• Home
  • »
  • News
  • »
  • entertainment
  • »
  • Spider Man: ಯಪ್ಪಾ, ಇವ್ನೇನ್​ ಗುರೂ.. ಒಂದೇ ಮೂವಿನಾ ಇಷ್ಟು ಸಲ ನೋಡಿ ಗಿನ್ನೆಸ್‌ ರೆಕಾರ್ಡ್​ ಮಾಡವ್ನೆ!

Spider Man: ಯಪ್ಪಾ, ಇವ್ನೇನ್​ ಗುರೂ.. ಒಂದೇ ಮೂವಿನಾ ಇಷ್ಟು ಸಲ ನೋಡಿ ಗಿನ್ನೆಸ್‌ ರೆಕಾರ್ಡ್​ ಮಾಡವ್ನೆ!

ರಮಿರೋ ಅಲಾನಿಸ್

ರಮಿರೋ ಅಲಾನಿಸ್

ಬ್ಬ ಅಭಿಮಾನಿ ಒಂದು ಸಿನಿಮಾವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 292 ಬಾರಿ ನೋಡಿದ್ದಾನೆ ಎಂದು ಹೇಳಿದರೆ ಎಂಥವರಿಗೂ ಸಹ ಆಶ್ಚರ್ಯವಾಗುತ್ತದೆ. ಇಲ್ಲೊಬ್ಬ ವ್ಯಕ್ತಿ ‘ಸ್ಪೈಡರ್ ಮ್ಯಾನ್’ ಕಟ್ಟಾ ಅಭಿಮಾನಿ ಅಂತಾ ಕಾಣುತ್ತೆ.

  • Share this:

ಸಾಮಾನ್ಯವಾಗಿ ನಮಗೆ ಯಾವುದಾದರೊಂದು ಚಲನಚಿತ್ರ(Movie) ತುಂಬಾನೇ ಇಷ್ಟವಾದರೆ, ಅದನ್ನು ನಾವು ಚಿತ್ರಮಂದಿರ(Theater)ಗಳಲ್ಲಿ ಅಥವಾ ಮನೆಯಲ್ಲಿ ಅನೇಕ ಬಾರಿ ನೋಡಿರುತ್ತೇವೆ. ‘ಏನಪ್ಪಾ ಇದು ನೋಡಿದ ಚಲನಚಿತ್ರವನ್ನೇ ಎಷ್ಟು ಸಲ ಅಂತ ನೋಡುತ್ತೀಯಾ, ನಿನಗೆ ಬೋರ್ ಆಗುವುದಿಲ್ಲವೇ’ ಅಂತ ಮನೆಯಲ್ಲಿರುವ ಹಿರಿಯರು ಅನೇಕ ಬಾರಿ ಕಿರಿಯರನ್ನು ಕೇಳುವ ಈ ಮಾತು ನಮ್ಮ ಕಿವಿಯ ಮೇಲೂ ಸಹ ಅನೇಕ ಸಾರಿ ಬಿದ್ದಿರುತ್ತದೆ. ಹೆಚ್ಚಾಗಿ ಈ ಶಾಲೆ(School)ಗೆ ಹೋಗುವ ಮಕ್ಕಳಿಗೆ ಒಂದು ಕಾರ್ಟೂನ್(Cartoon) ಇಷ್ಟವಾದರೆ ಸಾಕು, ಬಿಡದೆ ಅದನ್ನು ಅನೇಕ ಬಾರಿ ನೋಡುತ್ತಲೇ ಇರುತ್ತಾರೆ. ಇನ್ನು ಅನೇಕರು ಆ ಚಿತ್ರದ ಬಗ್ಗೆ ಏನೇ ಕುತೂಹಲಕಾರಿ ಸಂಗತಿ ಹೊರ ಬಿದ್ದರೂ ಅದನ್ನು ಬಿಡದೆ ಓದುತ್ತಾರೆ ಮತ್ತು ಅದರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಾರೆ.


ಸ್ಪೈಡರ್​ ಸಿನಿಮಾವನ್ನು 292 ಬಾರಿ ನೋಡಿದ ಅಭಿಮಾನಿ!


ಅದರಲ್ಲೂ ಕೆಲವು ಹಾಲಿವುಡ್ ಚಲನಚಿತ್ರಗಳನ್ನು ಒಮ್ಮೆ ನೋಡಿದರೆ ಮತ್ತೊಂದು ಬಾರಿ ನೋಡಬೇಕು ಎಂದೆನಿಸುವುದಂತೂ ನಿಜವಾದ ಸಂಗತಿ ಆಗಿರುತ್ತದೆ. ಇಲ್ಲಿಯೂ ಸಹ ಒಬ್ಬ ಅಭಿಮಾನಿ ಒಂದು ಸಿನಿಮಾವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 292 ಬಾರಿ ನೋಡಿದ್ದಾನೆ ಎಂದು ಹೇಳಿದರೆ ಎಂಥವರಿಗೂ ಸಹ ಆಶ್ಚರ್ಯವಾಗುತ್ತದೆ. ಇಲ್ಲೊಬ್ಬ ವ್ಯಕ್ತಿ ‘ಸ್ಪೈಡರ್ ಮ್ಯಾನ್’ ಕಟ್ಟಾ ಅಭಿಮಾನಿ ಅಂತಾ ಕಾಣುತ್ತೆ, ಏಕೆಂದರೆ ನೀವು ಒಂದು ಚಲನಚಿತ್ರವನ್ನು ಇಷ್ಟಪಟ್ಟರೆ ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು, ಕಾಮಿಕ್ಸ್ ಗಳನ್ನು ಮತ್ತು ಇತರ ಸಾಮಾಗ್ರಿಗಳ ಉತ್ತಮ ಸಂಗ್ರಹವನ್ನು ಹೊಂದಿರಬಹುದು.


ಸ್ಪೈಡರ್​ ಮ್ಯಾನ್ ಕಂಡ್ರೆ ಸಖತ್​ ಇಷ್ಟವಂತೆ!


ಆದರೆ ನೀವು ಅಮೆರಿಕದ ಫ್ಲೋರಿಡಾದ ಈ ವ್ಯಕ್ತಿಯನ್ನು ಸೋಲಿಸಲು ಸಾಧ್ಯವಿಲ್ಲ ಬಿಡಿ. ಏಕೆಂದರೆ ರಮಿರೋ ಅಲಾನಿಸ್ ಎಂಬ ವ್ಯಕ್ತಿಯು ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಅನ್ನೋ ಚಿತ್ರವನ್ನು ಬಿಡುಗಡೆಯಾದಾಗಿನಿಂದ 292 ಬಾರಿ ವೀಕ್ಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಈಗ 'ಒಂದೇ ಚಿತ್ರವನ್ನು ಹೆಚ್ಚು ಬಾರಿ ನೋಡಿದ್ದಕ್ಕಾಗಿ' ಗಿನ್ನೆಸ್‌ ವಿಶ್ವದಾಖಲೆಯನ್ನು ಮಾಡಿದ್ದಾರೆ.


ಇದನ್ನೂ ಓದಿ: ಬಯೋ ಬಬಲ್​ನಲ್ಲೇ ರಾಕಿ ಬಾಯ್​ ದರ್ಶನ ಪಡೆದ ಟೀಂ RCB! ಕೆಜಿಎಫ್​ 2 ನೋಡಿ ಹಿಂಗಂದ್ರು ಬೆಂಗಳೂರು ಬಾಯ್ಸ್


ಅವೆಂಜರ್ಸ್​ ಎಂಡ್​ ಗೇಮ್​ 191 ಬಾರಿ ನೋಡಿದ್ದ ವ್ಯಕ್ತಿ!


ಕುತೂಹಲಕಾರಿ ಸಂಗತಿಯೆಂದರೆ, ಫ್ರೆಂಚ್ ಚಲನಚಿತ್ರವಾದ ‘ಕಾಮೆಲೋಟ್: ಫಸ್ಟ್ ಇನ್‌ಸ್ಟಾಲ್‌ಮೆಂಟ್’ ಅನ್ನು 204 ಬಾರಿ ವೀಕ್ಷಿಸಿದ ಅರ್ನೌಡ್ ಕ್ಲೈನ್ ಅವರಿಂದ ರಮಿರೋ ತಮ್ಮದೇ ಆದ ದಾಖಲೆಯನ್ನು ಮರಳಿ ಪಡೆದರು. ಈ ಹಿಂದೆ ಅವೆಂಜರ್ಸ್: ಎಂಡ್ ಗೇಮ್ ಅನ್ನು 191 ಬಾರಿ ಚಿತ್ರಮಂದಿರಗಳಲ್ಲಿ ನೋಡಿರುವ ರಮಿರೋ ಅವರು ಇದೀಗ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ರಮಿರೋ ತಮ್ಮ ಈ ಸಾಧನೆಯನ್ನು ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಅವರು "292 ಬಾರಿ ಒಂದೇ ಸಿನಿಮಾವನ್ನು ನೋಡಿದ್ದೇನೆ. ನಿಮಗೆಲ್ಲರಿಗೂ ಧನ್ಯವಾದಗಳು” ಎಂದು ತಮ್ಮ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.


1.89 ಬಿಲಿಯನ್ ಡಾಲರ್​ ಕಲೆಕ್ಷನ್ ಮಾಡಿರುವ ಸಿನಿಮಾ!


ಕೇವಲ ರಮಿರೋ ಮಾತ್ರವಲ್ಲದೇ, ಅನೇಕರು ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಅನ್ನು ಅನೇಕ ಬಾರಿ ನೋಡಿರಬೇಕು. ಏಕೆಂದರೆ ವಿಶ್ವಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ, ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ 1.89 ಬಿಲಿಯನ್ ಡಾಲರ್ ಹಣವನ್ನು ಗಳಿಕೆ ಮಾಡುವುದರೊಂದಿಗೆ ಆರನೇ ಅತಿ ಹೆಚ್ಚು ಹಣವನ್ನು ಗಳಿಕೆ ಮಾಡಿದ ಚಲನಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Crime Thriller Movies ಇಷ್ಟನಾ? ಹಾಗಿದ್ರೆ ಮಿಸ್​ ಮಾಡದೇ ಈ ಆಸ್ಕರ್​ ವಿನ್ನಿಂಗ್​ ಚಿತ್ರಗಳನ್ನು ನೋಡಿ


ಜಾನ್ ವ್ಯಾಟ್ಸ್ ನಿರ್ದೇಶನದ ಚಿತ್ರವು ಕೇವಲ ಒಂದು ಸ್ಪೈಡರ್ ಮ್ಯಾನ್ ಚಲನಚಿತ್ರ ಆಗಿರಲಿಲ್ಲ. ಇದು ಒಂದು ವಿಶಿಷ್ಟವಾದ ಸ್ಪೈಡರ್ ಮ್ಯಾನ್ ಚಲನಚಿತ್ರವಾಗಿದ್ದು, ಪಾತ್ರದ 3 ವಿಭಿನ್ನ ರೂಪಗಳನ್ನು ಇದರಲ್ಲಿ ನೋಡಬಹುದಾಗಿದೆ. ಹಿಂದಿನ ಸ್ಪೈಡರ್ ಮ್ಯಾನ್ ಚಲನಚಿತ್ರಗಳಲ್ಲಿ ಸ್ಪೈಡರ್ ಮ್ಯಾನ್ ಪಾತ್ರದಲ್ಲಿ ನಟಿಸಿದ್ದ ಟಾಮ್ ಹಾಲೆಂಡ್, ಟೊಬೆ ಮ್ಯಾಗೈರ್ ಮತ್ತು ಆ್ಯಂಡ್ರ್ಯೂ ಗಾರ್ಫೀಲ್ಡ್ ಅವರಲ್ಲದೆ, ಅವರ ಎದುರು ಅಭಿನಯಿಸಿದ್ದ ಖಳನಾಯಕರು ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Published by:ವಾಸುದೇವ್ ಎಂ
First published: