MAA Elections Results: ಚುನಾವಣೆಯಲ್ಲಿ ಗೆದ್ದು ಮಾ ಅಧ್ಯಕ್ಷರಾದ ಮಂಚು ವಿಷ್ಣು: ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ಪ್ರಕಾಶ್ ರಾಜ್​-ನಾಗಬಾಬು

ಮಾ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಂಚು ವಿಷ್ಣು ಹಾಗೂ ನಟ ಪ್ರಕಾಶ್ ರಾಜ್ ಸ್ಪರ್ಧಿಸಿದ್ದು, ಮಂಚು ವಿಷ್ಣು ಪ್ರಕಾಶ್ ರಾಜ್‌ರನ್ನು ಸುಮಾರು 400 ಮತಗಳ ಭಾರಿ ಅಂತರದಲ್ಲಿ ಸೋಲಿಸಿದ್ದಾರೆ.

ಪ್ರಕಾಶ್​ ರಾಜ್​ ಹಾಗೂ ಮಂಚು ವಿಷ್ಣು

ಪ್ರಕಾಶ್​ ರಾಜ್​ ಹಾಗೂ ಮಂಚು ವಿಷ್ಣು

  • Share this:
ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಮಧ್ಯ ನಡೆಯುವ ಚುನಾವಣೆಗಳು ಹೆಚ್ಚು ಪೈಪೋಟಿಯಿಂದ ಜಿದ್ದಾಜಿದ್ದಿನಿಂದ ಕೂಡಿರುತ್ತವೆ. ಆದರೆ ಇತ್ತೀಚೆಗೆ ನಡೆದಂತಹ ತೆಲುಗು ಸಿನಿಮಾ ರಂಗದ ಕಲಾವಿದರ ಸಂಘವಾದ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್-Movie Artists Association) ಚುನಾವಣೆಯು ಸಹ ತಕ್ಕ ಮಟ್ಟಿಗೆ ಎಂದಿಗಿಂತ ಸ್ವಲ್ಪ ಹೆಚ್ಚಿನ ಪೈಪೋಟಿ ಮತ್ತು ಜಿದ್ದಾಜಿದ್ದಿಯನ್ನು ಕಂಡಿತ್ತು ಎಂದರೆ ಅತಿಶಯೋಕ್ತಿಯಲ್ಲ. ಈ ಮಾ ಚುನಾವಣೆಯ ಫಲಿತಾಂಶವು (MAA Elections Results) ಇದೀಗ ಹೊರ ಬಿದ್ದಿದ್ದು, ಇದರಲ್ಲಿ ನಟ ಪ್ರಕಾಶ್ ರಾಜ್‌ರನ್ನು ನಟ ಮಂಚು ವಿಷ್ಣು ಸೋಲಿಸಿದ್ದಾರೆ.

ಮಾ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಂಚು ವಿಷ್ಣು ಹಾಗೂ ನಟ ಪ್ರಕಾಶ್ ರಾಜ್ ಸ್ಪರ್ಧಿಸಿದ್ದು, ಮಂಚು ವಿಷ್ಣು ಪ್ರಕಾಶ್ ರಾಜ್‌ರನ್ನು ಸುಮಾರು 400 ಮತಗಳ ಭಾರಿ ಅಂತರದಲ್ಲಿ ಸೋಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2021ರ ಮಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಪ್ರಕಾಶ್ ರಾಜ್‌ರನ್ನು ಸೋಲಿಸಿದ ನಂತರ ನಟ ವಿಷ್ಣು ಮಂಚು ಮಾ (ಎಂಎಎ) ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೊಸ ಪದಾಧಿಕಾರಿಗಳು ಎರಡು ವರ್ಷಗಳ ಅವಧಿಗೆ ಈ ಸಂಘವನ್ನು ನಿಯಂತ್ರಿಸಲಿದ್ದಾರೆ.

MAA Elections results, naga babu, mega brother, resign, withdraw his membership from MAA , MAA elections, Actor Prakash Raj, Vishnu Manchu, Actor Vishnu win, MAA President, Maa election, ಮಾ ಚುನಾವಣೆ, ಎಂಎಎ ಚುನಾವಣೆ, ತೆಲುಗು ಚಿತ್ರರಂಗ, ವಿಷ್ಣು ಮಂಚು , ಪ್ರಕಾಶ್ ರಾಜ್, ಪ್ರಕಾಶ್ ಸೋಲು, ಮಂಚು ವಿಷ್ಣು ಗೆಲುವು, Manchu Vishnu panel won MAA President Elections Nagababu and Prakash Raj has resigned to MAA Primary membership stg ae
ನಾಗ ಬಾಬು ಹಾಗೂ ಪ್ರಕಾಶ್ ರಾಜ್​


ಮಂಚು ವಿಷ್ಣು ಅವರ ತಂದೆ ಮೋಹನ್ ಬಾಬು ತಮ್ಮ ಮಗನ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ತೆಲುಗು ಸುದ್ದಿ ವಾಹಿನಿಗಳು ವರದಿ ಮಾಡಿವೆ. ಮಂಚು ವಿಷ್ಣು ಪ್ರಚಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ತನ್ನ ಸಂಪೂರ್ಣ ಶಕ್ತಿಯನ್ನು ಮಗನ ಬೆಂಬಲಕ್ಕೆ ಹಾಕಿದ್ದು, ವಿಷ್ಣು ಮಂಚು ತುಂಬಾ ಸುಲಭವಾಗಿ ಗೆಲ್ಲಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸ್ವಜನಪಕ್ಷಪಾತದ ಕುರಿತು ಸುಶಾಂತ್ ಮಾತನಾಡಿದ್ದ ಹಳೇ ವಿಡಿಯೋ ಹಂಚಿಕೊಂಡ ಪ್ರಕಾಶ್​ ರಾಜ್​..!​

ಮಾ ಚುನಾವಣೆಗಳು ಸಾಮಾನ್ಯವಾಗಿ ಕಡಿಮೆ ಪ್ರಾಮುಖ್ಯತೆ ಹೊಂದಿದ್ದರೂ ಈ ಬಾರಿ ಮಂಚು ವಿಷ್ಣು ಮತ್ತು ಪ್ರಕಾಶ್ ರಾಜ್ ಅವರ ತೀವ್ರ ಪ್ರಚಾರವು ಚುನಾವಣೆಗೆ ರಾಜ್ಯ ಚುನಾವಣೆಗಳ ಪರಿಮಳ ನೀಡಿತ್ತು ಮತ್ತು ಸುದ್ದಿ ವಾಹಿನಿಗಳ ಪ್ರೈಮ್ ಟೈಮ್ ಚರ್ಚೆಗಳಲ್ಲಿ ಪ್ರಾಬಲ್ಯ ಸಾಧಿಸಿತು ಎಂದು ಹೇಳಬಹುದು.

ಮಂಚು ವಿಷ್ಣು ತನ್ನ ಚುನಾವಣೆಯ ಪ್ರಚಾರದಲ್ಲಿ ನಟ ಪ್ರಕಾಶ್ ರಾಜ್‌ ಅವರನ್ನು ಹೊರಗಿನಿಂದ ಬಂದವರು ಎಂದು ಪ್ರತಿಬಿಂಬಿಸಿದ್ದರು. ಈ ಅಂಶವು ವಿಷ್ಣುವಿನ ಬಲವನ್ನು ಚುನಾವಣೆಯಲ್ಲಿ ಇನ್ನಷ್ಟು ಹೆಚ್ಚಿಸಿತು ಮತ್ತು ಕೆಲಸ ಮಾಡಿತು ಎಂದು ಹೇಳಲಾಗುತ್ತಿದೆ. ವಿಷ್ಣು ಮಂಚು ಸಮಿತಿಯ ಹಲವಾರು ಸದಸ್ಯರು ಸಂಘದ ಇತರ ಉನ್ನತ ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: Video: ಧೂಳೆಬ್ಬಿಸುತ್ತಿದೆ ಐರನ್​ ಮ್ಯಾನ್​ ರಾಬರ್ಟ್​ ಡೌನಿ ಜೂನಿಯರ್​ ಡಾನ್ಸಿಂಗ್​ ವಿಡಿಯೋ

ಈ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಎನಿಸಿಕೊಂಡಿದ್ದ ಪ್ರಕಾಶ್ ರಾಜ್ ಯಾವುದೇ ಪ್ರಯತ್ನಗಳನ್ನು ಮಾಡದೆ ಬಿಟ್ಟಿರಲಿಲ್ಲ. ಚುನಾವಣೆಗೆ ಮುಂಚಿತವಾಗಿಯೇ ತಮ್ಮ ವಿರೋಧಿ ಬಣದಲ್ಲಿದ್ದ ಇಬ್ಬರನ್ನು ತಮ್ಮ ಸಿಂಡಿಕೇಟ್‌ಗೆ ಸೇರಿಸಿಕೊಂಡಿದ್ದರು.

ಪ್ರಕಾಶ್‌ಗೆ ವಿರುದ್ಧವಾಗಿ ಕಣಕ್ಕೆ ಇಳಿಯಲು ಸಜ್ಜಾಗಿದ್ದ ನಟಿ ಹೇಮಾ ಮತ್ತು ಜೀವಿತಾ ರಾಜಶೇಖರ್ ಅನ್ನು ತಮ್ಮ ಸಿಂಡಿಕೇಟ್‌ಗೆ ಸೇರಿಸಿಕೊಂಡು ತಮ್ಮ ಗುಂಪಿನಿಂದಲೇ ಸ್ಪರ್ಧಿಸಲು ಪ್ರಕಾಶ್ ಅವಕಾಶ ಮಾಡಿಕೊಟ್ಟಿದ್ದನ್ನು ಇಲ್ಲಿ ಮೆಲುಕು ಹಾಕಬಹುದಾಗಿದೆ. ಈ ಚುನಾವಣೆಯಲ್ಲಿ ಸುಮಾರು 26 ಸ್ಥಾನಗಳಿಗೆ ಮತದಾನ ನಡೆದಿದ್ದು, ಇದು ದಾಖಲೆಯ ಮತದಾನ ಕಂಡಿತ್ತು.

ತೆಲುಗು ಸಿನಿಮಾ ರಂಗದ ಕಲಾವಿದರ ಸಂಘವಾದ ಮಾ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಚುನಾವಣೆಯಲ್ಲಿ ನಟ ಮಂಚು ವಿಷ್ಣು ಹಾಗೂ ಅವರ ಕಡೆಯವರು ಚುನಾವಣೆಯಲ್ಲಿ ಜಯಗಳಿಸಿದ ನಂತರ ನಟ ಪ್ರಕಾಶ್ ರಾಜ್​ ಹಾಗೂ ಮೆಗಾ ಕುಟುಂಬದವರಾದ ನಾಗ ಬಾಬು ಅವರು ಮಾ ಸಂಘದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಚುನಾವಣೆ ಸಂಪೂರ್ಣವಾಗಿ ಧಾರ್ಮಿಕ ಭಾವನೆಗಳ ಮೇಲೆ ನಡೆದಿದೆ. ಇದೇ ಕಾರಣದಿಂದ ಸಂಘದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಈ ನಟರು ತಿಳಿಸಿದ್ದಾರೆ. ಆದರೆ ತೆಲುಗು ಸಿನಿಮಾಗಳಲ್ಲಿ ಅಭಿನಯವನ್ನು ಮುಂದುವರೆಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಈ ಚುನಾವಣೆಯಲ್ಲಿ ನಾಗ ಬಾಬು ಅವರು ಪ್ರಕಾಶ್ ರಾಜ್​ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದರು.
Published by:Anitha E
First published: