ವಸಿಷ್ಠ ಸಿಂಹ ಹೆಸರಿನ ನಕಲಿ ಫೇಸ್​​ಬುಕ್​ ಖಾತೆ: ಆರೋಪಿ ಪೋಲಿಸರ ಬಲೆಗೆ

ವಸಿಷ್ಠ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಹುಡುಗಿಯರನ್ನು ಯಾಮಾರಿಸುತ್ತಿದ್ದ. ‘ನಾನು ಅವರ ಸಹಾಯಕ. ಅವರ ಮೊಬೈಲ್​ ನಂಬರ್​ ಕೊಡ್ತೀನಿ‘ ಎಂದು ಹೇಳಿ ತನ್ನ ಇನ್ನೊಂದು ಮೊಬೈಲ್​ ನಂಬರ್​ ನೀಡುತ್ತಿದ್ದ.

Updated:August 20, 2019, 10:22 PM IST
ವಸಿಷ್ಠ ಸಿಂಹ ಹೆಸರಿನ ನಕಲಿ ಫೇಸ್​​ಬುಕ್​ ಖಾತೆ: ಆರೋಪಿ ಪೋಲಿಸರ ಬಲೆಗೆ
ವಸಿಷ್ಠ ಸಿಂಹ
  • Share this:
ಫೇಸ್​ಬುಕ್​ ನಕಲಿ ಖಾತೆಗಳಿಂದ ಅನೇಕರು ಮೋಸ ಹೋದ ಘಟನೆಗಳನ್ನು ನಾವು ನೋಡಿದ್ದೇವೆ ಹಾಗೂ ಕೇಳಿರುತ್ತೇವೆ. ಇದೀಗ ಇಂತಹದೇ ಪ್ರಕರಣವೊಂದು ಸ್ಯಾಂಡಲ್​ವುಡ್​ನಲ್ಲಿ​ ಬೆಳಕಿಗೆ ಬಂದಿದೆ. ಕನ್ನಡ ಕಂಚಿನ ಧ್ವನಿಯ ನಟನೆಂದು ಖ್ಯಾತಿ ಪಡೆದ ವಸಿಷ್ಠ ಎನ್​ ಸಿಂಹ ಹೆಸರಿನಲ್ಲಿ ಖಾತೆ ತೆಗೆದು ಹುಡುಗಿಯರಿಗೆ ವಂಚಿಸುತ್ತಿದ್ದ ವ್ಯಕ್ತಿಯೋರ್ವ ಪೋಲಿಸರ ಅತಿಥಿಯಾಗಿದ್ದಾನೆ.

ವಸಿಷ್ಠ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಹುಡುಗಿಯರನ್ನು ಯಾಮಾರಿಸುತ್ತಿದ್ದ. ‘ನಾನು ಅವರ ಸಹಾಯಕ. ಅವರ ಮೊಬೈಲ್​ ನಂಬರ್​ ಕೊಡ್ತೀನಿ‘ ಎಂದು ಹೇಳಿ ತನ್ನ ಇನ್ನೊಂದು ಮೊಬೈಲ್​ ನಂಬರ್​ ನೀಡುತ್ತಿದ್ದ.

ಇನ್ನು ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಅವರಿಂದ ಹಣ ತೆಗೆದುಕೊಂಡು ವಂಚಿಸುತ್ತಿದ್ದ. ಇದೀಗ ಆರೋಪಿ ಸೈಬರ್​ ಕ್ರೈ ಪೋಲಿಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನು ವೆಂಕಟೇಶ್​ ಎಂದು ಗುರುತಿಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಚಾರವನ್ನು ನಟ ವಸಿಷ್ಠ ಸಿಂಹ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡಿದ್ದು, ನಕಲಿ ಸ್ಟಾರ್​ಗಳ ಬಗ್ಗೆ ಎಚ್ಚರದಿಂದಿರಿ ಎಂದಿದ್ದಾರೆ.
First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading