Mandira Bedi - Raj Kaushal: ಪತಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮಂದಿರಾ ಬೇಡಿ, ಕೊನೆತನಕ ಜೊತೆಗೇ ಸಾಗಿ ವಿದಾಯ !

Mandira Bedi- Raj Kaushal: ಸಮಾಜದ ಕಟ್ಟುಪಾಡುಗಳನ್ನು ಮೀರಿ ಬದುಕಿದವರು ಮಂದಿರಾ ಬೇಡಿ ಮತ್ತು ರಾಜ್ ಕೌಶಲ್. ಪತಿ ರಾಜ್ ಕೌಶಲ್ ನಿಧರಾದಾಗಲೂ ಪಾರ್ಥಿವ ಶರೀರದ ಜೊತೆಗೇ ಸ್ಮಶಾನಕ್ಕೆ ತೆರಳಿದ ಮಂದಿರಾ ತಾವೇ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಪತಿಯ ಅಂತ್ಯಸಂಸ್ಕಾರದಲ್ಲಿ ಮಂದಿರಾ ಬೇಡಿ

ಪತಿಯ ಅಂತ್ಯಸಂಸ್ಕಾರದಲ್ಲಿ ಮಂದಿರಾ ಬೇಡಿ

  • Share this:
    Mandira Bedi - Raj Kaushal: ನಟಿ ಮಂದಿರಾ ಬೇಡಿ ಮತ್ತವರ ಪತಿ ರಾಜ್ ಕೌಶಲ್ ಹೆಣ್ಣುಮಕ್ಕಳ ಪರವಾಗಿ ಸದಾ ದನಿಯೆತ್ತಿದವರು. ಕಳೆದ ವರ್ಷವಷ್ಟೇ ಮುದ್ದಾದ ಹೆಣ್ಣುಮಗುವೊಂದನ್ನು ದತ್ತು ಪಡೆದು ತಾರಾ ಬೇಡಿ ಕೌಶಲ್ ಎಂದು ಹೆಸರಿಟ್ಟು ಸಂಭ್ರಮಿಸಿದ್ದರು. ಧಿಡೀರನೆ ನಿನ್ನೆ ಮಂದಿರಾ ಪತಿ ರಾಜ್ ಕೌಶಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದು ದೊಡ್ಡ ಆಘಾತ. ಆದರೆ ಇದರ ನಡುವೆಯೂ ಲಿಂಗಬೇಧವನ್ನು ಧಿಕ್ಕರಿಸಿ ಮಂದಿರಾ ಪತಿಯ ಚಿತೆಗೆ ಅಗ್ನಿ ಕೊಂಡೊಯ್ದಿದ್ದಾರೆ, ಬಾಳ ಸಂಗಾತಿಯ ಅಂತಿಮ ಯಾತ್ರೆಯಲ್ಲಿ ಸ್ನಶಾನದವರಗೆ ಹೆಜ್ಜೆ ಹಾಕಿದ್ದಾರೆ.

    ಮುಂಬೈನ ತಮ್ಮ ಮನೆಯಲ್ಲಿ ನಿನ್ನೆ ರಾಜ್ ಕೌಶಲ್ ಧಿಡೀರನೆ ಹೃದಯಾಘಾತಕ್ಕೆ ತುತ್ತಾದರು. ಚಿಕಿತ್ಸೆಗೆ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಪತ್ನಿ ಮಂದಿರಾ ಮತ್ತು ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸುವ, ಅದನ್ನು ಧಿಕ್ಕರಿಸುವ ಆಧುನಿಕ ಮನಸ್ಥಿತಿಯ ದಂಪತಿ ಇವರು. ಇಂಥಾ ಕಠಿಣ ಪರಿಸ್ಥಿತಿಯಲ್ಲಿ ಕೂಡಾ ಯಾವ ಕಟ್ಟಳೆಗಳಿಗೂ ಗಮನ ಹರಿಸದೆ ತಮಗೆ ಸರಿಯೆನಿಸಿದ್ದನ್ನೇ ಮಾಡಿ ಸೈ ಎನಿಸಿಕೊಂಡಿದ್ದಾರೆ ಮಂದಿರಾ.

    ಇದನ್ನೂ ಓದಿ: Anushka Sharma: ಗರ್ಭಿಣಿಯಾಗಿದ್ದಾಗ ತೊಟ್ಟ ಬಟ್ಟೆಗಳನ್ನೆಲ್ಲಾ ಹರಾಜು ಹಾಕಿದ್ದಾರೆ ಅನುಷ್ಕಾ ಶರ್ಮಾ ! ಏನಿದು ಸರ್ಕ್ಯುಲರ್ ಫ್ಯಾಷನ್ ಟ್ರೆಂಡ್ !

    ಸಾಮಾನ್ಯವಾಗಿ ಅಂತಿಮ ಯಾತ್ರೆಗಳಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗುವುದಿಲ್ಲ. ಅಲ್ಲದೆ ಚಿತೆಗೆ ಸ್ಪರ್ಷಿಸುವ ಅಗ್ನಿಯನ್ನು ಕೂಡಾ ಹೆಣ್ಣುಮಕ್ಕಳು ಸ್ಪರ್ಶಿಸುವಂತಿಲ್ಲ. ಆದರೆ ಮಂದಿರಾ ಈ ಎರಡನ್ನೂ ಮಾಡಿದ್ದಾರೆ. ಇಷ್ಟು ವರ್ಷಗಳವರಗೆ ತನ್ನೊಂದಿಗೆ ಬದುಕು ಹಂಚಿಕೊಂಡ ಸಂಗಾತಿಗೆ ಕೊನೆಯದೊಂದು ವಿದಾಯ ಹೇಳಲು ಈ ಸಂದರ್ಭವನ್ನು ಅವರು ಬಳಸಿಕೊಂಡಿದ್ದಾರೆ.

    ಮಂದಿರಾ ಬೇಡಿ ಮತ್ತು ರಾಜ್ ಕೌಶಲ್​ರ ಆಪ್ತವರ್ಗದಲ್ಲಿ ಇರುವ ಅನೇಕ ಕಲಾವಿದರು ಮಂದಿರಾ ಬೆಂಬಲಕ್ಕೆ ನಿಂತಿದ್ದರು. ಪಾರ್ಥಿವ ಶರೀರದ ಜೊತೆಗೆ ಅಗ್ನಿ ಹಿಡಿದು ಸ್ಮಶಾನದವರೆಗೆ ಮಂದಿರಾ ಸಾಗಿದ್ದರು. 49 ವರ್ಷ ವಯಸ್ಸಿನ ರಾಜ್ ಕೌಶಲ್ ಹಿಂದಿನ ದಿನವಷ್ಟೇ ಕೆಲ ಆಪ್ತರನ್ನು ಮನೆಗೆ ಕರೆದು ಅವರೊಂದಿಗೆ ಆತ್ಮೀಯವಾಘಿ ಹರಟಿದ್ದರು ಎನ್ನಲಾಗಿದೆ. ಆಶಿಶ್ ಚೌಧರಿ, ರೋನಿತ್ ರಾಯ್, ಅಪೂರ್ವ ಅಗ್ನಿಹೋತ್ರಿ, ಹುಮಾ ಖುರೇಶಿ ಸೇರಿದಂತೆ ಅನೇಕರು ಮಂದಿರಾ ಜೊತೆಯಲ್ಲಿದ್ದರು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
    Published by:Soumya KN
    First published: