PS-1 Movie: ಪೊನ್ನಿಯಿನ್​ ಸೆಲ್ವನ್​ ಸಿನಿಮಾದ ಐಶ್ವರ್ಯಾ ರೈ ಫಸ್ಟ್​ ಲುಕ್ ರಿಲೀಸ್​, ಮಹಾರಾಣಿ ಲುಕ್​ ಕಂಡು ಫ್ಯಾನ್ಸ್​ ದಂಗು!

Aishwarya Rai Bachchan: ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶಿಸುತ್ತಿದ್ದು, ಈಗಾಗಲೇ ಇರುವ ಮಾಹಿತಿಯಂತೆ ಇದು ಎರಡು ಭಾಗಗಳಲ್ಲಿ ಬರಲಿದೆ.

ಸಿನಿಮಾದ ಪೋಸ್ಟರ್​

ಸಿನಿಮಾದ ಪೋಸ್ಟರ್​

  • Share this:
ಮಣಿರತ್ನಂ ನಿರ್ದೇಶನದಲ್ಲಿ (Mani Ratnam) ಪೊನ್ನಿಯಿನ್ ಸೆಲ್ವನ್ (Ponniyin Selvan)ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ನಟಿಸುತ್ತಿರುವುದು ಗೊತ್ತಿದೆ. ಈ ಸಿನಿಮಾ ಬಗ್ಗೆ ಐಶ್​ ಅಭಿಮಾನಿಗಳು ಸಹ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಿಂದಿ ಮನರಂಜನಾ ಉದ್ಯಮದಲ್ಲಿ ನಾವು ಹೊಂದಿರುವ ಅತ್ಯುತ್ತಮ ಮತ್ತು ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿಗಳಲ್ಲಿ ಐಶ್ವರ್ಯಾ ರೈ ಕೂಡ ಒಬ್ಬರು. ಅಕ್ಷರಶಃ ಪ್ರತಿಯೊಬ್ಬರ ಹೃದಯಗಳನ್ನು ಗೆದ್ದಿದ್ದಾರೆ. 1994 ರಲ್ಲಿ ಮಿಸ್ ವರ್ಲ್ಡ್ ಆಗಿ ಯಶಸ್ವಿಯಾದ ನಂತರ ಅವರು ಹಿಂದಿರುಗಿ ನೋಡಿಲ್ಲ. ಈ ಸುಂದರಿ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಅದ್ಭುತವಾಗಿ ಕಾಣಿಸುತ್ತಿರುವ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಫುಲ್ ಖುಷ್​ ಆಗಿದ್ದಾರೆ.

ಅದ್ಭುತವಾಗಿ ಕಾಣುತ್ತಿದ್ದಾರೆ ಐಶ್​

ಈ ಸಿನಿಮಾದಲ್ಲಿ ಐಶ್​ ಫಸ್ಟ್ ಲುಕ್‌ಗಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾದು ಕುಳಿತಿದ್ದು. ಅಂತಿಮವಾಗಿ ಕೊನೆಗೊಂಡಿದೆ. ಲೈಕಾ ಪ್ರೊಡಕ್ಷನ್ಸ್ ಇಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರ ಫಸ್ಟ್​ ಲುಕ್​ ಪಜುವೂರಿನ ರಾಣಿ 'ನಂದಿನಿ' ಎಂದು ಪೋಸ್ಟರ್ ಹಂಚಿಕೊಂಡಿದೆ. ಈ ಪೋಸ್ಟರ್​ನಲ್ಲಿ ನಾವು ಅವರ ಸೌಂದರ್ಯ ನೋಡಿ ಮಾರುಹೋಗದೇ ಇರುವುದಿಲ್ಲ.

ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶಿಸುತ್ತಿದ್ದು, ಈಗಾಗಲೇ ಇರುವ ಮಾಹಿತಿಯಂತೆ ಇದು ಎರಡು ಭಾಗಗಳಲ್ಲಿ ಬರಲಿದೆ. ನಿರ್ದೇಶಕ ಮಣಿರತ್ನಂ ಅವರು 'ಪೊನ್ನಿಯಿನ್ ಸೆಲ್ವನ್-1' ಎಂಬ ಮಹಾಕಾವ್ಯ ಕಾದಂಬರಿಯ ರೂಪಾಂತರದ ಮೊದಲ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರತಂಡದ ಮಾಹಿತಿ ಪ್ರಕಾರ ಸೆಪ್ಟೆಂಬರ್ 30, 2022 ರಂದು ಥಿಯೇಟರ್‌ಗಳಿಗೆ ಬರಲಿದೆ.

ಸದ್ಯದಲ್ಲಿಯೇ ಸಿನಿಮಾ ಬಿಡುಗಡೆ

ಈ ಸಿನಿಮಾ ತಮಿಳು, ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ ಬಚ್ಚನ್, ತ್ರಿಷಾ, ಐಶ್ವರ್ಯ ಲಕ್ಷ್ಮಿ, ಶರತ್ ಕುಮಾರ್, ವಿಕ್ರಮ್ ಪ್ರಭು, ಸೋಭಿತಾ ಧೂಳಿಪಾಲ, ಜಯರಾಂ, ಪ್ರಭು, ಪಾರ್ತಿಬನ್ ಮತ್ತು ಪ್ರಕಾಶ್ ರಾಜ್ ಅವರ ತಾರಾಬಳಗವನ್ನು ಹೊಂದಿರುವ ಬೃಹತ್ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದ್ದು, 1950 ರ ದಶಕದಲ್ಲಿ ಈ ಕಥೆ ಧಾರಾವಾಹಿಯಾಗಿ ಪ್ರಸಾರವಾಗಿತ್ತು.ಈ ಕಥೆಯು 10 ನೇ ಶತಮಾನದಲ್ಲಿ ಚೋಳ ಸಾಮ್ರಾಜ್ಯದ ಸಮಯದಲ್ಲಿ ಆಳುವ ಕುಟುಂಬದ ವಿವಿಧ ಶಾಖೆಗಳ ನಡುವಿನ ಅಧಿಕಾರದ ಹೋರಾಟವು ಹೇಗೆ ಉತ್ತರಾಧಿಕಾರಿಗಳ ನಡುವೆ ಹಿಂಸಾತ್ಮಕ ಬಿರುಕುಗಳನ್ನು ಉಂಟುಮಾಡಿತು. ರಾಜರಾಜ ಚೋಳ ಭಾರತೀಯ ಇತಿಹಾಸದಲ್ಲಿ ಸುವರ್ಣಯುಗವನ್ನು ಪ್ರಾರಂಭಿಸಿ, ಹೇಗೆ ಮಹಾನ್ ನಾಯಕನಾಗುತ್ತಾನೆ ಎಂಬುದರ ಆಧಾರಿತವಾಗಿದೆ.

ಇದನ್ನೂ ಓದಿ: ಜುಲೈ 6 ಕಿಚ್ಚನ ಬದುಕಿನ ವಿಶೇಷ ದಿನ, ಸುದೀಪ್ ಗೆ ಕಿಚ್ಚ ಅನ್ನೋ ಬಿರುದು ಬಂದಿದ್ದು ಹೇಗೆ ಅನ್ನೋ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ

ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಛಾಯಾಗ್ರಹಣ ಮತ್ತು ತೋಟ ಥರ್ರಾಣಿ  ವಿನ್ಯಾಸ ಮತ್ತು ಶ್ರೀಕರ್ ಪ್ರಸಾದ್ ಸಂಕಲನ ಈ ಸಿನಿಮಾಗಿದೆ.
Published by:Sandhya M
First published: