ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗ ದೇಶವನ್ನು ಅಪ್ಪಳಿಸಿದಾಗಿನಿಂದ ನಿಜ ಜೀವನದ ನಾಯಕನಾಗಿ ಹೊರಹೊಮ್ಮಿದ ನಟ ಸೋನು ಸೂದ್, ಅಗತ್ಯವಿರುವವರಿಗೆ ಆಗಾಗ್ಗೆ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ, ಬಾಲಿವುಡ್ ನಟ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಸಂಖ್ಯಾತ ಸಹಾಯ ವಿನಂತಿಗಳನ್ನು ಸ್ವೀಕರಿಸುತ್ತಾರೆ. ನಟ ಸೋನು ಸೂದ್ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಸೂಪರ್ ಆ್ಯಕ್ಟೀವ್ ಆಗಿದ್ದು, ಇದಕ್ಕೆ ಹೆಸರುವಾಸಿಯಾಗಿದ್ದಾರೆ. ಸಾಕಷ್ಟು ಜನ ಸೋನು ಸೂದ್ ಬಳಿ ಸಹಾಯಕ್ಕಾಗಿ ಮನವಿ ಮಾಡಿಕೊಳ್ಳುತ್ತಾರೆ. ಈ ಪೈಕಿ ನಟ ಸಹ ತಮಗೆ ಸಾಧ್ಯವಾಗುವಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಆದರೆ, ಈ ಪೈಕಿ ಕೆಲವು ವಿನಂತಿಗಳು ವಿಶಿಷ್ಟ, ವಿಚಿತ್ರ ಹಾಗೂ ತಮಾಷೆಯ ಧಾಟಿಯಲ್ಲಿ ಇರುತ್ತವೆ. ಇದೇ ರೀತಿ, ಟ್ವಿಟ್ಟರ್ ಬಳಕೆದಾರನೊಬ್ಬ ತನ್ನ ಗರ್ಲ್ಫ್ರೆಂಡ್ಗಾಗಿ ಐ ಫೋನ್ ಕೇಳಿದ್ದು, ಅದಕ್ಕೆ ನಟ ಸೋನು ಸೂದ್ ಪ್ರತಿಕ್ರಿಯೆ ಹೀಗಿದೆ ನೋಡಿ..
ಇತ್ತೀಚೆಗೆ, ಎಂಜಿನಿಯರ್ ಲಡ್ಕಾ ಎಂಬ ಟ್ವಿಟ್ಟರ್ ಬಳಕೆದಾರ ಐಫೋನ್ ಕೇಳುತ್ತಿರುವ ತನ್ನ ಗೆಳತಿಗಾಗಿ ಏನಾದರೂ ಸಹಾಯ ಮಾಡಬಹುದೇ ಎಂದು ಬಾಲಿವುಡ್ ನಟ ಸೋನು ಸೂದ್ಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ನಟ ಸೋನು ಸೂದ್ ಹಾಸ್ಯ ಮಿಶ್ರಿತ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರನು ತನ್ನ ಗೆಳತಿಗೆ ಐಫೋನ್ ಉಡುಗೊರೆಯಾಗಿ ನೀಡಿದರೆ, ಆತನ ಬಳಿ ಏನೂ ಉಳಿಯುವುದಿಲ್ಲ ಎಂದು ತಮಾಷೆಯ ಧಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಅಸಂಖ್ಯಾತ ಜೀವಗಳನ್ನು ಉಳಿಸಲು ಸತತ ಪ್ರಯತ್ನ ಮಾಡಿದ್ದಕ್ಕಾಗಿ ನಟನನ್ನು ಎಲ್ಲಾ ವರ್ಗದ ಜನರು ಪ್ರಶಂಸಿಸಿದ್ದಾರೆ. ದೇಶದ ನಾಗರಿಕರ ಕಲ್ಯಾಣಕ್ಕಾಗಿ ಸಮರ್ಪಣೆಗಾಗಿ ಸೋನು ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಔಷಧಿ, ಆಸ್ಪತ್ರೆಯ ಬೆಡ್ ಮತ್ತು ಇತರ ಜೀವ ಉಳಿಸುವ ಸಂಪನ್ಮೂಲಗಳ ಬಗ್ಗೆ ಟ್ವಿಟ್ಟರ್ ವಿನಂತಿಗಳ ಪೈಕಿ ಹಲವರಿಗೆ ಸಹಾಯ ಮಾಡಿದರು.
ಸಾಂಕ್ರಾಮಿಕ ರೋಗದ ಪ್ರಾರಂಭದ ಸಮಯದಲ್ಲಿ, 47 ವರ್ಷದ ನಟ ವಲಸೆ ಬಿಕ್ಕಟ್ಟಿನ ಭಾರವನ್ನು ಕಡಿಮೆ ಮಾಡಲು ಆ ಭಾರವನ್ನು ತಾನೇ ಹೊತ್ತುಕೊಂಡರು. ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ಮನೆಗಳಿಗೆ ಕಳುಹಿಸಲು ಸೋನು ಸೂದ್ ಹಲವಾರು ಬಸ್ಸುಗಳನ್ನು ವ್ಯವಸ್ಥೆಗೊಳಿಸಿದರು. ಇತ್ತೀಚೆಗೆ, ಜಬಲ್ಪುರದ ನಿವಾಸಿಯೊಬ್ಬರು ತಮ್ಮ ಮನೆಯ ಟೆರೇಸ್ನಲ್ಲಿ ನಟನ 10 ಅಡಿ ಎತ್ತರದ ಗೋಡೆಯ ವರ್ಣಚಿತ್ರವನ್ನು ರಚಿಸಿದರು.
उसका तो पता नहीं,
अगर iphone दिया तो पर तेरा कुछ नहीं रहेगा😂 https://t.co/t99rnT8z22
— sonu sood (@SonuSood) June 22, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ