಗ್ಗೆ ರೀಡಿಂಗ್​ ಕೊಡಲಿದ್ದಾರೆ ಎಂದು ಹರಿದಾಡಿತ್ತು.

  ಆದರೆ ಈ ಸುದ್ದಿ ಮನೋಜ್​ ಬಾಜ್ಪೇಯಿ ಅವರ ಕಿವಿಗೆ ಬಿದ್ದ ತಕ್ಷಣ ಟ್ವೀಟ್​ ಮಾಡಿದ್ದ ಅವರು ಇದೊಂದು ರಾಂಗ್​ ನ್ಯೂಸ್​​ ಎಂದು ಹೇಳಿದ್ದಾರೆ. ತಾನು ಯಾವುದೇ ರೀತಿಯ ಪಾತ್ರವನ್ನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಇದೀಗ ವಿಕಾಸ್​ ದುಬೆ ಕುರಿತಾಗಿ ಸಿನಿಮಾ ಮೂಡಿಬರಲಿದೆ ಎಂಬ ಸುದ್ದಿ ಸುಳ್ಳು ಸುದ್ದಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ.

  ರೆಸಾರ್ಟ್​​ ಬುಕ್​ ಮಾಡುವ ಅವಶ್ಯಕತೆಯಿಲ್ಲ!; ಏಕೆಂದರೆ ಈ ಕಾರಲ್ಲೇ ಇದೆ ಎಲ್ಲಾ ಸೌಲಭ್ಯ!
  Published by:Harshith AS
  First published: