Mani Ratnam: ಅನಾರೋಗ್ಯ ಕಾರಣ ಮಣಿರತ್ನಂ ಆಸ್ಪತ್ರೆಗೆ ದಾಖಲು, ಈಗ ಹೇಗಿದ್ದಾರೆ ಖ್ಯಾತ ನಿರ್ದೇಶಕ?

Mani Ratnam admitted to Hospital: ಈ ಹಿಂದೆ ಪೊನ್ನಿಯಿನ್ ಸೆಲ್ವನ್ ಸಿನಿಮಾದ ನಟ ವಿಕ್ರಮ್ ಅವರು ಹಠಾತ್ ಅನಾರೋಗ್ಯದ ಕಾರಣದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ವಿಕ್ರಮ್ ಪಾಲ್ಗೊಳ್ಳಬೇಕಿತ್ತು.

ಮಣಿರತ್ನಂ

ಮಣಿರತ್ನಂ

  • Share this:
ಆರು ಬಾರಿ ರಾಷ್ಟ್ರಪ್ರಶಸ್ತಿ (National Award) ಪಡೆದಿರುವ ಚಿತ್ರನಿರ್ಮಾಪಕ ಮಣಿರತ್ನಂ (Mani Ratnam) ಅವರನ್ನು ಚೆನ್ನೈನ (Chennai) ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಕೋವಿಡ್ -19 ರೋಗದ ಕೆಲ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲೆ ಹೆಸರಾಂತ ನಿರ್ದೇಶಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡ ರತ್ನಂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಅವರ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಬಂದಿಲ್ಲ ಎಂದು ಸಹ ಆಸ್ಪತ್ರೆಗಳು ಮೂಲಗಳು ತಿಳಿಸಿವೆ.

ಕೊರೊನಾ ಸೋಂಕು ತಗುಲಿಲ್ಲ

ಇನ್ನು ಮೂಲಗಳ ಪ್ರಕಾರ ಮಣಿ ರತ್ನಂ ಅವರ ಮನೆಯಲ್ಲಿ ಅವರ 90 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಪೋಷಕರಿರುವ ಕಾರಣದಿಂದ ಅವರ ಆರೋಗ್ಯ ಸುರಕ್ಷತೆಯ ಕಾರಣದಿಂದ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರತ್ನಂ ಅವರ ಬಹು ನಿರೀಕ್ಷಿತ ಸಿನಿಮಾ ಪೊನ್ನಿಯಿನ್ ಸೆಲ್ವನ್: ಭಾಗ I (Ponniyin Selvan) ರ ಟೀಸರ್ ಬಿಡುಗಡೆಗೆ ಆಗಿ 10 ದಿನಗಳ ನಂತರ ಈ ವಿಚಾರ ಹೊರ ಬಂದಿದೆ.

ರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ವಿಕ್ರಮ್, ಐಶ್ವರ್ಯ ರೈ, ಜಯಂ ರವಿ, ಕಾರ್ತಿ, ತ್ರಿಶಾ, ಜಯರಾಮ್, ಐಶ್ವರ್ಯ ಲಕ್ಷ್ಮಿ, ಆರ್. ಶರತ್‌ಕುಮಾರ್ ಮತ್ತು ಶೋಭಿತಾ ಧೂಳಿಪಾಲ ನಟಿಸಿದ್ದಾರೆ. ಚಿತ್ರದ ಟೀಸರ್ ಮತ್ತು ಪೋಸ್ಟರ್‌ಗಳಿಗೆ ಜನರಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಈ ಹಿಂದೆ ಪೊನ್ನಿಯಿನ್ ಸೆಲ್ವನ್ ಸಿನಿಮಾದ ನಟ ವಿಕ್ರಮ್ ಅವರು ಹಠಾತ್ ಅನಾರೋಗ್ಯದ ಕಾರಣದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ವಿಕ್ರಮ್ ಪಾಲ್ಗೊಳ್ಳಬೇಕಿತ್ತು. ಆದರೆ ಅದೇ ದಿನ ಅವರ ಆರೋಗ್ಯ ಸಮಸ್ಯೆ ಉಂಟಾದ ಕಾರಣ, ಅಭಿಮಾನಿಗಳ ಆತಂಕಕ್ಕೆ ಸಹ ಕಾರಣವಾಗಿತ್ತು.

ಇನ್ನು ಮೊನ್ನೆಯಷ್ಟೇ ಮಣಿರತ್ಂ ಹಾಗೂ ನಟ ವಿಕ್ರಮ್​ ಗೆ ಕೋರ್ಟ್​ ನೋಟೀಸ್​ ಕಳಿಸಿತ್ತು. ಈ ಚಿತ್ರದಲ್ಲಿ ವಿಕ್ರಮ್ ಐತಿಹಾಸಿಕವಾಗಿ ತಮಿಳುನಾಡನ್ನು ಆಳಿದ್ದ ಚೋಳರ ಸಾಮ್ರಾಜ್ಯದ ಆದಿತ್ಯ ಕರಿಕಾಲನ್ ಎಂಬ ರಾಜನ ಪಾತ್ರ ನಿರ್ವಹಿಸಿದ್ದಾರೆ. ಸದ್ಯಕ್ಕೆ ವಿವಾದ ಉಂಟಾಗಿರುವ ವಿಷಯವೆಂದರೆ ಈ ಚಿತ್ರದಲ್ಲಿ ಚೋಳರನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸೆಲ್ವಂ ಎಂಬ ವಕೀಲರು ದೂರಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಅವರ ಪ್ರಕಾರ, ಚೋಳರು ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ, ಚಿತ್ರದಲ್ಲಿ ವಿಕ್ರಮ್ ಅವರು ಹಣೆಯ ಮೇಲೆ ತಿಲಕವಿಟ್ಟುಕೊಂಡಿರುವುದನ್ನು ತೋರಿಸಲಾಗಿದ್ದು ಇದು ಚೋಳರನ್ನು ತಪ್ಪಾಗಿ ಬಿಂಬಿಸುವಂತಾಗಿದೆ ಎನ್ನಲಾಗಿದೆ.

Mani Ratnam at the Oh Kadhal Kanmani aka OK Kanmani Audio Success Meet Photos


ಇದನ್ನೂ ಓದಿ: ಹಳೆಯ ಫೋಟೋ ಶೇರ್ ಮಾಡಿಕೊಂಡು ಈ ಸಿನಿಮಾ ನನಗೆ ಎಲ್ಲ ಕೊಟ್ಟಿದೆ ಎಂದ ರಾಧಿಕಾ ಪಂಡಿತ್

ಸೆಪ್ಟೆಂಬರ್​ 30ರಂದು ಸಿನಿಮಾ ಬಿಡುಗಡೆ

ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶಿಸುತ್ತಿದ್ದು, ಈಗಾಗಲೇ ಇರುವ ಮಾಹಿತಿಯಂತೆ ಇದು ಎರಡು ಭಾಗಗಳಲ್ಲಿ ಬರಲಿದೆ. ನಿರ್ದೇಶಕ ಮಣಿರತ್ನಂ ಅವರು 'ಪೊನ್ನಿಯಿನ್ ಸೆಲ್ವನ್-1' ಎಂಬ ಮಹಾಕಾವ್ಯ ಕಾದಂಬರಿಯ ರೂಪಾಂತರದ ಮೊದಲ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರತಂಡದ ಮಾಹಿತಿ ಪ್ರಕಾರ ಸೆಪ್ಟೆಂಬರ್ 30, 2022 ರಂದು ಥಿಯೇಟರ್‌ಗಳಿಗೆ ಬರಲಿದೆ.

ಈ ಸಿನಿಮಾ ತಮಿಳು, ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಅದ್ಭುತ ತಾರಾಬಳಗವನ್ನು ಹೊಂದಿರುವ ಬೃಹತ್ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದ್ದು, 1950 ರ ದಶಕದಲ್ಲಿ ಈ ಕಥೆ ಧಾರಾವಾಹಿಯಾಗಿ ಪ್ರಸಾರವಾಗಿತ್ತು.ಇದನ್ನೂ ಓದಿ: ನಿಮ್ಮ ಭಾಷೆಯಲ್ಲೇ ವಿಕ್ರಾಂತ್ ರೋಣ ಸಿನಿಮಾ ನೋಡಬಹುದು! ಕನ್ನಡ ಸಿನಿಮಾರಂಗದಲ್ಲಿ ಇದು ಮೊದಲ ಪ್ರಯತ್ನ

ಈ ಕಥೆಯು 10 ನೇ ಶತಮಾನದಲ್ಲಿ ಚೋಳ ಸಾಮ್ರಾಜ್ಯದ ಸಮಯದಲ್ಲಿ ಆಳುವ ಕುಟುಂಬದ ವಿವಿಧ ಶಾಖೆಗಳ ನಡುವಿನ ಅಧಿಕಾರದ ಹೋರಾಟವು ಹೇಗೆ ಉತ್ತರಾಧಿಕಾರಿಗಳ ನಡುವೆ ಹಿಂಸಾತ್ಮಕ ಬಿರುಕುಗಳನ್ನು ಉಂಟುಮಾಡಿತು. ರಾಜರಾಜ ಚೋಳ ಭಾರತೀಯ ಇತಿಹಾಸದಲ್ಲಿ ಸುವರ್ಣಯುಗವನ್ನು ಪ್ರಾರಂಭಿಸಿ, ಹೇಗೆ ಮಹಾನ್ ನಾಯಕನಾಗುತ್ತಾನೆ ಎಂಬುದರ ಆಧಾರಿತವಾಗಿದೆ. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಛಾಯಾಗ್ರಹಣ ಮತ್ತು ತೋಟ ಥರ್ರಾಣಿ  ವಿನ್ಯಾಸ ಮತ್ತು ಶ್ರೀಕರ್ ಪ್ರಸಾದ್ ಸಂಕಲನ ಈ ಸಿನಿಮಾಗಿದೆ.
Published by:Sandhya M
First published: