• Home
  • »
  • News
  • »
  • entertainment
  • »
  • Manav Vijs: ನೆಟ್‌ಫ್ಲಿಕ್ಸ್​ನಲ್ಲಿ ಲಾಲ್‌ ಸಿಂಗ್‌ ಚಡ್ಡಾ ಸಿನಿಮಾ ಇಷ್ಟಪಟ್ಟವರು ಅಮೀರ್‌ ಖಾನ್‌ ಪ್ರೊಡಕ್ಷನ್​ಗೆ 500ರೂ ಹಾಕಿ: ಮಾನವ್‌ ವಿಜ್

Manav Vijs: ನೆಟ್‌ಫ್ಲಿಕ್ಸ್​ನಲ್ಲಿ ಲಾಲ್‌ ಸಿಂಗ್‌ ಚಡ್ಡಾ ಸಿನಿಮಾ ಇಷ್ಟಪಟ್ಟವರು ಅಮೀರ್‌ ಖಾನ್‌ ಪ್ರೊಡಕ್ಷನ್​ಗೆ 500ರೂ ಹಾಕಿ: ಮಾನವ್‌ ವಿಜ್

ಮಾನವ್‌ ವಿಜ್, ಅಮೀರ್ ಖಾನ್​

ಮಾನವ್‌ ವಿಜ್, ಅಮೀರ್ ಖಾನ್​

ಚಿತ್ರವನ್ನು ಭಾರೀ ಮೊತ್ತಕ್ಕೆ ಕೊಂಡುಕೊಂಡ ನೆಟ್‌ ಫ್ಲಿಕ್ಸ್‌ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಅಕ್ಟೋಬರ್ 6 ರಂದು ಬಿಡುಗಡೆ ಮಾಡಿತು. ಓಟಿಟಿಯಲ್ಲಿ ಚಲನಚಿತ್ರವನ್ನು ನೋಡಿದ ಹಲವಾರು ಚಲನಚಿತ್ರ ಪ್ರೇಮಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ.

  • Trending Desk
  • Last Updated :
  • Karnataka, India
  • Share this:

ಲಾಲ್ ಸಿಂಗ್ ಚಡ್ಡಾ ಅಮೀರ್‌ ಖಾನ್‌ (Amir Khan) ನಟಿಸಿರುವ ಬಹುನಿರೀಕ್ಷೆಯ ಚಿತ್ರವನ್ನು ಸಿನಿಪ್ರಿಯರೆಲ್ಲ ಒಟ್ಟಾಗಿ ತಿರಸ್ಕರಿಸಿದ್ದರು. ಚಿತ್ರ ಬಿಡುಗೆಡೆಯಾದ ಥಿಯೇಟರ್‌ ಗಳೆಲ್ಲಾ (Theater) ಖಾಲಿ ಹೊಡೆದು ನಿರ್ಮಾಪಕರು ದೊಡ್ಡ ನಷ್ಟವನ್ನೇ ಅನುಭವಿಸಿದ್ದರು. ನಟ ಅಮೀರ್‌ ಖಾನ್‌ ಮೊದಲು ಆಡಿದ್ದ ಮೊಂಡುತನದ ಮಾತುಗಳಿಂದ ರೊಚ್ಚಿಗೆದ್ದಿದ್ದ ಜನರು ಈ ಚಿತ್ರವನ್ನು ತಿರಸ್ಕರಿಸುವಂತೆ ದೊಡ್ಡ ಅಭಿಯಾನವನ್ನೇ ನಡೆಸಿ ಯಶಸ್ವಿಯೂ ಆಗಿದ್ದರು. ಚಿತ್ರ ಬ್ಲಾಕ್‌ ಬಸ್ಟರ್‌ (Blockbuster) ಆಗುತ್ತೆ ಅಂದುಕೊಂಡಿದ್ದ ನಟ ಅಮೀರ್‌ ಖಾನ್‌ ಹಾಗೂ ಚಿತ್ರದ ನಿರ್ಮಾಪಕರು ಚಿತ್ರ ಬಹಿಷ್ಕಾರಗೊಂಡಿದ್ದು ನೋಡಿ ಶಾಕ್‌ ಅನುಭವಿಸಿದ್ದರು.


ಈ ವರ್ಷ ಆಗಸ್ಟ್ 11 ರಂದು ಬಿಡುಗಡೆಯಾದ ಈ ಚಿತ್ರ ನೆಗೆಟಿವ್‌ ಕಾಮೆಂಟ್‌ ಗಳಿಂದಾಗಿ ಫ್ಲಾಪ್‌ ಆಗಿತ್ತು ಅನ್ನೋದು ಈಗ ಹಳೇ ಸುದ್ದಿ. ಆನಂತರದಲ್ಲಿ ಚಿತ್ರವನ್ನು ಭಾರೀ ಮೊತ್ತಕ್ಕೆ ಕೊಂಡುಕೊಂಡ ನೆಟ್‌ ಫ್ಲಿಕ್ಸ್‌ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಅಕ್ಟೋಬರ್ 6 ರಂದು ಬಿಡುಗಡೆ ಮಾಡಿತು.


ಆದ್ರೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ನಂತರ, ಲಾಲ್ ಸಿಂಗ್‌ ಚಡ್ಡಾ ಅದೃಷ್ಟವೇ ಬದಲಾಯ್ತು. ಸ್ಟ್ರೀಮಿಂಗ್ ದೈತ್ಯ ನೆಟ್‌ ಫ್ಲಿಕ್ಸ್‌ ನಲ್ಲಿ ಚಲನಚಿತ್ರವನ್ನು ನೋಡಿದ ಹಲವಾರು ಚಲನಚಿತ್ರ ಪ್ರೇಮಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ.




ವಾಸ್ತವವಾಗಿ, ಕಳೆದ ತಿಂಗಳಿನಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡದೆ ತಪ್ಪು ಮಾಡಿದ್ದೇವೆ ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ಆದ್ರೆ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಪ್ರೀತಿಸಿದವರಿಗೆ ಆದರೆ ಚಿತ್ರಮಂದಿರಗಳಲ್ಲಿ ಬಹಿಷ್ಕರಿಸಿದವರಿಗೆ ನಟ ಮಾನವ್ ವಿಜ್ ನೀಡಿರುವ ಸಂದೇಶ ಸಿನಿಪ್ರಿಯರ ಹುಬ್ಬೇರುವಂತೆ ಮಾಡಿದೆ.


ಹೌದು, ಸದ್ಯದ ಸುದ್ದಿಯೆಂದರೆ ಲಾಲ್ ಸಿಂಗ್ ಚಡ್ಡಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನಟ ಮಾನವ್ ವಿಜ್ ನೀಡಿದ ಹೇಳಿಕೆಯೊಂದು ಸಾಕಷ್ಟು ಚರ್ಚೆಗೆ ಒಳಗಾಗಿದೆ. ಕೆಲವು ದಿನಗಳ ಹಿಂದೆ ಮಿಡ್-ಡೇ ಜೊತೆಗಿನ ಸಂಭಾಷಣೆಯಲ್ಲಿ, ಬಹಿಷ್ಕಾರದ ಪ್ರವೃತ್ತಿಯಿಂದಾಗಿ ಚಿತ್ರಮಂದಿರಗಳಲ್ಲಿ ಚಲನಚಿತ್ರವನ್ನು ವೀಕ್ಷಿಸುವುದನ್ನು ತಪ್ಪಿಸಿದ್ದರಿಂದ ಹಲವಾರು ನೆಟಿಜನ್‌ಗಳು ತಮ್ಮಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ಮಾನವ್ ಹೇಳಿದ್ದಾರೆ.


ಅಲ್ಲದೇ, ಅವರ ಪ್ರಾಮಾಣಿಕ ನಿವೇದನೆಯಿಂದ ವಿನಮ್ರರಾಗುವ ಬದಲು, ಜನರ ‘ಮೂರ್ಖತನ’ದಿಂದ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಕ್ಕಾಗಿ ಮಾನವ್ ಕಟುವಾಗಿ ಟೀಕಿಸಿದರು. ಸಿನಿಮಾ ಟಿಕೆಟ್‌ಗೆ ಸಮನಾದ ಮೊತ್ತವನ್ನು ನಿರ್ಮಾಪಕರಿಗೆ ನೀಡುವಂತೆಯೂ ಅವರು ಸೂಚಿಸಿದ್ದಾರೆ!


ಅಮೀರ್ ಖಾನ್ ಪ್ರೊಡಕ್ಷನ್ಸ್ ಖಾತೆಗೆ 500 ರೂ ಹಾಕಬೇಕಂತೆ!


“ಬಹಿಷ್ಕಾರದ ಪ್ರವೃತ್ತಿಯನ್ನು ಅನುಸರಿಸಿ ಥಿಯೇಟರ್‌ಗಳಲ್ಲಿ ಲಾಲ್ ಸಿಂಗ್ ಚಡ್ಡಾವನ್ನು ವೀಕ್ಷಿಸಲಿಲ್ಲ ಎಂದು ಅನೇಕ ಜನರು ಟ್ವಿಟರ್‌ನಲ್ಲಿ, ನನ್ನಲ್ಲಿ ಕ್ಷಮೆಯಾಚಿಸಿದರು. ಆದರೆ ಅವರು ಅದನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿದಾಗ ಅದನ್ನು ಇಷ್ಟಪಟ್ಟರು. ‘ನೀವು ಅಷ್ಟು ಕ್ಷಮೆ ಕೇಳುತ್ತಿದ್ದರೆ, ನೀವು ಅಮೀರ್ ಖಾನ್ ಪ್ರೊಡಕ್ಷನ್ಸ್ ಖಾತೆಗೆ 500 ರೂ ಹಾಕಿ. ನಿಮ್ಮ ಮೂರ್ಖತನದಿಂದ ನಿರ್ಮಾಪಕರು ನಷ್ಟದಲ್ಲಿದ್ದಾರೆ’ ಎಂದು ನಟ ಮಾನವ್‌ ವಿಜ್‌ ಹೇಳಿದ್ದಾರೆ.


ಅಂದಹಾಗೆ, ಚಿತ್ರದಲ್ಲಿನ ಮಹತ್ವದ ಟ್ರ್ಯಾಕ್‌ನಲ್ಲಿ, ಲಾಲ್ ಸಿಂಗ್ ಚಡ್ಡಾ ಸೈನಿಕನಾಗಿ ತೋರಿಸಲಾಗಿದೆ. ಅವರು 1999 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಮೊಹಮ್ಮದ್ (ಮಾನವ್ ವಿಜ್) ಚಿತ್ರವನ್ನು ಉಳಿಸುತ್ತಾರೆ. ಮೊಹಮ್ಮದ್ ವಾಸ್ತವವಾಗಿ ಪಾಕಿಸ್ತಾನಿ ಸೈನಿಕ ಎಂಬುದು ಲಾಲ್‌ ಗೆ ಗೊತ್ತಿರೋದಿಲ್ಲ.


ಇದನ್ನೂ ಓದಿ: Amir Khan: ಸದ್ಯಕ್ಕೆ ನಟಿಸಲ್ಲ ಎಂದ ಅಮೀರ್ ಖಾನ್! ಲಗಾನ್ ನಟನ ಬಿಗ್ ಅನೌನ್ಸ್​​ಮೆಂಟ್


ಅವನು ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡರೂ ಲಾಲ್‌ ನಿಂದಾಗಿ ಹೊಸ ಜೀವನವನ್ನು ಪಡೆಯುತ್ತಾನೆ. ಲಾಲ್ ನೀಡಿದ ಪ್ರೀತಿ ಮತ್ತು ಗೌರವವು ಅವನನ್ನು ಉತ್ತಮ ವ್ಯಕ್ತಿಯಾಗಲು ಪ್ರೇರೇಪಿಸುತ್ತದೆ. ಇನ್ನು, ಅದ್ವೈತ್ ಚಂದನ್ ನಿರ್ದೇಶನದ ಲಾಲ್ ಸಿಂಗ್ ಚಡ್ಡಾ, ಕಡಿಮೆ ಐಕ್ಯೂ ಹೊಂದಿರುವ ವ್ಯಕ್ತಿಯ ಕಥೆಯಾಗಿದೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು