ಬೇರ್​ಗ್ರಿಲ್ಸ್​-ರಜಿನಿಕಾಂತ್​ ಫಸ್ಟ್ ಮೋಷನ್​ ಪೋಸ್ಟರ್​ ಬಿಡುಗಡೆ​​; ಮ್ಯಾನ್​ ವರ್ಸಸ್​ ವೈಲ್ಡ್​​ನಲ್ಲಿ ತಲೈವಾ ಸ್ಟೈಲ್​ಗೆ ಅಭಿಮಾನಿಗಳು ಫಿದಾ

ಜನವರಿ ತಿಂಗಳಿನಲ್ಲಿ ಬಂಡೀಪುರದ ಅಭಯಾರಣ್ಯದಲ್ಲಿ ಮ್ಯಾನ್​ ವರ್ಸಸ್​ ವೈಲ್ಡ್​ ಚಿತ್ರೀಕರಣ ನಡೆಸಲಾಗಿತ್ತು. ಒಂದು ದಿನಗಳ ಕಾಲ ರಜಿನಿಕಾಂತ್​ ಮತ್ತು ನಿರೂಪಕ ಬೇರ್ ​ಗ್ರಿಲ್ಸ್​ ಕಾಡಿನಲ್ಲಿ ಸುತ್ತಾಟ ನಡೆಸುತ್ತಾ ಚಿತ್ರೀಕರಣ ಮುಗಿಸಿದ್ದರು.

ಬೇರ್​ಗ್ರಿಲ್ಸ್​-ರಜಿನಿಕಾಂತ್​

ಬೇರ್​ಗ್ರಿಲ್ಸ್​-ರಜಿನಿಕಾಂತ್​

 • Share this:
  ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗುವ ಜಗದ್ವಿಖ್ಯಾತ ಮ್ಯಾನ್​ ವರ್ಸಸ್​ ವೈಲ್ಡ್ ಕಾರ್ಯಕ್ರಮದ​ ಚಿತ್ರೀಕರಣ ಇತ್ತೀಚೆಗೆ ಎಚ್.ಡಿ.ಕೋಟೆಯ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ತಮಿಳಿನ ಸೂಪರ್​ ಸ್ಟಾರ್​ ರಜಿನಿಕಾಂತ್​ ಭಾಗವಹಿಸಿದ್ದರು. ಖ್ಯಾತ ನಿರೂಪಕ ಬೇರ್​ ಗ್ರಿಲ್ಸ್​ ಜೊತೆ ರಜನಿ ಕಾಂತ್​ ಅರಣ್ಯ ಸುತ್ತಾಡಿ ಚಿತ್ರೀಕರಣ ಮುಗಿಸಿದ್ದರು. ಇದೀಗ ಈ ಚಿತ್ರೀಕರಣದ ಮೋಷನ್​ ಪೋಸ್ಟರ್​ ರಿಲೀಸ್​ ಆಗಿದೆ.

  ಬೇರ್​ ಗ್ರಿಲ್ಸ್​ ತಮ್ಮ ಟ್ಟಿಟ್ಟರ್​ ಖಾತೆಯಲ್ಲಿ ರಜನಿ ಜೊತೆಗೆ ನಡೆಸಿದ ಚಿತ್ರೀಕರಣದ ಮೋಷನ್​ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದ್ದಾರೆ. ಟ್ವೀಟ್​ನಲ್ಲಿ ರಜನಿಕಾಂತ್​ ಜೊತೆಗೆ ಕಳೆದ ಕ್ಷಣಗಳು ವಿಶೇಷವಾಗಿತ್ತು​ ಎಂದು ಬರೆದುಕೊಂಡಿದ್ದಾರೆ. ರಜನಿಕಾಂತ್​ ಒಬ್ಬರು ನಟರು. ಆದರೆ ಕಾಡಿನಲ್ಲಿ ಎಲ್ಲವೂ ಭಿನ್ನವಾಗಿರುತ್ತದೆ. ಲೆಜೆಂಡ್​​ ಜೊತೆಗೆ ಕಳೆದ ಸಮಯ ಸಖತ್​ ಫನ್​ ಆಗಿತ್ತು. ಸದ್ಯದಲ್ಲೇ ಈ ಎಪಿಸೋಡ್​ ನಿಮ್ಮ ಮುಂದೆ ಬರಲಿದೆ​ ಎಂದು ಬರೆದುಕೊಂಡಿದ್ದಾರೆ.

  ಜನವರಿ ತಿಂಗಳಿನಲ್ಲಿ ಬಂಡೀಪುರದ ಅಭಯಾರಣ್ಯದಲ್ಲಿ ಮ್ಯಾನ್​ ವರ್ಸಸ್​ ವೈಲ್ಡ್​ ಚಿತ್ರೀಕರಣ ನಡೆದಿತ್ತು. ಒಂದು ದಿನಗಳ ಕಾಲ ರಜಿನಿಕಾಂತ್​ ಮತ್ತು ನಿರೂಪಕ ಬೇರ್​ಗ್ರಿಲ್ಸ್​ ಕಾಡಿನಲ್ಲಿ ಸುತ್ತಾಟ ನಡೆಸುತ್ತಾ ಚಿತ್ರೀಕರಣ ಮುಗಿಸಿದ್ದರು. ರಜನಿಕಾಂತ್ ನಂತರ ಬಾಲಿವುಡ್​ ಸ್ಟಾರ್​ ಅಕ್ಷಯ್​ ಕುಮಾರ್​ ಕೂಡ ಬಂಡೀಪುರಕ್ಕೆ ಆಗಮಿಸಿ, ಮ್ಯಾನ್​ ವರ್ಸಸ್ ​ವೈಲ್ಡ್​ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

     ಇನ್ನು ಮ್ಯಾನ್​ ಮ್ಯಾರ್ಸಸ್​ ವೈಲ್ಡ್​ ಕಾರ್ಯಕ್ರವಲ್ಲಿ​ ತಲೈವಾ ಮತ್ತು ಬೇರ್​ ಗ್ರಿಲ್ಸ್​ ಜೊತೆಗಿನ ಮಾತುಕತೆ ಹೇಗೆ ಮೂಡಿಬಂದಿದೆ. 69 ವರ್ಷದ ರಜನಿಕಾಂತ್​ ಕಾರ್ಯಕ್ರಮದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ? ಎಂಬ ಕೂತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್​ನಲ್ಲಿ ರಜಿನಿಕಾಂತ್ ಕ್ಯಾಪ್, ಜಾಕೆಟ್ ತೊಟ್ಟು ಎನರ್ಜಿಟಿಕ್​ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಈ ಕಾರ್ಯಕ್ರಮ ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗಲಿದೆ.

  ಇದನ್ನೂ ಓದಿ: ಭರ್ಜರಿ ಆಫರ್​ನೊಂದಿಗೆ ಅತೀ ಕಡಿಮೆ ಬೆಲೆಗೆ ರಿಲೀಸ್​ ಆಯ್ತು ಹೊಸ ಸ್ಮಾರ್ಟ್​ಫೋನ್​!   
  First published: