• Home
  • »
  • News
  • »
  • entertainment
  • »
  • Ponniyin Selvan Controversy: ಪಾತ್ರಕ್ಕೆ ನಾಮ ಇಟ್ಟಿದ್ದಕ್ಕೇ ರೊಚ್ಚಿಗೆದ್ದ ತಮಿಳರು, ಮಣಿರತ್ನಂಗೆ ಶುರುವಾಯ್ತು ಡವ ಡವ!

Ponniyin Selvan Controversy: ಪಾತ್ರಕ್ಕೆ ನಾಮ ಇಟ್ಟಿದ್ದಕ್ಕೇ ರೊಚ್ಚಿಗೆದ್ದ ತಮಿಳರು, ಮಣಿರತ್ನಂಗೆ ಶುರುವಾಯ್ತು ಡವ ಡವ!

ಪೊನ್ನಿಯನ್​ ಸೆಲ್ವನ್​ ಚಿತ್ರದ ಪೋಸ್ಟರ್​​

ಪೊನ್ನಿಯನ್​ ಸೆಲ್ವನ್​ ಚಿತ್ರದ ಪೋಸ್ಟರ್​​

Ponniyin Selvan Controversy: ಚೋಳರ ಕಾಲದ ಕಥೆಯಾಗಿರುವ ಕಾರಣ ಈ ಸಿನಿಮಾ ಬಿಡುಗಡೆಯಾದರೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿದೆ ಎಂದೇ ನಿರೀಕ್ಷೆ ಮಾಡಲಿದೆ. ಬಿಗ್​ ಕ್ಯಾಸ್ಟ್ ಇರುವ ಈ ಸಿನಿಮಾದ ಟ್ರೈಲರ್​ ಈಗಾಗಲೇ ಸಖತ್​ ಸದ್ದು ಮಾಡಿದೆ. ಇನ್ನೇನು ಕೇವಲ 3 ದಿನದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

ಮುಂದೆ ಓದಿ ...
  • Share this:

ತಮಿಳಿನ ಬಹುನಿರೀಕ್ಷಿತ ಸಿನಿಮಾ `ಪೊನ್ನಿಯನ್ ಸೆಲ್ವನ್’ (Ponniyin Selvan) ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಎಲ್ಲ ಭಾಷೆಯ ಸಿನಿರಸಿಕರು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಈ ಪೊನ್ನಿಯನ್​ ಸೆಲ್ವನ್​ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. `ಮಣಿರತ್ನಂ’ (Maniratnam) ನಿರ್ದೇಶನದ ನಿರೀಕ್ಷಿತ ಸಿನಿಮಾ `ಪೊನ್ನಿಯನ್ ಸೆಲ್ವನ್’ ಚಿತ್ರದಲ್ಲಿ ಐಶ್ವರ್ಯ ರೈ (Aishwarya Rai) , ವಿಕ್ರಮ್ (Vikram) , ಕಾರ್ತಿ (Karthi) ತ್ರಿಷಾ (Trisha) , ಜಯಂ ರವಿ (Jayam Ravi) ಹೀಗೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೇ ಸೆಪ್ಟೆಂಬರ್ 30ಕ್ಕೆ ತೆರೆಗೆ ಬರಲು ಈ ಚಿತ್ರ ರೆಡಿಯಾಗಿದೆ. ಚೋಳರ ಕಾಲದ ಕಥೆಯಾಗಿರುವ ಕಾರಣ ಈ ಸಿನಿಮಾ ಬಿಡುಗಡೆಯಾದರೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿದೆ ಎಂದೇ ನಿರೀಕ್ಷೆ ಮಾಡಲಿದೆ. ಬಿಗ್​ ಕ್ಯಾಸ್ಟ್ ಇರುವ ಈ ಸಿನಿಮಾದ ಟ್ರೈಲರ್​ ಈಗಾಗಲೇ ಸಖತ್​ ಸದ್ದು ಮಾಡಿದೆ. ಇನ್ನೇನು ಕೇವಲ 3 ದಿನದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.


ಪೊನ್ನಿಯನ್​ ಸೆಲ್ವನ್​ ಕಥೆ ಹುಟ್ಟಿದ್ದೆಲ್ಲಿ?


ಈ ಸಿನಿಮಾ ಮೇಲೆ ಇಷ್ಟು ಕ್ರೇಜ್​ ಸೃಷ್ಟಿಯಾಗಲು ಕಾರಣ ಏನು ಅಂದರೆ ಅದು ಚಿತ್ರದ ಕಥೆ. ಚೋಳರ ಕಾಲವನ್ನು ತೆರೆ ಮೇಲೆ ಮಣಿರತ್ನಂ ತರುತ್ತಿದ್ದಾರೆ. ಈ ಸಿನಿಮಾ ನಿಜಕ್ಕೂ ನೈಜ್ಯ ಕಥೆಯನ್ನು ಒಳಗೊಂಡಿರುತ್ತಾ? ಅಥವಾ ಇದೊಂದು ಕಟ್ಟುಕಥೆಯಾ ? ಎಂಬ ಪ್ರಶ್ನೆ ಇದೀಗ ಜೋರಾಗಿದೆ. ಅದಕ್ಕೆ ಒಂದು ಕಾರಣವಿದೆ. ಕೃಷ್ಣ ಮೂರ್ತಿ ಎಂಬ ವ್ಯಕ್ತಿಯೊಬ್ಬರು ಕಲ್ಕಿ ಎಂಬ ತಮಿಳು ಭಾಷೆಯ ಪತ್ರಿಕೆ ನಡೆಸುತ್ತಿದ್ದರು. ಆದರೆ, ಅದು ಹೇಳಿಕೊಳ್ಳುವ ಮಟ್ಟಕ್ಕೆ ಹೆಸರು ಮಾಡಲಿಲ್ಲ. ಆಗ ಈ ಪೊನ್ನಿಯನ್​ ಸೆಲ್ವನ್​ ಫಿಕ್ಷನಲ್​ ಕಥೆಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಣೆ ಮಾಡಲು ಶುರು ಮಾಡಿದ್ದರು.


1950ರಲ್ಲಿ ಪತ್ರಿಕೆಯಲ್ಲಿ ಪ್ರಕಟಣೆಯಾದ ಕಥೆ!


ಯಾವ ಮಟ್ಟಕ್ಕೆ ಈ ಕಲ್ಕಿ ಕೃಷ್ಣ ಮೂರ್ತಿ ಫೇಮಸ್​ ಆದರ ಅಂದರೆ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇವರ ಪತ್ರಿಕೆಯನ್ನು ಈ ಕಾದಂಬರಿ ಓದಲೆಂದೇ ಖರೀದಿಸುತ್ತಿದ್ದರು. ಆದರೆ, ಆ ಕಾಲದಲ್ಲಿ ಎಲ್ಲರಿಗೂ ಈ ಪತ್ರಿಕೆ ಕೊಂಡುಕೊಳ್ಳುವಷ್ಟು ಸಾಮರ್ಥ್ಯ ಇರಲಿಲ್ಲ. ಊರಿನ ದೊಡ್ಡ ಮನುಷ್ಯರು ಈ ಕಲ್ಕಿ ಪತ್ರಿಕೆಯನ್ನು ಕೊಂಡುಕೊಳ್ಳುತ್ತಿದ್ದರು. ಅವರು ಓದಿ ಮುಗಿಸಿದ ಬಳಿಕ ಒಬ್ಬೊಬ್ಬರೇ ಈ ಕಾದಂಬರಿಯನ್ನು ಓದುತ್ತಿದ್ದರು. ಈಗಿನ ಕಾಲದ ಮಾರ್ವೆಲ್ಸ್​ಗೆ ಎಷ್ಟು ಪ್ರಾಮುಖ್ಯತೆ ಇದೆಯೋ? ಅಂದಿನ ಕಾಲದಲ್ಲಿ ಈ ಕಲ್ಕಿ ಪತ್ರಿಕೆ ಅಷ್ಟು ಪ್ರಖ್ಯಾತಿಯನ್ನು ಗಳಿಸಿತ್ತು.


ಇದನ್ನೂ ಓದಿ: ಐಶ್ವರ್ಯಾ ರೈ-ತ್ರಿಷಾ ಒಟ್ಟಿಗೆ ಕಾಣಿಸಿಕೊಂಡೇ ಇಲ್ವಾ? ಹೀಗೇಕೆ ಮಾಡಿದ್ರು ಮಣಿರತ್ನಂ?


ಕಾದಂಬರಿಯಿಂದ ಪುಸ್ತಕವಾದ ಈ ಕಥೆ!


ವಾರಕ್ಕೆ ಒಮ್ಮೆ ತಮ್ಮ ಪತ್ರಿಕೆಯಲ್ಲಿ ಈ ಪೊನ್ನಿಯನ್​ ಸೆಲ್ವನ್​ ಕಥೆಯನ್ನು ಕಾದಂಬರಿ ರೂಪದಲ್ಲಿ ಕಲ್ಕಿ ಕೃಷ್ಣ ಮೂರ್ತಿ ಪ್ರಕಟಣೆ ಮಾಡುತ್ತಿದ್ದಾರೆ. ಈ ಪತ್ರಿಕೆ ಬರುತ್ತಿದೆ ಅಂದರೆ, ಜನರೆಲ್ಲ ಅಂದಿನ ಕೆಲಸವನ್ನು ಬೇಗ ಬೇಗ ಮುಗಿಸಿ ಈ ಪೊನ್ನಿಯನ್​ ಸೆಲ್ವನ್​ ಕಥೆ ಮುಂದೆನಾಯ್ತು ಎಂಬುದನ್ನು ತಿಳಿದುಕೊಳ್ಳಲು ಕಾತುರರಾಗಿದ್ದರು. ಇಡೀ ತಮಿಳುನಾಡಿನಾದ್ಯಂತ ಸಿಕ್ಕಾಪಟ್ಟೆ ಹೆಸರು ಮಾಡಿತು. ಇದಾದ ಬಳಿಕ ಜನರು ಆ ಕಥೆಯನ್ನು ನಿಜವಾಗಲು ನಡೆದಿದೆ ಎಂದು ನಂಬಲು ಶುರು ಮಾಡಿದರು. ಈ ಪತ್ರಿಕೆಯಲ್ಲಿ ಪ್ರಕಟಣೆಯಾದ ಬಳಿಕ ಪುಸ್ತಕ ರೂಪದಲ್ಲಿಈ ಕಥೆ ಪ್ರಕಟಣೆ ಆಯ್ತು.


ಎಲ್ಲ ಭಾಷೆಗಳಲ್ಲೂ ಸೂಪರ್​ ಹಿಟ್​!


ಪುಸ್ತಕ ರೂಪದಲ್ಲಿ ಬಂದ ಈ ಪೊನ್ನಿಯನ್​ ಸೆಲ್ವನ್​ ಕಥೆ ಸೂಪರ್​ ಡೂಪರ್​ ಹಿಟ್ ಎನಿಸಿಕೊಂಡಿತ್ತು. ಇದು ನಿಜವಾದ ಕಥೆ ಎಂದೇ ಎಲ್ಲರೂ ನಂಬಲು ಶುರು ಮಾಡಿದರು. ಪುಸ್ತಕ ಪ್ರಕಟಣೆ ಬಳಿಕ ಇದನ್ನು ಹಲವು ಪತ್ರಿಕೆಗಳು ಮತ್ತೆ ಹಲವು ದಿನಗಳ ಕಾಲ ಕಾದಂಬರಿ ರೂಪದಲ್ಲಿ ಪ್ರಕಟಣೆ ಹೊರಡಿಸಿದರು. ಇದೀಗ ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶಿಸಿದ್ದಾರೆ. ತಮಿಳುನಾಡಿನಲ್ಲಿ ಪುಸ್ತಕ ಹಾಗೂ ಕಾದಂಬರಿ ಓದಿರುವ ಜನರು, ಈ ಸಿನಿಮಾದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದರೆ ಒಪ್ಪುತ್ತಾರಾ? ಎನ್ನುವ ಪ್ರಶ್ನೆ ಎದ್ದಿದೆ.


ಇದನ್ನೂ ಓದಿ:  ಕನ್ನಡದ ಕಾಂತಾರ, ತೋತಾಪುರಿಗೆ ಬೀಳುತ್ತಾ ಪೊನ್ನಿಯಿನ್ ಸೆಲ್ವನ್ ಏಟು?


ಪೊನ್ನಿಯನ್​ ಸೆಲ್ವನ್​ ಅಂದ್ರೆ ಕಾವೇರಿ ಪುತ್ರ?


ಕನ್ನಡದಲ್ಲಿ ಪೊನ್ನಿಯನ್​ ಸೆಲ್ವನ್​ ಅರ್ಥ ನೋಡುವುದಾದರೆ ಕಾವೇರಿ ಪುತ್ರ ಎಂದರ್ಥ. ಇನ್ನೂ ಸಿನಿಮಾದಲ್ಲಿ ಕಾವೇರಿ, ಕರ್ನಾಟಕಕ್ಕೆ ಸಂಬಂಧಿಸಿದ ದೃಶ್ಯಗಳು ಇರುತ್ತಾವಾ? ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಪೊನ್ನಿಯನ್ ಸೆಲ್ವನ್​ ಚಿತ್ರ ಬೇರೆ ಬೇರೆ ವಿಚಾರಗಳಿಗೆ ಸುದ್ದಿಯಾಗುತ್ತಿದೆ. ಸಣ್ಣ ಬದಲಾವಣೆಯನ್ನು ಒಪ್ಪದ ತಮಿಳು ಮಂದಿ ಈ ಚಿತ್ರದಲ್ಲಿ ಪಾತ್ರಕ್ಕೆ ನಾಮ ಹಾಕಿರುವುದನ್ನೇ ಖಂಡಿಸಿದ್ದಾರೆ. ಇನ್ನೂ ಚಿತ್ರದಲ್ಲಿ ಬೇರೆ ಏನಾದರೂ ಬದಲಾವಣೆ ಇದ್ದರೆ ಒಪ್ಪುತ್ತಾರಾ ಎಂಬ ಪ್ರಶ್ನೆ ಮೂಡಿದೆ.

Published by:ವಾಸುದೇವ್ ಎಂ
First published: