'ತೆರೆಯ ಮೇಲೆ ಮಾಡಿದ್ದನ್ನೇ ನನ್ನ ಜೊತೆ ಮಾಡು' ಅಂತಿದ್ರು: ಮಲ್ಲಿಕಾ ಶೆರಾವತ್​ ದಶಕದ ನೆನಪು

news18
Updated:July 4, 2018, 2:58 PM IST
'ತೆರೆಯ ಮೇಲೆ ಮಾಡಿದ್ದನ್ನೇ ನನ್ನ ಜೊತೆ ಮಾಡು' ಅಂತಿದ್ರು:  ಮಲ್ಲಿಕಾ ಶೆರಾವತ್​ ದಶಕದ ನೆನಪು
news18
Updated: July 4, 2018, 2:58 PM IST
ನ್ಯೂಸ್​ 18 ಕನ್ನಡ
ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗೆ ಕಾಸ್ಟಿಂಗ್ ಕೌಚ್​ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ತೆರೆಮರೆಯ ಹಿಂದೆ ನಡೆಯುತ್ತಿದ್ದ ಘಟನೆಗಳು, ನಿರ್ದೇಶಕ, ನಟ, ನಿರ್ಮಾಪಕರ ಜೊತೆಗೆ ನಟಿಯರು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದ್ದ ಅನಿವಾರ್ಯತೆಗಳು ಇದೀಗ ಧಿಕ್ಕಾರದ ಧ್ವನಿಯಲ್ಲಿ ಆಚೆ ಬರುತ್ತಿವೆ.

ಸ್ಯಾಂಡಲ್​ವುಡ್, ಕಾಲಿವುಡ್​, ಟಾಲಿವುಡ್​, ಬಾಲಿವುಡ್​, ಮಾಲಿವುಡ್​ ಹೀರೋಯಿನ್​ಗಳು ಈ ಬಗ್ಗೆ ಒಬ್ಬರಾದ ಮೇಲೆ ಒಬ್ಬರು ತಮ್ಮ ಕರಾಳ ಅನುಭವವನ್ನು ಹೊರಹಾಕುತ್ತಿದ್ದು, ಚಿತ್ರರಂಗಕ್ಕೆ ಬರುತ್ತಿರುವ ಯುವ ನಟಿಯರಿಗೆ ಸಲಹೆ ಹಾಗೂ ಧೈರ್ಯವನ್ನೂ ತುಂಬುತ್ತಿದ್ದಾರೆ.

ಬಾಲಿವುಡ್​ನಲ್ಲಿ ತನ್ನ ಮಾದಕತೆಯಿಂದ ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿದ್ದ ನಟಿ ಮಲ್ಲಿಕಾ ಶೆರಾವತ್​ ಕೂಡ ಇದೀಗ ತನಗಾದ ಅನುಭವವನ್ನು ತೆರೆದಿಟ್ಟಿದ್ದಾರೆ. ಜೀವನ ನಡೆಸಲೇಬೇಕಾದ ಅನಿವಾರ್ಯತೆಯಿಂದ ಚಿತ್ರರಂಗಕ್ಕೆ ಎಂಟ್ರಿಯಾದ ಮಲ್ಲಿಕಾ ಶೆರಾವತ್​ ಹಲವು ಸಿನಿಮಾಗಳ ಆಫರ್​ ಕೈಗೆ ಬಂದು ಹಾಗೇ ಜಾರಿಹೋಗಿತ್ತಂತೆ. ಅವರ ಜೊತೆಗೆ ನಟಿಸಿದ್ದ ಸಹ ನಟರು, ನಿರ್ದೇಶಕರ ಜೊತೆಗೆ 'ಹೊಂದಾಣಿಕೆ' ಮಾಡಿಕೊಳ್ಳುವುದಿಲ್ಲ ಎಂಬುದು ಅದಕ್ಕೆ ಕಾರಣವಾಗಿತ್ತಂತೆ.

ಹೀಗಂತ ಬೇಸರದಿಂದ ಹೇಳಿಕೊಂಡಿರುವ ಮಲ್ಲಿಕಾ, ದಶಕದ ಹಿಂದೆ ತಾನು ಅನುಭವಿಸಿದ್ದ ಮಾನಸಿಕ ಹಿಂಸೆ, ಆರ್ಥಿಕ ಅಭದ್ರತೆಯನ್ನು ಮೆಲುಕು ಹಾಕಿದ್ದಾರೆ. ಕುಟುಂಬದ ಯಾರ ಸಹಕಾರವೂ ಸಿಗದೆ ಮನೆಯಿಂದ ಹೊರಬಿದ್ದಿದ್ದ ಮಲ್ಲಿಕಾಗೆ ಬದುಕು ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯತೆಯಿತ್ತು. ಆ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಳ್ಳಲು ಬಯಸಿದವರು ಹಲವರು.

ಕೊಂಚ ಮಡಿವಂತಿಕೆಯನ್ನು ಉಳಿಸಿಕೊಂಡಿದ್ದ ಕಾಲದಲ್ಲಿ ಬಾಲಿವುಡ್​ನಲ್ಲಿ 2004ರಲ್ಲಿ ತೆರೆಕಂಡ 'ಮರ್ಡರ್'​ ಸಿನಿಮಾ ಮೂಲಕ ಮಲ್ಲಿಕಾ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಕಾಣಿಸಿಕೊಂಡಿದ್ದರು. ಬಿಚ್ಚಮ್ಮನಾಗಿ ತೆರೆಯ ಮೇಲೆ ಮಿಂಚಿದ್ದ ಮಲ್ಲಿಕಾ ಆಮೇಲೂ ಕೆಲ ಸಿನಿಮಾಗಳಲ್ಲಿ ಬಹಳ ಸೆಕ್ಸಿಯಾಗೇ ಕಾಣಿಸಿಕೊಂಡಿದ್ದರು. ಅವರ ಅಭಿನಯವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಚಿತ್ರರಂಗದವರು ಮಂಚಕ್ಕೂ ಆಹ್ವಾನಿಸಿದ್ದರು. ತೆರೆಯ ಮೇಲೆ ಹಾಟ್​ ಆಗಿ ಕಾಣಿಸಿಕೊಂಡಿದ್ದ ಮಲ್ಲಿಕಾಳ ವ್ಯಕ್ತಿತ್ವವನ್ನು ಸುಲಭವಾಗಿ ತೀರ್ಮಾನ ಮಾಡಿಬಿಟ್ಟಿದ್ದ ಬಾಲಿವುಡ್​ ಮಂದಿ ಲೈಂಗಿಕವಾಗಿ ಬಳಸಿಕೊಳ್ಳಲು ಆಹ್ವಾನಿಸಿದ್ದರು.


Loading...

ಹಲವು ಆಫರ್​ ಕೈತಪ್ಪಿತ್ತು:
ನಾನು ನನ್ನ ಸಹನಟರು, ನಿರ್ದೇಶಕರೊಂದಿಗೆ 'ಹೊಂದಾಣಿಕೆ' ಮಾಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಹಲವು ಸಿನಿಮಾಗಳ ಅವಕಾಶ ಕೈತಪ್ಪಿತ್ತು. 'ತೆರೆಯ ಮೇಲೆ ಮಾಡುವುದನ್ನೇ ನನ್ನ ಜೊತೆಗೆ ಖಾಸಗಿಯಾಗಿ ಮಾಡು' ಎಂದೆಲ್ಲ ನನಗೆ ಕೇಳಿದ್ದರು. ಕೆಲವು ರಾತ್ರಿಯಂತೂ ನಿರ್ದೇಶಕರು ಫೋನ್​ ಮಾಡಿ ಬೆಳಗ್ಗೆ 3 ಗಂಟೆಗೆ ನನ್ನ ರೂಮಿಗೆ ಬಾ ಎಂದು ಕರೆದಿದ್ದೂ ಇದೆ. ಅದಕ್ಕೆ ಒಪ್ಪದಿದ್ದಾಗ ಸಿನಿಮಾದಿಂದ ಹೊರಹಾಕಿದ್ದರು.

ನನ್ನ ಹಿನ್ನೆಲೆ ಯಾರಿಗೂ ಬೇಕಾಗಿಲ್ಲ:
ಜನರಿಗೆ ನಾನು ಎಷ್ಟು ಕಷ್ಟಪಟ್ಟು ಚಿತ್ರರಂಗದಲ್ಲಿ ಸ್ಥಾನ ಪಡೆದುಕೊಂಡೆ, ಇಲ್ಲಿಗೆ ಬರುವುದಕ್ಕೂ ಮೊದಲು ಕುಟುಂಬದಿಂದ ಏನೆಲ್ಲ ಕಿರುಕುಳ ಅನುಭವಿಸಿದ್ದೇನೆ, ನಾನು ಸ್ವಾಭಿಮಾನದಿಂದ ಯಾವ ರೀತಿ ಬದುಕುತ್ತಿದ್ದೇನೆ ಎಂಬುದು ಮುಖ್ಯವಲ್ಲ. ನಾನು ಯಾರ ಜೊತೆಗೆ ಎಷ್ಟು ಇಂಟಿಮೇಟ್​ ಸೀನ್​ ಮಾಡಿದ್ದೇನೆ, ಎಷ್ಟು ಜನರಿಗೆ ಕಿಸ್​ ಕೊಟ್ಟಿದ್ದೇನೆ ಎಂಬುದನ್ನು ಮಾತ್ರ ಚೆನ್ನಾಗಿ ಲೆಕ್ಕವಿಟ್ಟುಕೊಳ್ಳುತ್ತಾರೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

 
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ