ಅಭಿಷೇಕ್​ ಬಚ್ಚನ್​ ಅಭಿನಯದ 'ಮನ್​ಮರ್ಜಿಯಾ' ಸಿನಿಮಾದ ಟ್ರೇಲರ್​ನಲ್ಲೇನಿದೆ?

news18
Updated:August 10, 2018, 6:11 PM IST
ಅಭಿಷೇಕ್​ ಬಚ್ಚನ್​ ಅಭಿನಯದ 'ಮನ್​ಮರ್ಜಿಯಾ' ಸಿನಿಮಾದ ಟ್ರೇಲರ್​ನಲ್ಲೇನಿದೆ?
news18
Updated: August 10, 2018, 6:11 PM IST
ನ್ಯೂಸ್​ 18 ಕನ್ನಡ 

ಅಮಿತಾಭ್​ ಬಚ್ಚನ್‍ರಂತೆ ಅವರ ಮಗ ಅಭಿಷೇಕ್ ಮಿಂಚೋಕೆ ಆಗಲಿಲ್ಲ. ತೀರ ನಿನ್ನೆ ಮೊನ್ನೆವರೆಗೂ ಅವರು ಮೇಲೆ ಬರೋಕೆ ಪ್ರಯತ್ನ ಪಟ್ಟು ಪಟ್ಟು ಸೋತು ಹೋದರು. ಆದರೆ ಪತ್ನಿ ಐಶ್ವರ್ಯಾ ರೈಗೆ ಮಾತ್ರ ಈಗಲೂ ಅವಕಾಶಗಳು ಹುಡುಕಿ ಬರುತ್ತಿವೆ.  ಕಮರ್ಷಿಯಲ್​ ಆಗಿ ಐಶೂ ಸಹ ಮೊದಲಿನ ಜಾದೂ ಮಾಡೋಕೆ ಸಾಧ್ಯವಾಗಿಲ್ಲವಾದರೂ, ಈಗ ಪತಿ ಅಭಿಷೇಕ್ ಬಚ್ಚನ್ ಮತ್ತೊಂದು ಕೈ ನೋಡೆಬಿಡೋಣ ಅಂತ ಪಂಜಾಬಿ ಲುಕ್‍ನಲ್ಲಿ ತೆರೆ ಮೇಲೆ ಬರುತ್ತಿದ್ದಾರೆ. ಅದೇ 'ಮನ್​ಮರ್ಜಿಯಾ' ಸಿನಿಮಾದ ಮೂಲಕ.

ಅಭಿಷೇಕ್ ಬಚ್ಚನ್ ಈ ಹೊಸ ಅವತಾರ ಎತ್ತೋಕೆ ಕಾರಣ ನಿರ್ದೇಶಕ ಅನುರಾಗ್ ಕಶ್ಯಪ್. ಈ ಚಿತ್ರದ ಕತೆ ಹೀಗೆ ಬರಬೇಕು ಅಂತ ನಿರ್ಧಾರ ಮಾಡಿದ್ದ ಅನುರಾಗ್ ಕಶ್ಯಪ್, ಈಗ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಅದರಲ್ಲೂ ಅಭಿಷೇಕ್ ಬಚ್ಚನ್‍ಗೆ ಈ ಸಿನಿಮಾ ಮಾಡು ಇಲ್ಲವೆ ಮಡಿ ಆಗಿರುವುದರಿಂದ, ಅವರು ಈ ಪಾತ್ರವನ್ನ ಬಹಳ ನಾಜೂಕಾಗಿ ಕಟ್ಟಿದ್ದಾರೆ.

'ಸಂಜು' ಸಿನಿಮಾದಲ್ಲಿ ರಣಬೀರ್​ ಕಪೂರ್​ ಅವರಿಗಿಂತಲೂ ಕೊಂಚ ಹೆಚ್ಚಾಗಿಯೇ ಮಿಂಚಿದ್ದ ವಿಕ್ಕಿ ಕೌಶಲ್ ಸಹ, ಈ ಸಿನಿಮಾದಲ್ಲಿ ಅಭಿಷೇಕ್‍ಗೆ ತೀವ್ರ ಸ್ಪರ್ಧೆ ಕೊಡಲಿದ್ದಾರೆ.  ಈ ಇಬ್ಬರ ಮಧ್ಯೆ ಸಿಲುಕಿ ಒದ್ದಾಡುವ ಪಾತ್ರದಲ್ಲಿ ತಾಪ್ಸಿ ಪನ್ನು ಅಭಿನಯಿಸಿದ್ದಾರೆ, ಕೆಲವು ಕಡೆ ಹಾಟಾಗಿ ಮತ್ತೆ ಕೆಲವೆಡೆ ಘಾಟಾಗಿ ಮಾತಾಡಿ ಅಬ್ಬಾ ಅಂತಲೂ ಅನ್ನಿಸಿಕೊಳ್ಳುತ್ತಿದ್ದಾರೆ.

ಟ್ರೇಲರ್​ನಲ್ಲಿ ಮೇಲ್ನೋಟಕ್ಕೆ ತ್ರಿಕೋನ ಪ್ರೇಮ ಕಥೆಯಂತೆ ಕಾಣುತ್ತಿದೆ. ಆದರೆ ಒಳಗೊಳಗೆ ಪ್ರೀತಿ, ಪ್ರೇಮ, ಮದುವೆ, ಕುಟುಂಬ ಹೀಗೆ ಈಗಿನ ಕಾಲದಲ್ಲಿಯೂ ಕೆಲವು ಸಂಪ್ರದಾಯ ಕಟ್ಟುಪಾಡುಗಳು ಏನೇನು ಆಟ ಆಡಿಸುತ್ತವೆ ಅನ್ನೋದು ಸಹ ಈ ಚಿತ್ರದಲ್ಲಿದೆಯಂತೆ.

ಮುಂದಿನ ತಿಂಗಳು ಸೆಪ್ಟೆಂಬರ್​ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಅಭಿಷೇಕ್‍ಗೆ ಈ ಸಿನಿಮಾ ಗೆಲುವು ಕೊಟ್ಟರೆ ಪತ್ನಿ ಐಶ್ವರ್ಯಾ ರೈ ಮತ್ತು ಅಪ್ಪ ಬಿಗ್‍ಬಚ್ಚನ್‍ ಅವರಿಗೂ ಖುಷಿ ಆಗಲಿದೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ