ಮನಿಷಾ ಕೊಯಿರಾಲ: ನೋವು -ನಲಿವಿನ ಹೂರಣ ದಿ ಬುಕ್ ಆಫ್​ ಅನ್​ಟೋಲ್ಡ್​ ಸ್ಟೋರೀಸ್

news18
Updated:August 11, 2018, 12:46 PM IST
ಮನಿಷಾ ಕೊಯಿರಾಲ: ನೋವು -ನಲಿವಿನ ಹೂರಣ ದಿ ಬುಕ್ ಆಫ್​ ಅನ್​ಟೋಲ್ಡ್​ ಸ್ಟೋರೀಸ್
  • News18
  • Last Updated: August 11, 2018, 12:46 PM IST
  • Share this:
-ನ್ಯೂಸ್​ 18 ಕನ್ನಡ

ಮುಂಬೈ,(ಆ.10): ಒಂದು ಕಾಲದಲ್ಲಿ ಬಿ-ಟೌನ್​ನ ಟಾಪ್​ ನಟಿಯರಲ್ಲಿ ಒಬ್ಬರಾಗಿದ್ದ ಮನಿಷಾ ತಮ್ಮ ವಿವಾಹದ ನಂತರ ಬೆಳ್ಳಿತೆರೆಯಿಂದ ದೂರಾಗಿದ್ದರು. ನಂತರ ಇದ್ದಕ್ಕಿದ್ದಂತೆ ಅವರ ಜೀವನದಲ್ಲಿ ಬಿರುಗಾಳಿಯಂತೆ ಬಂದ ಕ್ಯಾನ್ಸರ್​ನಿಂದ ಅವರ ವೈಯಕ್ತಿಕ ಜೀವನ ಅಧಃಪತನ ಕಂಡಿತ್ತು.

ಇಷ್ಟಾದರೂ ಎದೆಗುಂದದ ನಟಿ ಮನಿಷಾ ಕ್ಯಾನ್ಸರ್​ನೊಂದಿಗೆ ಹೋರಾಡಿ ಮತ್ತೆ ಫಿನಿಕ್ಸ್​ ಹಕ್ಕಿಯಂತೆ ಎದ್ದು ಬಂದರು. ಹಿಂದೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾಗ ಅವರು ಅನುಭವಿಸಿದ್ದ ಯಾತನೆ ಹಾಗೂ ಎದುರಿಸಿದ್ದ ಸವಾಲುಗಳ ಅನುಭವಗಳನ್ನೇ ಪುಸ್ತಕ ರೂಪದಲ್ಲಿ ಹೊರ ತರಲಿದ್ದು, ತಮ್ಮ ಚೊಚ್ಚಲ ಪುಸ್ತಕದ ಮುಖಪುಟವನ್ನು ಮೊದಲ ಬಾರಿಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

'ದಿ ಬುಕ್ ಆಫ್​ ಅನ್​ಟೋಲ್ಡ್​ ಸ್ಟೋರೀಸ್' ಹೆಸರಿನ ಈ ಪುಸ್ತಕದಲ್ಲಿ 2012 ರಿಂದ ಕ್ಯಾನ್ಸರ್​​ ವಿರುದ್ಧ ನಡೆಸಿದ  ಹೋರಾಟದ ಅನುಭವಗಳ ಬಗ್ಗೆ ಬರೆದಿದ್ದಾರೆ. ಅಷ್ಟೇ ಅಲ್ಲದೇ ಕೊಯಿರಾಲ ಅವರ ಬದುಕಿನ ಅನೇಕ ಚಿತ್ರಣಗಳು, ಹೋರಾಟಗಳು ಮತ್ತು ಯಾರಿಗೂ ತಿಳಿಯದ ವಿಷಯ ಮತ್ತು ಘಟನೆಗಳನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ. ನಗುಮುಖದ ಹಿಂದಿರುವ ಸುಪ್ತ ನೋವು-ನಲಿವಿನ ಹೂರಣ ಈ ಪುಸ್ತಕದಲ್ಲಿ ಇರಲಿದೆ.

'ಪುಸ್ತಕ ಬರೆಯುವಂತೆ ಪ್ರೋತ್ಸಾಹಿಸಿದ ಪೆಂಗ್ವಿನ್​ ಇಂಡಿಯಾ ಹಾಗೂ ಗುರ್​ವೀರ್​​ ಛಾಂದ ಅವರಿಗೆ ನನ್ನ ಧನ್ಯವಾದಗಳು. ಅನ್​ಟೋಲ್ಡ್​ ಸ್ಟೋರಿಸ್​ ನನ್ನ ಮೊದಲ ಹೊತ್ತಿಗೆ' ಎಂದು ಅವರು ಹೇಳಿದ್ದಾರೆ.
'ಇದು ಅತಿ ಹೆಚ್ಚು ಮಾರಾಟವಾಗುವ ಪುಸ್ತಕವಾಗಲಿದೆ ಎಂಬ ಭರವಸೆಯಿದೆ. ಕ್ಯಾನ್ಸರ್​ನಿಂದ ಬಳಲುತ್ತಿರುವ ನನ್ನ ತಂಗಿಯನ್ನೂ ಒಳಗೊಂಡಂತೆ ಅನೇಕ ಜನರ ಕೋಟ್ಯಂತರ ಕಥೆಗಳನ್ನು ಈ ಪುಸ್ತಕ ಒಳಗೊಂಡಿದೆ' ಎಂದ ಅವರು ಭಾವುಕರಾದರು.

ಮನಿಷಾ ಕೊನೆಯದಾಗಿ ಪರದೆ ಮೇಲೆ ಕಾಣಿಸಿಕೊಂಡಿದ್ದು 'ಸಂಜು' ಚಿತ್ರದಲ್ಲಿ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದಲ್ಲಿ ಮನಿಷಾ ಸಂಜಯ್​ ದತ್​ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮನಿಷಾ ನಿಜ ಜೀವನದ ನರ್ಗೀಸ್​ ಅವರನ್ನೂ ಸಂಪೂರ್ಣವಾಗಿ ಕಣ್ಮುಂದೆ ಬರುವಂತೆ ಅಭಿನಯಿಸಿದ್ದರು. ರಾಜ್​ಕುಮಾರ್​​ ಹಿರಾನಿ ನಿರ್ದೇಶನದ ಈ ಸಿನಿಮಾ ನಟ ಸಂಜಯ್​ ದತ್​ ಅವರ ಜೀವನಾಧಾರಿತ ಚಿತ್ರವಾಗಿದೆ.
First published: August 11, 2018, 12:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading