News18 India World Cup 2019

ಬೆತ್ತಲೆ ಫೋಟೋ ಕಳಿಸಿ ಎಂದವನಿಗೆ 'ನ್ಯೂಡ್ಸ್ ಪಿಕ್​' ಕಳಿಸಿದ ಗಾಯಕಿ..!

Mk_the_don ಎಂಬ ಟ್ವಿಟರ್ ಖಾತೆದಾರನೊಬ್ಬನ ನಟಿಗೆ ಮೆಸೇಜ್ ಕಳುಹಿಸಿ ಬೆತ್ತಲೆ ಚಿತ್ರಗಳನ್ನು (ನ್ಯೂಡ್​ ಪಿಕ್ಸ್​) ಕಳುಹಿಸುವಂತೆ ಕೇಳಿಕೊಂಡಿದ್ದನು.

zahir | news18
Updated:May 25, 2019, 6:09 PM IST
ಬೆತ್ತಲೆ ಫೋಟೋ ಕಳಿಸಿ ಎಂದವನಿಗೆ 'ನ್ಯೂಡ್ಸ್ ಪಿಕ್​' ಕಳಿಸಿದ ಗಾಯಕಿ..!
@Chennai Memes
zahir | news18
Updated: May 25, 2019, 6:09 PM IST
ಕಾಲಿವುಡ್​ನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಮೀಟೂ ಆರೋಪದಿಂದ ಅಲ್ಲ ಎಂಬುದು ವಿಶೇಷ. ಈ ಹಿಂದೆ ಮೀಟೂ ಅಭಿಯಾನದ ಮೂಲಕ ಖ್ಯಾತ ಗೀತೆ ರಚನೆಕಾರ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ತಮಿಳು ಚಿತ್ರರಂಗದಲ್ಲಿ ಗಾಯಕಿ ಸಂಚಲನ ಸೃಷ್ಟಿಸಿದ್ದರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನ ಬಯಕೆಗೆ ಭರ್ಜರಿ ಮರುತ್ತರ ನೀಡಿ ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗಾಯಕಿ ಚಿನ್ಮಯಿಯೊಂದಿಗೆ ನಗ್ನ ಫೋಟೊಗಳನ್ನು ಕಳುಹಿಸುವಂತೆ ವ್ಯಕ್ತಿಯೊಬ್ಬ ಕೇಳಿದ್ದ. ಇದಕ್ಕೆ ಫೋಟೋ ಒಂದರ ಮೂಲಕ ಉತ್ತರಿಸಿ ಚಿನ್ಮಯಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

Mk_the_don ಎಂಬ ಟ್ವಿಟರ್ ಖಾತೆದಾರನೊಬ್ಬನ ನಟಿಗೆ ಮೆಸೇಜ್ ಕಳುಹಿಸಿ ಬೆತ್ತಲೆ ಚಿತ್ರಗಳನ್ನು (ನ್ಯೂಡ್​ ಪಿಕ್ಸ್​) ಕಳುಹಿಸುವಂತೆ ಕೇಳಿಕೊಂಡಿದ್ದನು. ಈ ಕೋರಿಕೆಗೆ ಮುಂಗೋಪ ಮಾಡಿಕೊಳ್ಳದ ಗಾಯಕಿ, ಲಿಪ್ ಸ್ಟಿಕ್ ಚಿತ್ರವೊಂದನ್ನು ಕಳುಹಿಸಿದ್ದರು. ಫೋಟೋದೊಂದಿಗೆ ನನಗೆ ಇಷ್ಟವಾದ ಕೆಲವೊಂದು ನ್ಯೂಡ್ಸ್​ ಎಂದು ಬರೆದುಕೊಂಡಿದ್ದರು.ಏಕೆಂದರೆ ಚರ್ಮದ ಬಣ್ಣದಲ್ಲಿರುವ ಕೆಲವು ಲಿಪ್​ ಸ್ಟಿಕ್​ಗಳಿಗೆ ಇಂಗ್ಲಿಷ್​ನಲ್ಲಿ ನ್ಯೂಡ್ಸ್​ ಎನ್ನಲಾಗುತ್ತದೆ. ಚಿನ್ಮಯಿ ನೀಡಿದ ರಸವತ್ತಾದ ಉತ್ತರವು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಗಾಯಕಿ ನಡೆಸಿರುವ ಟ್ವಿಟ್ ಚಾಟ್​ನ ಫೋಟೋವನ್ನು ಹಲವರು ಹಂಚಿಕೊಂಡಿದ್ದಾರೆ. ಇದನ್ನೇ ಬಳಸಿ ಕಾಮುಕನೊಬ್ಬನ ಪ್ರಶ್ನೆಗೆ ಉತ್ತರ ನೀಡಿದ ಚಿನ್ಮಯಿ ಚಾಣಾಕ್ಷತನಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಚಿನ್ಮಯಿ ಹಾಡಿರುವ ಕನ್ನಡ ಗೀತೆ:
Loading...

First published:May 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...