HOME » NEWS » Entertainment » MANJESHWARA GOVINDA PAI BIOPIC WHO IS THE HERO OF THE CINEMA HG

ಸಿನಿಮಾವಾಗಲಿದೆ ಮಂಜೇಶ್ವರ ಗೋವಿಂದ ಪೈ ಅವರ ಜೀವನ ಚರಿತ್ರೆ; ಹೀರೋ ಯಾರು ಗೊತ್ತಾ?

ಕರ್ನಾಟಕದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜೀವನ ಚರಿತ್ರೆ ತೆರೆಗೆ ಬರುತ್ತಿದೆ. ಗಣೇಶ್​​ ಕಾಸರಗೋಡು ಅವರ ಕಥೆ-ಚಿತ್ರತಂಥೆಯಲ್ಲಿ ಸಿನಿಮಾ ಮೂಡಿಬರಲಿದೆ.

news18-kannada
Updated:August 8, 2020, 6:39 PM IST
ಸಿನಿಮಾವಾಗಲಿದೆ ಮಂಜೇಶ್ವರ ಗೋವಿಂದ ಪೈ ಅವರ ಜೀವನ ಚರಿತ್ರೆ; ಹೀರೋ ಯಾರು ಗೊತ್ತಾ?
ಮಂಜೇಶ್ವರ ಗೋವಿಂದ ಪೈ
  • Share this:
ಇತ್ತೀಚಿನ ದಿನಗಳಲ್ಲಿ ಜೀವನ ಆಧಾರಿತ ಸಿನಿಮಾಗಳು ತೆರೆಗೆ ಬರುತ್ತಿವೆ. ಸಾಹಿತಿ, ಕವಿ, ಕ್ರೀಡಾಪಟು ಮುಂತಾದವರ ಜೀವನ ಚರಿತ್ರೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಅದರಂತೆ ಸ್ಯಾಂಡಲ್​ವುಡ್​ನ​ ಚಿತ್ರತಂಡವೊಂದು ಮಂಜೇಶ್ವರ ಗೋವಿಂದ ಪೈ ಅವರ ಜೀವನ ಚರಿತ್ರೆಯನ್ನು ಸಿನಿಮಾವಾಗಿ ತೆರೆಗೆ ತರಲು ಪ್ಲಾನ್​ ಮಾಡಿಕೊಂಡಿದೆಯಂತೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಕರ್ನಾಟಕದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜೀವನ ಚರಿತ್ರೆ ತೆರೆಗೆ ಬರುತ್ತಿದೆ. ಗಣೇಶ್​​ ಕಾಸರಗೋಡು ಅವರ ಕಥೆ-ಚಿತ್ರತಂಥೆಯಲ್ಲಿ ಸಿನಿಮಾ ಮೂಡಿಬರಲಿದೆ. ರಘು ಭಟ್​ ಈ ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಸ್ಟಾರ್​ ನಟರೊಬ್ಬರು ಗೋವಿಂದ ಪೈ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರಂತೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿ ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.ಅಂದಹಾಗೆಯೇ ಇತ್ತೀಚೆಗೆ ಮಾನವ ಕಂಪ್ಯೂಟರ್​ ಎಂದು ಪ್ರಸಿದ್ಧಿ ಪಡೆದಿದ್ದ ಕರ್ನಾಟಕ ಮೂಲಕ ಶಕುಂತಲಾ ದೇವಿ ಅವರ ಕುರಿತ ಸಿನಿಮಾ ಬಿಡುಗಡೆಯಾಯಿತು. ವಿದ್ಯಾ ಬಾಲನ್​ ಅವರು ಶಕುಂತಲಾ ದೇವಿ ಅವರ ಪಾತ್ರದಲ್ಲಿ ಮಿಂಚಿದ್ದರು. ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಗೊಂಡ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು.

ಇದೀಗ ಮಂಜೇಶ್ವರ ಗೋವಿಂದ ಪೈ ಅವರ ಕುರಿತು ಸಿನಿಮಾ ಮೂಡಿಬರುತ್ತಿದೆ. ಈ ವಿಚಾರ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. 23 ಭಾಷೆಗಳನ್ನು ಬಲ್ಲವರಾಗಿದ್ದ ಗೋವಿಂದ ಪೈಗೆ ಕನ್ನಡದ ಭಾಷೆಯ ಮೇಲೆ ಎದೆತುಂಬಿದ ಅಭಿಮಾನ. ಭಾಷೆ, ಸಾಹಿತ್ಯ, ಸಂಸ್ಕ್ರತಿ, ಧರ್ಮಗಳ ಸೌಹಾರ್ದತೆಗೆ ಗೋವಿಂದ ಪೈ ಅವರು ಹೆಸರಾಗಿದ್ದರು.
Published by: Harshith AS
First published: August 8, 2020, 6:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories